ದಿಲ್ಲೀಲಿ ಮಾಂಸ ತಿಂದು ಸುತ್ತೂರು ಮಠಕ್ಕೆ ಹೋದ್ರಾ ಎಂದ್ರೆ, ಡೋಂಟ್ ಆಸ್ಕ್ ಸಿಲ್ಲಿ ಕ್ವೆಶ್ಚನ್ಸ್ ಅಂದ್ರು ಸಿದ್ದರಾಮಯ್ಯ
ದಿಲ್ಲಿ ಚಲೋದಲ್ಲಿ ಭಾಗವಹಿಸಿ ಮಾಂಸಾಹಾರ ಸೇವಿಸಿದ ಸಿಎಂ ಸಿದ್ದರಾಮಯ್ಯ, ಅಲ್ಲಿಂದ ಬಂದು ಸುತ್ತೂರು ಮಠದ ಜಾತ್ರೆಯಲ್ಲಿ ಭಾಗವಹಿಸಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಡೋಂಟ್ ಆಸ್ಕ್ ಸಿಲ್ಲಿ ಕ್ವೆಶ್ಚನ್ಸ್ ಎಂದು ಹೇಳಿದರು.
ಬೆಂಗಳೂರು (ಫೆ.08): ಕಾಂಗ್ರೆಸ್ ಸರ್ಕಾರದಿಂದ ದೆಹಲಿಯಲ್ಲಿ ಹಮ್ಮಿಕೊಂಡಿದ್ದ ನನ್ನ ತೆರಿಗೆ ನನ್ನ ಹಕ್ಕು ಚಲೋ ದಿಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂರ ಕಾಂಗ್ರೆಸ್ ನಾಯಕರೊಂದಿಗೆ ಭರ್ಜರಿ ಬಾಡೂಟ ಸೇವಿಸಿ, ಅಲ್ಲಿಂದ ಸೀದಾ ಸುತ್ತೂರು ಮಠದ ಜಾತ್ರಾ ಮಹೋತ್ಸವಕ್ಕೆ ಮಠಕ್ಕೆ ತೆರಳಿದ್ದರು. ಹೀಗಾಗಿ, ಮಾಧ್ಯಮಗಳಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಂಸಾಹಾರ ಸೇವಿಸಿ ಸುತ್ತೂರು ಮಠಕ್ಕೆ ಹೋಗಿದ್ದೀರಿ ಎಂಬ ಆರೋಪ ಕೇಳಿಬಂದಿದೆ ಎಂದು ಕೇಳಿದ್ದಕ್ಕೆ, ಡೋಂಟ್ ಆಸ್ಕ್ ಸಿಲ್ಲಿ ಕ್ವೆಶ್ಚನ್ಸ್ (ನೀವು ಸಣ್ಣ ಪ್ರಶ್ನೆಗಳನ್ನು ಕೇಳಬೇಡಿ) ಎಂದು ಹೇಳಿದರು.
ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುತ್ತೂರು ಮಠಕ್ಕೆ ಮಾಂಸ ತಿಂದು ಹೋದ ವಿಚಾರವನ್ನು ಕೇಳಿದರೆ, ಡೋಂಟ್ ಆಸ್ಕ್ ಸಿಲ್ಲಿ ಕ್ವಶ್ಚನ್ಸ್ ಎಂದರು. ಮುಂದುವರೆದು, ಊಟ ಮಾಡೋದು, ತಿಂಡಿ ತಿನ್ನೋದು, ಬಟ್ಟೆ ಹಾಕೋದು ಅದರ ಬಗ್ಗೆಯೆಲ್ಲ ಮಾತಾಡಕ್ಕಾಗುತ್ತಾ? ಬಡವರ ಸಮಸ್ಯೆ ನಿರುದ್ಯೋಗ ಇದೆಲ್ಲ ಮಾತಾಡೋಣ. ಅದನ್ನು ಬಿಟ್ಟು ಇಂಥ ಸಿಲ್ಲಿ ಕ್ವಶ್ಚನ್ಸ್ ಕೇಳಬೇಡಿ ಎಂದು ಮಾಧ್ಯಮದವರ ವಿರುದ್ಧ ಕಿಡಿಕಾರಿದರು.
ಬೆಂಗಳೂರು ಜನ ಸ್ಪಂದನ: ನೂರ್ ಫಾತಿಮಾಗೆ ಎಂಬಿಬಿಎಸ್ ಮಾಡಲು 10 ಲಕ್ಷ ರೂ. ಕೊಟ್ಟ ಸಿಎಂ ಸಿದ್ದರಾಮಯ್ಯ!
ಯುಪಿಎ ಕಾಲದ ಬಜೆಟ್ ಗಾತ್ರ ಎಷ್ಟಿತ್ತು? ಈಗ ಎಷ್ಟಿದೆ.? ಬಜೆಟ್ ಗಾತ್ರ ಡಬಲ್ ಆಗಿದೆಯಲ್ಲ.? ಬಿಜೆಪಿಯವರು ಕರ್ನಾಟಕಕ್ಕೆ ಅನ್ಯಾಯ ಆಗುವುದನ್ನು ಒಪ್ಪಿಕೊಳ್ತಾರಾ? ನಮ್ಮ ರಾಜ್ಯಕ್ಕೆ ಆಗುವ ನಷ್ಟ ಸರಿ ಅಂತ ಹೇಳ್ತಾರಾ? ಎಂದು ಕಿಡಿಕಾರಿದರು. ಇದೇ ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಏನು ಹೇಳಿದ್ರು ಗೊತ್ತಾ? ನರೇಂದ್ರ ಮೋದಿಯವರು ಸಿಎಂ ಆಗಿದ್ದಾಗ ಗುಜರಾತ್‌ಗೆ ತೆರಿಗೆ ಕಡಿಮೆ ಕೊಟ್ಟಾಗ ನಾವು ಬೆಗ್ಗರ್ ಗಳಾ ಅಂತ ಕೇಳಿದ್ದರು. ಆಗ ಒಂದು ನಾಲಿಗೆ ಈಗ ಒಂದು ನಾಲಿಗೆಯಾ ಅವರಿಗೆ...? ಬೆಗ್ಗರ್ ಸ್ಟೇಟಾ ಅಂತ ಆವತ್ತು ಸಿಎಂ ಆಗಿದ್ದಾಗ ಮೋದಿ ಕೇಳಿದ್ದರು.
ಕಾಂಗ್ರೆಸ್ ಸರ್ಕಾರದಲ್ಲೂ ಶೇ.40 ಕಮಿಷನ್ ಕಂಟಿನ್ಯೂ ಆಗಿದೆ; ಆಗ ಶಾಸಕರು ಕೇಳ್ತಿದ್ರು, ಈಗ ಅಧಿಕಾರಿಗಳೇ ಕೇಳ್ತಾರೆ!
ಗುಜರಾತ್ ಸಿಎಂ ಆದಾಗ ಒಂದು ನಾಲಿಗೆ ಈಗ ಇನ್ನೊಂದು ನಾಲಿಗೆಯಾ? ರಾಜ್ಯಗಳಿಂದ ತೆರಿಗೆಯೇ ವಸೂಲಿ ಮಾಡಬೇಡಿ ಅಂತ ಮೋದಿ ಹೇಳಿದ್ದರು. ಇವರ ಮಾತಿಗೆ ಏನು ಕಿಮ್ಮತ್ತಿದೆ? ನಾವು ನಮ್ಮ ಶೇರ್ ಕೊಡ್ರಿ ಅನ್ಯಾಯ ಆಗಿದೆ ಅಂದರೆ ದೇಶ ವಿಭಜನೆ ಅಂತಾರೆ. ಅವತ್ತು ಗುಜರಾತ್ ಸಿಎಂ ಆಗಿದ್ದಾಗ ಅವರು ದೇಶ ವಿಭಜನೆ ಮಾಡಲು ಹೊರಟಿದ್ದರಾ? 4.30 ಲಕ್ಷ ಕೋಟಿ ರೂ. ಸಂಗ್ರಹ ಆದ್ರೂ 52,250 ಕೋಟಿ ರೂ. ಮಾತ್ರ ಅವರು ನಮಗೆ ಕೊಡೋದು. ಅಂದರೆ 100 ರೂ. ತೆರಿಗೆ ಸಂಗ್ರಹಿಸಿ ಕೊಟ್ಟರೆ ಅವರು ಕೇವಲ 13 ರೂ. ಮಾತ್ರ ವಾಪಸ್ ಕೊಡೋದು. ಇದು ಅನ್ಯಾಯ ಅಲ್ವಾ? ಇದನ್ನು ನೋಡಿದ್ರೆ ನಿಮಗೆಲ್ಲ ಸಿಟ್ಟು ಬರಲ್ವಾ? ಎಂದು ಪ್ರಶ್ನೆ ಮಾಡಿದರು.