ಬೆಂಗಳೂರು ಜನ ಸ್ಪಂದನ: ನೂರ್ ಫಾತಿಮಾಗೆ ಎಂಬಿಬಿಎಸ್ ಮಾಡಲು 10 ಲಕ್ಷ ರೂ. ಕೊಟ್ಟ ಸಿಎಂ ಸಿದ್ದರಾಮಯ್ಯ!
ಬೆಂಗಳೂರಿನಲ್ಲಿ ನಡೆದ ಸಿಎಂ ಜನಸ್ಪಂದನ ಕಾರ್ಯಕ್ರಮದಲ್ಲಿ ನೂರ್ ಫಾತಿಮಾ ಎಂಬ ವಿದ್ಯಾರ್ಥಿನಿಗೆ ಕಝಕಿಸ್ತಾನದಲ್ಲಿ ಎಂಬಿಬಿಎಸ್ ಮಾಡಲು 10 ಲಕ್ಷ ರೂ. ಸಹಾಯಧನ ನೀಡಲಾಯಿತು.
ಬೆಂಗಳೂರು (ಫೆ.08): ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿಕೊಟ್ಟ ಜನಸ್ಪಂದನ ಕಾರ್ಯಕ್ರಮದಲ್ಲಿ ಬೆಂಗಳೂರಿನ ನೂರ್ ಫಾತಿಮಾ ಎಂಬ ವಿದ್ಯಾರ್ಥಿನಿಗೆ ಕಝಕಿಸ್ತಾನದಲ್ಲಿ ಎಂಬಿಬಿಎಸ್ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 10 ಲಕ್ಷ ರೂ.ಗಳ ಮಂಜೂರಾತಿ ಪತ್ರವನ್ನು ನೀಡಿದರು.
ಇದೇ ಮೊದಲ ಬಾರಿಗೆ ವಿಧಾನಸೌಧದ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಸುಮಾರು 20 ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಅವರು ಸಂಜೆವರೆಗೂ ಅರ್ಜಿ ಸ್ವೀಕಾರ ಮಾಡಿದ್ದು, ಬರೋಬ್ಬರಿ 11 ಸಾವಿರ ಅರ್ಜಿಗಳನ್ನು ಸ್ವೀಕರಿಸಿದರು. ಈ ವೇಳೆ ಬಹುತೇಕ ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಕಾರ್ಯವನ್ನು ಮಾಡಿದರು.
ಕಾಂಗ್ರೆಸ್ ಸರ್ಕಾರದಲ್ಲೂ ಶೇ.40 ಕಮಿಷನ್ ಕಂಟಿನ್ಯೂ ಆಗಿದೆ; ಆಗ ಶಾಸಕರು ಕೇಳ್ತಿದ್ರು, ಈಗ ಅಧಿಕಾರಿಗಳೇ ಕೇಳ್ತಾರೆ!
ಇದೇ ವೇಳೆ ಜನಸ್ಪಂದನಾ ಕಾರ್ಯಕ್ರಮಕ್ಕೆ ಆಗಮಿಸಿದ ಬೆಂಗಳೂರಿನ ನೂರ್ ಫಾತಿಮಾ ಬಿನ್ ಇಬ್ರಾಹಿಂ ಅವರಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವಿದ್ಯಾಭ್ಯಾಸ ಯೋಜನೆಯಡಿ ಕಝಾಕಿಸ್ಥಾನದಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸಕ್ಕಾಗಿ 10 ಲಕ್ಷ ರೂ.ಗಳ ಮಂಜೂರಾತಿ ಪತ್ರವನ್ನು ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯ ತಂದೆಗೆ ಹಸ್ತಾಂತರ ಮಾಡಿದರು. ಈ ವೇಳೆ ಅಲ್ಲಿದ್ದ ಜನರು ವಿದ್ಯಾಭ್ಯಾಸಕ್ಕೆ ಸಿಎಂ ನೆರವು ನೀಡಿದ್ದನ್ನು ನೋಡಿ ಚಪ್ಪಾಳೆ ತಟ್ಟಿದರು.
ಅನಾರೋಗ್ಯ ಚಿಕಿತ್ಸೆಗೆ 9 ಲಕ್ಷ ರೂ. ಕೊಟ್ಟ ಸಿದ್ದರಾಮಯ್ಯ: ಜನಸ್ಪಂದನಾ ಕಾರ್ಯಕ್ರಮದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದವರೂ ಕೂಡ ಭಾವಹಿಸಿದ್ದರು. ಈ ಪೈಕಿ ಕೆಲವರಿಗೆ ಸ್ಥಳದಲ್ಲಿಯೇ ಹಣ ಮಂಜೂರಾತಿ ಪತ್ರಗಳನ್ನು ನಿಡಲಾಯಿತು. 1. ರಾಮನಗರ ಜಿಲ್ಲೆಯ ವಿಜಯಕುಮಾರ್ ಎಂಬುವವರಿಗೆ ಕಿಡ್ನಿ ಕಸಿ ಚಿಕಿತ್ಸೆಗಾಗಿ 4 ಲಕ್ಷ ರೂ.ಗಳ ಧನಸಹಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳದಲ್ಲಿಯೇ ಮಂಜೂರು ಮಾಡಿದರು. 2. ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಬಸನಗೌಡ ಬಿರಾದಾರ್ ಬೋನ್ ಮ್ಯಾರೋ ಕಸಿಗಾಗಿ 4 ಲಕ್ಷ ರೂ.ಗಳ ಧನಸಹಾಯವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮಂಜೂರು ಮಾಡಿದರು. 3. ತುಮಕೂರು ಜಿಲ್ಲೆಯ 8 ವರ್ಷದ ಶಾಂಭವಿ ಎಂಬ ಮಗುವಿಗೆ ಶ್ರವಣ ಸಾಧನಕ್ಕಾಗಿ 50 ಸಾವಿರ ರೂ.ಗಳನ್ನು ಸಿಎಂ ಸಿದ್ದರಾಮಯ್ಯ ಸ್ಥಳದಲ್ಲಿಯೇ ಮಂಜೂರು ಮಾಡಿದರು.
ಅಂತಿಮ ಸಂಸ್ಕಾರ ಹಾಗೂ ಅನುಗ್ರಹರಾಶಿ ವೆಚ್ಚ ಮಂಜೂರಿಗೆ ಸೂಚನೆ: ಸಿದ್ದಪ್ಪ ಕಲ್ಲಪ್ಲ ಚುನನ್ನವರ್ ಇವರ ಅಂತ್ಯ ಸಂಸ್ಕಾರ ಹಾಗೂ ಅನುಗ್ರಹರಾಶಿ ವೆಚ್ಚಕ್ಕೆ ಮನವಿ ಸಲ್ಲಿಸಲಾಗಿತ್ತು. 2021 ಆಗಸ್ಟ್ 28ರಂದು ಈ ಘಟನೆ ನಡೆದಿತ್ತು. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳದಲ್ಲಿಯೇ 54 ಸಾವಿರ ರೂ. ಧನ ಸಹಾಯ ಮಾಡಿದರು. ಈ ಹಣವನ್ನು ಕರ್ನಾಟಕ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಹಣ ಮಂಜೂರು ಮಾಡುವಂತೆ ಸಿಎಂ ಸೂಚನೆಯನ್ನು ರವಾನಿಸಿದರು.
ಮುಸ್ಲಿಂ ಗುರುಗಳನ್ನು ಬಿಡುಗಡೆ ಮಾಡಿ, ಜ್ಞಾನವ್ಯಾಪಿ ಮಸೀದಿಗೆ ತೊಂದರೆ ಮಾಡಬೇಡಿ; ಮುಸ್ಲಿಮರ ಪ್ರತಿಭಟನೆ
30 ದಿನಗಳಲ್ಲಿ ಎಲ್ಲ ಅಜಿಗಳಿಗೂ ಪರಿಹಾರ: ರಾಜ್ಯ ಮಟ್ಟದಲ್ಲಿ ಜನ ಸ್ಪಂದನ ಕಾರ್ಯಕ್ರಮ ಮುಗಿಸಿದ ಸಿಎಂ ಸಿದ್ದರಾಮಯ್ಯ: ಬೆಳಗ್ಗೆ 11.30 ಕ್ಕೆ ಪ್ರಾರಂಭ ಆಗಿದ್ದ ಜನ ಸ್ಪಂದನ ಕಾರ್ಯಕ್ರಮ ಸಂಜೆ 4.30ಕ್ಕೆ ಮುಕ್ತಾಯಗೊಂಡಿದೆ. ಜನ ಸ್ಪಂದನ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆ ಸೇರಿ ಸುಮಾರು 11 ಸಾವಿರ ಅರ್ಜಿ ಸಲ್ಲಿಕೆಯಾಗಿವೆ. 20 ಸಾವಿರ ಜನರು ಜನ ಸ್ಪಂದನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸುಮಾರು 155 ಅರ್ಜಿಗಳಿಗೆ ಸ್ಥಳದಲ್ಲಿ ಪರಿಹಾರ ನೀಡಲಾಗಿದೆ. ಉಳಿದ ಅರ್ಜಿಗಳ ವಿಲೇವಾರಿಗೆ ಒಂದು ತಿಂಗಳು ಡೆಡ್ ಲೈನ್ ಕೊಡಲಾಗಿದೆ. ಒಂದು ತಿಂಗಳಲ್ಲಿ ಪರಿಹಾರ ಕೊಡದ ಅಧಿಕಾರಿಗಳ ವಿರುದ್ದ ಕ್ರಮದ ಎಚ್ಚರಿಕೆ ನೀಡಿದರು.