ವಿಧಾನಸಭೆ ಸ್ಪೀಕರ್ ಹುದ್ದೆಗೆ ಎಚ್.ಕೆ.ಪಾಟೀಲ್, ಬಸವರಾಜ ರಾಯರೆಡ್ಡಿ ಹಾಗೂ ಆರ್.ವಿ.ದೇಶಪಾಂಡೆ ಅವರ ಹೆಸರುಗಳು ಮುಂಚೂಣಿಯಲ್ಲಿವೆ ಎಂದು ಮಾಜಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದೇನು? ಮೂವರ ಪೈಕಿ ಯಾರಾಗಲಿದ್ದಾರೆ ಸ್ಪೀಕರ್?
ಕನಕಗಿರಿ(ಆ.3): ವಿಧಾನಸಭೆ ಸ್ಪೀಕರ್‌ಗೆ ಮೂವರ ಹೆಸರು ಮುಂಚೂಣಿಯಲ್ಲಿದ್ದು, ಸರ್ಕಾರ ಎಲ್ಲ ಅಂಶ ಅಳೆದು ತೂಗಿ ಸಭಾಧ್ಯಕ್ಷರ ಹೆಸರನ್ನು ಘೋಷಣೆ ಮಾಡಲಿದೆ ಎಂದು ಮಾಜಿ ಸಚಿವ ಎನ್.ಎಸ್.ಬೋಸರಾಜು(NS Bosaraju) ಸ್ಪಷ್ಟಪಡಿಸಿದ್ದಾರೆ.
ಈ ಮೂವರಲ್ಲಿ ಮುಂದಿನ ಸ್ಪೀಕರ್ ಯಾರು?
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಭಾನುವಾರ ಪತ್ರಕರ್ತರ ಜತೆ ಮಾತನಾಡಿ, ಸ್ಪೀಕರ್ ಹುದ್ದೆಗೆ ಎಚ್.ಕೆ.ಪಾಟೀಲ್, ಬಸವರಾಜ ರಾಯರೆಡ್ಡಿ ಹಾಗೂ ಆರ್.ವಿ.ದೇಶಪಾಂಡೆ ಹೆಸರು ಮುಂಚೂಣಿಯಲ್ಲಿದ್ದು, ಈ ಮೂವರಲ್ಲಿ ಒಬ್ಬರನ್ನು ವಿಧಾನ ಸಭೆಯ ಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ನಿಶ್ಚಿತ. ಇದರಲ್ಲಿ ಯಾರು ಸಚಿವರಾಗುತ್ತಾರೋ ಗೊತ್ತಿಲ್ಲ. ಒಬ್ಬರಂತೂ ಸ್ಪೀಕರ್ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:Karnataka Bandh: ಕಾವೇರಿ ನೀರಿಗಾಗಿ ಮತ್ತೆ ಹೋರಾಟ 13ರಂದು ಕರ್ನಾಟಕ ಬಂದ್ ಫಿಕ್ಸ್, ವಾಪಸ್ ಮಾತೇ ಇಲ್ಲ: ವಾಟಾಳ್
ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ:
ಅಲ್ಲದೇ, ನಾನು ಶಾಸಕನಲ್ಲದಿದ್ದರೂ ಪರಿಷತ್ ಸದಸ್ಯನನ್ನಾಗಿ ಮಾಡಿ ಸಚಿವನಾಗಿ ಮಾಡಿ ರಾಜ್ಯದ ಜನರ ಸೇವೆ ಮಾಡಲು ಹೈಕಮಾಂಡ್ ಅವಕಾಶ ಕೊಟ್ಟಿತ್ತು. ನನ್ನ ಅಧಿಕಾರವಧಿಯಲ್ಲಿ ಮಾಡಿದ ಅಭಿವೃದ್ಧಿ, ಜನಸೇವೆ ನನಗೆ ತೃಪ್ತಿ ತಂದಿದೆ. ಸದ್ಯ ಸಚಿವಕಾಂಕ್ಷಿ ನಾನಲ್ಲ. ಸದ್ಯ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು.


