Asianet Suvarna News Asianet Suvarna News

ಕ್ಯಾಬಿನೆಟ್ ಮೀಟಿಂಗ್ ಮುಖ್ಯಾಂಶ: ಒಳ ಮೀಸಲಾತಿ, ಚನ್ನಮ್ಮನ ಕಿತ್ತೂರು, ಬಸವಣ್ಣನೇ ಸಾಂಸ್ಕೃತಿಕ ನಾಯಕ!

ಭೋವಿ, ಬಂಜಾರ, ಕೊರಮ- ಕೊರಚ ಜಾತಿಗಳಿಗೆ ಒಳ ಮೀಸಲಾತಿ ನಿರ್ಣಯ, ಕಿತ್ತೂರಿಗೆ ಹೊಸದಾಗಿ ಚೆನ್ನಮ್ಮನ ಕಿತ್ತೂರು ನಾಮಕರಣ, ವಿಶ್ವಗುರು ಬಸವಣ್ಣ ಕರ್ನಾಟಕ ಸಾಂಸ್ಕೃತಿಕ ನಾಯಕರೆಂದು ತೀರ್ಮಾನಿಸಲಾಗಿದೆ.

Karnataka Cabinet meeting highlights Channammana kittoor Basavanna is cultural leader sat
Author
First Published Jan 18, 2024, 4:39 PM IST

ಬೆಂಗಳೂರು (ಜ.18): ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ನಿರ್ಣರ್ಯಗಳನ್ನು ಕೈಗೊಳ್ಳಲಾಗಿದೆ. ಭೋವಿ, ಮತ್ತು ಬಂಜಾರ, ಕೊರಮ ಕೊರಚ ಜಾತಿಗಳಿಗೆ ಒಳ ಮೀಸಲಾತಿ ನೀಡುವುದು, ಕಿತ್ತೂರಿಗೆ ಹೊಸದಾಗಿ ಚೆನ್ನಮ್ಮನ ಕಿತ್ತೂರು ನಾಮಕರಣ, ವಿಶ್ವಗುರು ಬಸವಣ್ಣ ಕರ್ನಾಟಕ ಸಾಂಸ್ಕೃತಿಕ ನಾಯಕರೆಂದು ಹಾಗೂ ಹೊಸ ಎಲೆಕ್ಟ್ರಿಕ್‌ ವಾಹನಗಳಿಗೆ ಸಬ್ಸಿಡಿ ನೀಡಲು ನಿರ್ಣಯ ಕೈಗೊಳ್ಳಲಾಗಿದೆ.

'ವಿಶ್ವಗುರು ಬಸವಣ್ಣ ಕರ್ನಾಟಕ ಸಾಂಸ್ಕ್ರತಿಕ ನಾಯಕ ಎಂದು ಘೋಷಣೆ ಮಾಡಲಾಗಿದೆ. ಈ ಬಗ್ಗೆ ಕ್ಯಾಬಿನೆಟ್ ನಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಜಾಪ್ರಭುತ್ವ ಪರಿಕಲ್ಪನೆ ತಂದು ಕೊಟ್ಟಿದ್ದು ಬಸವೇಶ್ವರರು, ಎಲ್ಲ ಮಠಾಧಿಶರ ಬೇಡಿಕೆ ಕೂಡ ಇತ್ತು. ಸಚಿವ ಸಂಪುಟದಲ್ಲಿ ಚರ್ಚೆಯಾಗಿದೆ ಅನುಮೋದನೆ ಸಿಕ್ಕಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು. ಬೆಳಗಾವಿಯ ಕಿತ್ತೂರಿಗೆ ಮರು ನಾಮಕರಣ ಮಾಡುವಂತೆ ಆಗ್ರಹ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಿತ್ತೂರಿಗೆ ಚೆನ್ನಮ್ಮನ ಕಿತ್ತೂರು ಎಂದು ಮರು ನಾಮಕರಣ ಮಾಡುವುದಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. 

ಕೆಆರ್‌ಎಸ್‌ ಕಟ್ಟೋಕೆ ಆರಂಭಿಸಿದ್ದು ಟಿಪ್ಪು, ಅದನ್ನು ಮುಂದುವರೆಸಿದ್ದು ಮೈಸೂರು ಮಹಾರಾಜರು: ಸಚಿವ ರಾಜಣ್ಣ

ಫೆ.16ಕ್ಕೆ ರಾಜ್ಯ ಬಜೆಟ್ ಮಂಡನೆ:  ರಾಜ್ಯದಲ್ಲಿ ಹಳೆ ವಾಹನಗಳನ್ನು ಸ್ಕ್ರಾಪ್ ಗೆ ಹಾಕಿದ ಮಾಲೀಕರಿಗೆ ಸಬ್ಸಿಡಿ ನೀಡಲಾಗುವುದು. ಹೊಸ ಎಲೆಕ್ಟ್ರಿಕ್ ವಾಹನ ಖರೀದಿಗೆ ಸಬ್ಸಿಡಿ ನೀಡಲಾಗುತ್ತದೆ. ಜೊತೆಗೆ ರೋಡ್ ಟ್ಯಾಕ್ಸ್ ಕಡಿಮೆ ಮಾಡಲು ಸರ್ಕಾರದ ನಿರ್ಧಾರ ಮಾಡಲಾಗಿದೆ. ಇನ್ನು ಕೇಂದ್ರ ಸರ್ಕಾರದ ಬಜೆಟ್‌ ಫೆ.1ಕ್ಕೆ ಮುಕ್ತಾಯಗೊಂಡ ಬೆನ್ನಲ್ಲಿಯೇ ಫೆ.16ರಂದು ರಾಜ್ಯ ಬಜೆಟ್ ಮಂಡನೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 12 ರಿಂದ ಜಂಟಿ ಅಧಿವೇಶನ ಆರಂಭವಾಗಲಿದೆ. ಫೆ.23ರವರೆಗೆ ವಿಧಾನಸಭಾ ಅಧಿವೇಶನ ನಡೆಯಲಿದೆ.

ಇನಾಂ ದತ್ತಪೀಠ ಕೇಸ್‌ ಆಕ್ಷೇಪಣೆ ಸಲ್ಲಿಕೆಗೆ ಉಪಸಮಿತಿ ರಚನೆ:  ಚಿಕ್ಕಮಗಳೂರು ಜಿಲ್ಲೆ, ಐ.ಡಿ (ಇನಾಂ ದತ್ತಾತ್ರೇಯ) ಪೀಠದ ಶ್ರೀ ಗುರುದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ಅಧಿಸೂಚಿತ ಸಂಸ್ಥೆಗೆ ಸಂಬಂಧಿಸಿದಂತೆ ಶ್ರೀ ಸೈಯದ್ ಮೊಹಿಯುದ್ದೀನ್ ಶಾಖಾದ್ರಿ ಕೇಸ್ ವಿಚಾರವಾಗಿ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಸ್ ಗೆ ಆಕ್ಷೇಪಣೆ ಸಲ್ಲಿಸಲು ಸಂಪುಟ ಉಪಸಮಿತಿ ರಚನೆ ಮಾಡಲಾಗಿದೆ. ಐವರು ಸಚಿವರನ್ನೊಳಗೊಂಡ ಸಂಪುಟ ಉಪಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ
1. ಅಧ್ಯಕ್ಷರು - ಪರಮೇಶ್ವರ್  ಮಾನ್ಯ ಗೃಹ ಸಚಿವರು.
2. ಎಚ್.ಕೆ ಪಾಟೀಲ್ ಸದಸ್ಯರು, ಮಾನ್ಯ ಕಾನೂನು, ಸಂಸದೀಯ ಮತ್ತು ಸಚಿವರು. ವ್ಯವಹಾರಗಳು ಪ್ರವಾಸೋದ್ಯಮ
3. ರಾಮಲಿಂಗಾರೆಡ್ಡಿ, ಸದಸ್ಯರು ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು.
4. ಕೃಷ್ಣಬೈರೇಗೌಡ, ಸದಸ್ಯರು ಮಾನ್ಯ ಕಂದಾಯ ಸಚಿವರು.
5. ಕೆಜೆ. ಜಾರ್ಜ್, ಸದಸ್ಯರು ಚಿಕ್ಕಮಗಳೂರು ಉಸ್ತುವಾರಿ ಸಚಿವರು ಇರುತ್ತಾರೆ.

ರಾಮನನ್ನು ಗೊಂಬೆಯೆಂದ ಸಚಿವ ರಾಜಣ್ಣನವರೇ ನೀವು ಹೆಚ್ಚು ದಿನ ಇರೋದಿಲ್ಲ: ಸಂಸದ ಸದಾನಂದಗೌಡ

ಒಳ ಮೀಸಲಾತಿ ವಿಚಾರದ ಬಗ್ಗೆ  ಕ್ಯಾಬಿನೆಟ್ ನಿರ್ಣಯ:  ಸಂವಿಧಾನ ಅನುಚ್ಛೇಧ 341ಕ್ಕೆ ಹೊಸದಾಗಿ Clause (3) ಸೇರ್ಪಡೆ ಮಾಡಲು ಈ ಕೆಳಕಂಡ ಉಪಬಂಧವನ್ನು ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ಒಪ್ಪಿದೆ. "341(3) Parliament may be law provide for Sub- categorization or De-sub- categorization of caste, race or tribe or part of or group within any caste, race or tribe specified in a notification issued under clause (1) or by law made by Parliament under clause (2), upon receiving the appropriate recommendation from the State/UT Governments (or resolution from legislature of a state/UT passed unanimously)" ಭೋವಿ, ಮತ್ತು ಬಂಜಾರ, ಕೊರಮ ಕೊರಚ ಜಾತಿಗಳು ಹಾಗೂ ಅದರ ಪರ್ಯಾಯ ಜಾತಿಗಳು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿದ್ದು, ಅದನ್ನು ಹಾಗೇಯೇ ಉಳಿಸಿಕೊಳ್ಳುವಂತೆ ಹಾಗೂ ಸೇರಿದ ಪಟ್ಟಿಯಲ್ಲಿ ರಾಜ್ಯಕ್ಕೆ ಪರಿಶಿಷ್ಟ ಜಾತಿಗಳ ಅವುಗಳನ್ನು ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.

Follow Us:
Download App:
  • android
  • ios