Asianet Suvarna News Asianet Suvarna News

ಕೆಆರ್‌ಎಸ್‌ ಕಟ್ಟೋಕೆ ಆರಂಭಿಸಿದ್ದು ಟಿಪ್ಪು, ಅದನ್ನು ಮುಂದುವರೆಸಿದ್ದು ಮೈಸೂರು ಮಹಾರಾಜರು: ಸಚಿವ ರಾಜಣ್ಣ

ಮಂಡ್ಯದ ಕನ್ನಂಬಾಡಿ ಕಟ್ಟೆ ನಿರ್ಮಾಣ ಕಾರ್ಯ ಆರಂಭಿಸಿದ್ದು ಟಿಪ್ಪು ಸುಲ್ತಾನ್ ಅವರು, ನಂತರ ನಾಲ್ವಡಿ ಕೃಷ್ಣರಾಜ ಒಡೆಯರು ಮುಂದುವರೆಸಿದ್ದಾರೆ.

KRS Reservoir was started by Tipu Sultan but Krishnaraja wodeyar only continued said KN Rajanna  sat
Author
First Published Jan 17, 2024, 8:34 PM IST

ತುಮಕೂರು (ಜ.17): ಮೈಸೂರು ಬಳಿಯಿರುವ ಮಂಡ್ಯ ಜಿಲ್ಲೆಯ ಕನ್ನಂಬಾಡಿ ಕಟ್ಟೆಯನ್ನು (ಕೆಆರ್‌ಎಸ್‌) ಮೊದಲು ಪ್ರಾರಂಭ ಮಾಡಿದ್ದು ಟಿಪ್ಪು ಸುಲ್ತಾನ್  ಅವರ ನಂತರ ನಾಲ್ವಡಿ ಕೃಷ್ಣರಾಜ ಓಡೆಯರು ಮುಂದುವರೆಸಿದರು ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬ್ರಿಟೀಷರ ಆಡಳಿತ ಕಾಲಾವಧಿಯಲ್ಲಿಯೇ ದೇಶದಲ್ಲಿ ಉತ್ತಮ ತಂತ್ರಜ್ಞಾನ ಮೂಲಕ ದೊಡ್ಡ ಜಲಾಶಯವನ್ನು ನಿರ್ಮಿಸಿದ ಕೀರ್ತಿ ಮೈಸೂರಿನ ರಾಜ ಮನೆತನಕ್ಕೆ ಸಲ್ಲುತ್ತದೆ. ಇನ್ನು ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಮನೆತನ ಕಾಪಾಡಿಕೊಂಡು ಬಂದಿದ್ದ ಎಲ್ಲ ಬಂಗಾರ, ವಜ್ರಾಭರಣಗಳು ಹಾಗೂ ಹೆಂಡತಿಯ ಒಡೆಯಗಳನ್ನೂ ಮಾರಿ ಕನ್ನಂಬಾಡಿ ಆಣೆಕಟ್ಟೆಯನ್ನು ಕಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈಗ ಕರ್ನಾಟಕದ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರು ಕನ್ನಂಬಾಡಿ ಕಟ್ಟೆಯನ್ನು ಟಿಪ್ಪು ಸುಲ್ತಾನ್ ಅವರೇ ಆರಂಭಿಸಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರು ಕೇವಲ ಅದನ್ನು ಮುಂದುವರೆಸಿದ್ದಾರೆ ಎಂದು ಹೇಳಿದರು.

ಅಯೋಧ್ಯೆ ಶ್ರೀರಾಮನನ್ನು ನೋಡಿದರೆ, ಟೂರಿಂಗ್ ಟಾಕೀಸಿನಲ್ಲಿರೋ ಗೊಂಬೆ ಅನಿಸ್ತಿದೆ: ಸಚಿವ ಕೆ.ಎನ್. ರಾಜಣ್ಣ

ತುಮಕೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವದಲ್ಲಿ ಮಾತನಾಡಿದ್ದ ಅವರು, ಕನ್ನಂಬಾಡಿ ಕಟ್ಟೆನಾ ಮೊದಲು ಪ್ರಾರಂಭ ಮಾಡಿದ್ದು ಟಿಪ್ಪು ಸುಲ್ತಾನ್  ಅವರ ನಂತರ ನಾಲ್ವಡಿ ಕೃಷ್ಣರಾಜ ಓಡೆಯರು ಮುಂದುವರೆಸಿದರು. ಟಿಪ್ಪು ಸುಲ್ತಾನ್ ಸಾಯೋಕೆ ಮೀರ್ ಸಾಧಿಕ್ ಕಾರಣ. ಮೀರ್ ಸಾಧಿಕ್ ಮೋಸದಿಂದ ಅವರು ಸತ್ತಿದ್ದಾರೆ. ಪೇಶ್ವೆಗಳು ಯಾರು, ಅವರೂ ಹಿಂದೂಗಳೇ ತಾನೆ. ಪೇಶ್ವೆಗಳು ಶೃಂಗೇರಿ ಮಠವನ್ನ ಹಾಳು ಮಾಡೋಕೆ ಬಂದಾಗ, ಟಿಪ್ಪು ಸುಲ್ತಾನ್ ತನ್ನ ಸೈನ್ಯ ಕಳಿಸಿ ಅವರನ್ನ ಓಡಿಸಿದನು. ಇದು ನಮ್ಮ ಹಿಂದೂ ಚರಿತ್ರೆಯಲ್ಲಿ ಇರೋ ಅಂಶವಾಗಿದೆ. ಇದನ್ನ ಯಾರೂ ಗಮನಿಸೋದೇ ಇಲ್ಲ ಎಂದು ಟಿಪ್ಪು ಸುಲ್ತಾನನ ಮತಾಂತರವನ್ನು  ಕೆ.ಎನ್.ರಾಜಣ್ಣ ಸಮರ್ಥಿಸಿಕೊಂಡಿದ್ದಾರೆ.

ಟಿಪ್ಪು ಸುಲ್ತಾನ್ ಕೂರ್ಗಲ್ಲಿ ಮತಾಂತರ ಮಾಡಿಬಿಟ್ಟ ಅಂತಾರೆ, ಹೌದು ಮಾಡ್ತಾರೆ. ಅವರ ಪ್ರಭುತ್ವ ಇರೋ ಕಡೆ ವಿರೋಧ ಮಾಡಿದರೆ ತಪ್ಪೇನು. ವಿರೋಧಿಗಳ ಧಮನ ಮಾಡೋಕೆ ಏನ್ ಬೇಕಾದ್ರೂ ಮಾಡ್ತಾರೆ. ಅದು ಏನ್ ಹೊಸದಾ? ಅವನಿಗೆ ದೇಶದ್ರೋಹಿ ಅಂತಾ ಕರೀತಾರೆ. ಕಿತ್ತೂರು ರಾಣಿ ಚೆನ್ನಮ್ಮ ಸೋಲೋದಕ್ಕೆ ಮಲ್ಲಪ್ಪ ಶೆಟ್ಟಿ ಕಾರಣ. ಅವನಿಗೆ ದೇಶದ್ರೋಹಿ, ಇನ್ನೊಂದು ಮತ್ತೊಂದು ಅನ್ನಬೇಕು. ಆದರೂ ಅಂತಹ ಮಲ್ಲಪ್ಪ ಶೆಟ್ಟಿಯನ್ನ ವೈಭವೀಕರಿಸ್ತಾರೆ. ಜೊತೆಗೆ, ಅವನ್ಯಾರೋ ಉರಿಗೌಡ, ನಂಜೇಗೌಡ. ಹೆಸರೇ ಇಲ್ಲಾ, ಇವರೇ ನೋಡಿಕೊಂಡು ಬಂದವರು. ಇವರೇ ಸೃಷ್ಠಿಕರ್ತರು, ಯಾವ ಉರಿನೂ ಇಲ್ಲಾ, ನಂಜುನೂ ಇಲ್ಲ ಎಂದು ಹೇಳಿದರು.

ಸಂಸದ ಅನಂತಕುಮಾರ್ ಹೇಳಿಕೆ ವಿಚಾರದ ಕುರಿತು ಮಾತನಾಡಿ, ಸಿದ್ದರಾಮಯ್ಯನ್ನ ಬಗ್ಗೆ ಅವನ್ಯಾವನೋ  ದುರಹಂಕಾರಿನೋ, ಮನುಷ್ಯನೋ, ಮೃಗನೋ ಗೊತ್ತಿಲ್ಲಾ. ಮಗನೇ ಅಂತಾ ಕರೀತನಲ್ಲಾ.. ಇದನ್ನ ಯಾರಾದ್ರೂ ಸಹಿಸೋಕೆ ಆಗುತ್ತಾ ಹೇಳಿ. ರಾಜ್ಯದಲ್ಲಿ  ಇರೋ ಎಲ್ಲಾ ಸಾತ್ವಿಕ ಜನರು ಅದನ್ನ ಖಂಡನೆ ಮಾಡುವಂತದ್ದು ನಮ್ಮ ಕರ್ತವ್ಯ. ಎಲ್ಲಾ ಕಡೆ ಟೀಕೆ ಮಾಡಿದ್ದಾರೆ, ನಾವು ಮೆರವಣಿಗೆ ಮಾಡಿ ಸುಟ್ಟು, ಕೆರದಲ್ಲಿ ಹೊಡೆದು ಎಲ್ಲಾ ಮಾಡಬಹುದು. ಆದರೆ 6 ಸರಿ ಲೋಕಸಭಾ ಸದಸ್ಯನಾಗಿ ಜನರ ಭಾವನೆ ಕೆರಳಿಸೋದು, ಜನರ ಮನಸಸಿಗೆ ಬೇಸರ ಮೂಡಿಸೋದು ಎಂದರು.

ಹಿಂದೂಗಳು ಬಾಬ್ರಿ ಮಸೀದಿ ಕೆಡವಿದ್ದು ಸೂಕ್ತ ಅಲ್ಲ: ನಿಡುಮಾಮಿಡಿ ಸ್ವಾಮೀಜಿ

ಲೋಕಸಭೆ ಸದಸ್ಯ ಆಗಿ ಜನರ ಜನಪ್ರತಿನಿಧಿ ಆಗೋದಕ್ಕೆ ನಾಲಾಯಕ್. ಬ್ರಾಹ್ಮಣ ಸಮುದಾಯದವರು ಯಾರಿಗೂ ತೊಂದರೆ ಕೊಡೋರು, ಹೀಯಾಳಿಸೋರು ಅಲ್ಲಾ. ಆದರೆ ಇವನು ಬ್ರಾಹ್ಮಣ  ಸಮುದಾಯ ಅಂತಾ ಹೇಳಿಕೊಳ್ತಾನೆ. ಸಮಾಜದಲ್ಲಿ ಯಾವ ನಿಕೃಷ್ಟ ಮನುಷ್ಯನೂ‌ಕೂಡ ಆ ರೀತಿಯ ನಡವಳಿಕೆ ಮಾಡೋದಿಲ್ಲಾ. ನಾಲ್ಕೂವರೆ ವರ್ಷ ಮಲಗಿಬಿಡ್ತಾನೆ, ಅದೆಲ್ಲಿ ಮಲಗಿರ್ತಾನೆ ಗೊತ್ತಿಲ್ಲಾ. ಕೊನೆ ವರ್ಷ ಬಂದು ಹಿಂಗೆ ಅದು ಇದು ಹಿಂದುಗಳು ಅಂತಾ ಬೈಯ್ದುಬಿಡ್ತಾನೆ.  ಓಟ್ ಹಾಕಿಸಿಕೊಂಡು ತಿರಗ ಹೋಗಿ ಮಲಗಿಬಿಡ್ತಾನೆ ಎಂದು ಟೀಕಿಸಿದರು.

ಸಿದ್ದರಾಮಯ್ಯ,ಕಾಂಗ್ರೆಸ್ ಹಿಂದೂ ವಿರೋಧಿಗಳು ಅಂತಾ ಬೇರೆ ಅವರು ಹೇಳ್ತಾರಲ್ಲಾ? ನಾವೆಲ್ಲಾ ಹಿಂದೂಗಳೇ,ಹಿಂದುತ್ವವನ್ನ ಇವರಿಗೇನು ಜಾಗಿರ್ ಕೊಟ್ಟಿಲ್ಲ. ಮಹಾತ್ಮ ಗಾಂಧಿ ಕೂಡ ಹಿಂದುಗಳೇ,ಅವರ ದಾರಿಯಲ್ಲೇ ನಾವು ನಡೆಯುತ್ತಿದ್ದೇವೆ. ಗಾಂಧಿ ಕೊಂದ ಗೂಡ್ಸೆ ಕೂಡ ಹಿಂದುನೇ,ಅವರ ಹಿಂದುತ್ವವನ್ನ ಪ್ರತಿಪಾದನೆ ಮಾಡೋರೇ ಬಿಜೆಪಿಗಳು. ಬಿಜೆಪಿ ಅವ್ರು ಗೂಡ್ಸೆ ಹಿಂದುಗಳು, ನಾವು ಗಾಂಧಿ ಹಿಂದೂಗಳು. ಇದನ್ನ ನಾವೆಲ್ಲಾ ಅರ್ಥ ಮಾಡ್ಕೋಬೇಕು. ಗಾಂಧಿಯಂತವರನ್ನ ಕೊಂದ ಇವರನ್ನ ಏನಂತಾ ಕರೀಬೇಕು. ಕೊಲೆಗಡುಕರು ಅಂತಾ ಕರೀಬೇಕಾ? ದೇಶದ್ರೋಹಿಗಳು ಅಂತಾ ಕರೀಬೇಕಾ. ಇಲ್ಲಾ ಇನ್ಯಾವುದಾದ್ರೂ ಹೊಸ ಪದ ಇದ್ಯಾ ಹೇಳಿ ಎಂದು ಸಚಿವ ಕೆ.ಎನ್. ರಾಜಣ್ಣ ಕಿಡಿ ಕಾರಿದರು.

Follow Us:
Download App:
  • android
  • ios