Chikkamagalur

(Search results - 578)

Lockdown

Video Icon

state13, Jul 2020, 6:55 PM

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಲಾಕ್‌ಡೌನ್ ಇಲ್ಲ; ಸಂಡೇ ಲಾಕ್‌ಡೌನ್‌ಗೆ ಒಲವು

ಕೊರೊನಾ ತಡೆಗೆ ರಾಜಧಾನಿಯಲ್ಲಿ ಒಂದು ವಾರ ಲಾಕ್‌ಡೌನ್ ಘೋಷಿಸಿದ ಜೊತೆಗೆ ಬೇರೆ ಬೇರೆ ಜಿಲ್ಲೆಗಳಲ್ಲೂ ಲಾಕ್‌ಡೌನ್ ಮಾಡುವ ಬಗ್ಗೆ ಸಿಎಂ ಯಡಿಯೂರಪ್ಪ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ.

• state13, Jul 2020, 11:56 AM

ಕೊರೋನಾ ಗೆದ್ದ JDS ಶಾಸಕ ಬೋಜೇಗೌಡ

ಭಾನುವಾರ ನಡೆಸಿದ ಕೊರೋನಾ ಟೆಸ್ಟ್‌ನಲ್ಲಿ ಬೋಜೇಗೌಡ ವರದಿ ನೆಗೆಟಿವ್ ಬಂದಿದ್ದರಿಂದ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

CT Ravi

state13, Jul 2020, 9:14 AM

#Breaking ಸಿ.ಟಿ ರವಿ ಥರ್ಡ್ ಅಂಪೈರ್ ರಿಸಲ್ಟ್ 'ಔಟ್'..!

ಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ. ರವಿ ಒಂದು ವಾರದಲ್ಲಿ ಎರಡು ಬಾರಿ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದರು. ಈ ಪೈಕಿ ಒಮ್ಮೆ ನೆಗೆಟಿವ್ ಬಂದರೆ ಮತ್ತೊಮ್ಮೆ ಪಾಸಿಟಿವ್ ಬಂದಿತ್ತು. ಹೀಗಾಗಿ ಮೂರನೇ ಬಾರಿಗೆ ಟೆಸ್ಟ್‌ಗೆ ಒಳಗಾಗಿ ಥರ್ಡ್‌ ಅಂಪೈರ್‌ ರಿಸಲ್ಟ್‌ಗಾಗಿ ಕಾಯುತ್ತಿದ್ದೇನೆ ಎಂದು ಭಾನುವಾರವಷ್ಟೇ(ಜು.12) ಅವರು ಟ್ವೀಟ್ ಮಾಡಿದ್ದರು. ಇದೀಗ ಥರ್ಡ್ ಅಂಪೈರ್‌ ರಿಸಲ್ಟ್ 'ಔಟ್' ಆಗಿದೆ.

Marijuana

CRIME11, Jul 2020, 3:00 PM

ಚಿಕ್ಕಮಗಳೂರು: ಪೊಲೀಸರ ದಾಳಿ, 12.50 ಲಕ್ಷ ಮೌಲ್ಯದ 50 ಕೆ.ಜಿ ಗಾಂಜಾ ಜಪ್ತಿ

ಗಾಂಜಾ ಅಡ್ಡೆ ಮೇಲೆ ದಾಳಿ ಮಾಡುವ ಮೂಲಕ ಚಿಕ್ಕಮಗಳೂರು ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಗಾಂಜಾವನ್ನು ಪೋಲಿಸರು ವಶ ಪಡಿಸಿಕೊಂಡಿರುವ ಘಟನೆ ನಡೆದಿದೆ.

• Karnataka Districts11, Jul 2020, 11:11 AM

ಕಾಫಿ ನಾಡಲ್ಲಿ ವಾಹನಗಳ ನೋಂದಣಿಯಲ್ಲಿ ಕೊಂಚ ಚೇತರಿಕೆ

ನಿಗದಿತ ಆರ್ಥಿಕ ಗುರಿಗೆ ಕಳೆದ ಏಪ್ರಿಲ್‌ನಲ್ಲಿ ಶೇ.5ರಷ್ಟು, ಮೇನಲ್ಲಿ ಶೇ.49 ಹಾಗೂ ಜೂನ್‌ ತಿಂಗಳಲ್ಲಿ ಶೇ.72ರಷ್ಟು ವಾಹನ ನೋಂದಣಿಯಾಗಿವೆ. ಏಪ್ರಿಲ್‌ ತಿಂಗಳಲ್ಲಿ ಲಾಕ್‌ಡೌನ್‌ ಇದ್ದ ಕಾರಣಕ್ಕೆ ವಾಹನ ನೋಂದಣಿಯಲ್ಲಿ ಕೇವಲ ಶೇ.5ರಷ್ಟು ಗುರಿ ಸಾಧನೆಯಾಗಿದ್ದರೆ, ಒಂದೂ ಚಾಲನಾ ಪರವಾನಗಿಯನ್ನು ವಿತರಿಸಲು ಸಾಧ್ಯವಾಗಿಲ್ಲ

• Karnataka Districts10, Jul 2020, 11:13 AM

ಕಾಫಿನಾಡಿನಲ್ಲಿ ಮತ್ತೆ 6 ಕೊರೋನಾ ಪಾಸಿಟಿವ್ ಪತ್ತೆ..!

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಟ್ಟು 129ಕ್ಕೇರಿದ್ದು, 60 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರನ್ನು ಜಿಲ್ಲೆಯ ಕೋವಿಡ್‌-19 ಸೆಂಟರ್‌ನ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Covid19

Politics9, Jul 2020, 4:27 PM

ಕರ್ನಾಟಕದ ಮತ್ತಿಬ್ಬರು ಶಾಸಕರಿಗೆ ತಗುಲಿದ ಕೊರೋನಾ ವೈರಸ್

ಕೊರೋನಾ ಎಂಬ ಮಹಾಮಾರಿ ಯಾರನ್ನೂ ಬಿಡುತ್ತಿಲ್ಲ. ಜನ ಸಮಾನ್ಯರಿಂದ ಹಿಡಿದು ಇದೀಗ ಜನಪ್ರತಿನಧಿಗಳಿಗೂ ಕೊರೋನಾ ವಕ್ಕರಿಸುತ್ತಿದ್ದು, ಮತ್ತಿಬ್ಬರು ಶಾಸಕರುಗಳಿಗೆ ಕೊರೋನಾ ಅಟ್ಯಾಕ್ ಆಗಿದೆ.

Coronavirus

Karnataka Districts9, Jul 2020, 12:52 PM

ಕಾಫಿನಾಡಿನಲ್ಲಿ ಎರಡನೇ ಬಲಿ ಪಡೆದ ಕೊರೋನಾ..!

ಕೊರೋನಾ ಸೋಂಕಿತ ವಿಧಾನಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪರೀಕ್ಷೆಗೆ ಒಳಪಡಿಸಿದಾಗ ಎಸ್‌.ಎಲ್‌.ಭೋಜೇಗೌಡ ಅವರಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ.

Coronavirus

Karnataka Districts8, Jul 2020, 9:01 AM

ಚಿಕ್ಕಮಗಳೂರಿನಲ್ಲಿ 'ಸಿಕ್ಸರ್‌'ನೊಂದಿಗೆ ಶತಕ ಬಾರಿಸಿದ ಕೊರೋನಾ..!

ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಂದಿದ್ದ ವ್ಯಕ್ತಿಗೆ ಸೋಂಕು ಹರಡಿದ್ದರೆ, ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನಿಂದ ಗೌರಿಕಾಲುವೆ ಪ್ರದೇಶಕ್ಕೆ ಬಂದಿದ್ದ ವ್ಯಕ್ತಿಯಿಂದ ಅವರ ಕುಟುಂಬದವರೊಬ್ಬರಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ.

Coronavirus

Karnataka Districts7, Jul 2020, 2:16 PM

ಕೊಪ್ಪದಲ್ಲಿ 50 ಹಾಸಿಗೆಗಳ ಪ್ರತ್ಯೇಕ ಕೋವಿಡ್ ಆಸ್ಪತ್ರೆ ನಿರ್ಮಾಣ

ಕೊಪ್ಪ ಸರ್ಕಾರಿ ಆಸ್ಪತ್ರೆ ನೂರು ಹಾಸಿಗೆಯ ಸಾಮರ್ಥ್ಯವುಳ್ಳ ಆಸ್ಪತ್ರೆಯಾಗಿದ್ದು, ಅದರಲ್ಲಿ ಐವತ್ತು ಹಾಸಿಗೆ ಉಪಯೋಗಿಸಿಕೊಂಡು ಕೋವಿಡ್‌ ಆಸ್ಪತ್ರೆಯನ್ನಾಗಿ ನಿರ್ಮಿಸಲಾಗುತ್ತದೆ. ಅದರಲ್ಲಿ ಮೂವತ್ತು ಹಾಸಿಗೆಗಳಿಗೆ ಆಮ್ಲಜನಕ ಸರಬರಾಜು ಲೈನ್‌ ಅಳವಡಿಸಲಾಗುತ್ತದೆ.

• Karnataka Districts7, Jul 2020, 12:45 PM

ಸೋಂಕಿತರ ಚಿಕಿತ್ಸೆಗೆ ಯಾವುದೇ ಸಮಸ್ಯೆ ಇಲ್ಲ: ಸಚಿವ ಸಿ.ಟಿ. ರವಿ

ಬೆಂಗಳೂರಿನಲ್ಲೂ ಇಂತಹ ಸ್ಥಿತಿ ಸದ್ಯಕ್ಕೆ ನಿರ್ಮಾಣವಾಗಿಲ್ಲ. ಆದರೆ, ಇಡೀ ಸಮುದಾಯಕ್ಕೆ ಹರಡಿದರೆ ದಿಢೀರನೇ ಸಾವಿರಾರು ಆಸ್ಪತ್ರೆಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮುಂಜಾಗ್ರತೆ ಬಹುಮುಖ್ಯ. ಹಾಗೆಂದು ಆರೂವರೆ ಕೋಟಿ ಜನಗಳಿಗೂ ಆಸ್ಪತ್ರೆಗಳನ್ನು ನಿರ್ಮಾಣ ಸಾಧ್ಯವಿಲ್ಲ. ಎಲ್ಲರಿಗೂ ವೈಯಕ್ತಿಕ ಜವಾಬ್ದಾರಿ ಇದೆ. ಪದೇ ಪದೇ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ಹೇಳಿದರು.

• Video Icon

CRIME6, Jul 2020, 5:08 PM

ಭೀಕರ ರಸ್ತೆ ಅಪಘಾತದಲ್ಲಿ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು

ಘಟನೆಯಲ್ಲಿ ತೀವ್ರ ಗಾಯಗೊಂಡ ಮಹಾಂತೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಬೀರೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• chikkamagaluru rain

Karnataka Districts6, Jul 2020, 9:26 AM

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಚುರುಕು

ಜಿಲ್ಲೆಯ ಘಟ್ಟಪ್ರದೇಶಗಳಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು ಕೆರೆ-ಕಟ್ಟೆಗಳಿಗೂ ನೀರಾಗಿದೆ. ಜಿಲ್ಲೆಯ ಮಲೆನಾಡಿನಲ್ಲಿ ಈ ವರ್ಷವೂ ಭಾರಿ ಮಳೆಯಾದರೆ, ನಮ್ಮ ಬದುಕೇನೆಂದು ಮಲೆನಾಡಿಗರು ಕಂಗಾಲಾಗಿದ್ದಾರೆ.

corona salon

Karnataka Districts6, Jul 2020, 8:42 AM

ಕೊರೋನಾ ಹಿನ್ನೆಲೆ 15 ದಿನ ಸೆಲೂನ್‌ಗಳು ಬಂದ್‌..!

ತಾಲೂಕಿನಲ್ಲಿ ಸೋಂಕು ಹೆಚ್ಚಾಗಿ ಒಬ್ಬರು ಮೃತಪಟ್ಟಿದ್ದಾರೆ. ಕ್ಷೌರಿಕ ವೃತ್ತಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿರುವುದರಿಂದ 15 ದಿನಗಳ ಕಾಲ ಎಲ್ಲ ಕ್ಷೌರಿಕರು ತಮ್ಮ ಅಂಗಡಿಗಳನ್ನು ಮುಚ್ಚುವ ನಿರ್ಣಯ ಕೈಗೊಂಡಿದ್ದಾರೆ.

Lockdown

Karnataka Districts6, Jul 2020, 8:28 AM

ಕಾಫಿನಾಡು ಚಿಕ್ಕಮಗಳೂರಲ್ಲಿ ಭಾನುವಾರದ ಲಾಕ್‌ಡೌನ್‌ ಯಶಸ್ವಿ

ಹಣ್ಣು ಮತ್ತು ತರಕಾರಿ, ಮೀನು, ಮಾಂಸ ಮಾರಾಟದ ಅಂಗಡಿಗಳು, ಪೆಟ್ರೋಲ್‌ ಬಂಕ್‌ಗಳು ಎಂದಿನಂತೆ ತೆರೆದಿದ್ದವು. ಆದರೆ, ಜನರ ಓಡಾಟ ಕಡಿಮೆ ಇದ್ದಿದ್ದರಿಂದ ವಾರದ ನಿರೀಕ್ಷಿತ ವ್ಯಾಪಾರ ಆಗಿಲ್ಲ ಎಂಬ ಮಾತುಗಳು ವರ್ತಕರಿಂದ ಸಾಮಾನ್ಯವಾಗಿ ಕೇಳಿಬರುತ್ತಿತ್ತು. ಆದರೆ, ಸಂಡೇ ಸ್ಪೆಷಲ್‌ ಬಾಡೂಟಕ್ಕೆ ಯಾವುದೇ ರೀತಿಯಲ್ಲಿ ತೊಡಕಾಗಲಿಲ್ಲ. ಮಾಂಸ ಮಾರಾಟ ಮತ್ತು ಖರೀದಿ ಎಂದಿನಂತೆ ಸಾಂಗವಾಗಿ ಸಾಗಿತ್ತು.