Asianet Suvarna News Asianet Suvarna News

ಸಿದ್ದರಾಮಯ್ಯರ ಸರ್ಕಾರ ಬಿದ್ದುಹೋಗುತ್ತೆ ಕಾದು ನೋಡಿ; ಪರೋಕ್ಷವಾಗಿ ಆಪರೇಷನ್ ಕಮಲ ಸುಳಿವು ನೀಡಿದ ನಿರಾಣಿ!

ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗಿತ್ತು. ಇದೀಗ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ನಾನು ಸ್ವಾಗತ ಮಾಡುತ್ತೇನೆ ಎಂದು ಬಿಜೆಪಿ ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.

Karnataka BJP State president BY Vijayendra issue Murugesh R Nirani reaction at hubballi today rav
Author
First Published Nov 12, 2023, 8:36 PM IST

ಹುಬ್ಬಳ್ಳಿ (ನ.12): ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗಿತ್ತು. ಇದೀಗ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ನಾನು ಸ್ವಾಗತ ಮಾಡುತ್ತೇನೆ ಎಂದು ಬಿಜೆಪಿ ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ದೀಪಾವಳಿ ಉಡುಗೊರೆಯಾಗಿ ವಿಜಯೇಂದ್ರ ಅವರನ್ನು ನಮಗೆ ಕೊಟ್ಟಿದ್ದಾರೆ. ನಾವು ಅವರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡ್ತೀವಿ. ನಾವು ಹೆಚ್ಚಿನ ಲೋಕಸಭೆ ಸೀಟ್ ಗೆದ್ದು ಕೇಂದ್ರ ನಾಯಕರಿಗೆ ಕೊಡುಗೆ ಕೊಡ್ತೀವಿ. ನಾವು ಮೂರನೇ ಸಲ ಮೋದಿಯವರನ್ನು ಪ್ರಧಾನಿಯನ್ನು ಮಾಡಬೇಕಿದೆ. ಅದೊಂದೇ ನಮ್ಮ ಮುಂದಿರುವ ಗುರಿ ಎಂದರು.

ಕಾಂಗ್ರೆಸ್ ಮಾತು ಕೇಳಿ ಯುವಕನಿಗೆ ಹೊಡ್ತೀರಾ? ಇನ್ಸ್‌ಪೆಕ್ಟರ್‌ಗೆ ಪ್ರಲ್ಹಾದ್ ಜೋಶಿ ಹಿಗ್ಗಾ ಮುಗ್ಗಾ ತರಾಟೆ!

ನಾನು ಲೋಕಸಭಾ ಟಿಕೆಟ್ ಆಕಾಂಕ್ಷಿ ಅಲ್ಲ:

ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಅದಕ್ಕಾಗಿ ಶ್ರಮಿಸುತ್ತೇವೆ. ನಾನು ಬಾಗಲಕೋಟೆ ಲೋಕಸಭಾ ಚುನಾವಣೆಯ ಟಿಕೆಟ್  ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟಪಡಿಸಿದರು. ಮುಂದುವರಿದು, ಬಿಜೆಪಿಯಲ್ಲಿ
ಕೆಲವರಿಗೆ ಅಸಮಾಧಾನ ಇರೋದು ಸಹಜ. ಪ್ರತಿ ಕ್ಷೇತ್ರದಲ್ಲಿ ರಾಜ್ಯಾಧ್ಯಕ್ಷ ಆಗೋ ಸಾಮರ್ಥ್ಯ ಇರುವ ವ್ಯಕ್ತಿಗಳು ನಮ್ಮಲ್ಲಿ ಇದಾರೆ. ಆದ್ರೆ ಒಬ್ಬರೇ ಅಧ್ಯಕ್ಷರಾಗಬೇಕು, ಹೀಗಾಗಿ ಅಳೆದು ತೂಗಿ ವಿಜಯೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ. ಸಿ.ಟಿ. ರವಿ ಅವರು ಕೂಡಾ ಆಕಾಂಕ್ಷಿ ಇದ್ರು. ಅದರೆ ಬೇರೆ ಬೇರೆ ಕಾರಣದಿಂದ ವಿಜಯೇಂದ್ರ ಅವರ ಆಯ್ಕೆಯಾಗಿದೆ. ಹೀಗಾಗಿ ಅಸಮಾಧಾನ ಸಹಜ. ಆದ್ರೆ ಸಿ.ಟಿ. ರವಿ ಹೇಗೆ ಅಂತಾ ನನಗೆ ಗೊತ್ತು. ನನ್ನ ಸ್ನೇಹಿತ ಸಿಟಿ ರವಿ. ಎರಡು ದಿನ ಮತ್ತೆ ಅವರೇ ಮುಂದೆ ನಿಂತು ಎಲ್ಲ ಸರಿ ಮಾಡ್ತಾರೆ ಎಂದರು.

ಸಿಟಿ ರವಿ ಏನು ಅಂತಾ ನನಗೆ ಗೊತ್ತು:

 ಇನ್ನು ಕೆಲವರಿಗೆ ಅಸಮಾಧಾನ ಇದ್ರೂ ಅದನ್ನ ಹೈಕಮಾಂಡ್ ಸರಿ ಮಾಡುತ್ತೆ. ವಿಜಯೇಂದ್ರ ನನ್ನ ಜೊತೆಗೆ ಮಾತಾಡಿದ್ದಾರೆ, ಎಲ್ಲರೂ ಒಂದಾಗಿ ಇರೋಣ ಎಂದಿದ್ದಾರೆ. ಸಿಟಿ ರವಿ, ಸೋಮಣ್ಣ ಯಾರೇ ಇರಲಿ ಅವರ ಮನೆಗೆ ನಾವೇ ಹೋಗ್ತೀವಿ. ಗುರುವಾರ ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಇದೆ. ನಂತರ ಒಳ್ಳೆಯ ವಿರೋಧ ಪಕ್ಷದ ನಾಯಕರ ಆಯ್ಕೆಯಾಗುತ್ತೆ. ಯತ್ನಾಳ ಸೇರಿ ಎಲ್ಲರಿಗೂ ಮಂತ್ರಿ ಆಗಬೇಕು, ಮುಖ್ಯಮಂತ್ರಿ ಆಗಬೇಕು ಅಂತಾ ಆಸೆ ಇರುತ್ತೆ. ಕೆಲವು ಸಲ ತ್ಯಾಗ ಮಾಡಬೇಕಾಗುತ್ತೆ.

ಇನ್ಮುಂದೆ ನಾನು ನಿದ್ದೆ ಮಾಡಲ್ಲ; ರಾಜ್ಯಾದ್ಯಂತ ಓಡಾಡುವೆ: ಎಂಪಿ ರೇಣುಕಾಚಾರ್ಯ

ಆಪರೇಷನ್ ಕಮಲ ಸುಳಿವು:

ಈ ಸರ್ಕಾರ ಐದು ವರ್ಷ ಇರಲಿ ಎಂದು ಬಯಸುತ್ತೇನೆ. ಜನರಿಗೆ ಆಮಿಷ ತೋರಿಸಿ ಅಧಿಕಾರಕ್ಕೆ ಬಂದಿದ್ದಾರೆ. ಅವರ ಸರ್ಕಾರ ಇರಲಿಲ್ಲ ಅಂದ್ರೆ ನಾವೇನೂ ಮಾಡೋಕೆ ಆಗಲ್ಲಾ. ಇದು ಕಾಂಗ್ರೆಸ್ ಸರ್ಕಾರ ಅಲ್ಲಾ, ಅಲಯನ್ಸ್ ಸರ್ಕಾರ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಖರ್ಗೆ, ಪರಮೇಶ್ವರ ಅಲಯನ್ಸ್ ಸರ್ಕಾರ. ಅದರ ನೇತೃತ್ವ ಸಿದ್ದರಾಮಯ್ಯ ವಹಿಸಿದ್ದಾರೆ. ಅವರ ಆಂತರಿಕ ಜಗಳದಲ್ಲಿಯೇ ಸರ್ಕಾರ ಬಿದ್ದು ಹೋಗುತ್ತೆ.
ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೀತಿದೆ. ಆದರೆ ಈ ಸರ್ಕಾರ ಬಹಳ ದಿನ ಇರುವುದಿಲ್ಲ ಸ್ವಲ್ಪ ಕಾದು ನೋಡಿ ಎನ್ನುವ ಮೂಲಕ ಪರೋಕ್ಷವಾಗಿ ರಾಜ್ಯದಲ್ಲಿ ಆಪರೇಶನ್ ಕಮಲ ನಡೀತಿದೆ ಎಂದು ಒಪ್ಪಿಕೊಂಡ ನಿರಾಣಿ.

Follow Us:
Download App:
  • android
  • ios