Asianet Suvarna News Asianet Suvarna News

ಕಾಂಗ್ರೆಸ್ ಮಾತು ಕೇಳಿ ಯುವಕನಿಗೆ ಹೊಡ್ತೀರಾ? ಇನ್ಸ್‌ಪೆಕ್ಟರ್‌ಗೆ ಪ್ರಲ್ಹಾದ್ ಜೋಶಿ ಹಿಗ್ಗಾ ಮುಗ್ಗಾ ತರಾಟೆ!

ಯುವಕನೋರ್ವನಿಗೆ ಠಾಣೆಗೆ ಕರೆಯಿಸಿ ಮನಬಂದಂತೆ ಥಳಿಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

Union minister pralhad joshi warn to police inspector at hubballi today rav
Author
First Published Nov 12, 2023, 8:02 PM IST

ಹುಬ್ಬಳ್ಳಿ (ನ.12): ಯುವಕನೋರ್ವನಿಗೆ ಠಾಣೆಗೆ ಕರೆಯಿಸಿ ಮನಬಂದಂತೆ ಥಳಿಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಧಾರವಾಡ ಶಹರ ಠಾಣೆ ಇನ್ಸ್‌ಪೆಕ್ಟರ್  ಕಾಡದೇವರಮಠಗೆ ತರಾಟೆ. ಯುವಕನಿಗೆ ಹೊಡೆಯಲು ನಿಮಗೇನು ಅಧಿಕಾರ ಇದೆ. ನಿಮ್ಮನ್ನು ಮನೆಗೆ ಕಳಿಸುತ್ತೇನೆ, ಸುಮ್ಮನೆ ಬಿಡಲ್ಲ. ಕಾಂಗ್ರೆಸ್ ಸರ್ಕಾರದ ಮಾತು ಕೇಳಿ ಮನಬಂದಂತೆ ವರ್ತಿಸುತ್ತಿದ್ದೀರಿ ಎಂದು ಧಾರವಾಡ ಶಹರ ಠಾಣೆ ಇನ್ಸ್‌ಪೆಕ್ಟರ್ ಕಾಡದೇವರಮಠ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮತ್ತೆರಡು ಡಿಸಿಎಂ ಹುದ್ದೆ ಸೃಷ್ಟಿಗೆ ಸಿದ್ದರಾಮಯ್ಯ ಮುಂದಾಗಿದ್ದಾರೆ: ಜೋಶಿ

ಧಾರವಾಡ ಶಹರ ಠಾಣೆ ಇನ್ಸ್‌ಪೆಕ್ಟರ್ ಎನ್‌.ಸಿ. ಕಾಡದೇವರಮಠ ಅವರನ್ನು ಮನೆಗೆ ಕರೆಸಿದ್ದ ಕೇಂದ್ರ ಸಚಿವರು, ಬಿಜೆಪಿ ಕಾರ್ಯಕರ್ತ ಎಂಬ ಕಾರಣಕ್ಕೆ ದಬ್ಬಾಳಿಕೆ ಮಾಡಿದ್ದೀರಿ, ನಾವೂ ಅಧಿಕಾರಕ್ಕೆ ಬರುತ್ತೇವೆ, ಎಚ್ಚರಿಕೆಯಿಂದ ಇರಿ ಎಂದು ಚಳಿ ಬಿಡಿಸಿದ್ದಾರೆ.

ಯುವಕನಿಗೆ ಹೊಡೆಯಲು ನಿಮಗೇನು ಅಧಿಕಾರ ಇದೆ. ನಿಮ್ಮನ್ನು ಮನೆಗೆ ಕಳಿಸುತ್ತೇನೆ. ನಾನು ಸುಮ್ಮನೆ ಬಿಡಲ್ಲ. ಕಾಂಗ್ರೆಸ್ ಸರ್ಕಾರದ ಮಾತು ಕೇಳಿಕೊಂಡು ಮನಬಂದಂತೆ ವರ್ತಿಸುತ್ತಿದ್ದೀರಿ. ಬಿಜೆಪಿ ಕಾರ್ಯಕರ್ತ ಅನ್ನೋ ಕಾರಣಕ್ಕೆ ದಬ್ಬಾಳಿಕೆ ಮಾಡಿದ್ದೀರಿ. ನಾವೂ ಅಧಿಕಾರಕ್ಕೆ ಬರುತ್ತೇವೆ ಎಚ್ಚರಿಕೆಯಿಂದ ಇರಿ ಎಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ. ಯುವಕನಿಗೆ ಥಳಿಸಿರುವ ಹಿನ್ನೆಲೆ ಮನೆಗೆ ಕರೆಸಿಕೊಂಡು ಇನ್ಸ್‌ಪೆಕ್ಟರ್‌ಗೆ ಎನ್‌ಸಿ ಕಾಡದೇವರಮಠ ಅವರಿಗೆ ತರಾಟೆಗೆ ತೆಗೆದುಕೊಂಡರು.

ಸತೀಶ್ ಜಾರಕಿಹೊಳಿ ಭಿನ್ನಮತಕ್ಕೆ ಸಿಎಂ ಸಿದ್ದರಾಮಯ್ಯರ ಕುಮ್ಮಕ್ಕು ಇದೆ: ಪ್ರಲ್ಹಾದ್ ಜೋಶಿ

Follow Us:
Download App:
  • android
  • ios