ಇನ್ಮುಂದೆ ನಾನು ನಿದ್ದೆ ಮಾಡಲ್ಲ; ರಾಜ್ಯಾದ್ಯಂತ ಓಡಾಡುವೆ: ಎಂಪಿ ರೇಣುಕಾಚಾರ್ಯ
ಮಲ್ಲಿಕಾರ್ಜುನ್ ಖರ್ಗೆ ಪುತ್ರ ಎಂದು ನಿಮಗೆ ಸಚಿವ ಸ್ಥಾನ ನೀಡಿದ್ದಾರೆ ಅಷ್ಟೇ, ಬಂಗಾರಪ್ಪನ ಪುತ್ರ ಮಧು ಬಂಗಾರಪ್ಪ ಗೆ, ಗುಂಡುರಾವ್ ಪುತ್ರ ದಿನೇಶ್ ಗುಂಡುರಾವ್ ಗೆ ಸಚಿವ ಕೊಟ್ಟಿದ್ದಾರೆ. ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣ ಇದೆ ಬಿಜೆಪಿಯಲ್ಲಿ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಎಂಪಿ ರೇಣುಕಾಚಾರ್ಯ.
ದಾವಣಗೆರೆ (ನ.12): ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಸೀಟ್ ಗೆಲ್ಲಿಸಲು ಇನ್ಮುಂದೆ ನಿದ್ದೆ ಬಿಟ್ಟು ರಾಜ್ಯಾದ್ಯಂತ ಓಡಾಡುವೆ ಎಂದು ಬಿಜೆಪಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೇಳಿದರು.
ಇಂದು ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆ ಎಲೆಮರೆ ಕಾಯಿಯಾಗಿ ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡುವೆ. ಯುವ ನಾಯಕ ವಿಜಯೇಂದ್ರರನ್ನ ನೇಮಕ ಮಾಡಿರುವುದಕ್ಕೆ ಮೋದಿಜೀ, ಜೆಪಿ ನಡ್ಡಾ, ಅಮಿತ್ ಶಾ ಅವ್ರಿಗೆ ವಿಶೇಷವಾಗಿ ಧನ್ಯವಾದ ಹೇಳುತ್ತೇನೆ. ಬಿಜೆಪಿಗೆ ರಾಜ್ಯಾಧ್ಯಕ್ಷ ಇಲ್ಲ ಎಂದು ಕಾಂಗ್ರೆಸ್ ನವರು ಟೀಕೆ ಮಾಡುತ್ತಿದ್ದರು. ಆದರೆ ದೀಪಾವಳಿ ಹಬ್ಬಕ್ಕೆ ಕಾಂಗ್ರೆಸ್ ನವರಿಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್‌ನ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಆಫ್ರಿಕನ್ ಮಹಿಳಾ ಖೈದಿಗಳಿಂದ ಚೈತ್ರಾ ಕುಂದಾಪುರ ಮೇಲೆ ಹಲ್ಲೆ!
ಕುಟುಂಬ ರಾಜಕಾರಣ:ಕಾಂಗ್ರೆಸ್‌ಗೆ ನೈತಿಕತೆ ಇಲ್ಲ:
ವಿಜಯೇಂದ್ರ ಅವರಿಗೆ ಚಿಕ್ಕವಯಸ್ಸಿನಲ್ಲೇ ಜವಾಬ್ದಾರಿ ನೀಡಿದ್ದಾರೆ. ಅದನ್ನು ಅವರು ನಿಭಾಯಿಸುತ್ತಾರೆ. ಇದನ್ನು ಸಹಿಸಲಾಗದೆ ಕುಟುಂಬ ರಾಜಕಾರಣ ಎಂದು ಕಾಂಗ್ರೆಸ್ ನ ಸಚಿವ ಪ್ರಿಯಾಂಕ್ ಖರ್ಗೆ ಟೀಕೆ ಮಾಡ್ತಾರೆ. ಆದರೆ ಅವರಿಗೆ ಟೀಕೆ ಮಾಡುವ ನೈತಿಕ ಹಕ್ಕು ಇಲ್ಲ. ನೆಹರು ಇಂದ ಹಿಡಿದು ರಾಹುಲ್‌ಗಾಂದಿವರೆಗೂ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಅದನ್ನು ಪ್ರಶ್ನಿಸದ, ತಮ್ಮ ನಾಯಕರ ಕುಟುಂಬ ರಾಜಕಾರಣ ಬಗ್ಗೆ ಸೊಲ್ಲೆತ್ತದೆ ವಿಜಯೇಂದ್ರರ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೋದಿ ಮತ್ತೆ ಪ್ರಧಾನಿಯಾಗಲು ಇಲ್ಲಿ ಸಮರ್ಥ ನಾಯಕ ಬೇಕಿತ್ತು:
ಬಿಜೆಪಿ ಗೆಲ್ಲಲು ಸಾಧ್ಯವಾಗದ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಿಕೊಂಡು ಬಂದವರು ವಿಜಯೇಂದ್ರ. ಹಿಂದಿನಿಂದಲೂ ಹಲವು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ. ಈಗ ಕೊಟ್ಟಿರುವ ಜವಾಬ್ದಾರಿ ಯಡಿಯೂರಪ್ಪ ಪುತ್ರ ಎಂಬ ಕಾರಣಕ್ಕೆ ಕೊಟ್ಟಿಲ್ಲ. ಅವರ ಸಾಮರ್ಥ್ಯ ನೋಡಿ ಕೊಟ್ಟಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಪುತ್ರ ಎಂದು ನಿಮಗೆ ಸಚಿವ ಸ್ಥಾನ ನೀಡಿದ್ದಾರೆ ಅಷ್ಟೇ, ಬಂಗಾರಪ್ಪನ ಪುತ್ರ ಮಧು ಬಂಗಾರಪ್ಪ ಗೆ, ಗುಂಡುರಾವ್ ಪುತ್ರ ದಿನೇಶ್ ಗುಂಡುರಾವ್ ಗೆ ಸಚಿವ ಕೊಟ್ಟಿದ್ದಾರೆ. ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣ ಇದೆ ಬಿಜೆಪಿಯಲ್ಲಿ ಇಲ್ಲ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಬೇಕು ಎಂಬುದುದು ಕಾರ್ಯಕರ್ತರ ಧ್ವನಿಯಾಗಿತ್ತು. ಅದಕ್ಕೆ ನಾನು ಕೂಡ ಅವರ ಅಭಿಪ್ರಾಯ ತಿಳಿಸಿದ್ದೇ, ನನ್ನಿಂದಲೇ ಆಗಿದ್ದು ಎನ್ನುವುದು ತಪ್ಪಾಗುತ್ತೆ. ಮೋದಿಯವರು ಮತ್ತೆ ಪ್ರಧಾನಿಯಾಗಲು ಇಲ್ಲಿ ಸಮರ್ಥ ನಾಯಕ ಬೇಕಿತ್ತು. ಹೀಗಾಗಿ ವಿಜಯೇಂದ್ರರಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.
ನಾನೂ ಲೋಕಸಭಾ ಟಿಕೆಟ್ ಆಕಾಂಕ್ಷಿ:
ಯಡಿಯೂರಪ್ಪನವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿದ್ದು ಇಡೀ ರಾಜ್ಯದ ಯುವಜನತೆಗೆ ಹುಮ್ಮಸ್ಸು ಬಂದಿದೆ. ಇನ್ನು ಮುಂದೆ ರೇಣುಕಾಚಾರ್ಯ ನಿದ್ದೇ ಮಾಡೋದಿಲ್ಲ. ಪಕ್ಷ ಸಂಘಟನೆಗೆ ರಾಜ್ಯಾದ್ಯಂತ ಓಡಾಡುತ್ತೇನೆ. ನಾನು ಕಾಂಗ್ರೆಸ್ ಗೆ ಹೋಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ನನ್ನನ್ನು ಪಕ್ಷದಿಂದ ಹೊರ ಕಳಿಸುವ ಕೆಲಸ ಕೆಲವರು ಮಾಡಿದ್ದರು. ಆದರೆ ನಾನು ಪಕ್ಷದ ಕಾರ್ಯಕರ್ತರ ಒತ್ತಾಯದ ಮೇರೆಗೆ ಲೋಕಾಸಭಾ ಟಿಕೇಟ್ ಅಕಾಂಕ್ಷಿಯಾಗಿದ್ದೇನೆ. ದಾವಣಗೆರೆ ಲೋಕಾಸಭಾ ಟಿಕೆಟ್ ಅಕಾಂಕ್ಷಿ ಯಾಗಿದ್ದೇನೆ. ಅದರ ಜೊತೆ ರಾಜ್ಯ ಸಂಚಾರ ಮಾಡಿ ಬಿಜೆಪಿಯನ್ನು ಗೆಲ್ಲಿಸಲು ಶ್ರಮಿಸುತ್ತೇನೆ ಎಂದರು.
ಬಿಜೆಪಿ ಟಿಕೆಟ್ ವಂಚನೆ ಕೇಸ್ ಟ್ವಿಸ್ಟ್: ಮಾಜಿ ಸಿಎಂ ಬೊಮ್ಮಾಯಿ, ಮಾಜಿ ಸಚಿವ ಶ್ರೀರಾಮುಲು ಹೆಸರೇಳಿದ ಆರೋಪಿ
ವಿಜಯೇಂದ್ರ ನೇಮಕ ಕೆಲವರಿಗೆ ಬೇಸರ ಇದೆ:
ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಿದ್ದು ಕೆಲವರಿಗೆ ಬೇಸರ ಇದ್ದೇ ಇರುತ್ತದೆ. ಆದರೆ ಪಕ್ಷಕ್ಕಾಗಿ ದುಡಿಯಬೇಕು. ಪ್ರಾರಂಭದಲ್ಲಿ ಬೇಸರವಿರುತ್ತದೆ ನಂತರ ಎಲ್ಲ ಸರಿಹೋಗುತ್ತದೆ ಎಂದ ಎಂಪಿ ರೇಣುಕಾಚಾರ್ಯ.
ಇನ್ನು ವಿಶ್ವಕಪ್ ಕ್ರಿಕೆಟ್ ವಿಚಾರ ಮಾತನಾಡಿದ ರೇಣುಕಾಚಾರ್ಯ, ಭಾರತ ಈ ಬಾರಿ ವಿಶ್ವ ಕಪ್ ಗೆಲ್ಲುತ್ತದೆ. ಬೆಂಗಳೂರಿನಲ್ಲಿ ನಮ್ಮ ತಂಡ ಆಟವಾಡಲಿದ್ದು ಒಂಬತ್ತನೇ ಪಂದ್ಯ ಸಹ ಗೆಲ್ಲುತ್ತದೆ ವಿಶ್ವಕಪ್ ಈ ಬಾರಿ ಭಾರತದ ಪಾಲಾಗಲಿದೆ ಎಂದು ರೇಣುಕಾಚಾರ್ಯ ಭವಿಷ್ಯ ನುಡಿದರು ಇದೇ ಸಂದರ್ಭದಲ್ಲಿ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು.ಭಾರತ ಈ ಬಾರಿ ವಿಶ್ವ ಕಪ್ ಗೆಲ್ಲುತ್ತದೆ. ಬೆಂಗಳೂರಿನಲ್ಲಿ ನಮ್ಮ ತಂಡ ಆಟವಾಡಲಿದ್ದು ಒಂಬತ್ತನೇ ಪಂದ್ಯ ಸಹ ಗೆಲ್ಲುತ್ತದೆ ವಿಶ್ವಕಪ್ ಈ ಬಾರಿ ಭಾರತದ ಪಾಲಾಗಲಿದೆ ಎಂದು ರೇಣುಕಾಚಾರ್ಯ ಭವಿಷ್ಯ ನುಡಿದರು ಇದೇ ಸಂದರ್ಭದಲ್ಲಿ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು.