ಉಪ ಚುನಾವಣೆಯಲ್ಲಿ ಗೆದ್ದವರಿಗೆಲ್ಲ ಮಂತ್ರಿ ಸ್ಥಾನ ಪಕ್ಕಾ. ವಿರೋಧ ಪಕ್ಷಗಳ ಆರೋಪದ ವಿಶ್ಲೇಷಣೆಯ ಮಾಡುವ ಅಗತ್ಯವಿಲ್ಲ, ನಮ್ಮ ಜಿಲ್ಲೆಗೆ ಇನ್ನೊಂದು ಡಿಸಿಎಮ್ ಸ್ಥಾನ ಕೊಟ್ಟರೆ ಸಂತೋಷದಿಂದ ಸ್ವಾಗತಿಸುತ್ತೇವೆ.
- ಲಕ್ಷ್ಣಣ ಸವದಿ, ಡಿಸಿಎಂ
LIVE: ಬಿಜೆಪಿ ನಾಗಲೋಟ, ಕುಂಟಿದ ಕಾಂಗ್ರೆಸ್, ಮುಗ್ಗರಿಸಿದ ಜೆಡಿಎಸ್

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಿಂದ ಬೇಸತ್ತು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ 17 ಕ್ಷೇತ್ರಗಳ ಪೈಕಿ 15ಕ್ಕೆ ಉಪ ಚುನಾವಣೆ ನಡೆದಿತ್ತು. ಅರ್ಹತೆ ಹಾಗೂ ಅನರ್ಹತೆ ನಡುವೆ ನಡೆದ ಪೈಪೋಟಿಯಲ್ಲಿಯೇ ಅನರ್ಹ ಶಾಸಕರಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ. ಕಾಂಗ್ರೆಸ್ ಅಂತೂ ಇಂತು ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾದರೆ, ಜೆಡಿಎಸ್ ಸಾಧಿಸಿದ್ದು ಶೂನ್ಯ.
ಸೋತವರಿಗೆ ಆಗೋಲ್ಲ ಅನ್ಯಾಯ
'ಪ್ರಜಾಪ್ರಭುತ್ವಕ್ಕೆ ಬೆಲೆ ಕೊಟ್ಟು ರಾಜೀನಾಮೆ'
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಹುಣಸೂರಿನಲ್ಲಿ ಕಾಂಗ್ರೆಸ್‌ಗೆ ಗೆಲವು: ಮೌನಕ್ಕೆ ಜಾರಿದ ಜೆಡಿಎಸ್ ಶಾಸಕ
ಪರೋಕ್ಷವಾಗಿ ಬಿಜೆಪಿ ಬೆಂಬಲಿಸುವ ಚಾಮುಂಡೇಶ್ವರಿ ಶಾಸಕ ಜಿಟಿಡಿ ಉಪು ಚುನಾವಣೆ ಫಲಿತಾಂಶದ ಬಗ್ಗೇ ಹೇಳಿದ್ದಿಷ್ಟು...
ಭ್ರಷ್ಟತೆ, ಅತಂತ್ರಕ್ಕೆ ಮುಕ್ತಿ: ರಾಜೀವ್ ಚಂದ್ರಶೇಖರ್
ಕೈ-ಜೆಡಿಎಸ್ ಮೈತ್ರಿ ಸರಕಾರದಿಂದ ಬೇಸತ್ತ ಜನರು ಇದೀಗ ಬಿಜೆಪಿಗೆ ಬಹುಮತ ನೀಡಿದೆ.
ನಿಜವಾಯ್ತು ನೀಲಿ ಪುಸ್ತಕದ ಭವಿಷ್ಯ
ಇವರು ಹೇಳಿದ್ದ ಭವಿಷ್ಯ ಸುಳ್ಳಾಗಿದ್ದೇ ಇಲ್ಲ.
ತಮ್ಮ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅತೀವ ಕಳಪೆ ಪ್ರದರ್ಶನ ತೋರಿದ್ದು, ಶಾಸಕಾಂಗ ಪಕ್ಷದ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಏನಿದು ಕುಮಾರಸ್ವಾಮಿ ಟ್ವೀಟಿನ ಅರ್ಥ?
ಉಪ ಚುನಾವಣೆಗೂ ಮೊದಲೇ ಬಿಜೆಪಿಯೊಂದಿಗೆ ಕೈ ಜೋಡಿಸುವ ಮಾತನಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಹೀಗ್ಯಾಕೆ ಟ್ವೀಟ್ ಮಾಡಿದರು?

ಶರತ್ ಬಚ್ಚೇಗೌಡ ಬೆಂಬಲಿಗ ಸಾವು!
ಶರತ್ ಬೆಂಬಲಿಗ ರಿಯಾಜ್ ಬೇಗ್ (50) ಸಾವನ್ನಪ್ಪಿದ್ದಾನೆ. ಕಟ್ಟಿಗೇನಹಳ್ಳಿ ಗ್ರಾಮದಲ್ಲಿ ಸಂಭ್ರಮಾಚರಣೆ ವೇಳೆ ಹೃದಯಾಘಾತ ಸಂಭವಿಸಿ ಈತ ಮೃತಪಟ್ಟಿದ್ದಾನೆ.
'ಮಂಡ್ಯದಲ್ಲಿ ಖಾತೆ ತೆರೆದಿದ್ದೇ ಬಿಜೆಪಿಯ ಸಾಧನೆ'
ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆದಿದೆ. ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಿಷ್ಟು...
ಉಪ ಚುನಾವಣೆಯಲ್ಲಿ ಅನರ್ಹರು ಗೆದ್ದಿದ್ದು ಹೇಗೆ?
ಉಪ ಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ 12ರಲ್ಲಿ ಅನರ್ಹರು ಎಂದೆನಸಿಕೊಂಡ ಶಾಕರು ಗೆದ್ದಿದ್ದಾರೆ. ಇದಕ್ಕೇನು ಕಾರಣ.
ಸುವರ್ಣನ್ಯೂಸ್‌ನ ರಮಾಕಾಂತ್ ವಿಶ್ಲೇಷಣೆ

ಸೋಲು ನೋವು ತಂದಿದೆ: ಜೆಡಿಎಸ್ ಅಭ್ಯರ್ಥಿ
2018ರ ವಿಧಾನಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆದ್ದ ಕಾಂಗ್ರೆಸ್ ಈ ಉಪ ಚುನಾವಣೆಯಲ್ಲಿ ಒಂದೂ ಕ್ಷೇತ್ರವನ್ನೂ ಗೆದ್ದಿಲ್ಲ.
ಕಾಂಗ್ರೆಸ್ ನಾಯಕರ ವರ್ತನೆ ನಮ್ಮ ಗೆಲುವಿಗೆ ಕಾರಣ
ಕಾಂಗ್ರೆಸ್ ಭದ್ರಕೋಟೆ ಯಲ್ಲಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಜಯ ಸಾಧಿಸಿದ್ದಾರೆ. ಅವರು ಹೇಳಿದ್ದೇನು?
'ಕೈ, ದಳದ ವಿರುದ್ಧ ಸೇಡು ತೀರಿಸಿಕೊಂಡ ಜನತೆ'
ಶಿವಮೊಗ್ಗ: ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಇದೊಂದು ಐತಿಹಾಸಿಕ ಜಯ. ರಾಜ್ಯದ ಜನತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ಕುತಂತ್ರದಿಂದ ಬಿಎಸ್ವೈ ಅವರನ್ನು ಅಧಿಕಾರದಿಂದ ವಂಚಿತರನ್ನಾಗಿಸಿದ್ದಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ದೂಳಿಫಟವಾಗಿದೆ. ಜೆಡಿಎಸ್ ಜೀರೋ ಆಗಿದೆ. ಇವರಿಬ್ಬರ ಕುತಂತ್ರಕ್ಕೆ ಜನತೆ ತಕ್ಕ ಫಲಿತಾಂಶದ ಉತ್ತರ ನೀಡಿದೆ. ಚುನಾವಣಾ ಫಲಿತಾಂಶದ ಮೂಲಕ ಬಿಜೆಪಿ ಪಕ್ಷ ಮತ್ತು ಬಿಎಸ್ ವೈ ಪ್ರಭಾವಳಿಗೆ ಉತ್ತರ ಸಿಕ್ಕಿದೆ, ಎಂದಿದ್ದಾರೆ ಎಂಎಲ್‌ಸಿ ಆಯನೂರು ಮಂಜುನಾಥ್.

'ಬಿಜೆಪಿ ಗೆಲ್ಲುತ್ತೆ, ಕಾಂಗ್ರೆಸ್ ಸಾಯುತ್ತೆ'
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಾದಾಗಲೇ ವಿರೋಧಿಸಿದ್ದ ಕೈ ಮುಖಂಡ ಜನಾರ್ದನ ಪೂಜಾರಿ ರಿಯಾಕ್ಟ್ ಮಾಡಿದ್ದು ಹೀಗೆ...

ಬೆಳಗಾವಿ ಜಿಲ್ಲೆಗೆ ಮತ್ತೊಂದು ಡಿಸಿಎಂ ಸ್ಥಾನ!
2018ರ ಚುನಾವಣೆಯಲ್ಲಿ ಸೋತರೂ ಡಿಸಿಎಂ ಸ್ಥಾನ ಗಿಟ್ಟಿಸಿಕೊಂಡವರು ಬಿಜೆಪಿ ಮುಖಂಡ ಲಕ್ಷಣ ಸವದಿ. ಇದೀಗ ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೇ ಗೆದ್ದಿರುವುದಕ್ಕೆ ಸವದಿ ಹೇಳಿದ್ದಿಷ್ಟು...
ಬೆಳಗಾವಿಗೆ ಮತ್ತೊಂದು ಡಿಸಿಎಂ ಹುದ್ದೆ

ಕಾಂಗ್ರೆಸ್ ಮುಕ್ತವಾದ ಹಾವೇರಿ...
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಹೀರೇಕೆರೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಗೆಲವು ಸಾಧಿಸಿದ್ದರು. ಅಲ್ಲದೇ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಕೆಜೆವಿಪಿ ಅಭ್ಯರ್ಥಿ ಗೆಲವು ಸಾಧಿಸಿದ್ದರು. ಇದೀಗ ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರಿಂದ ಹಾವೇರಿ ಜಿಲ್ಲೆ ಕಾಂಗ್ರೆಸ್ ಮುಕ್ತವಾಗಿದೆ.
ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಹೇಳಿದ್ದಿಷ್ಟು...
ಅನರ್ಹತೆಯ ಆರೋಪಕ್ಕೆ ಜನತಾ ನ್ಯಾಯಾಲಯದಲ್ಲಿ ಅರ್ಹತೆಯ ತೀರ್ಪು ಸಿಕ್ಕಿದೆ. ಎರಡೂ ಕ್ಷೇತ್ರಗಳ ಗೆಲುವಿನ ಮೂಲಕ ಹಾವೇರಿ ಜಿಲ್ಲೆ ಕಾಂಗ್ರೆಸ್ ಮುಕ್ತವಾದಂತಾಯಿತು. ಇನ್ನು ರಾಜ್ಯ ಮತ್ತು ದೇಶ ಕೂಡ ಕಾಂಗ್ರೆಸ್ ಮುಕ್ತವಾಗಲಿದೆ. ಬಣಕಾರ ಮತ್ತು ನಾನು ಒಂದಾದ ಪರಿಣಾಮ ಗೆಲುವು ಸುಲಭವಾಯಿತು. ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಶುರುವಾಗಲಿದೆ. ಹಣ, ಅಧಿಕಾರ ದುರುಪಯೋಗದ ಕುರಿತ ಬನ್ನಿಕೋಡ ಆರೋಪಕ್ಕೆ ಉತ್ತರಿಸಿದ ಬಿಸಿಪಿ, ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ತಿರುಗೇಟು ನೀಡಿದರು.

ಅಭಿವೃದ್ಧಿ ಮಂತ್ರವೇ ಗೋಪಾಲಯ್ಯ ಗೆಲುವಿಗೆ ಕಾರಣ
ಕಾಂಗ್ರೆಸ್, ಜೆಡಿಎಸ್ ಹಾಗೂ ಸ್ವತಂತ್ರ ಅಭ್ಯರ್ಥಿಗಳನ್ನು ಹೊರತುಪಡಿಸಿ, ಬಿಜೆಪಿ ಎಂದಿಗೂ ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್‌ನಲ್ಲಿ ಗೆದ್ದಿರಲೇ ಇಲ್ಲ. ಆದರೆ, ಅಲ್ಲಿಯೂ ಇತಿಹಾಸ ಸೃಷ್ಟಿಸಿದೆ.
ಗೋಪಾಲಯ್ಯ ಗೆಲುವಿಗೆ ಕಾರಣವಾಗಿದ್ದೇನು?

ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ?
ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ?
ಸತ್ಯ ಬಿಟ್ಟ ಸಿಎಂ ಪುತ್ರ

ಸಿಎಂ ಬಿಎಸ್‌ವೈ ಕೈ ಹಿಡಿದ ತವರು
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರೂರಾದ ಬೂಕನಕೆರೆ ಇರೋ ಮಂಡ್ಯದ ಕೆ.ಆರ್.ಪೇಟೆ ವಿಧಾನಸಬಾ ಕ್ಷೇತ್ರದಲ್ಲಿಯೂ ಇದೇ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆ ತೆರೆದಿದೆ. ಅದಕ್ಕೆ ಡಿಸಿಎಂ ಅಶ್ವಥ ನಾರಾಯಣ್ ಹೇಳಿದ್ದಿಷ್ಟು.
ಕೆಆರ್ ಪೇಟೆಯ ಮಗ, ರೈತ ನಾಯಕರಾದ ಮುಖ್ಯಮಂತ್ರಿ @BSYBJP ಅವರ ಮೇಲಿನ ಅಭಿಮಾನವನ್ನು ಕೆಆರ್ ಪೇಟೆ ಜನ ಇಡೀ ಜಗತ್ತಿಗೆ ಸಾಬೀತು ಮಾಡಿದ್ದಾರೆ. ಯುವ ನಾಯಕ @BYVijayendra, ಪಕ್ಷದ ನಾಯಕರು, ಕಾರ್ಯಕರ್ತರು ಚುನಾವಣೆ ಘೋಷಣೆಯಾದ ದಿನದಿಂದಲೂ ಕ್ಷೇತ್ರದಲ್ಲೇ ಹೆಚ್ಚು ಸಮಯ ಇದ್ದು, ಜನರೊಂದಿಗೆ ಬೆರೆತು ಕೆಲಸ ಮಾಡಿದ್ದಾರೆ.
— Dr. Ashwathnarayan C. N. (@drashwathcn) December 9, 2019
'ಸೋತ ವಿಶ್ವನಾಥ್‌ಗೂ ಸೂಕ್ತ"
ಉಪ ಚುನಾವಣೆಯಲ್ಲಿ ಮೈಸೂರಿನ ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಶಾಸಕ ವಿಶ್ವನಾಥ್ ರಾಜೀನಾಮೆ ನೀಡಿ, ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆದರೆ, ಜನರ ವಿಶ್ವಾಸ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಸಚಿವ ಸಿ.ಟಿ.ರವಿ ಹೇಳಿದ್ದಿಷ್ಟು...