ಮಂಡ್ಯ(ಡಿ.09): ಕೆ. ಆರ್. ವಿಧಾನಸಭಾ ಕ್ಷೇತ್ರದಲ್ಲಿ ಹಣ ಕೆಲಸ ಮಾಡಿದೆ ಎಂದು ಜೆಡಿಎಸ್ ಅಭ್ಯರ್ಥಿ ಬಿ. ಎಲ್. ದೇವರಾಜು ಆರೋಪಿಸಿದ್ದಾರೆ. ಆರ್‌ಎಸ್‌ಎಸ್‌ನವರು ಬಂದು ಹಣ ಹಂಚಿದ್ದಾರೆ ಎಂದು ಅವರು ಹೇಳಿದ್ದಾರೆ.

ಕೆ. ಆರ್. ಪೇಟೆ ಉಪ‌ ಚುನಾವಣೆ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಹಣ ಕೆಲಸ ಮಾಡಿದೆ. ಆರ್‌ಎಸ್‌ಎಸ್ ನವರು ಬಂದು ನೇರವಾಗಿ ಹಣ ಹಂಚಿದ್ದಾರೆ. ಹಣದಿಂದಾಗಿ ನಾನು ಸೋಲು ಕಂಡಿದ್ದೇನೆ ಎಂದು ಹೇಳಿದ್ದಾರೆ.

ಬೈ ಎಲೆಕ್ಷನ್ ರಿಸಲ್ಟ್: ಅನರ್ಹರು ಈಗ ಅರ್ಹರು, ಸೋತ್ರೂ ವಿಶ್ವನಾಥ್‌ಗೆ ಸಿಕ್ತು ಭರವಸೆ

ನಾರಾಯಣಗೌಡ ಅವರು ಗೆದ್ದಿದ್ದಾರೆ. ಕೆಲಸ ಮಾಡಲಿ. ನನ್ನ ಪರವಾಗಿ ನನ್ನ ಕಾರ್ಯಕರ್ತರು ಕೆಲಸ ಮಾಡಿದ್ದಾರೆ‌. ಸೋಲಿನಿಂದ ನನಗೆ ತುಂಬಾ ನೋವು ಉಂಟಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಸುವರ್ಣ ನ್ಯೂಸ್‌ಗೆ ಹೇಳಿಕೆ ನೀಡಿದ್ದಾರೆ.

ಡಿಸೆಂಬರ್ 5ರಂದು ವಿಧಾನಸಭಾ ಉಪಚುನಾವಣೆ ನಡೆದಿತ್ತು. ಇಂದು ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಅಭ್ಯರ್ಥಿ ಕೆ. ಸಿ. ನಾರಾಯಣ ಗೌಡ ಕೆ.ಆರ್. ಪೇಟೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ಉಪಚುನಾವಣೆಯಲ್ಲಿ ಜನರ ತೀರ್ಪನ್ನ ಗೌರವಿಸುತ್ತೇವೆ: ರಮೇಶ್ ಕುಮಾರ್