ಜನವರಿ ಮಾಹೆಯಲ್ಲಿ 6,085 ಕೋಟಿ ರೂ. ಜಿ.ಎಸ್.ಟಿ ಸಂಗ್ರಹಣೆ ಮಾಡುವ ಮೂಲಕ ಕರ್ನಾಟಕ ರಾಜ್ಯ ದಾಖಲೆ ಬರೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು (ಫೆ.11): ಜನವರಿ ಮಾಹೆಯಲ್ಲಿ 6,085 ಕೋಟಿ ರೂ. ಜಿ.ಎಸ್.ಟಿ ಸಂಗ್ರಹಣೆ ಮಾಡುವ ಮೂಲಕ ಕರ್ನಾಟಕ ರಾಜ್ಯ ದಾಖಲೆ ಬರೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಇಂದು ಈ ಕುರಿತು ಟ್ವೀಟ್ ಮಾಡಿದ್ದು, ಜಿಎಸ್ ಟಿ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ಶೇ.30 ರಷ್ಟು ಅತ್ಯಧಿಕ ಬೆಳವಣಿಗೆ ಪ್ರಮಾಣವನ್ನು ಹೊಂದಿರುವ ರಾಜ್ಯವಾಗಿ ಮುಂದುವರೆದಿದೆ. ತೆರಿಗೆ ಸಂಗ್ರಹಣೆಯಲ್ಲಿ ಸುಧಾರಣೆ, ಹೆಚ್ಚಿನ ಕಣ್ಗಾವಲು, ಆರ್ಥಿಕತೆಯಲ್ಲಿ ಚೇತರಿಕೆ ಹಾಗೂ ತೆರೆಗೆದಾರರಲ್ಲಿ ಹೆಚ್ಚಿರುವ ಅನುಸರಣೆಯಿಂದಾಗಿ ಈ ಗಮನಾರ್ಹ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಆದಾಯದ ಬೆಳವಣಿಗೆಯಿಂದಾಗಿ ಸರ್ಕಾರವು ಈ ವರ್ಷ ಉತ್ತಮ ಆಯವ್ಯಯ ಮಂಡಿಸಲು ಅನುವು ಮಾಡಿಕೊಡಲಿದೆ ಎಂದು ಮುಖ್ಯಮಂತ್ರಿಗಳು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಬಿಬಿಎಂಪಿ ಆಡಳಿತಕ್ಕೆ 7400 ಸಿಬ್ಬಂದಿ ಸಾಲಲ್ಲ; ಇನ್ನೂ 700 ಸಿಬ್ಬಂದಿ ಬೇಕು!
ಮುಖ್ಯಮಂತ್ರಿಗಳ ಟ್ವೀಟ್ ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ಹಾಗೂ ಮೈಸೂರು - ಬೆಂಗಳೂರು ದಶಪಥ ರಸ್ತೆಯ ವೀಡಿಯೊಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. "ಕರ್ನಾಟಕದಲ್ಲಿ ವಿಶ್ವದರ್ಜೆಯ ಮೂಲಸೌಕರ್ಯ ಹಾಗೂ ಬೆಳವಣಿಗೆಯ ಅದ್ಭುತ ದೃಶ್ಯ. ಡಬಲ್ ಇಂಜಿನ್ ಸರ್ಕಾರ ರಾಜ್ಯದಲ್ಲಿ ಚಮತ್ಕಾರ ಮಾಡಿದೆ' ಎಂದಿರುವ ಸಿಎಂ ಅವರ ಟ್ವೀಟ್ ಗೆ ಪ್ರಧಾನಿ ಮೋದಿಯವರು ಪ್ರತಿಕ್ರಿಯೆ ನೀಡುತ್ತಾ, 'ನಮ್ಮ ಜನ ಅತ್ಯುತ್ತಮ ಮೂಲಸೌಕರ್ಯಕ್ಕೆ ಅರ್ಹರಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನಮ್ಮ ಕೆಲಸ ವ್ಯಾಪಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ" ಎಂದಿದ್ದಾರೆ.
ನಮ್ಮದು ಮೋದಿ ಸಂಸ್ಕೃತಿ: ಹುಬ್ಬಳ್ಳಿ (ಫೆ.11) : ಯಾರಾರಯರದ್ದು ಯಾವ ಸಂಸ್ಕೃತಿ ಎಂಬುದು ಜನರಿಗೆ ಗೊತ್ತಿದೆ. ನನ್ನ ಪ್ರಕಾರ ನಮ್ಮದು ನರೇಂದ್ರ ಮೋದಿ ಸಂಸ್ಕೃತಿಯಾಗಿದೆ. ಅವರು ಸ್ವಾತಂತ್ರ್ಯ ನಂತರ ಭಾರತವನ್ನು ಅತ್ಯಂತ ಸಶಕ್ತವಾಗಿ, ಶ್ರೀಮಂತವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪ್ರಧಾನ ಮಂತ್ರಿ ಅಮೃತ ಕಾಲವನ್ನು ಕರ್ತವ್ಯ ಕಾಲ ಎಂದು ಹೇಳಿದ್ದಾರೆ. ಕರ್ತವ್ಯದ ಮೂಲಕ ದೇಶವನ್ನು ಇಡೀ ಜಗತ್ತಿಗೆ ಸರ್ವ ಶ್ರೇಷ್ಠವನ್ನಾಗಿಸಲು ಹೊರಟಿದ್ದಾರೆ. ಆ ಧ್ಯೇಯ ಇಟ್ಟುಕೊಂಡು ನಾವು ಆಡಳಿತ ಮಾಡುತ್ತಿದ್ದೇವೆ ಎಂದರು.
Gadag News: ಮೂರು ದಿನಗಳ ಲಕ್ಕುಂಡಿ ಉತ್ಸವಕ್ಕೆ ಸಿಎಂ ಚಾಲನೆ
ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಬೇಡವೆಂದ ಯಡಿಯೂರಪ್ಪ: ಶಿವಮೊಗ್ಗ (Shivamogga) ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಬೇಡವೆಂಬ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ, ಈ ಮೊದಲಿನಿಂದಲೂ ಯಡಿಯೂರಪ್ಪ (BS Yadiyurappa)ನವರು ಅದನ್ನೇ ಹೇಳುತ್ತಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ (Shivamogga airport)ಕ್ಕೆ ನನ್ನ ಹೆಸರು ನಾಮಕರಣ ಬೇಡ ಎಂದು ಹೇಳಿದ್ದಾರೆ. ಆದರೆ ಶಿವಮೊಗ್ಗದ ಜನ ಒತ್ತಡ ತಂದಿದ್ದಾರೆ. ಈ ಕುರಿತು ಬಿಎಸ್ ವೈ ಜೊತೆ ಮಾತನಾಡುತ್ತೇನೆ. ಜತೆಗೆ ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೆಸರಿಡುವ ಕುರಿತು ಚರ್ಚೆ ಮಾಡಲಾಗುವುದು ಎಂದು ಹೇಳಿದರು.
ಎರಡು ವರ್ಷ ಗದಗ ಜಿಲ್ಲೆಯ ಲಕ್ಕುಂಡಿ ಉತ್ಸವ ಮಾಡಿರಲಿಲ್ಲ. ಲಕ್ಕುಂಡಿ ಜಗತ್ ಪ್ರಸಿದ್ಧವಾದ ಕ್ಷೇತ್ರ, ಉತ್ಸವ ಮಾಡುವ ಮೂಲಕ ಮತ್ತೆ ಅಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
