ಬಿಬಿಎಂಪಿ ಆಡಳಿತಕ್ಕೆ 7400 ಸಿಬ್ಬಂದಿ ಸಾಲಲ್ಲ; ಇನ್ನೂ 700 ಸಿಬ್ಬಂದಿ ಬೇಕು!

  • ‘ಬಿಬಿಎಂಪಿ ಆಡಳಿತಕ್ಕೆ 7400 ಸಿಬ್ಬಂದಿ ಸಾಲಲ್ಲ’
  • -ದೇಶದಲ್ಲೇ ಬೃಹತ್‌ ಪಾಲಿಕೆಗೆ ಸಿಬ್ಬಂದಿ ಕೊರತೆ
  • 700 ಹೊಸ ಸಿಬ್ಬಂದಿ ನೇಮಿಸಿ
  • ಪಾಲಿಕೆ ಆಡಳಿತ ಸುಧಾರಣೆಗೆ ಆಯೋಗ ವರದಿ
BBMP needs 700 more personnel bengaluru rav

ಬೆಂಗಳೂರು (ಫೆ.11) : ‘ಬಿಬಿಎಂಪಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಮತ್ತು ತೆರಿಗೆ ಆಕರಣೆ ಹೆಚ್ಚಿಸಲು ಜಾರಿ ಕೋಶ ರಚಿಸಬೇಕು. ವಾರ್ಡುಗಳ ಸಂಖ್ಯೆ 243ಕ್ಕೆ ಹೆಚ್ಚಳವಾಗಿರುವುದರಿಂದ ಮತ್ತಷ್ಟುಆಡಳಿತ ವಿಕೇಂದ್ರೀಕರಣ ಮಾಡಬೇಕು. ಪಾಲಿಕೆಯ ವಿವಿಧ ವಿಭಾಗಗಳಲ್ಲಿನ ಸಿಬ್ಬಂದಿ ಕೊರತೆ ನೀಗಿಸಲು 700ಕ್ಕೂ ಹೆಚ್ಚು ಹೊಸ ಸಿಬ್ಬಂದಿ, ಅಧಿಕಾರಿಗಳ ನೇಮಕ ಮಾಡಿಕೊಳ್ಳಬೇಕು ಎಂಬುದು ಸೇರಿದಂತೆ ಪಾಲಿಕೆಯ ಆಡಳಿತ ಉತ್ತಮಗೊಳಿಸಲು ಹಲವು ಶಿಫಾರಸುಗಳನ್ನು ಆಡಳಿತ ಸುಧಾರಣಾ ಆಯೋಗ ಮಾಡಿದೆ.

ನಿವೃತ್ತ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌(TM Vijayabhaskar) ನೇತೃತ್ವದ ಎರಡನೇ ಆಡಳಿತ ಸುಧಾರಣಾ ಆಯೋಗ (Administrative Reforms Commission)ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಈ ಶಿಫಾರಸು ಮಾಡಿದೆ. ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರನ್ನು ಭೇಟಿ ಮಾಡಿ ವರದಿ ಸಲ್ಲಿಸಿದರು.

 

Bengaluru: ಬಿಬಿಎಂಪಿಯ ಅಧಿಕಾರಿ-ನೌಕರರ ಪ್ರತಿಭಟನೆ ಅರ್ಧ ತಾಸಲ್ಲೇ ಅಂತ್ಯ

ಬಿಬಿಎಂಪಿ(BBMP)ಯಲ್ಲಿ ಪ್ರಸ್ತುತ ಇರುವ ವಾರ್ಡುಗಳ ಸಂಖ್ಯೆ, ಜನಸಂಖ್ಯೆ ಏರಿಕೆ, ತೆರಿಗೆ ಸಂಗ್ರಹ ಪ್ರಮಾಣ, ಆಡಳಿತ ವ್ಯವಸ್ಥೆ, ಸಿಬ್ಬಂದಿ ವರ್ಗದ ಸಂಖ್ಯೆ, ಅವರ ಮೇಲಿನ ಕೆಲಸದ ಹೊರೆ ಸೇರಿದಂತೆ ಪ್ರತಿಯೊಂದನ್ನೂ ಅಧ್ಯಯನ ನಡೆಸಿ ಪಾಲಿಕೆಯ ಆಡಳಿತ ವ್ಯವಸ್ಥೆ ಸುಧಾರಣೆ, ತೆರಿಗೆ ಸಂಗ್ರಹ ಹೆಚ್ಚಳ, ಸೋರಿಕೆ ತೆಡೆ ಸೇರಿದಂತೆ ಪಾಲಿಕೆ ಆಡಳಿತ ವ್ಯವಸ್ಥೆಗೆ ಕಾಯಕಲ್ಪ ನೀಡಲು ಹಲವು ಶಿಫಾರಸುಗಳನ್ನು ನೀಡಲಾಗಿದೆ.

ಪ್ರಸ್ತುತ ಪಾಲಿಕೆಯ ವಾರ್ಡ್‌ಗಳ ಸಂಖ್ಯೆ 243ಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ ಪೌರಕಾರ್ಮಿಕರು ಮತ್ತು ಹೊರಗುತ್ತಿಗೆ ನೌಕರರನ್ನು ಹೊರತುಪಡಿಸಿ 7400 ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ದೇಶದ ಇತರೆ ಬೃಹತ್‌ ಮಹಾನಗರ ಪಾಲಿಕೆಗಳ ಸಿಬ್ಬಂದಿಗೆ ಸಂಖ್ಯೆಗೆ ಹೋಲಿಸಿದರೆ ಕಡಿಮೆ ಇದೆ. ಹಾಗಾಗಿ ಸುಮಾರು 700ಕ್ಕೂ ಹೆಚ್ಚು ಹೊಸ ಸಿಬ್ಬಂದಿಗಳ ನೇಮಕ ಮಾಡಬೇಕು.

ವಿಭಾಗೀಯ ಮಟ್ಟದಲ್ಲಿ ಸ್ಥಳೀಯ ಆಡಳಿತ ಸುಧಾರಣೆ ಮತ್ತು ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು 30 ಉಪ ಆಯುಕ್ತರ ಹುದ್ದೆಗಳನ್ನು ಸೃಷ್ಟಿಸಬೇಕು. ನೇರ ನೇಮಕಾತಿಯಾಗುವ ಸಾಮಾನ್ಯ ವರ್ಗದ ಕೆಎಎಸ್‌ ಎ-ಗುಂಪಿನ ಕಿರಿಯ ವೇತನ ಶ್ರೇಣಿಯ ಅಧಿಕಾರಿಗಳ ಮಾದರಿಯಲ್ಲಿ, ಬಿಬಿಎಂಪಿಯಲ್ಲಿ ಸಹಾಯಕ ಆಯುಕ್ತರ ಹುದ್ದೆಗಳನ್ನು ಸೃಜಿಸಬೇಕು ಹಾಗೂ ಮಧ್ಯಮ-ಅವಧಿಯ ನೇಮಕಾತಿಯ ಯೋಜನೆಯನ್ನು ಸಹ ತಯಾರಿಸಬೇಕು.

ಬಿಬಿಎಂಪಿ ಕಂದಾಯ ಇಲಾಖೆಗೆ 70 ಹೆಚ್ಚುವರಿ ಕಂದಾಯ ನಿರೀಕ್ಷಕರು ಮತ್ತು 94 ಹೆಚ್ಚುವರಿ ತೆರಿಗೆ ನಿರೀಕ್ಷಕರ ಹುದ್ದೆಗಳನ್ನು ಸೃಷ್ಟಿಸಿ ನೇಮಕಾತಿ ಮಾಡಿಕೊಳ್ಳಬಹುದು. ಪ್ರತಿ 3 ವಾರ್ಡ್‌ಗಳಿಗೆ ಒಬ್ಬ ಸಹಾಯಕ ಕಂದಾಯ ಅಧಿಕಾರಿ ಇರಬಹುದು. ಇದಕ್ಕಾಗಿ 17 ಹೊಸ ಸಹಾಯಕ ಕಂದಾಯ ಅಧಿಕಾರಿ ಹುದ್ದೆಗಳನ್ನು ಸೃಷ್ಟಿಸಿ ಕೆಲಸದ ಹೊರೆಯ ಆಧಾರದ ಮೇಲೆ ಮರುಹಂಚಿಕೆ ಮಾಡಬಹುದು ಎಂದು ಶಿಫಾರಸು ಮಾಡಿದೆ.

ವರದಿ ಸಲ್ಲಿಕೆ ವೇಳೆ ಸಚಿವರಾದ ಸಿ.ಸಿ.ಪಾಟೀಲ್‌, ಡಾಸುಧಾಕರ್‌, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌ ಇದ್ದರು.

Bengaluru news: ಒಂದೇ ವರ್ಷದಲ್ಲಿ 11 ಫ್ಲೈಓವರ್‌ಗೆ ಒಪ್ಪಿಗೆ: ಸಿಎಂ

ಇನ್ನಿತರ ಶಿಫಾರಸುಗಳು

  • ಆಸ್ತಿ ತೆರಿಗೆ ಸಂಗ್ರಹಣೆ ಮತ್ತು ತೆರಿಗೆ ಆಕರಣೆಯನ್ನು ಹೆಚ್ಚಿಸಲು ಜಾರಿ ಕೋಶ ರಚಿಸಬಹುದು.
  • ಪ್ರತಿ ವಾರ್ಡ್‌ಗೆ ಒಬ್ಬ ಕಿರಿಯ/ಸಹಾಯಕ ಎಂಜಿನಿಯರ್‌ ಹುದ್ದೆ ಮತ್ತು ಪ್ರತಿ ವಾರ್ಡ್‌ಗೆ ಒಬ್ಬ ವರ್ಕ್ ಇನ್‌ಸ್ಪೆಕ್ಟರ್‌ ಹುದ್ದೆ ಇರಬಹುದು.
  • ಒಟ್ಟು 214 ವರ್ಕ್ ಇನ್‌ಸ್ಪೆಕ್ಟರ್‌ಗಳು ಮತ್ತು 89 ಕಿರಿಯ/ಸಹಾಯಕ ಅಭಿಯಂತರರನ್ನು ನೇಮಕಾತಿ ಮಾಡಿಕೊಳ್ಳಬೇಕು.
  • ತುರ್ತು ಕಾಮಗಾರಿಗೆ ಪ್ರತಿ ವಾರ್ಡ್‌ ಎಂಜಿನಿಯರ್‌ಗೆ ಹೊಸ ವಾರ್ಡ್‌ಗೆ ವಾರ್ಷಿಕ ಗರಿಷ್ಠ .10 ಲಕ್ಷ ವರೆಗೆ, ಕೋರ್‌ ವಾರ್ಡ್‌ಗಳಿಗೆ .5 ಲಕ್ಷವರೆಗೆ ಆವರ್ತ ನಿಧಿ ಒದಗಿಸಬೇಕು.
  • ಪ್ರತಿ ವಾರ್ಡ್‌ಗೆ ಒಬ್ಬ ಕಿರಿಯ ಆರೋಗ್ಯ ನಿರೀಕ್ಷಕರು ಮತ್ತು ಪ್ರತಿ 2 ವಾರ್ಡ್‌ಗಳಿಗೆ ಒಬ್ಬ ಹಿರಿಯ ಆರೋಗ್ಯ ನಿರೀಕ್ಷಕರು ಇರಬೇಕು.
  • ವಲಯವಾರು ಕಾನೂನು ಕೋಶಗಳ ರಚನೆ ಮಾಡಿ 10 ಹೆಚ್ಚುವರಿ ಕಿರಿಯ ಕಾನೂನು ಅಧಿಕಾರಿ ಹುದ್ದೆಗಳನ್ನು ಸೃಜಿಸಬೇಕು.
Latest Videos
Follow Us:
Download App:
  • android
  • ios