ಕೃಷಿ ಕ್ಷೇತ್ರದ 12 ಸಾಧಕರಿಗೆ ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ರೈತ ರತ್ನ ಪ್ರಶಸ್ತಿ ಪ್ರದಾನ

ನಾಡಿನ ಕೃಷಿ ಕ್ಷೇತ್ರದ ಅಪೂರ್ವ ಸಾಧಕರಿಗೆ ಶೋಭಾ ಕರಂದ್ಲಾಜೆ, ಬಿ.ಸಿ.ಪಾಟೀಲ್‌, ಶ್ರುತಿ ಅವರಿಂದ ಗೌರವ,  ಬೆಂಗಳೂರಲ್ಲಿ ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಿಂದ 3ನೇ ಆವೃತ್ತಿಯ ‘ರೈತ ರತ್ನ’ ಪ್ರಶಸ್ತಿ ಪ್ರದಾನ. 

Kannada Prabha, Asianet Suvarna News Raitha Ratna Award to 12 Agricultural Achievers grg

ಬೆಂಗಳೂರು(ಮಾ.18):  ಕೃಷಿ ಲಾಭದಾಯಕವಲ್ಲ ಎಂದು ಹಿಂಜರಿಯುವವರ ನಡುವೆ ಸಮಗ್ರ, ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಸಾವಿರಾರು ರೈತರಿಗೆ ಸ್ಫೂರ್ತಿಯ ಸೆಲೆಯಾದ ಸಾಧಕರನ್ನು ಗೌರವಿಸುವ, ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಕೊಡಮಾಡುವ ಮೂರನೇ ಆವೃತ್ತಿಯ ‘ರೈತ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಶುಕ್ರವಾರ ಸಡಗರ-ಸಂಭ್ರಮದಿಂದ ನೆರವೇರಿತು.

ನಗರದ ಹೋಟೆಲ್‌ ಲಲಿತ್‌ ಅಶೋಕ್‌ನಲ್ಲಿ ಆಯೋಜಿಸಿದ್ದ ವಿಶಿಷ್ಟಸಮಾರಂಭದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಬಿ.ಸಿ.ಪಾಟೀಲ್‌, ನಟಿ ಶ್ರುತಿ ಮತ್ತಿತರ ಗಣ್ಯರು ಆಗಮಿಸಿ ಕೃಷಿಯ ವಿವಿಧ ಪ್ರಕಾರಗಳಲ್ಲಿ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾದ 12 ಸಾಧಕರನ್ನು ಗೌರವಿಸಿ, ಅಭಿನಂದಿಸಿದರು. 12 ಸಾಧಕರಿಗೆ ಸ್ಮರಣಿಕೆ, ಪ್ರಶಸ್ತಿ ಫಲಕ ಹಾಗೂ ತಲಾ 15 ಸಾವಿರ ರು. ನಗದು ಪುರಸ್ಕಾರ ನೀಡಲಾಯಿತು.

ಕನ್ನಡಪ್ರಭ, ಸುವರ್ಣನ್ಯೂಸ್‌ ‘ರೈತ ರತ್ನ’ ಪ್ರಶಸ್ತಿಗೆ 12 ಸಾಧಕರ ಆಯ್ಕೆ: ಮಾ.17ಕ್ಕೆ ಪ್ರದಾನ

ಕಾರ್ಯಕ್ರಮದ ಆರಂಭದಲ್ಲಿ ರಾಮನಗರದ ಕಬ್ಬಾಳಮ್ಮ ಜಾನಪದ ಕಲಾ ತಂಡದವರು ಆಕರ್ಷಕ ಡೊಳ್ಳು ಕುಣಿತ ಪ್ರದರ್ಶಿಸಿದರು. ನಂತರ ಪ್ರಶಸ್ತಿಗಾಗಿ ಸ್ವೀಕಾರವಾಗಿದ್ದ 600ಕ್ಕೂ ಅಧಿಕ ಅರ್ಜಿಗಳನ್ನು ತಜ್ಞರ ತಂಡ ಪರಿಶೀಲಿಸಿ ಯಾವ ರೀತಿ ಪಾರದರ್ಶಕವಾಗಿ ಆಯ್ಕೆ ಮಾಡಿತು, ತೀರ್ಪುಗಾರರ ಅಭಿಪ್ರಾಯವೇನು, ಪ್ರಶಸ್ತಿಗೆ ಭಾಜನರಾದವರು ಕೃಷಿಯಲ್ಲಿ ಯಾವ ರೀತಿ ಸಾಧನೆ ಮಾಡಿದ್ದಾರೆ ಎಂಬುದರ ವಿಡಿಯೋ ಪ್ರದರ್ಶಿಸಲಾಯಿತು.

‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಪ್ರಧಾನ ಸಂಪಾದಕ ರವಿ ಹೆಗಡೆ ಅವರು, ‘ರೈತ ರತ್ನ’ ಪ್ರಶಸ್ತಿಯ ಉದ್ದೇಶ, ನಡೆದು ಬಂದ ದಾರಿ, ರೈತರಿಗೆ ಪ್ರೇರಣೆದಾಯಕವಾಗುವ ಅಂಶಗಳ ಬಗ್ಗೆ ಬೆಳಕು ಚೆಲ್ಲಿದರು. ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಸಂಪಾದಕ ಅಜಿತ್‌ ಹನಮಕ್ಕನವರ್‌ ಉಪಸ್ಥಿತರಿದ್ದರು. ಭಾವನಾ ನಾಗಯ್ಯ ನಿರೂಪಿಸಿದರು.

ಕನ್ನಡಪ್ರಭ, ಸುವರ್ಣನ್ಯೂಸ್‌ ‘ರೈತ ರತ್ನ’ ಪ್ರಶಸ್ತಿಗೆ ಆಹ್ವಾನ: 11 ವಿಭಾಗದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ

ಉದ್ಯಮಿಗಳೂ ಭಾಗಿ: ಎ ಅಂಡ್‌ ಜೆ ಹೆಲ್ತ್‌ಕೇರ್‌ ಸಂಸ್ಥಾಪಕ ಸಿ.ಆರ್‌.ಜೋಶಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ದನ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್‌ಕುಮಾರ್‌, ಇಂಡಸ್‌ 555 ಡಿ ಟಿಎಂಟಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್‌, ನಿರ್ದೇಶಕಿ ಪದ್ಮಪ್ರಿಯಾ, ಮಹಾರಾಜಾ ಸೋಪ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಡಾ.ರವಿರಾಜ್‌, ಇನ್ನೋವೇಟಿವ್‌ ಅಡ್ವಾನ್ಡ್‌ ಮೀಡಿಯಾದ ವ್ಯವಸ್ಥಾಪಕ ನಿರ್ದೇಶಕ

ಜಿ.ಕೆ.ಮಧುಸೂದನ, ಹೋಂ ನೀಡ್‌್ಸ ಕಾರ್ಚ್‌ ವ್ಯವಸ್ಥಾಪಕ ನಿರ್ದೇಶಕ ವಿಮಲ್‌ರಾಜ್‌, ಐಶ್ವರ್ಯ ಟೀ ಸಂಸ್ಥಾಪಕ ದೀಪಕ್‌ ಎಂ.ನಾಯಕ್‌, ‘ಅಶೋಕ ಫಾಮ್‌ರ್‍’ ವ್ಯವಸ್ಥಾಪಕ ಪಾಲುದಾರ ಜೆ.ಎ.ಈರಣ್ಣ, ಎಸ್‌ಪಿಎಸ್‌ ಆಗ್ರೋನಿಕೋ ಇಂಡಿಯಾ ಎಲ್‌ಎಲ್‌ಪಿಯ ಪ್ರತಾಪ್‌ ಜಾನ್ಸನ್‌ ಮತ್ತಿತರ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.

Latest Videos
Follow Us:
Download App:
  • android
  • ios