ಕನ್ನಡಪ್ರಭ, ಸುವರ್ಣನ್ಯೂಸ್‌ ‘ರೈತ ರತ್ನ’ ಪ್ರಶಸ್ತಿಗೆ ಆಹ್ವಾನ: 11 ವಿಭಾಗದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ

ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಅನ್ನದಾತರಿಗೆ ‘ಕನ್ನಡ ಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಸಹಯೋಗದಲ್ಲಿ ‘ರೈತರತ್ನ’ ಪ್ರಶಸ್ತಿ ನೀಡಿ ಗೌರವಿಸಲು ವಿವರಗಳನ್ನು ಆಹ್ವಾನಿಸಲಾಗಿದೆ.

Kannadaprabha Suvarnanews Invitation for Raita Ratna Award gvd

ಬೆಂಗಳೂರು (ಫೆ.04): ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಅನ್ನದಾತರಿಗೆ ‘ಕನ್ನಡ ಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಸಹಯೋಗದಲ್ಲಿ ‘ರೈತರತ್ನ’ ಪ್ರಶಸ್ತಿ ನೀಡಿ ಗೌರವಿಸಲು ವಿವರಗಳನ್ನು ಆಹ್ವಾನಿಸಲಾಗಿದೆ. ರೈತ ರತ್ನ ಪ್ರಶಸ್ತಿಯ ಮೂರನೇ ಆವೃತ್ತಿ ಇದಾಗಿದ್ದು, ಎಂದಿನಂತೆ ಈ ಬಾರಿಯೂ 11 ವಿಭಾಗದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗುವುದು. ಡಾ. ಸಾಯಿಲ್‌, ಅಗ್ರಿಮೇಟ್‌, ಅಮೃತ ಬಿಂದು, ಸಿರಿ ಉತ್ಪನ್ನಗಳು, ಶಶಿ ಸೋಫ್ಸ್‌, ಶಾಲಿಮಾರ್‌ ಗೋಲ್ಡ್‌ ಟೀ, ಅಶೋಕ ಸೀಡ್ಸ್‌, ಸಾವಿತ್ರಿ ಆಶೀರ್ವಾದ್‌ ಹಾಗೂ ಐಎಎಂ ಮೀಡಿಯಾ ಸ್ಪೆಷಲಿಸ್ಟ್‌ ಪ್ರಾಯೋಜಕರಾಗಿದ್ದಾರೆ.

ಸುಸ್ಥಿರ ರೈತ ವಿಭಾಗ: ಮಣ್ಣು, ನೀರು, ಗೊಬ್ಬರಕ್ಕೆ ಹೆಚ್ಚು ಪರಾವಲಂಬಿಯಾಗದೆ ಮರ-ಗಿಡ ಬೆಳೆಸಿ, ಜಲ, ಮಣ್ಣು ಸಂರಕ್ಷಣೆ ಮಾಡುತ್ತ ಬೆಳೆ ವೈವಿಧ್ಯಗಳ ಮೂಲಕ ಕನಿಷ್ಠ 10 ವರ್ಷ ನಿರಂತರ ಯಶಸ್ಸು ಕಂಡವರು ವಿವರ ಕಳುಹಿಸಬಹುದು. 

ಸಾವಯವ ರೈತ: ಯಾವುದೇ ರೀತಿಯ ರಾಸಾಯನಿಕ ವಸ್ತು ಬಳಸದೆ, ಸಂಪೂರ್ಣವಾಗಿ ಸಾವಯವ ಪದಾರ್ಥಗಳನ್ನೇ ಬಳಸಿ ಕೃಷಿ ಮಾಡಿ ಬೆಳೆಯಲ್ಲೂ, ಆರ್ಥಿಕವಾಗಿಯೂ ಯಶ ಕಂಡವರು .

Prajadwani Bus Yatra: ಸಿದ್ದರಾಮಯ್ಯ, ಡಿಕೆಶಿ ಪ್ರತ್ಯೇಕ ಬಸ್‌ಯಾತ್ರೆಗೆ ಜನಸ್ತೋಮ

ಆಧುನಿಕ ರೈತ: ಕೃಷಿ ವಿಜ್ಞಾನದ ಆವಿಷ್ಕಾರಗಳನ್ನು ಬಳಸಿ ಗೆದ್ದವರು. ಉದಾ: ಟೆರೇಸ್‌ ಕೃಷಿ, ಹೈಡ್ರೋಫೋನಿಕ್ಸ್‌, ಏರೋಫೋನಿಕ್ಸ್‌, ಗ್ರೀನ್‌ ಅಥವಾ ಪಾಲಿ ಹೌಸ್‌ ಕೃಷಿ ಇತ್ಯಾದಿ ವಿಧಾನಗಳಲ್ಲಿ ಸಾಧಕರು.

ಯುವ ರೈತ: ಸಣ್ಣ ವಯಸ್ಸಿನಲ್ಲೇ ಏಕಾಂಗಿಯಾಗಿ ಕೃಷಿ ಕ್ಷೇತ್ರವನ್ನು ಆಯ್ದುಕೊಂಡು ವಿಶಿಷ್ಟಎನಿಸುವಂತಹ ಸಾಧನೆ ಮಾಡಿದವರು. ಈ ವಿಭಾಗದ ನಾಮ ನಿರ್ದೇಶನಕ್ಕೆ ಗರಿಷ್ಠ ವಯೋಮಿತಿ 35 ವರ್ಷ.

ರೈತ ಮಹಿಳೆ: ಯಾವುದೇ ಸ್ವರೂಪದ ಕೃಷಿಯಲ್ಲಿ ತೊಡಗಿಕೊಂಡು ಪಿತ, ಪತಿ, ಪುತ್ರರ ಅವಲಂಬನೆ ಇಲ್ಲದೆ ಸ್ವಂತ ಪರಿಶ್ರಮದಿಂದ ಯಶಸ್ಸು ಗಳಿಸಿದವರು.

ಪಶು ಸಂಗೋಪನೆ: ಎಮ್ಮೆ-ಕೋಣ, ಕುರಿ, ಆಡು, ಹಂದಿ, ಕೋಳಿ, ಹಸು-ಎತ್ತು ಮತ್ತಿತರ ಪ್ರಾಣಿಗಳನ್ನು ಹೈನುಗಾರಿಕೆ ಅಥವಾ ಆಹಾರಕ್ಕಾಗಿ ಸಾಕಿ, ಸಂಸ್ಕರಿಸಿ, ಮಾರಾಟ ಮಾಡಿ ಯಶ ಕಂಡ ಸಾಧಕರು.

ತೋಟಗಾರಿಕೆ: ಹೂವು, ಹಣ್ಣು, ತರಕಾರಿ, ಸಂಬಾರ ಬೆಳೆ ಇತ್ಯಾದಿ ತೋಟಗಾರಿಕೆ ಕೃಷಿ ಮಾಡಿ ಅಥವಾ ತೋಟಗಾರಿಕೆ ತಳಿ ಸಂರಕ್ಷಣೆ ಹಾಗೂ ಸಂವರ್ಧನೆ ಮಾಡಿ ಯಶಸ್ಸು ಕಂಡವರು.

ವೈದ್ಯ/ವಿಜ್ಞಾನಿ ರೈತ: ಕಳೆ/ಕೀಟ ತಡೆಗೆ, ಬೆಳೆ ರಕ್ಷಣೆಗೆ, ಇಳುವರಿ ಹೆಚ್ಚಿಸಲು ಹೊಸ ವಿಧಾನ ಕಂಡುಕೊಂಡ ರೈತ, ತಳಿ ಸಂರಕ್ಷಣೆ, ಸಂವರ್ಧನೆಗೆ ಆವಿಷ್ಕಾರಗಳಲ್ಲಿ ಯಶಸ್ವಿಯಾದ ರೈತ

ಕೃಷ್ಯುತ್ಪನ್ನ ಸಂಸ್ಥೆ/ರೈತ: ಬೆಳೆಯನ್ನು ಸಂಸ್ಕರಿಸಿ ಉತ್ಪನ್ನವಾಗಿ ಅಭಿವೃದ್ಧಿಪಡಿಸಿ ಮಾರುಕಟ್ಟೆಯನ್ನೂ ಮಾಡಿ ಯಶಸ್ಸು ಕಂಡ ಸಂಸ್ಥೆ ಅಥವಾ ರೈತ ಸಹಕಾರ ಸಂಘಗಳನ್ನು ಹೊರತುಪಡಿಸಿ ಉಳಿದ ಸಂಘಟನೆಗಳು.

ಕೃಷಿ ತಂತ್ರಜ್ಞಾನಿ/ಸಂಶೋಧಕ ರೈತ: ಕೃಷಿ, ತೋಟಗಾರಿಕೆ, ಪಶು ಸಂಗೋಪನೆಗೆ ಅನುಕೂಲವಾಗುವಂತಹ ಯಾವುದೇ ರೀತಿಯ ಉಪಕರಣಗಳನ್ನು ಸ್ವತಃ ಅಭಿವೃದ್ಧಿಪಡಿಸಿದ ಸಾಧಕರು.

100% ಸೋಲುವ ಕೈ ಶಾಸಕರಿಗೆ ಟಿಕೆಟ್‌ ಇಲ್ಲ: ಸಿದ್ದರಾಮಯ್ಯ

ಸುವರ್ಣ ಕೃಷಿ ಶಾಲೆ: ಮಕ್ಕಳಲ್ಲಿ ಕೃಷಿ ಜಾಗೃತಿಗಾಗಿ ತೋಟಗಾರಿಕೆ, ತರಕಾರಿ ಬೇಸಾಯ, ಭತ್ತದ ಬೆಳೆ ಇತ್ಯಾದಿಗಳನ್ನು ಶ್ರಮ ವಹಿಸಿದ ಅಪರೂಪದ ಶಾಲೆ, ಶಿಕ್ಷಕರು ಅಥವಾ ಸಂಸ್ಥೆಗಳು ಪ್ರಶಸ್ತಿಗೆ ವಿವರಗಳನ್ನು ಕಳುಹಿಸಬಹುದು.

ಪ್ರತಿ ಸಾಧಕರು ತಮ್ಮ ಹೆಸರು, ದೂರವಾಣಿ ಸಂಖ್ಯೆ, ಟಿಪ್ಪಣಿ, ಫೋಟೋಗಳು, ಕಾರ್ಯಕ್ಷೇತ್ರದ ಪುಟ್ಟವಿಡಿಯೋಗಳನ್ನು ನಿಮ್ಮ ಹೆಸರಿನಲ್ಲೇ ಸೇವ್‌ ಮಾಡಿ ಕಳುಹಿಸಿಕೊಡಿ. ವಿವರಗಳನ್ನು, ರೈತ ರತ್ನ ಪ್ರಶಸ್ತಿ ವಿಭಾಗ-ಏಷ್ಯಾನೆಟ್‌ ಸುವರ್ಣ ನ್ಯೂಸ್‌, ನಂ.36, ಕ್ರೆಸೆಂಟ್‌ ರಸ್ತೆ, ಬೆಂಗಳೂರು-560001. ಅಥವಾ ಇ-ಮೇಲ್‌: rrawards@suvarnanews.inಗೆ ಕಳುಹಿಸಬೇಕು.

Latest Videos
Follow Us:
Download App:
  • android
  • ios