ಜಗದೀಶ ಶೆಟ್ಟರ್ ಬಿಜೆಪಿಗೆ ಮರುಸೇರ್ಪಡೆ ಹಿಂದೆ ಐಟಿ, ಇಡಿ ಕೈವಾಡ! ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಕೇಂದ್ರ ಸರ್ಕಾರಕ್ಕೆ ರಾಜ್ಯ ನಾಯಕತ್ವದ ಮೇಲೆ ಭರವಸೆ ಇಲ್ಲ. ಬಿವೈ ವಿಜಯೇಂದ್ರ, ಅಶೋಕ್ ಮೇಲೆ ನಂಬಿಕೆ ಇಲ್ಲ ಹೀಗಾಗಿ ಬಿಜೆಪಿ ಯಾರೇ ಬಂದರೂ ಸ್ವಾಗತಿಸುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ದಿಢೀರ್ ಬಿಜೆಪಿ ಪಕ್ಷಕ್ಕೆ ಮರುಸೇರ್ಪಡೆಯಾಗಿರುವುದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
ಕಲಬುರಗಿ (ಜ.26): ಕೇಂದ್ರ ಸರ್ಕಾರಕ್ಕೆ ರಾಜ್ಯ ನಾಯಕತ್ವದ ಮೇಲೆ ಭರವಸೆ ಇಲ್ಲ. ಬಿವೈ ವಿಜಯೇಂದ್ರ, ಅಶೋಕ್ ಮೇಲೆ ನಂಬಿಕೆ ಇಲ್ಲ ಹೀಗಾಗಿ ಬಿಜೆಪಿ ಯಾರೇ ಬಂದರೂ ಸ್ವಾಗತಿಸುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ದಿಢೀರ್ ಬಿಜೆಪಿ ಪಕ್ಷಕ್ಕೆ ಮರುಸೇರ್ಪಡೆಯಾಗಿರುವುದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಸ್ವಪಕ್ಷದ ವಿರುದ್ಧ ತಿರುಗಿಬಿದ್ದು ಕಾಂಗ್ರೆಸ್ ಪಕ್ಷ ಸೇರಿದ್ದ ಜಗದೀಶ ಶೆಟ್ಟರ್, ಸವದಿಯವರಿಗೇ ಬಿಜೆಪಿಯವರು ಗಾಳ ಹಾಕ್ತಿದ್ದಾರೆಂದ್ರೆ ಅವರಲ್ಲಿ ನಾಯಕತ್ವದ ಕೊರತೆ ಇರೋದು ಎದ್ದು ಕಾಣುತ್ತದೆ. ನಮ್ಮ ಪಕ್ಷಕ್ಕೆ 135 ವರ್ಷದ ಇತಿಹಾಸವಿದೆ. ಅವರು ಬರೋದ್ರಿಂದ ಪ್ಲಸ್ ಮೈನಸ್ ಏನೂ ಆಗಲ್ಲ. ಹಿರಿಯ ನಾಯಕರು ಅಂತ ಸೇರಿಸಿಕೊಂಡಿದ್ದೆವು. ವಿಧಾನಸಭಾ ಚುನಾವಣೆಯಲ್ಲಿ ಅವರು ಸೋತು ಜನರಿಂದ ತಿರಸ್ಕಾರಗೊಂಡಿದ್ರೂ ನಾವು ಅವರಿಗೆ ಗೌರವ, ಸ್ಥಾನಮಾನ ಕೊಟ್ಟಿದ್ದೆವು. ಅವರ ಮೇಲೆ ಭರವಸೆ, ನಂಬಿಕೆ ಇಟ್ಟಿದ್ದೆವು ಅವರು ಅದನ್ನು ಉಳಿಸಿಕೊಂಡಿಲ್ಲ ಎಂದರು.
ಸಂಸದ ಡಾ.ಉಮೇಶ್ ಜಾಧವ್‌ಗೆ ಪ್ರೋಟೋಕಾಲ್ ಗೊತ್ತಿದೆಯಾ: ಸಚಿವ ಪ್ರಿಯಾಂಕ್ ಖರ್ಗೆ
ಜಗದೀಶ ಶೆಟ್ಟರ್ ಹಿಂದೆ ಐಟಿ, ಇಡಿ ಕೈವಾಡ:
ಐಟಿ,ಇಡಿ, ಸಿಬಿಐಯವರೇ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರಾಗಿದ್ದಾರೆ. ಜಗದೀಶ ಶೆಟ್ಟರ್ ಬಿಜೆಪಿಗೆ ಮರುಸೇರ್ಪಡೆಗೊಂಡಿರುವ ಹಿಂದೆ ಇವರ ಕೈವಾಡವೂ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು. ಮುಂದುವರಿದು ಇದನ್ನ ತೆಗೆದುಬಿಡಿ ಇವರೆಲ್ಲ ಸೋತು ಸುಣ್ಣವಾಗ್ತಾರೆ. ಪ್ರತಿ ಚುನಾವಣೆಯಲ್ಲಿ ಬಿಜೆಪಿಯವರ ಗೆಲುವಿನ ಹಿಂದೆ ಇಡಿ, ಐಟಿ, ಸಿಬಿಐನವರು ಕೆಲಸ ಮಾಡ್ತಾರೆ ಎಂಬುದು ಗುಟ್ಟೇನು ಅಲ್ಲ ಎಂದರು.
ಇನ್ನೊಂದು ಹೇಳಬೇಕು ಬಿಜೆಪಿಯವರಲ್ಲಿ ಒಂದು ವಾಸಿಂಗ್ ಮಷೀನ್ ಇದೆ.ಇವರು ಎಲ್ಲ ಪಕ್ಷದವರನ್ನು ಭ್ರಷ್ಟರು ಎನ್ನುತ್ತಾರೆ. ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ವಾಷಿಂಗ್ ಮಷಿನ್ ಗೆ ಹಾಕಿ ಸಾಪ್ ಮಾಡ್ತಾರೆ ಎಂದು ಲೇವಡಿ ಮಾಡಿದರು.
'6 ತಿಂಗಳ ಹಿಂದೆ ಏನಾಗಿತ್ತು?' ಮೋದಿ ಕೈ ಬಲಪಡಿಸೋಕೆ ಮರುಸೇರ್ಪಡೆ ಎಂದ ಶೆಟ್ಟರ್‌ಗೆ ಪ್ರಿಯಾಂಕ್ ಖರ್ಗೆ ತಿರುಗೇಟು!