ಸಂಸದ ಡಾ.ಉಮೇಶ್ ಜಾಧವ್‌ಗೆ ಪ್ರೋಟೋಕಾಲ್ ಗೊತ್ತಿದೆಯಾ: ಸಚಿವ ಪ್ರಿಯಾಂಕ್ ಖರ್ಗೆ
ಪ್ರಧಾನಿ ಮೋದಿ ಸ್ವಾಗತಕ್ಕೆ ಬಾರದ ಪ್ರೀಯಾಂಕ್ ಖರ್ಗೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಕಲಬುರಗಿ ಸಂಸದ ಡಾ. ಉಮೇಶ ಜಾಧವ್ ಹೇಳಿಕೆಗೆ ಪ್ರೀಯಾಂಕ್ ಖರ್ಗೆ ಆಕ್ರೋಶ ಹೊರ ಹಾಕಿದ್ದು, ಇದು ಸಂಸದ ಉಮೇಶ ಜಾಧವರ ಅವಿವೇಕತನದ ಪರಮಾವಧಿ ಎಂದು ಹೇಳಿದ್ದಾರೆ.
ಕಲಬುರಗಿ (ಜ.25): ಪ್ರಧಾನಿ ಮೋದಿ ಸ್ವಾಗತಕ್ಕೆ ಬಾರದ ಪ್ರೀಯಾಂಕ್ ಖರ್ಗೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಕಲಬುರಗಿ ಸಂಸದ ಡಾ. ಉಮೇಶ ಜಾಧವ್ ಹೇಳಿಕೆಗೆ ಪ್ರೀಯಾಂಕ್ ಖರ್ಗೆ ಆಕ್ರೋಶ ಹೊರ ಹಾಕಿದ್ದು, ಇದು ಸಂಸದ ಉಮೇಶ್ ಜಾಧವ್‌ರ ಅವಿವೇಕತನದ ಪರಮಾವಧಿ ಎಂದು ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿ, ಇವರಿಗೆ ಪ್ರೋಟೋಕಾಲ್ ಏನಿದೆ ಗೊತ್ತಿದೆಯಾ?, ಉಮೇಶ ಜಾಧವ್ ಅವರಿಗೆ ತಿಳುವಳಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ, ಬೇಕಂತಾನೇ ಹೀಗೆ ಮಾಡ್ತಾರೋ ಗೊತ್ತಿಲ್ಲ. ತಮ್ಮ ಕಾರ್ಯವೈಖರಿ ದೋಷ ಮುಚ್ಚಲು ಪದೇ ಪದೇ ನನ್ನ ಹೆಸರು ಜಪಾ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ನಾನು ಮನೆದೇವ್ರು ಆಗಿ ಬಿಟ್ಟಿದ್ದೇನೆ ಎಂದರು.
ನನ್ನ ಹೆಸರು ಹೇಳದಿದ್ರೆ ಅವರಿಗೆ ನಿದ್ರೆನೂ ಬರಲ್ಲ. ಊಟಾನೂ ಜೀರ್ಣ ಆಗಲ್ಲ, ಅಭಿವೃದ್ಧಿ ಬಗ್ಗೆ ಪ್ರಧಾನಿಗೆ ಮನವಿ ಕೊಡಬೇಕಿತ್ತಲ್ವಾ? ಅವರ ಲೀಡರ್ ಯಾಕೆ ಬರ್ತಿದಾರೆ ಅಂತಾನೂ ಇವರಿಗೆ ಗೊತ್ತಿಲ್ಲದ ಅಯೋಗ್ಯರು ಎಂದು ಟೀಕಿಸಿದರು. ಪ್ರಧಾನಿ ಮೋದಿ 11 ದಿನಗಳ ಉಪವಾಸ ಕೈಗೊಂಡ ವಿಚಾರವಾಗಿ ಸ್ಪಂದಿಸಿದ ಪ್ರಿಯಾಂಕ್, ಮೋದಿ ಮಾಡಿದ್ದೆಲ್ಲಾ ಅನುಮಾನ ಅಂತಲ್ಲ ಅವರ ಟ್ರ್ಯಾಕ್ ರೆಕಾರ್ಡ್ ನೋಡಿ ಹೇಗಿದೆ? ನೂರು ಸ್ಮಾರ್ಟ್ ಸಿಟಿ ಆಯ್ತಾ, 2 ಕೋಟಿ ಉದ್ಯೋಗ ಸಿಕ್ಕಿದೆಯಾ? 15 ಲಕ್ಷ ಅಕೌಂಟ್‌ಗೆ ಬಂತಾ? ರೈತರಿಗೆ ಎಂಎಸ್‌ಪಿ ಸಿಕ್ಕಿದೆಯಾ? 11 ದಿನ ಅಲ್ಲ 10 ವರ್ಷದ ರೆಕಾರ್ಡ್ ನೋಡಿ ಅವರ ರೆಕಾರ್ಡ ನೋಡಿದ್ರೆ ನಿಮಗೆ ಅನಿಸುತ್ತಾ?
ಅವ್ರು ಉಪವಾಸ ಮಾಡಿದ್ರೆ ಒಳ್ಳೆಯದು. ಇಲ್ಲದಿದ್ರೆ ದೇವ್ರು ಅವರಿಗೆ ಶಿಕ್ಷೆ ಕೊಡ್ತಾನೆ. ಬಿಜೆಪಿ, ಆರ್.ಎಸ್.ಎಸ್ ಏನೇ ಮಾಡಿದ್ರು ಅನುಮಾನ ಇದೆ, ಅವರು ಬಾಯಿ ಬಿಟ್ಟರೆ ಸುಳ್ಳು ಇರುತ್ತೆ. ಸುಳ್ಳೇ ಅವರ ಮನೆ ದೇವ್ರು ಎಂದರು. ಸೂಲಿಬೆಲೆ ಚಕ್ರವರ್ತಿ ಒಬ್ಬ ಬಾಡಿಗೆ ಭಾಷಣಕಾರ. ಈತ ವಾಟ್ಸಪ್ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್, ಇಂತವರಿಗೆ ಮಾತಾಡಲು ಬಿಟ್ಟರೇ ಇದೆ ಆಗೋದು. ಅವರ ಬಗ್ಗೆ ಮಾತಾಡಲು ಏನಿಲ್ಲ. ಕೇಸ್ ರೆಜಿಸ್ಟರ್ ಆಗಿದೆ, ಸದ್ಯದಲ್ಲೇ ನೋಟಿಸ್ ಹೋಗುತ್ತೆ, ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ನಮ್ಮ ಗ್ಯಾರಂಟಿ ಲೇವಡಿ ಮಾಡಿ ಮೋದಿ ಅವರೇ ಕೊಡಲು ಹೊರಟಿದ್ದಾರೆ: ಸಿದ್ದರಾಮಯ್ಯ
ಇದು ಕ್ಲಿಯರ್ ಕೇಸ್ ಆಫ್ ಮಿಸ್ ಇನ್ಫಾರ್ಮೇಶನ್, ಈತ ತಾನೊಬ್ಬ ದೊಡ್ಡ ವಿದ್ವಾನ ರೀತಿ ಮಾತಾಡ್ತಾನೆ, ಹಿಂದಿನ ಸರಕಾರದಲ್ಲಿ ಇಂತಹ ಸುಳ್ಳು ಹೇಳಲು ಅವನಿಗೆ ಕೋಟ್ಯಂತರ ರು. ಕೊಟ್ಟಿದ್ದಾರೆ ಒಂದು ಗ್ರಾಮ ಪಂಚಾಯ್ತಿ ಗೆಲ್ಲಲು ಯೋಗ್ಯತೆ ಇಲ್ಲ ಅವನಿಗೆ, ಅವನು ಇವತ್ತು ಖರ್ಗೆ ಅವರ ಬಗ್ಗೆ ಮಾತಾಡ್ತಾನೆ ಅಂದ್ರೆ ಆಕಾಶ ನೋಡಿಕೊಂಡು ಉಗುಳಿದಂತೆ ಎಂದು ಸೂಲಿಬೆಲೆ ವಿರುದ್ದ ಪ್ರಿಯಾಂಕ್ ಖರ್ಗೆ ಏಕವಚನದಲ್ಲಿ ವಾಗ್ದಾಳಿ ಮಾಡಿದರು.