Asianet Suvarna News Asianet Suvarna News

ಸೋಮಣ್ಣಗೆ ಪಕ್ಷದಲ್ಲಿ ಅಸಮಾಧಾನ ಇರುವುದು ಸತ್ಯ: ಕೆ.ಎಸ್. ಈಶ್ವರಪ್ಪ

ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಪಕ್ಷದಲ್ಲಿ ಅಸಮಾಧಾನ ಇರುವುದು ಸತ್ಯ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಯೋಜನೆ ಬೇರೆಯದೇ ಇತ್ತು. ವಿ.ಸೋಮಣ್ಣ ಪವರ್ ಫುಲ್ ಲೀಡರ್. ಸಿದ್ದರಾಮಯ್ಯ ಅವರನ್ನು ಸೋಲಿಸುವ ಶಕ್ತಿ ಅವರಿಗಿತ್ತು. ಆದರೆ, ಸಿದ್ದರಾಮಯ್ಯ ಹೇಗೆ ಗೆದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಇಷ್ಟಾದರೂ ಕೇಂದ್ರದ ನಾಯಕರು ಸೋಮಣ್ಣ ಅವರ ಕೈಬಿಡಲ್ಲ ಎಂದು ಹೇಳಿದರು.

It is true that Somanna is unhappy in the bjp party says K.S. Eshwarappa at mysuru rav
Author
First Published Oct 12, 2023, 1:25 PM IST

ಮೈಸೂರು (ಅ.12) :  ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಪಕ್ಷದಲ್ಲಿ ಅಸಮಾಧಾನ ಇರುವುದು ಸತ್ಯ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಯೋಜನೆ ಬೇರೆಯದೇ ಇತ್ತು. ವಿ.ಸೋಮಣ್ಣ ಪವರ್ ಫುಲ್ ಲೀಡರ್. ಸಿದ್ದರಾಮಯ್ಯ ಅವರನ್ನು ಸೋಲಿಸುವ ಶಕ್ತಿ ಅವರಿಗಿತ್ತು. ಆದರೆ, ಸಿದ್ದರಾಮಯ್ಯ ಹೇಗೆ ಗೆದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಇಷ್ಟಾದರೂ ಕೇಂದ್ರದ ನಾಯಕರು ಸೋಮಣ್ಣ ಅವರ ಕೈಬಿಡಲ್ಲ ಎಂದು ಹೇಳಿದರು.

ನಾವು ಹಿಂದೂಗಳು ಭಾರತಾಂಬೆ ಮಕ್ಕಳು: ರಾಮಲಿಂಗಾರೆಡ್ಡಿಗೆ ಈಶ್ವರಪ್ಪ ಹೇಳಿದ್ದೇನು?

ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಅಸಮಾಧಾನ ಸಂಬಂಧ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಖಾರವಾಗಿಯೇ ಪ್ರತಿಕ್ರಿಯಿಸಿ, ಅವರ ಬಗ್ಗೆ ಯಾಕೆ ಅಷ್ಟು ಮಹತ್ವ ಕೊಡ್ತೀರಿ. ಯಾವುದೇ ವ್ಯಕ್ತಿ ಬಿಜೆಪಿಗೆ ಮುಜುಗರ ತಂದೊಡ್ಡಲು ಸಾಧ್ಯವಿಲ್ಲ. ಪಕ್ಷದ ಸಿದ್ಧಾಂತದ ಜೊತೆ ಇದ್ದರೆ ಒಳಿತು. ಇಲ್ಲದಿದ್ದರೆ ಪಕ್ಷ ಸೂಕ್ತ ಕ್ರಮ ಕೈಗೊಳ್ಳು ತ್ತದೆ ಎಂದರಲ್ಲದೆ, ಪರ-ವಿರೋಧದ‌ ಬಗ್ಗೆ ಮಾತಾಡಲು ಅವನ್ಯಾರು ಎಂದು ಹರಿಹಾಯ್ದರಲ್ಲದೆ, ‘ನೀನೊಬ್ಬ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ, ಹಿರಿಯರ ಮಾತು ಕೇಳಿಕೊಂಡು‌ ಬಿಜೆಪಿಯಲ್ಲಿ ಇರೋದಾದರೆ ಇರು, ಇಲ್ಲಿ ಪಕ್ಷದ ತೀರ್ಮಾನವೇ ಅಂತಿಮ’ ಎಂದು ಖಡಕ್ಕಾಗಿಯೇ ಹೇಳಿದರು.

ಜೆಡಿಎಸ್- ಬಿಜೆಪಿ ‌ಮೈತ್ರಿ ಸಂಬಂಧ ಕೇಂದ್ರದ ತೀರ್ಮಾನಕ್ಕೆ ನಾವು ಬದ್ಧ. ಕೇಂದ್ರ ತಿಳಿಸಿದಂತೆ ನಾವು ಕೆಲಸ ಮಾಡ್ತೀವಿ. ನನಗಂತೂ ಯಾವುದೇ ಅಸಮಾಧಾನ ಇಲ್ಲ. ಪಕ್ಷ ನನಗೆ ಎಲ್ಲವನ್ನೂ‌ ನೀಡಿದೆ. ನನಗೆ ಯಾವ ಅಪೇಕ್ಷೆಯೂ ಇಲ್ಲ, ನಾನು ಪಕ್ಷದಲ್ಲಿ ತೃಪ್ತನಾಗಿದ್ದೇನೆ ಎಂದರು.

ಡಿಕೆಶಿಗೆ ಉಪಮುಖ್ಯಮಂತ್ರಿ ಆಗಲು ಯೋಗ್ಯತೆ ಇದೆಯಾ?, ಇಂತಹ ಡಿಸಿಎಂ ನಮಗೆ ಬೇಕಾ?: ಈಶ್ವರಪ್ಪ ಗುಡುಗು

Follow Us:
Download App:
  • android
  • ios