ಭಾರತದಲ್ಲಿ ದುಷ್ಕೃತ್ಯಕ್ಕೆ ಐಸಿಸ್ ಸಂಚು; ಬೆಂಗಳೂರು ಸೇರಿದಂತೆ ದೇಶಾದ್ಯಂತ 41 ಕಡೆ ಎನ್‌ಐಎ ದಾಳಿ!
ದೇಶದಲ್ಲಿ ಐಸಿಸ್ ಉಗ್ರರಿಂದ ದುಷ್ಕೃತ್ಯದ ಸಂಚಿನ ಆರೋಪ ಪ್ರಕರಣ ಹಿನ್ನೆಲೆ ಬೆಂಗಳೂರು ಸೇರಿದಂತೆ ದೇಶದ 41 ಕಡೆ ಎನ್‌ಐಎ ದಾಳಿ ನಡೆಸಿ ಶಂಕಿತರನ್ನು ವಶಕ್ಕೆ ಪಡೆದಿದೆ. ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಬೆಂಗಳೂರಿನ ಶಂಕಿತ ಉಗ್ರನ ನಿವಾಸದ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ಆಲಿ ಅಬ್ಬಾಸ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು (ಡಿ.9) ದೇಶದಲ್ಲಿ ದುಷ್ಕೃತ್ಯ ನಡೆಸಲು ಐಸಿಸ್ ಉಗ್ರರು ಸಂಚು ನಡೆಸಿರುವ ಹಿನ್ನೆಲೆ ಬೆಂಗಳೂರು ಸೇರಿದಂತೆ ದೇಶದ 41 ಕಡೆ ಎನ್‌ಐಎ ದಾಳಿ ನಡೆಸಿ ಶಂಕಿತರನ್ನು ವಶಕ್ಕೆ ಪಡೆದಿದೆ. ದಾಳಿ ವೇಳೆ ಹಲವು ಶಂಕಿತ ಉಗ್ರರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿರುವ ಎನ್‌ಐಎ ಅಧಿಕಾರಿಗಳು.
ಬೆಂಗಳೂರಿನಲ್ಲಿ 1 ಕಡೆ, ಪುಣೆಯಲ್ಲಿ 2 ಕಡೆ, ಥಾಣೆಯ ಗ್ರಾಮಿಣ ಭಾಗದಲ್ಲಿ 31 ಹಾಗೂ ಹಲವೆಡೆ ದಾಳಿ ನಡೆಸಿರುವ ಎನ್‌ಐಎ ಅಧಿಕಾರಿಗಳು. ಪ್ರಮುಖವಾಗಿ ಭಿವಂಡಿಯ ಪಾದ್ಘಾ ಗ್ರಾಮದಲ್ಲಿ ಎನ್ಐಎ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿದೆ. ಮಹಾರಾಷ್ಟ್ರ ಎಟಿಎಸ್ ನೆರವಿನಿಂದ ಎನ್ ಐಎ ಅಧಿಕಾರು 7-8 ಶಂಕಿತರನ್ನು ಮಂದಿಯನ್ನು ಬಂಧಿಸಿದೆ.
ಪಾದ್ಘಾ ಗ್ರಾಮವು ಎನ್‌ಐಎ ರಾಡಾರ್‌ನಲ್ಲಿತ್ತು. ಪುಣೆಯಲ್ಲಿ ಭಯೋತ್ಪಾದಕ ಪ್ರಕರಣ ಪತ್ತೆಯಾದ ಬಳಿಕ ಎನ್‌ಐಎ ಅಧಿಕಾರಿಗಳ ಕಾರ್ಯಾಚರಣೆ. ಕಾರ್ಯಾಚರಣೆಯಲ್ಲಿ ಹಲವರನ್ನು ಬಂಧಿಸಿ ವಿಚಾರಣೆಗೊಳಪಡಿಸಿರುವ ಎನ್‌ಐಎ ಅಧಿಕಾರಿಗಳು.
ಪಾರ್ಟ್ ಟೈಂ ಜಾಬ್ ಹೆಸರಿನಲ್ಲಿ ಮಹಿಳೆಗೆ 1.47 ಲಕ್ಷ ರೂ. ಉಂಡೇನಾಮ !
ಬೆಂಗಳೂರಿನಲ್ಲೂ ಐಸಿಸ್ ಉಗ್ರ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ ಓರ್ವ ಶಂಕಿತನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು. ನಗರದ ಟ್ಯಾನರಿ ರಸ್ತೆಯಲ್ಲಿರುವ ಶಂಕಿತ ಉಗ್ರನ ಮನೆ. ಐಸಿಸ್ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಆರೋಪ ಹಿನ್ನೆಲೆ ಅಪಾರ್ಟ್‌ಮೆಂಟ್‌ನ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು. ದಾಳಿ ವೇಳೆ ಅಪಾರ್ಟ್‌ಮೆಂಟ್‌ನಲ್ಲೇ ಇದ್ದ ಅಲಿ ಅಬ್ಬಾಸ್ ವಶಕ್ಕೆ ಪಡೆದುಕೊಂಡ ಎನ್‌ಐಎ ಅಧಿಕಾರಿಗಳು. ಶಂಕಿತರ ವಿಚಾರಣೆ ಮುಂದುವರಿಸಿರುವ ಎನ್‌ಐಎ ಅಧಿಕಾರಿಗಳು.
ಅಲಿ ಅಬ್ಬಾಸ್ ಮುಂಬೈ ಮೂಲದ ಶಂಕಿತ ಉಗ್ರ:
ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿರುವ ಶಂಕಿತ ಉಗ್ರ ಅಲಿ ಅಬ್ಬಾಸ್ ಮುಂಬೈ ಮೂಲದವನಾಗಿದ್ದು, ಟ್ಯಾನರಿ ರಸ್ತೆಯಲ್ಲಿ ಉರ್ದು ಶಾಲೆ ನಡೆಸುತ್ತಿದ್ದ. ಉರ್ದು ಶಾಲೆ ನಡೆಸುವ ಮೂಲಕ ಐಸಿಸ್ ಚಿಂತನೆ ಬಿತ್ತುತ್ತಿದ್ದ ಅಲಿ ಅಬ್ಬಾಸ್. ಅಲಿ ಅಬ್ಬಾಸ್ ಪತ್ನಿ ಆಸ್ಪತ್ರೆ ನಡೆಸ್ತಾ ಇದ್ರು. ಎನ್‌ಐಎ ದಾಳಿ ವೇಳೆ ಅಲಿ ಅಬ್ಬಾಸ್ ಮನೆಯಲ್ಲಿ 16.42 ಲಕ್ಷ ನಗದು ಪತ್ತೆಯಾಗಿದೆ. ಅಬ್ಬಾಸ್ ಮೊಬೈಲ್ ಹಾಗೂ ಲ್ಯಾಪ್ ಟಾಪ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿರುವ ಅಧಿಕಾರಿಗಳು.