Asianet Suvarna News Asianet Suvarna News

ಪಾರ್ಟ್‌ ಟೈಂ ಜಾಬ್ ಹೆಸರಿನಲ್ಲಿ ಮಹಿಳೆಗೆ 1.47 ಲಕ್ಷ ರೂ. ಉಂಡೇನಾಮ !

ಟೆಲಿಗ್ರಾಂ ಆ್ಯಪ್‌ ಮೂಲಕ ಪಾರ್ಟ್‌ ಟೈಂ ಜಾಬ್‌ ಎಂದು ರೇಟಿಂಗ್‌ ನೀಡುವ ಟಾಸ್ಕ್‌ ಕೊಟ್ಟು 27.56 ಲ.ರು. ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

A Woman Fraud by an assailant in the name of part-time job at mangaluru rav
Author
First Published Dec 9, 2023, 8:32 AM IST

ಮಂಗಳೂರು (ಡಿ.9): ಟೆಲಿಗ್ರಾಂ ಆ್ಯಪ್‌ ಮೂಲಕ ಪಾರ್ಟ್‌ ಟೈಂ ಜಾಬ್‌ ಎಂದು ರೇಟಿಂಗ್‌ ನೀಡುವ ಟಾಸ್ಕ್‌ ಕೊಟ್ಟು 27.56 ಲ.ರು. ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ದೂರುದಾರರಿಗೆ ಜೂ.19ರಂದು ಟೆಲಿಗ್ರಾಂ ಆ್ಯಪ್‌ನಲ್ಲಿ ಹೊಟೇಲ್‌ ಮತ್ತು ಹೋಂ ಸ್ಟೇಗಳಿಗೆ ರೇಟಿಂಗ್‌ ನೀಡುವ ಟಾಸ್ಕ್‌ ಪೂರ್ಣಗೊಳಿಸುವ ಪಾರ್ಚ್‌ ಟೈಂ ಜಾಬ್‌ ಮಾಡಿ ಹಣ ಗಳಿಸಬಹುದು ಎಂದು ಅಪರಿಚಿತ ವ್ಯಕ್ತಿಯಿಂದ ಮೆಸೇಜ್‌ ಬಂದಿತ್ತು. ಅದನ್ನು ನಂಬಿದ ದೂರುದಾರರು ಗ್ರೂಪ್‌ನಲ್ಲಿ 30 ಟಾಸ್ಕ್‌ಪೂರ್ಣಗೊಳಿಸಿದ್ದರು. 

ಅಯ್ಯಪ್ಪ ಮಾಲೆ ಧರಿಸಿ ವಂಚನೆ; ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು!

ಅವರಿಗೆ ಅಪರಿಚಿತ ವ್ಯಕ್ತಿ 900 ರು.ಗಳನ್ನು ಲಾಭಾಂಶವೆಂದು ನೀಡಿದ್ದ. ಅದೇ ದಿನ ಮತ್ತೆ 11,000 ರು. ಹೂಡಿಕೆ ಮಾಡಿಸಿ ಒಮ್ಮೆ 20,000 ರು. ಹಾಗೂ ಇನ್ನೊಮ್ಮೆ 70,000 ರು.ಗಳನ್ನು ಲಾಂಭಾಂಶವೆಂದು ನೀಡಿದ್ದ. 

ಇದೇ ರೀತಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭಾಂಶ ನೀಡುವುದಾಗಿ ನಂಬಿಸಿ ಜೂ.19ರಿಂದ ಆ.26ರ ವರೆಗೆ ಹಂತಹಂತವಾಗಿ ಒಟ್ಟು 27,56,129 ರು. ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ಅನಂತರ ಯಾವುದೇ ಲಾಭಾಂಶ ನೀಡದೆ ವಂಚಿಸಿದ್ದಾನೆ. ಈ ಬಗ್ಗೆ ಮಂಗಳೂರಿನ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಆನ್‌ಲೈನ್‌ನಲ್ಲಿ ಹಣ ವರ್ಗಾಯಿಸುವೆ ಎಂದು ನಂಬಿಸಿ ₹50,000 ಟೋಪಿ!

Follow Us:
Download App:
  • android
  • ios