Asianet Suvarna News Asianet Suvarna News

ಹುಲಿ ಉಗುರು ಪ್ರಕರಣದ ಬೆನ್ನಲ್ಲೇ ಮತ್ತೊಂದು ವಿವಾದಕ್ಕೆ ಸಿಲುಕಿದ ವರ್ತೂರು ಸಂತೋಷ್! ವರ್ಚಸ್ಸಿಗೆ ಹಳ್ಳಿಕಾರ್ ಒಡೆಯ ಹೆಸರು ಬಳಕೆ?

ಹುಲಿ ಉಗುರು ಪ್ರಕರಣದ ಬಳಿಕ ವರ್ತೂರು ಸಂತೋಷ್ ಮತ್ತೊಂದು ವಿವಾದಕ್ಕೀಡಾಗಿದ್ದಾರೆ. ವರ್ಚಸ್ಸು ಹೆಚ್ಚಿಸಿಕೊಳ್ಳಲು ಹಳ್ಳಿಕಾರ್ ಹೆಸರು ಇಟ್ಟುಕೊಂಡು ಹಳ್ಳಿಕಾರ್ ಹೆಸರಿಗೆ ಅವಮಾನ ಮಾಡಿದ್ದಾರೆಂದು ಮಂಡ್ಯದಲ್ಲಿ ಹಳ್ಳಿಕಾರ್ ಗೋವು ಸಾಕಾಣಿಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Mandya Hallikar farmer community outraged against Varthur Santhosh at mandya rav
Author
First Published Dec 9, 2023, 9:20 AM IST

ಮಂಡ್ಯ (ಡಿ.9): ಹುಲಿ ಉಗುರು ಪ್ರಕರಣದ ಬಳಿಕ ವರ್ತೂರು ಸಂತೋಷ್ ಮತ್ತೊಂದು ವಿವಾದಕ್ಕೀಡಾಗಿದ್ದಾರೆ. ವರ್ಚಸ್ಸು ಹೆಚ್ಚಿಸಿಕೊಳ್ಳಲು ಹಳ್ಳಿಕಾರ್ ಹೆಸರು ಇಟ್ಟುಕೊಂಡು ಹಳ್ಳಿಕಾರ್ ಹೆಸರಿಗೆ ಅವಮಾನ ಮಾಡಿದ್ದಾರೆಂದು ಮಂಡ್ಯದಲ್ಲಿ ಹಳ್ಳಿಕಾರ್ ಗೋವು ಸಾಕಾಣಿಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಯಾಗಿರುವ ಹಳ್ಳಿಕಾರ್ ಸಂತೋಷ್ ಹಳ್ಳಿಕಾರ್ ಹೆಸರು ಹೇಗೆ ಬಂತು ಎಂದು ಸೃಷ್ಟಿಕರಣ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಹಳ್ಳಿಕಾರ್ ಹೆಸರಿನ ಬಗ್ಗೆ ಚರ್ಚಾಗೋಷ್ಠಿ ಏರ್ಪಡಿಸಿದ ರೈತರು. ಇದೇ ಡಿ.10ರಂದು ಮಂಡ್ಯದ ಸಿಲ್ವರ್ ಜ್ಯೂಬಲಿ ಪಾರ್ಕ್ ನಲ್ಲಿ ನಡೆಯುವ ಬೃಹತ್ ಹಳ್ಳಿಕಾರ್ ಚರ್ಚೆಗೋಷ್ಟಿ. ಹಳ್ಳಿಕಾರ್ ಚರ್ಚೆಗೆ ವರ್ತೂರ್ ಸಂತೋಷ್ ಗೂ ಆಹ್ವಾನ ಕೊಟ್ಟ ರೈತರು. ಬಿಗ್ ಬಾಸ್ ನಿಂದ ಹೊರ ಬಂದ ತಕ್ಷಣ ವರ್ತೂರ್ ಸಂತೋಷ್ ಗೆ ಚರ್ಚೆಗೆ ಆಹ್ವಾನ ನೀಡಿರುವ ರೈತರು. ಸಂತೋಷ್ ಗೆ ಹಳ್ಳೀಕಾರ್ ಹೆಸರು ಹೇಗೆ ಬಂದಿತ್ತು ಎಂಬುದು ಚರ್ಚೆಗೋಷ್ಠಿಗೆ ಬಂದು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೊನೆಗೂ ಮದುವೆ ಮುರಿದು ಬಿದ್ದಿರುವ ಸತ್ಯ ಬಿಚ್ಚಿಟ್ಟ ವರ್ತೂರ್ ಸಂತೋಷ್; ಸ್ಪರ್ಧಿಗಳು ಶಾಕ್

ಹಳ್ಳಿಕಾರ್ ಹೆಸರು ಒಂದು ಇತಿಹಾಸ ಇರುವಂತಹದ್ದು. ಹಳ್ಳಿಕಾರ್ ಒಡೆಯ ಎನ್ನುವುದಕ್ಕೆ ಒಂದು ಮಹತ್ವ ಇದೆ. ಅಂತಹ ಹೆಸರಿಗೆ ಅಪಮಾನ ಮಾಡುವುದು ಸರಿಯಲ್ಲ. ತಲೆಮಾರಿನಿಂದ ನಮ್ಮ ಹಿರಿಯರು ಹಳ್ಳಿಕಾರ್ ಗೋ ತಳಿ ಬೆಳೆಸಿಕೊಂಡು ಬಂದಿದ್ದಾರೆ. ಹಳ್ಳಿಕಾರ್ ಗೋವುಗಳನ್ನ ಸಾಕುತ್ತಿರುವ ಮೂಲ ರೈತರು ಎಷ್ಟು ಜನ ಇದ್ದಾರೆ.
ವರ್ತೂರ್ ಸಂತೋಷ್ ಇತ್ತೀಚೆಗೆ ಬಂದು ಹಳ್ಳಿಕಾರ್ ಒಡೆಯರ್ ಹೆಸರು ಇಟ್ಟುಕೊಳ್ಳೋದು ಸರಿಯಲ್ಲ. ವರ್ತೂರ್ ಸಂತೋಷ್ ಅವರು ಒಬ್ಬ ಹಳ್ಳಿಕಾರ್ ಗೋವು ಸಾಕಾಣಿಕೆದಾರ ಅಷ್ಟೇ. ಆದರೆ ಅವರೇ ಹಳ್ಳೀಕಾರ್ ಒಡೆಯ ಅನ್ನೋದು ಸರಿಯಲ್ಲ. ಬಿಗ್ ಬಾಸ್‌ನಿಂದ ಬಂದ ತಕ್ಷಣ ಚರ್ಚೆಯಲ್ಲಿ ಭಾಗಿಯಾಗಿ ಸ್ಪಷ್ಟನೆ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ವರ್ತೂರು ಸಂತೋಷ್ ತಮ್ಮ ಹೆಸರಿಗೆ ಹಳ್ಳಿಕಾರ್ ಹೇಗೆ ಬಂದಿತು ಎಂಬುದಕ್ಕೆ ಸ್ಪಷ್ಟನೆ ನೀಡದಿದ್ದರೆ ನಾವು ಕಾನೂನು ಹೋರಾಟಕ್ಕೆ ಮುಂದಾಗ್ತೇವೆ. ಕೆಲವು ಯುಟ್ಯೂಬ್‌ಗಳಲ್ಲಿ ಹಳ್ಳಿಕಾರ್ ಒಡೆಯ ಎಂದು ಬಿಂಬಿಸುವುದು ಗಮನಿಸಿದ್ದೇವೆ ಇದು ತಪ್ಪು. ವರ್ತೂರು ಸಂತೋಷ್ ಕೇವಲ ಹಳ್ಳಿಕಾರ ತಳಿ ಹಸುಗಳ ಸಾಕಾಣಿಕೆ ಮಾಡ್ತಿರೋದು ಆದರೆ ವರ್ಚಸ್ಸು ಹೆಚ್ಚಿಸಿಕೊಳ್ಳಲ ತಾವೇ ಹಳ್ಳಿಕಾರ್ ಒಡೆಯ ಎಂದು ಸೇರಿಸಿಕೊಂಡಿದ್ದಾರೆ. ಈ ಬಗ್ಗೆ ನಾವು ಚರ್ಚೆ ಮಾಡುತ್ತೇವೆ.  ಮಂಡ್ಯದಲ್ಲಿ ಹಳ್ಳಿಕಾರ್ ತಳಿಯ ಬಗ್ಗೆ ಚರ್ಚಾ ವೇದಿಕೆ ಸಿದ್ದಪಡಿಸಿದ್ದೇವೆ. ಹಿರಿಯ ರೈತರು, ಪಶುವೈದ್ಯರು, ವಿಜ್ಞಾನಿಗಳು, ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಈ ಚರ್ಚಾಗೋಷ್ಠಿಗೆ ಬಂದು ಸ್ಪಷ್ಟೀಕರಣ ನೀಡಿ ಆ ಹೆಸರನ್ನು ಬಳಸದೇ ತೆಗೆದು ಹಾಕಬೇಕು ಎಂದು ವರ್ತೂರ್ ಸಂತೋಷ್ ಗೆ ಎಚ್ಚರಿಕೆ ಕೊಟ್ಟ ರೈತರು.

ಬಿಕ್ಕಿ ಬಿಕ್ಕಿ ಅತ್ತ ಸಂತೋಷ್; ತಾಯಿ ಕೊಟ್ಟ ಧೈರ್ಯದಿಂದ 'ಈಗ ಗೇಮ್ ಸ್ಟಾರ್ಟ್‌' ಎಂದ ವರ್ತೂರ್!

ಹುಲಿ ಉಗುರಿನ ಪ್ರಕರಣದಲ್ಲಿ ಬಿಗ್ ಬಾಸ್ ಮನೆಯಿಂದ ಬಂಧನಕ್ಕೊಳಗಾಗಿ ಭಾರೀ ಸುದ್ದಿಯಾಗಿದ್ದ ವರ್ತೂರು ಸಂತೋಷ್ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಹಳ್ಳಿಕಾರ್ ಹೆಸರಿಗೆ ಹೆಸರಿಗೆ ಅಪಮಾನ ಮಾಡಿದ್ರಾ ವರ್ತೂರ್ ಸಂತೋಷ್? ನಿಜವಾಗಲೂ ಹಳ್ಳಿಕಾರ್ ಸಮುದಾಯದವರೇ ಅಥವಾ ವರ್ಚಸ್ಸಿಗೆ ಹಳ್ಳಿಕಾರ್ ಹೆಸರು ಬಳಸಿಕೊಂಡ್ರಾ ಇದೆಲ್ಲಕ್ಕೆ ನಾಳೆ ನಡೆಯಲಿರುವ ಚರ್ಚಾಗೋಷ್ಠಿಯಲ್ಲಿ ಉತ್ತರ ಸಿಗಲಿದೆ.

Follow Us:
Download App:
  • android
  • ios