ಶರಣರ ಆಚಾರ ವಿಚಾರಗಳನ್ನು ಅರಿತು ನಮ್ಮ ಬದುಕನ್ನು ಬದಲಿಸಿಕೊಳ್ಳಬೇಕು. ಗೃಹ ಪ್ರವೇಶ ಸೇರಿ ಹೋಮ ಹವನ ಮಾಡುತ್ತಾರೆ. ಇದನ್ನೆಲ್ಲ ಶರಣರು ಒಪ್ಪುತ್ತಾರಾ? ಶರಣತತ್ವ ಎಂದರೆ ಕೇವಲ ಹೇಳುವುದಲ್ಲ, ಅರಿವು ಮತ್ತು ಆಚಾರವನ್ನು ಒಂದಾಗಿಸಿಕೊಳ್ಳಬೇಕು. ಮಠಗಳ ಕಾರ್ಯಕ್ರಮದಲ್ಲಿ ವಚನಗಳ ಬದಲು ವೇದಮಂತ್ರ ಹಾಕುತ್ತಾರೆ. ಅರಿವಿದೆ, ಆಚಾರ ಮಾಡುತ್ತಿಲ್ಲ ಎಂದರೆ ನೀವು ಶರಣತತ್ವದಿಂದ ದೂರ ಇದ್ದೀರಿ ಎಂದರ್ಥ: ಸಾಣೇಹಳ್ಳಿ ಶ್ರೀ
ಬೆಂಗಳೂರು(ಜ.23): ಅಕ್ಕಮಹಾದೇವಿ ಸೇರಿ ಶರಣರು ವೇದ ಮಂತ್ರಗಳನ್ನು ತಮ್ಮ ವಚನಗಳ ಮೂಲಕ ಕಟುವಾಗಿ ತಿರಸ್ಕರಿಸಿದ್ದಾರೆ. ಆದರೆ, ಶರಣ ಪರಂಪರೆಯ ಮಠಗಳೇ ತಮ್ಮ ಕಾರ್ಯಕ್ರಮ ಉದ್ಘಾಟನೆಯಲ್ಲಿ ವಚನದ ಬದಲು ವೇದ ಮಂತ್ರ ಹಾಕುತ್ತಿದ್ದು, ಎಷ್ಟರ ಮಟ್ಟಿಗೆ ಶರಣ ತತ್ವಗಳಿಂದ ದೂರ ಸರಿಯುತ್ತಿದ್ದೇವೆ ಎಂದು ಯೋಚಿಸಬೇಕು ಎಂದು ತರಳುಬಾಳು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕದಳಿ ಮಹಿಳಾ ವೇದಿಕೆ ಹಾಗೂ ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸಹ ಯೋಗದಲ್ಲಿ ನಡೆದ 'ಕದಳಿ ಮಹಿಳಾ ಸಮಾವೇಶ ಮತ್ತು ಕದಳಿ ಪ್ರಶಸ್ತಿ ಪ್ರದಾನ' ಸಮಾರಂಭದಲ್ಲಿ ಮಾತನಾಡಿ, ಶರಣರ ಆಚಾರ ವಿಚಾರಗಳನ್ನು ಅರಿತು ನಮ್ಮ ಬದುಕನ್ನು ಬದಲಿಸಿಕೊಳ್ಳಬೇಕು. ಗೃಹ ಪ್ರವೇಶ ಸೇರಿ ಹೋಮ ಹವನ ಮಾಡುತ್ತಾರೆ. ಇದನ್ನೆಲ್ಲ ಶರಣರು ಒಪ್ಪುತ್ತಾರಾ? ಶರಣತತ್ವ ಎಂದರೆ ಕೇವಲ ಹೇಳುವುದಲ್ಲ, ಅರಿವು ಮತ್ತು ಆಚಾರವನ್ನು ಒಂದಾಗಿಸಿಕೊಳ್ಳಬೇಕು. ಮಠಗಳ ಕಾರ್ಯಕ್ರಮದಲ್ಲಿ ವಚನಗಳ ಬದಲು ವೇದಮಂತ್ರ ಹಾಕುತ್ತಾರೆ. ಅರಿವಿದೆ, ಆಚಾರ ಮಾಡುತ್ತಿಲ್ಲ ಎಂದರೆ ನೀವು ಶರಣತತ್ವದಿಂದ ದೂರ ಇದ್ದೀರಿ ಎಂದರ್ಥ ಎಂದರು.
ವಿಶ್ವ ಹವ್ಯಕ ಸಮ್ಮೇಳನ: ಬ್ರಾಹ್ಮಣರ ಸಂಖ್ಯೆ ಇಳಿಕೆ: ರಾಘವೇಂದ್ರಶ್ರೀ ಆತಂಕ
ಬಹಳ ಚೆನ್ನಾಗಿ ವಚನಗಳ ವಿಶ್ಲೇಷಣೆ ಮಾಡಿದಾ ಕ್ಷಣ ನಾವು ಶರಣ ಪರಂಪರೆಯವರು ಎನ್ನಲು ಸಾಧ್ಯವಿಲ್ಲ. ವಚನಗಳನ್ನು ಅರ್ಥ ಗ್ರಹಿಸಿಕೊಂಡು ವ್ಯಕ್ತಿಗತ ಬದಲಾವಣೆ ತಂದುಕೊಂಡರೆ ಮಾತ್ರ ಶರಣ ಪರಂಪರೆಗೆ ನಾವು ಹತ್ತಿರವಾಗುತ್ತಿದ್ದೇವೆ ಎಂದರ್ಥ. ನಮ್ಮ ಪರಂಪರೆ ಉಳಿಸಿಕೊಳ್ಳಬೇಕು ಎಂದರೆ ಶರಣರ ಆಚಾರ, ವಿಚಾರ ಅರಿತು ನಮ್ಮ ಬದುಕನ್ನು ಬದಲಿಸಿಕೊಳ್ಳಬೇಕು ಎಂದು ಹೇಳಿದರು.
ಮಹಿಳೆಯರಿಂದ ಮಾತ್ರ ಸಾಮಾಜಿಕ ಪರಿವರ್ತನೆ ಸಾಧ್ಯ. ಅಕ್ಕಮಹಾದೇವಿಯಂತೆ ದಿಟ್ಟತನ, ಅಳವಡಿ ಸಿಕೊಂಡರೆ ಎಂತಹ ಪರಿಸ್ಥಿತಿಯನ್ನು ಬೇಕಾದರೂ ಎದುರಿಸಬಹುದು. ಈ ಹಿನ್ನೆಲೆಯಲ್ಲಿ ಎಲ್ಲ ಮೂಢನಂಬಿಕೆ, ಅಜ್ಞಾನದಿಂದ ಹೊರಬರಬೇಕು. ಸಂಸ್ಕಾರ ಅರಿತ, ವಿದ್ಯಾವಂತ ಮಹಿಳೆಯರು ಇರುವ ಮನೆ ಬೆಳಗುತ್ತದೆ. ಮಹಿಳೆಯರು ಕೀಳಾಗಿ ಬದುಕುವ ಪರಿಸ್ಥಿತಿಯಿರುವ ಮನೆಯಲ್ಲಿ ಒಳಿತು ನಿರೀಕ್ಷಿಸುವುದು ಅಸಾಧ್ಯ ಎಂದು ಹೇಳಿದರು.
ಇಸ್ರೋದ ಸ್ಪೇಡೆಕ್ಸ್ ಯೋಜನೆಯ ಯಶಸ್ಸಿಗೆ ನಿರ್ಮಲಾನಂದನಾಥ ಶ್ರೀ ಅಭಿನಂದನೆ
ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಮಾತನಾಡಿ, ಬಸವಾದಿ ಶರಣರು ಇಲ್ಲದಿದ್ದರೆ ನಾಡಿನಲ್ಲಿ ಮಹಿಳೆಯರ ಸ್ಥಾನಮಾನ ಈ ಮಟ್ಟಿಗೆ ಇರುತ್ತಿರಲಿಲ್ಲ. ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಮೊಟ್ಟಮೊದಲ ಬಾರಿಗೆ ಧ್ವನಿ ಎತ್ತಿದ್ದು ಶರಣರು" ಎಂಬುದನ್ನು ಮರೆಯಬಾರದು ಎಂದರು.
ಮಾಧ್ಯಮ ಆಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿದರು. ಹಿರಿಯ ಪತ್ರಕರ್ತೆ ಎಸ್.ಜಿ. ತುಂಗರೇಣುಕ ಅವರಿಗೆ 'ಕದಳಿ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಗದಗಿನ ಡಾ. ತೋಂಟದ ಸಿದ್ದರಾಮ ಶ್ರೀಗಳು ಉಪಸ್ಥಿತರಿದರು. ರಾಜ ಸಂಚಾಲಕಿ ಸುಶೀಲಾ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕೆ.ವಿ.ನಾಗರಾಜಮೂರ್ತಿ ಪ್ರಾಸ್ತಾವಿಕ ಮಾತನಾಡಿದರು.
