ಸೀತಾರಾಮ ಸೀರಿಯಲ್​ ಸೀತೆ ಅಂದರೆ ವೈಷ್ಣವಿ ಗೌಡ ಅವರು ನಿಜ ಜೀವನದ ಮೊದಲ ಕ್ರಶ್​ ಯಾರು? ಪ್ರಿಯಾ ಎದುರು ಬಾಯ್ಬಿಟ್ಟ ಸತ್ಯವೇನು? 

ಸೀತಾರಾಮ ಸೀರಿಯಲ್​ನಲ್ಲಿ ಎರಡು ಹೈಲೈಟ್​ ಆಗಿರೋ ಲೇಡಿ ಕ್ಯಾರೆಕ್ಟರ್​ಗಳೆಂದರೆ ಸೀತಾ ಮತ್ತು ಪ್ರಿಯಾ. ಸೀತಾ ಅವರ ಅಸಲಿ ಹೆಸರು ವೈಷ್ಣವಿ ಗೌಡ ಹಾಗೂ ಪ್ರಿಯಾ ಅವರ ಅಸಲಿ ಹೆಸರು ಮೇಘನಾ ಶಂಕರಪ್ಪ. ವೈಷ್ಣವಿ ಅವರು ಕೆಲ ವರ್ಷಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಇದ್ರೆ, ಮೇಘನಾ ಅವರು ಈಚೆಗಷ್ಟೇ ಯೂಟ್ಯೂಬ್​ ಚಾನೆಲ್​ ಓಪನ್​ ಮಾಡಿದ್ದಾರೆ. ಇದೀಗ ವೈಷ್ಣವಿ ಅವರ ರಿಯಲ್​ ಲೈಫ್​ ಕ್ರಶ್​ ಬಗ್ಗೆ ಮೇಘನಾ ಕೇಳಿದ್ದಾರೆ. ನಿಮ್ಮ ಕ್ರಷ್​ ಯಾರು ಎಂದು ಕೇಳಿದ್ದಾರೆ. ಮೊದ ಮೊದಲಿಗೆ ಹಾರಿಕೆ ಉತ್ತರ ಕೊಟ್ಟಿದ್ದಾರೆ ವೈಷ್ಣವಿ. ನನಗ್ಯಾರೂ ಕ್ರಷ್​ ಇಲ್ಲ. ಶಾಲಾ-ಕಾಲೇಜಿಗೆ ಹೋಗುವಾಗ ತಲೆ ಬಗ್ಗಿಸಿಕೊಂಡು ಹೋಗುತ್ತಿದ್ದೆ ಎಂದೆಲ್ಲಾ ಹೇಳಿದ್ದಾರೆ. ಕೊನೆಗೂ ಮೇಘನಾ ಅವರು ತುಂಬಾ ಸಲ ಕೇಳಿದಾಗ, ತಮ್ಮ ಮೊದಲ ಕ್ರಷ್​ ಬಗ್ಗೆ ಮಾತನಾಡಿದ್ದಾರೆ.

ಅಷ್ಟಕ್ಕೂ ಇದಾಗಲೇ ವೈಷ್ಣವಿ ಅವರು, ಸುಮಾರು 300ಕ್ಕೂ ಅಧಿಕ ಲವ್‌ ಪ್ರಪೋಸ್‌ಗಳು ಬಂದಿದ್ದರೂ ಒಪ್ಪಿಕೊಂಡಿಲ್ಲ ಎಂಬ ಬಗ್ಗೆ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕನ್ನಡ ನಾಡಿನ ಜನತೆಗೆ ಅಗ್ನಿಸಾಕ್ಷಿಯ ಸನ್ನಿಧಿಯಾಗಿ ಪರಿಚಿತಗೊಂಡ ವೈಷ್ಣವಿಗೌಡ ಅವರ ಸೌಂದರ್ಯ ಹಾಗೂ ನಟನೆಯನ್ನು ನೋಡಿ ಲಕ್ಷಾಂತರ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅಗ್ನಿಸಾಕ್ಷಿ ಧಾರಾವಾಹಿಯ ನಂತರ ಬಿಗ್‌ಬಾಸ್‌ ಮನೆಯಲ್ಲೂ ಕಾಣಿಸಿಕೊಂಡ ವೈಷ್ಣವಿ ಇಲ್ಲಿಯೂ ಕೂಡ ಹೆಚ್ಚಿನ ರಗಳೆ ಮಾಡಿಕೊಳಳದೇ ಸೀದಾ-ಸಾದಾ ನಡತೆಯಿಂದ ಜನರ ಮನಸ್ಸನ್ನು ಗೆದ್ದಿದ್ದರು. ಇದಾದ ನಂತರ ಪುನಃ ಒಂದೆರಡು ಸಿನಿಮಾಗಳಲ್ಲಿಯೂ ನಟಿಸಿದ ವೈಷ್ಣವಿಗೌಡ, ಅಲ್ಲಿ ಹೆಚ್ಚಿನ ಯಶಸ್ಸು ಸಿಗದ ಹಿನ್ನೆಲೆಯಲ್ಲಿ ಪುನಃ ಕಿರುತೆರೆಗೆ ಆಗಮಿಸಿದ್ದಾರೆ.

ಹೋಳಿ ಶೂಟಿಂಗ್​ ವೇಳೆ ಸೀತಾರಾಮ ಸೆಟ್​ನಲ್ಲಿ ಏನೆಲ್ಲಾ ಆಯ್ತು? ವಿಡಿಯೋ ಮೂಲಕ ಪ್ರಿಯಾ ಮಾಹಿತಿ

 ಕನ್ನಡ ಬಿಗ್‌ಬಾಸ್ ಸೀಸನ್ 10 ಮುಕ್ತಾಯ ಆಗುತ್ತಿದ್ದಂತೆಯೇ ವೈಷ್ಣವಿಗೌಡ ಅವರು ಬಿಗ್‌ಬಾಸ್‌ ಸ್ಪರ್ಧಿಯಾಗಿ ಪಾಲ್ಗೊಂಡಿದ್ದ ಎಪಿಸೋಡ್‌ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ವೈಷ್ಣವಿಗೌಡ ಅವರಿಗೆ ನಿಮ್ಮ ಪ್ರಕಾರ ಅಂದಾಜು ಎಷ್ಟು ಲವ್ ಪ್ರಪೋಸಲ್ ಬಂದಿರಬಹುದು ಎಂದು ಕೇಳಿದ್ದರು. ಆಗ ಉತ್ತರಿಸಿದ್ದ ವೈಷ್ಣವಿ ಅವರು, ಸುಮಾರು 200ರಿಂದ 300 ಪ್ರಪೋಸಲ್‌ಗಳು ಬಂದಿವೆ ಎಂದು ಹೇಳಿದ್ದರು. ಇದನ್ನು ಕೇಳಿದ ಸುದೀಪ್ ಆಹ್... ಎಂದು ಶಾಕ್ ಆಗಿ ಕೇಳುತ್ತಾ ಈ 200.., 300 ಪ್ರಪೋಸಲ್‌ಗಳಲ್ಲಿ ಯಾವುದೂ ಕರೆಕ್ಟ್ ಆಗಿದೆ ಅಂತ ಅನಿಸಲೇ ಇಲ್ವಾ ಎಂದು ಪ್ರಶ್ನೆ ಮಾಡಿದ್ದರು. ನನಗೆ ಲವ್ ಪ್ರಪೋಸಲ್‌ಗಳನ್ನು ನೋಡಬೇಕು ಅಂತಾನೇ ಅನಿಸಲಿಲ್ಲ ಸರ್. ನಾನು ಯಾವಾಗಲೂ ಮನಸ್ಸಿನ ಮಾತುಗಳನ್ನು ಕೇಳುವಂತಹ ಹುಡುಗಿ. ಆದ್ದರಿಂದ ನನ್ನ ಮನಸ್ಸು ಕೂಡ ಯಾವುದೇ ಪ್ರಪೋಸಲ್‌ಗಳನ್ನು ನೋಡುವುದಕ್ಕೆ ಪ್ರೇರಣೆಯೇ ಆಗಲಿಲ್ಲ ಎಂದಿದ್ದರು.

ಇದೀಗ ಮೊದಲ ಕ್ರಷ್​ ಯಾರು ಎಂದು ಮೇಘನಾ ಅವರು ಕೇಳಿದಾಗ ಗಣೇಶ್​ ಎಂಬ ಹೆಸರು ಅವರದ್ದು ಎಂದಿದ್ದಾರೆ. ಯಾವುದೋ ಗಣೇಶ್​ ಎಂದು ತಿಳಿದ ಮೇಘನಾ ಅವರಿಗೆ ಮದ್ವೆಯಾಗಿದ್ಯಾ ಎಂದಾಗ, ವೈಷ್ಣವಿ ಹೌದು ಎಂದಿದ್ದಾರೆ.ಕೊನೆಗೆ ಅವರನ್ನು ಗೋಲ್ಡನ್​ ಸ್ಟಾರ್​ ಎಂದೂ ಕರೆಯುತ್ತಾರೆ ಎಂದಾಗ, ಮೇಘನಾ ಇದು ಚೀಟಿಂಗ್​, ನಾನು ಸೆಲೆಬ್ರಿಟಿಗಳ ಬಗ್ಗೆ ಕೇಳಲಿಲ್ಲ ಎಂದಿದ್ದಾರೆ. ಕೊನೆಗೂ ವೈಷ್ಣವಿ ಮೌನ ಮುರಿದಿಲ್ಲ. ಇದೇ ವಿಡಿಯೋದಲ್ಲಿ ಗೋಲ್​ಗಪ್ಪಾ ಚಾಲೆಂಜ್​ ಕೂಡ ಮಾಡಿದ್ದಾರೆ. 

ಬೃಂದಾವನ ಪುಷ್ಪಾ ರಿಯಲ್​ ಲೈಫ್​ನಲ್ಲಿ ಬ್ರೇಕಪ್​ ಆಗೋಯ್ತಾ? ಇನ್​ಸ್ಟಾ ಪೋಸ್ಟ್​ ನೋಡಿ ಫ್ಯಾನ್ಸ್​ ಶಾಕ್​!


YouTube video player