ಮದವೇರಿಸೋ ಮದನಾರಿಯ ನೋಡಿ ಮಿಡಿದವರೆಷ್ಟು... ಎಂದೋರು ಇವ್ರೇ ನೋಡಿ: ಮಹಾನಟಿಯಲ್ಲಿ ಡಬ್ಬಿಂಗ್​ ಆರ್ಟಿಸ್ಟ್​

ವಿಕ್ರಾಂತ್​ ರೋಣ ಸೇರಿದಂತೆ ಹಲವು ಸಿನಿಮಾ ಮತ್ತು ಸೀರಿಯಲ್​ಗಳಲ್ಲಿ ದನಿ ನೀಡಿರುವ ಡಬ್ಬಿಂಗ್​ ಆರ್ಟಿಸ್​ ಆಶಿಕಾ ಶರ್ಮಾ ಅವರ ಕುತೂಹಲದ ಪಯಣ ಇಲ್ಲಿದೆ...
 

Here is the curious journey of dubbing artist Ashika Sharma of Vikrant Rona in Mahanati suc

2022ರಲ್ಲಿ ಬಿಡುಗಡೆಯಾದ ವಿಕ್ರಾಂತ್​ ರೋಣ ಬ್ಲಾಕ್​ಬಸ್ಟರ್​ ಎಂದು ಸಾಬೀತಾಯಿತು. ಅದರಲ್ಲಿನ ಮದವೇರಿಸೋ ಮದನಾರಿಯ ನೋಡಿ ಮಿಡಿದವರೆಷ್ಟು, ಮಡಿದವರೆಷ್ಟು... ಡೈಲಾಗ್​ ಅಂತೂ ಸಕತ್​ ಫೇಮಸ್​ ಆಗಿದ್ದು, ಈಗಲೂ ಹಲವರು ಈ ಡೈಲಾಗ್​ ಹೇಳುವವರು ಇದ್ದಾರೆ. ಬಾಲಿವುಡ್​​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಈ ಚಿತ್ರದ ನಾಯಕಿಯಾಗಿ ಸುದೀಪ್​ ಎದುರು ಕಾಣಿಸಿಕೊಂಡಿದ್ದು, ಈ ಡೈಲಾಗ್​ ಅನ್ನು ಅವರು ಹೇಳಿದ್ದಾರೆ. ಆದರೆ ಅಸಲಿಗೆ ಈ ಡೈಲಾಗ್​ ಹೇಳಿದವರು ಡಬ್ಬಿಂಗ್​ ಆರ್ಟಿಸ್ಟ್​ ಆಶಿಕಾ ಶರ್ಮಾ. ರಾಧಾ ಕೃಷ್ಣ ಸೀರಿಯಲ್​ ಸೇರಿದಂತೆ ಹಲವಾರು ಸಿರಿಯಲ್​ಗಳು ಹಾಗೂ ಸಿನಿಮಾಗಳಲ್ಲಿ ಕನ್ನಡ ಬಾರದ ನಾಯಕಿಯರಿಗೆ ದನಿ ನೀಡಿದ್ದಾರೆ, ನೀಡುತ್ತಿದ್ದಾರೆ ಆಶಿಕಾ ಶರ್ಮಾ.

ಇದೀಗ ಆಶಿಕಾ ಅವರು, ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಮಹಾನಟಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಅಷ್ಟಕ್ಕೂ, ಇವರಿಗೆ ವಿಕ್ರಾಂತ್​ ರೋಣದಲ್ಲಿ ಅವಕಾಶ ಸಿಕ್ಕಿದ್ದೇ ಕುತೂಹಲವಾದದ್ದು. ಈ ಹಿಂದೆ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಅವರು ತಿಳಿಸಿದ್ದರು. ತಮಗೆ  ಮೊದಲಿನಿಂದಲೂ ಸುದೀಪ್​ ಅವರ ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡುವ ಹಂಬಲವಿತ್ತು. ನಂತರ ವಿಕ್ರಾಂತ್​ ರೋಣದ ನಾಯಕ ಜಾಕ್ವೆಲಿನ್​ ಅವರಿಗೆ ದನಿ ನೀಡಲು ಆರ್ಟಿಸ್ಟ್​ ಹುಡುಕುತ್ತಿರುವ ವಿಷಯ ತಿಳಿಯಿತು. ಆಗ ನನಗೆ ಸಿನಿ ರಂಗದಲ್ಲಿ ಅಷ್ಟೊಂದು ಯಾರೂ ಪರಿಚಯವಿರಲಿಲ್ಲ. ನಾನು ಮೂರ್ನಾಲ್ಕು ರೀತಿಯ ದನಿಯನ್ನು ಕಳಿಸಿಕೊಟ್ಟಿದ್ದೆ. ಆದರೆ ಅಲ್ಲಿಂದ ರಿಪ್ಲೈ ಬಂದಿರಲಿಲ್ಲ. ಅದಾಗಲೇ ಒಂದೂವರೆ ವರ್ಷ ಆಗಿ ಹೋಯಿತು. ನಾನೂ ಅದರ ಆಸೆ ಬಿಟ್ಟಿದ್ದೆ. ಬಹುಶಃ ನನ್ನ ದನಿ ಜಾಕ್ವೆಲಿನ್ ಅವರಿಗೆ ಸೂಟ್​ ಆಗುವುದಿಲ್ಲ ಎಂದುಕೊಂಡು ಹಾಗೆಯೇ ಇದ್ದೆ. ಆದರೆ ಅದೊಂದು ದಿನ ವಿಕ್ರಾಂತ್​ ರೋಣ ಅವರ ಸೌಂಡ್​ ಎಂಜಿನಿಯರ್​ ಕಾಲ್ ಮಾಡಿ, ಅವರೇ ದನಿಯ ಮುದ್ರಣದ ಟೆಸ್ಟ್​ ಕಳುಹಿಸುವಂತೆ ತಿಳಿಸಿದರು. ಆ ದಿನ ನಿಜಕ್ಕೂ ನನಗೆ ನಂಬಲು ಸಾಧ್ಯವೇ ಆಗಿರಲಿಲ್ಲ. ದನಿಯನ್ನು ಮುದ್ರಿಸಿ ಕಳುಹಿಸಿದ್ದೆ. ಮರುದಿನವೇ ಅಲ್ಲಿಂದ ಕರೆ ಬಂದು, ನನ್ನನ್ನು ಆಯ್ಕೆ ಮಾಡಿದ್ದರು ಎಂದು ನೆನಪಿಸಿಕೊಂಡಿದ್ದರು ಆಶಿಕಾ. 

ಹೋಳಿ ಶೂಟಿಂಗ್​ ವೇಳೆ ಸೀತಾರಾಮ ಸೆಟ್​ನಲ್ಲಿ ಏನೆಲ್ಲಾ ಆಯ್ತು? ವಿಡಿಯೋ ಮೂಲಕ ಪ್ರಿಯಾ ಮಾಹಿತಿ

ಇದೇ ವೇಳೆ, ತಾವು ಡಬ್ಬಿಂಗ್​ ಆರ್ಟಿಸ್ಟ್​ ಆಗಲು ಕಾರಣದ ಕುತೂಹಲವನ್ನು ಸಂದರ್ಶನದಲ್ಲಿ ಹೇಳಿದ್ದಾರೆ.  ಆರ್ಕಿಟೆಕ್ಚರ್​ ಆಗಿ ಕೆಲಸ ಮಾಡುತ್ತಿದ್ದೆ. ಲಾಕ್​ಡೌನ್​ ಸಮಯದಲ್ಲಿ ಅದನ್ನು ತ್ಯಜಿಸಬೇಕಾಯಿತು. ದಿನನಿತ್ಯದ ಖರ್ಚನ್ನು ಸರಿದೂಗಿಸಲು ಏನು ಮಾಡಬಹುದು ಎಂದು ಯೋಚಿಸುತ್ತಿದ್ದೆ. ನಾನು ತುಂಬಾ ಕಾನ್​ಫಿಡೆಂಟ್​ ಆಗಿದ್ದರಿಂದ ಆ್ಯಂಕರಿಂಗ್​ ಮಾಡಬಹುದು ಎನ್ನಿಸಿತ್ತು. ಆ ಸಮಯದಲ್ಲಿ ಸೆಂಟ್ರಿಲ್​ ಜೈಲಿನ ಕೈದಿಗಳಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನವಿತ್ತು. ಹೇಗೋ ಅಲ್ಲಿ ಆ್ಯಂಕರಿಂಗ್​ ಮಾಡುವ ಅವಕಾಶ ಸಿಕ್ಕಿತು. ಅದು ನನ್ನ ಬದುಕನ್ನು ಬದಲಿಸಿತು. ಅಲ್ಲಿ ಸಿನಿಮಾದ ಕೆಲವರ ಪರಿಚಯವಾಗಿ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡುವ ಹಾಗಾಯಿತು ಎಂದಿದ್ದಾರೆ.
 
ಇನ್ನು ಜೀ ಕನ್ನಡದ ಮಹಾನಟಿ ರಿಯಾಲಿಟಿ ಷೋ ಕುರಿತು ಹೇಳುವುದಾದರೆ, ನಟಿಯರಾಗಬೇಕು ಎಂದು ಕನಸು ಕಂಡುಕೊಳ್ಳುವ ಬಹುದೊಡ್ಡ ವರ್ಗವೇ ಇದೆ. ನಟನೆಯಲ್ಲಿ ಆಸಕ್ತಿ ಇರುವವರು ಒಂದು ವರ್ಗವಾದರೆ, ನಟನೆಯಲ್ಲಿ ಎಲ್ಲರನ್ನೂ ಮೀರಿಸುವವರೂ ಹಲವಾರು ಮಂದಿ ಇದ್ದಾರೆ. ಇವರಿಗೆ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಆಸೆ ಇದ್ದರೂ ಅದಕ್ಕೆ ಸರಿಯಾದ ಮಾರ್ಗ ಯಾವುದು ಎಂದು ಗೊತ್ತಿರುವುದಿಲ್ಲ. ಯಾರನ್ನು ಸಂಪರ್ಕಿಸಬೇಕು, ಹೇಗೆ ಗುರುತಿಸಿಕೊಳ್ಳಬೇಕು, ಸುಲಭದ ಮಾರ್ಗ ಯಾವುದು ಎನ್ನುವುದು ತಿಳಿದಿರುವುದಿಲ್ಲ. ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹಂಬಲ ಇರುವವರಿಗೆ ಜೀ ಕನ್ನಡ ವಾಹಿನಿ ಒಂದೊಳ್ಳೆ ಅವಕಾಶವನ್ನು ನೀಡಿದೆ. ಹೌದು. ಸ್ಯಾಂಡಲ್​ವುಡ್​ನಲ್ಲಿ ನಟಿಸುವ ಅವಕಾಶ ಇದಾಗಿದ್ದು, ಹಲವು ಕಡೆಗಳಲ್ಲಿ ಆಡಿಷನ್​ ನಡೆದಿದೆ. ನಿನ್ನೆಯಿಂದ ಷೋ ಆರಂಭವಾಗಿದೆ. 

ಸೀತಾರಾಮ ಸೀರಿಯಲ್​ ಸೀತೆಯ ನಿಜ ಜೀವನದ ಮೊದಲ ಕ್ರಶ್​ ಯಾರು? ಪ್ರಿಯಾ ಎದುರು ಬಾಯ್ಬಿಟ್ಟ ಸತ್ಯವೇನು?


Latest Videos
Follow Us:
Download App:
  • android
  • ios