Asianet Suvarna News Asianet Suvarna News

ಒಂದು ಸರ್ಕಾರ ತನಿಖೆಗೆ ಆದೇಶಿಸಿದರೆ ನಂತರ ಬಂದ ಸರ್ಕಾರ ಹಿಂಪಡೆಯಬಾರದು: ಹೈಕೋರ್ಟ್

ಸರ್ಕಾರಿ ಸೇವಕರು ಸಾರ್ವಜನಿಕರ ನೂರಾರು ಕೋಟಿ ಹಣ ಲೂಟಿ ಮಾಡಿದಂತಹ ಆರೋಪವನ್ನು ಒಂದು ಸರ್ಕಾರ ತನಿಖೆ ಆದೇಶಿಸಿದರೆ, ನಂತರ ಬಂದ ಸರ್ಕಾರ ತನಿಖೆಗೆ ಆದೇಶಿಸಿದ್ದ ಹಿಂದಿನ ಆದೇಶವನ್ನು ಹಿಂಪಡೆಯಬಾರದೆಂದು ಹೈಕೋರ್ಟ್‌ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

Investigation should not be withdrawn after ordering it High Court opinion at bengaluru rav
Author
First Published Jan 8, 2024, 5:57 AM IST

ವೆಂಕಟೇಶ್‌ ಕಲಿಪಿ

ಬೆಂಗಳೂರು (ಜ.8) : ಸರ್ಕಾರಿ ಸೇವಕರು ಸಾರ್ವಜನಿಕರ ನೂರಾರು ಕೋಟಿ ಹಣ ಲೂಟಿ ಮಾಡಿದಂತಹ ಆರೋಪವನ್ನು ಒಂದು ಸರ್ಕಾರ ತನಿಖೆ ಆದೇಶಿಸಿದರೆ, ನಂತರ ಬಂದ ಸರ್ಕಾರ ತನಿಖೆಗೆ ಆದೇಶಿಸಿದ್ದ ಹಿಂದಿನ ಆದೇಶವನ್ನು ಹಿಂಪಡೆಯಬಾರದೆಂದು ಹೈಕೋರ್ಟ್‌ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ನರೇಗಾ) ಯೋಜನೆಯ ಕೆಲಸಗಳಿಗೆ ನಕಲಿ ಬಿಲ್‌ ಸಿದ್ಧಪಡಿಸಿ ಅಕ್ರಮವಾಗಿ ಹಣ ಪಾವತಿಸಿದ ಆರೋಪ ಎದುರಿಸುತ್ತಿರುವ ಗದಗ ಜಿಲ್ಲೆಯ ಕೃಷಿ ಸಹಾಯಕ ನಿರ್ದೇಶಕ ಮಲ್ಲಯ್ಯ ಕೊರವನವರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಿಎ ಸೈಟ್‌ 5 ವರ್ಷದಲ್ಲಿ ಸ್ವಾಧೀನವಾಗದಿದ್ದರೆ ಮೀಸಲು ರದ್ದು: ಹೈಕೋರ್ಟ್ ಆದೇಶ, ಏನಿದು ಪ್ರಕರಣ?

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2007ರಿಂದ 2014ರ ನಡುವೆ ನರೇಗಾ ಯೋಜನೆ ಜಾರಿಯಲ್ಲಿ ಸರ್ಕಾರಿ ಸೇವಕರು ನೂರಾರು ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಮಾಡದ ಕಾಮಗಾರಿಗಳಿಗೆ ನಕಲಿ ಬಿಲ್‌ ಸಿದ್ಧಪಡಿಸಿ ಹಣ ಮಂಜೂರು ಮಾಡಿದ್ದಾರೆ. ಆ ಹಣ ಸರ್ಕಾರಿ ಅಧಿಕಾರಿಗಳಿಗೆ ಸೇರಿಲ್ಲ. ಬದಲಾಗಿ ಸರ್ಕಾರ/ಸಾರ್ವಜನಿಕರ ಹಣವಾಗಿದೆ. ಆದರೆ, ಸಾರ್ವಜನಿಕರ ಹಣ ದುರುಪಯೋಗ ಮಾಡಿರುವ ಸರ್ಕಾರಿ ಸೇವಕರ ವಿರುದ್ಧ ತನಿಖೆ ಮಾಡಲು ಒಂದು ಸರ್ಕಾರ ಹೇಳಿದರೆ, ಮತ್ತೊಂದು ಸರ್ಕಾರ ತನಿಖೆ ನಡೆಸಲು ಹೊರಡಿಸಿದ್ದ ಆದೇಶವನ್ನು ಸಂತೋಷದಿಂದ ವಾಪಸ್‌ ಪಡೆಯುತ್ತದೆ. ಸರ್ಕಾರ ಬದಲಾದ ಕೂಡಲೇ ತನಿಖೆ ವಹಿಸಿದ ಆದೇಶಗಳನ್ನು ಹಿಂಪಡೆಯುವಂತಹ ಕಾರ್ಯದಲ್ಲಿ ಭಾಗಿಯಾಗಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ವಿವರ:

2007ರ ಏಪ್ರಿಲ್‌ 2012ರ ನಡುವೆ ಗದಗ, ಬಳ್ಳಾರಿ ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಕೆಲಸ ಮಾಡದಿದ್ದರೂ ನರೇಗಾ ಯೋಜನೆಯಡಿ ನೂರಾರು ಕೋಟಿ ಹಣವನ್ನು ನಕಲಿ ಬಿಲ್‌ ಸಂಬಂಧ ಪಾವತಿಸಲಾಗಿದೆ ಎಂದು 2013ನೇ ಸಾಲಿನಲ್ಲಿ ಸಿಎಜಿ ವರದಿ ನೀಡಿತ್ತು.

ಈ ವರದಿ ಆಧರಿಸಿ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ 2014ರ ಸೆ.9ರಂದು ಅಂದಿನ ರಾಜ್ಯ ಸರ್ಕಾರ (ಕಾಂಗ್ರೆಸ್‌) ಸೂಚಿಸಿತ್ತು. ಗದಗದಲ್ಲಿ ಕೃಷಿ ಅಧಿಕಾರಿಯಾಗಿದ್ದ ಅರ್ಜಿದಾರರ ಮೇಲೂ ಇದೇ ಆರೋಪ ಮಾಡಲಾಗಿತ್ತು. ಲೋಕಾಯುಕ್ತ ಪೊಲೀಸರು ಎಂಟು ವರ್ಷಗಳ ಕಾಲ ತನಿಖೆ ನಡೆಸಿದ್ದರು. ಅರ್ಜಿದಾರರ ವಿರುದ್ಧ ಪ್ರಾಸಿಕ್ಯೂಷನ್‌ಗೆ 2022ರ ಮೇ 5ರಂದು ಕೃಷಿ ಆಯುಕ್ತರು ನೀಡಿದ್ದ ಪೂರ್ವಾನುಮತಿ ಆಧರಿಸಿ ಲೋಕಾಯಕ್ತ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಇದರಿಂದ 2022ರ ಜೂ.10ರಂದು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದ ಅರ್ಜಿದಾರರು, ತನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕೃಷಿ ಆಯುಕ್ತರು ನೀಡಿದ್ದ ಪೂರ್ವಾನುಮತಿ ರದ್ದುಪಡಿಸಬೇಕು ಎಂದು ಕೋರಿದ್ದರು. ಅರ್ಜಿದಾರರ ವಿರುದ್ಧದ ಪೂರ್ವಾನುಮತಿಗೆ 2022ರ ಜೂ.17ರಂದು ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಅರ್ಜಿ ವಿಚಾರಣಾ ಹಂತದಲ್ಲಿರುವಾಗ ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಿ 2014ರಲ್ಲಿ ಹೊರಡಿಸಿದ್ದ ಆದೇಶವನ್ನು 2023ರ ಮಾ.28ರಂದು ಅಂದಿನ ರಾಜ್ಯ (ಬಿಜೆಪಿ) ಸರ್ಕಾರ ವಾಪಸ್‌ ಪಡೆದು ಆದೇಶಿಸಿತ್ತು.

ಅರ್ಜಿ ಇತ್ತೀಚೆಗೆ ವಿಚಾರಣೆಗೆ ಬಂದಾಗ ಪ್ರಕರಣ ಕುರಿತು ಲೋಕಾಯುಕ್ತ ತನಿಖೆಗೆ ವಹಿಸಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿರುವ ಹಿನ್ನೆಲೆಯಲ್ಲಿ ತಮ್ಮವಿರುದ್ಧದ ಎಲ್ಲ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು. 

ಲಂಚ ಕೇಳಿದ್ದಕ್ಕೂ, ಪಡೆದಿದ್ದಕ್ಕೂ ಸಾಕ್ಷ್ಯ ಬೇಕು: ಹೈಕೋರ್ಟ್‌

ಅರ್ಜಿದಾರರ ಮನವಿಯನ್ನು ಭಾಗಶಃ ಪುರಸ್ಕರಿಸಿದ ಹೈಕೋರ್ಟ್‌, ತನಿಖೆ ವಹಿಸಿದ್ದ ಆದೇಶ ಹಿಂಪಡೆದಿರುವುದರಿಂದ ತನಿಖಾ ಹಂತದಲ್ಲಿವೆಯೇ ಅವುಗಳನ್ನು ಕೂಡಲೇ ಕೈಬಿಡಬಹುದು. ಆದ್ದರಿಂದ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಪ್ರಕರಣಗಳಿಗೆ ತೊಂದರೆ ಕೊಡಲಾಗದು. ಸರ್ಕಾರ ಬದಲಾದ ಕೂಡಲೇ ಆರೋಪಗಳು ಬದಲಾಗುವುದಿಲ್ಲ. ಆದಾಗ್ಯೂ 2023ರ ಮಾ.28ರ ಸರ್ಕಾರದ ಆದೇಶದಿಂದ ಅರ್ಜಿದಾರರಿಗೆ ಸಂಬಂಧಪಟ್ಟಂತೆ ನೀಡಲಾಗಿದ್ದ ಅನುಮತಿ ಮಾನ್ಯತೆ ಕಳೆದುಕೊಂಡಿದೆ. ಆದರೆ, ಸರ್ಕಾರ ಮತ್ತು ಸಕ್ಷಮ ಪ್ರಾಧಿಕಾರವು ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಗಮನದಲ್ಲಿ ಇರಿಸಿಕೊಂಡು ಎರಡು ತಿಂಗಳ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಸರ್ಕಾರ ಮತ್ತು ಸಕ್ಷಮ ಪ್ರಾಧಿಕಾರ ಮುಕ್ತವಾಗಿವೆ ಎಂದು ಆದೇಶಿಸಿದೆ.

Follow Us:
Download App:
  • android
  • ios