Asianet Suvarna News Asianet Suvarna News

'ಬೆಟ್ಟದಾ ಮೇಲೊಂದು ಮನೆಯ ಮಾಡಿ..' ಎಂದ ಅಕ್ಕಮಹಾದೇವಿಯ ಐತಿಹಾಸಿಕ ಪ್ರತಿಮೆ ಶಿಕಾರಿಪುರದಲ್ಲಿ ಅನಾವರಣ!

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶಿಕಾರಿಪುರ ತಾಲೂಕಿನ ಉಡುತಡಿಯಲ್ಲಿ ಕನ್ನಡದ ಮೊದಲ ಕವಯಿತ್ರಿ ಅಕ್ಕ ಮಹಾದೇವಿ ಪುತ್ಥಳಿ ಅನಾವರಣಗೊಳಿಸಿದರು. ಇದು ಭಾರತದಲ್ಲಿ ಮೊದಲ ಅತೀ ಎತ್ತರದ ಮಹಿಳಾ ಪ್ರತಿಮೆಯಾಗಿದೆ.

India's first tallest female  bronze statue of AkkaMahadevi in shivamogga gow
Author
First Published Mar 17, 2023, 6:08 PM IST

ಶಿವಮೊಗ್ಗ (ಮಾ.17): ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶಿಕಾರಿಪುರ ತಾಲೂಕಿನ ಉಡುತಡಿಯಲ್ಲಿ ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿ ಪುತ್ಥಳಿ ಅನಾವರಣಗೊಳಿಸಿದರು. ಇದು ಭಾರತದಲ್ಲಿ ಮೊದಲ ಅತೀ ಎತ್ತರದ ಮಹಿಳಾ ಪ್ರತಿಮೆಯಾಗಿದೆ. 12ನೇ ಶತಮಾನದ ವಚನ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಶಿವಶರಣೆ ಅಕ್ಕಮಹಾದೇವಿಯ 51 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು ಆಕೆಯ ಜನ್ಮಸ್ಥಳವಾದ ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ ನಿರ್ಮಿಸಲಾಗಿದೆ.

ಸುಮಾರು 29 ಎಕರೆ ಪ್ರದೇಶದಲ್ಲಿ ಸುಮಾರು 69 ಕೋಟಿ ರು. ವೆಚ್ಚದಲ್ಲಿ ಈ ಅಭಿವೃದ್ಧಿ ಕಾರ್ಯ ನಡೆದಿದೆ. ಹೆದ್ದಾರಿಗೆ ಅಭಿಮುಖವಾಗಿ ಎತ್ತರದ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ಹೆಬ್ಬಾಗಿಲು ಮತ್ತು ಸುತ್ತಲೂ ಕೋಟೆಯನ್ನು ಹೋಲುವ ಜಂಬಿಟ್ಟಿಗೆಯ ಪ್ರಾಕಾರದ ಕೆಲಸ ಭರದಿಂದ ಸಾಗುತ್ತಿದೆ.

ಆಚಾರ-ವಿಚಾರಗಳ ಸಮನ್ವಯವೇ ಶರಣ ಧರ್ಮದ ತಳಹದಿ ಎಂಬುದನ್ನು ಸಾರಿ ಹೇಳುವುದು ಮತ್ತು ಅಕ್ಕಮಹಾದೇವಿಯನ್ನು ವಿಶ್ವಕ್ಕೆ ಪರಿಚಯಿಸುವ ಸಣ್ಣ ಪ್ರಯತ್ನವಾಗಿ ಈ ಅಭಿವೃದ್ಧಿ ಕಾರ್ಯ ನಡೆದಿದೆ. ಈ ಮೂಲಕ ಪ್ರವಾಸೋದ್ಯಮವನ್ನು ಬೆಳಸುವುದು ಇನ್ನೊಂದು ಮುಖ್ಯ ಉದ್ದೇಶ. ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಎಲ್ಲ ಅರ್ಹತೆಗಳು ಇದಕ್ಕೆ ದೊರಕಲಿದೆ. 

ಸುಪ್ರಸಿದ್ಧ ಶಿಲ್ಪಿ ಶಿವಮೊಗ್ಗದ ಕೆ. ಕಾಶಿನಾಥ್‌ ಅವರ ಮಾರ್ಗದರ್ಶನದಲ್ಲಿ ಪುತ್ರ ಶ್ರೀಧರಮೂರ್ತಿ 65 ಅಡಿ ಎತ್ತರದ 20 ಕೋಟಿ ರು. ವೆಚ್ಚದ ಭವ್ಯ ಅಕ್ಕಮಹಾದೇವಿ ಕಂಚಿನ ಮೂರ್ತಿ ನಿರ್ಮಾಣವಾಗಿದೆ. 51 ಅಡಿ ಎತ್ತರದ ಬೃಹತ್‌ ಮೂರ್ತಿಯನ್ನು 14 ಅಡಿ ಎತ್ತರದ ಪೀಠದ ಮೇಲೆ ಸ್ಥಾಪಿಸಲಾಗಿದೆ. ಅಕ್ಕನವರ ಮುಖವೇ 15 ಅಡಿ ಇರುವುದು ವಿಶೇಷ. ಎಡಗೈಯಲ್ಲಿ ಹಿಡಿದಿರುವ ಇಷ್ಟಲಿಂಗ ನಾಲ್ಕೂವರೆ ಅಡಿ ಎತ್ತರವಿದೆ. ಮೂರ್ತಿಯ ಕೆಳಗೆ ಪೀಠದ ಒಳಗೆ ಅನುಭವ ಮಂಟಪವನ್ನು ನಿರ್ಮಿಸಲಾಗಿದೆ. ಅದಕ್ಕೆ ಪೂರಕವಾದ 600 ಅಡಿ ಉದ್ದದ ಗುಹೆಯನ್ನು ಸಹ ನಿರ್ಮಿಸಲಾಗಿದೆ. ಇದರಲ್ಲಿ ಅಕ್ಕಮಹಾದೇವಿಯವರ ಜೀವನದಲ್ಲಿ ನಡೆದ ಘಟನೆಗಳನ್ನು ಸಾರುವ ಮೂರ್ತಿಗಳನ್ನು ಪ್ರತಿಷ್ಟಾಪಿಸಲಾಗುತ್ತದೆ.  

ಅಕ್ಕಮಹಾದೇವಿ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಕರ್ನಾಟಕ ಕಂಡ ಅಪರೂಪದ ಕಣ್ಮಣಿ ಯಡಿಯೂರಪ್ಪ ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿದವರು. ಬಡವರ, ನೊಂದವರಿಗೆ ಆಶ್ರಯ ನೀಡಿದವರು. ಶಿಕಾರಿಪುರ ಇಡೀ ಶರಣ ಕುಲಕ್ಕೆ ಜನ್ಮ ಕೊಟ್ಟ ಪುಣ್ಯ ಭೂಮಿ. ಶಿಕಾರಿಪುರದಿಂದ ಬಸವ ಕಲ್ಯಾಣದವರೆಗೆ ನಡೆದು ಬಂದ ದಾರಿ ನಮ್ಮೆಲ್ಲರಿಗೆ ಬದುಕಿನ ದಾರಿ ತೋರಿಸಿದೆ. 9 ಶತಮಾನಗಳ ನಂತರ ಶಿರಶರಣರ ನಾಡನ್ನು ಬಸವ ಕಲ್ಯಾಣ ಜೊತೆ ಸೇರಿಸುವ ಕಾರ್ಯ ಯಡಿಯೂರಪ್ಪ ಮಾಡಿದ್ದಾರೆ. ಮುಖ್ಯಮಂತ್ರಿ ಮಾಡಿ ಅನ್ನೋರು ಬಹಳ ಜನ ಇದ್ದಾರೆ. ಇತ್ತೀಚೆಗೆ ಬಹಿರಂಗವಾಗಿ ಹೇಳ್ತಾರೆ, ಅಷ್ಟರಮಟ್ಟಿಗೆ ಬಂದಿದ್ದಾರೆ. ಆದರೆ ಯಡಿಯೂರಪ್ಪ ದಾರಿ ಸುಲಭ ಆಗಿರಲಿಲ್ಲ. ಎಲ್ಲವನ್ನೂ ಅವರು ಎದುರಿಸಿದ್ರು. ಧೈರ್ಯವೇ ಸಾಧನೆಗೆ ಮೂಲ ಅದನ್ನು ಯಡಿಯೂರಪ್ಪ ಮಾಡಿ ತೋರಿಸಿದ್ದಾರೆ.

ಮುಖ್ಯಮಂತ್ರಿ ಕನಸನ್ನು ಅವರು ಎಂದಿಗೂ ಕಂಡಿರಲಿಲ್ಲ. ಇಡೀ ರಾಜ್ಯದ ಸಮುದಾಯ ಕಟ್ಟುವ ಕೆಲಸ ಮಾಡಿದ್ದಾರೆ. ಇದು ದೈವೇಚ್ಛೆ, ಪೂರ್ವ ಜನ್ಮದ ಪುಣ್ಯ. ಯಡಿಯೂರಪ್ಪ ಮಾಡಿದ ಕಾರ್ಯ ಮುಂದಿನ 10 ಪೀಳಿಗೆ ನೆನಪಿಸಿಕೊಳ್ಳುತ್ತೆ. ಯಡಿಯೂರಪ್ಪ ರಂತಹ ಪುಣ್ಯಾತ್ಮ ಪಡೆದಿದ್ದು ಶಿಕಾರಿಪುರದ ಪುಣ್ಯ. ಶಿವಶರಣರ ಸಂದೇಶ ಸಾರುವ ಕೆಲಸ ಮುಂದುವರಿಸಿದ್ದು ಯಡಿಯೂರಪ್ಪ. ಉಡುತಡಿ ಅಷ್ಟೇ ಅಲ್ಲ, ಬಸವಕಲ್ಯಾಣ, ಕಾಗಿನೆಲೆ ಅಭಿವೃದ್ಧಿ ಮಾಡಿದ್ದಾರೆ. ವಾಲ್ಮೀಕಿ ಜಯಂತಿ ಆರಂಭಿಸಿದ್ದು ಯಡಿಯೂರಪ್ಪ. ಎಲ್ಲ ವರ್ಗದ ಜನರಿಗೆ ಪ್ರೀತಿಸಿ ಸಾಮಾಜಿಕ ಹರಿಕಾರರಾಗಿದ್ದಾರೆ ಎಂದು ತಮ್ಮ ಭಾಷಣದುದ್ದಕ್ಕೂ ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ್ದಾರೆ.

ಬೆಳಗಾವಿ: ಘಟಪ್ರಭಾ ದಡದಲ್ಲಿ 108 ಅಡಿ ಬಸವಣ್ಣ ಪ್ರತಿಮೆ, ಸಿಎಂ ಬೊಮ್ಮಾಯಿ

ಯಡಿಯೂರಪ್ಪ ನಿವೃತ್ತಿ ಆಗಲು ಸಾಧ್ಯವಿಲ್ಲ. ಅವರು ಆಗೋದೂ ಇಲ್ಲ. ಅವರು ರಿಟೈರ್ ಆಗಲು ಜನ ಬಿಡುವುದಿಲ್ಲ. ಜನರ ಅಭಿಲಾಷೆ ಇರೋವರೆಗೂ ಅವರ ನಾಯಕತ್ವ ಮುಂದುವರೆಯುತ್ತೆ. ನಿವೃತ್ತಿ ಮನಸ್ಸಿದ್ದರೂ ಜನರ ಪ್ರೀತಿ ಜನನಾಯಕನಿಗೆ ಬಿಡೋದಿಲ್ಲ. ರಾಜ್ಯಕ್ಕೆ ಕಾಳಜಿ ಇರುವ ನಾಯಕತ್ವದ ಅಗತ್ಯ ಇದೆ. ಹೀಗಾಗಿ ಯಡಿಯೂರಪ್ಪ ಸೇವೆ ಹಿಂದಿನಕ್ಕಿಂತಲೂ ಹೆಚ್ಚಿದೆ. ಅವರ ಮಾರ್ಗದರ್ಶನದಲ್ಲೇ ನಾವು ಬೆಳೆದಿದ್ದೇವೆ. ಅದು ಮುಂದುವರಿಯಲಿದೆ. ನನಗೆ ಕಷ್ಟ ಕಾಲದಲ್ಲಿ ಮಾರ್ಗದರ್ಶನ ನೀಡಿದವರು ಬಿಎಸ್ವೈ. ತಂದೆ- ಮಗನ ಸಂಬಂಧ ನಿರಂತರ, ನಿಲ್ಲಲು ಸಾಧ್ಯವಿಲ್ಲ. ನಾನು ಏನೂ ಮಾಡಿಲ್ಲ. ಎಲ್ಲವೂ ಯಡಿಯೂರಪ್ಪ ಶಕ್ತಿ. ನಾನು ನಿಮಿತ್ತ ಮಾತ್ರ ಎಂದರು.

ಅಪ್ಪು ಹುಟ್ಟುಹಬ್ಬ: ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಸಿಲಿಕಾನ್ ಸ್ಟ್ಯಾಚು

ಅಲ್ಲಮಪ್ರಭು ಕ್ಷೇತ್ರ ಅಭಿವೃದ್ಧಿಗೆ ಅನುದಾನ ಕೊಡುತ್ತೇವೆ ಎಂದು ಅಕ್ಕಮಹಾದೇವಿ ಸಂಶೋಧನಾ ಕೇಂದ್ರ ಕ್ಕೆ 10 ಕೋಟಿ ಬಿಡುಗಡೆ ಮಾಡಲಾಗುವುದು. ಶಿವಪಾದ ಕ್ಷೇತ್ರ ಅಭಿವೃದ್ಧಿಗೆ 10 ಕೋಟಿ ಅನುದಾನ ನೀಡಲಾಗುವುದು ಎಂದು  ಸಿಎಂ ಬೊಮ್ಮಾಯಿ ಘೋಷಣೆ ಮಾಡಿದರು. ಯಡಿಯೂರಪ್ಪ, ರಾಘವೇಂದ್ರ ಅವರಿಗೆ ತೋರಿಸಿದ ಪ್ರೀತಿ ವಿಜಯೇಂದ್ರ ಅವರಿಗೂ ಕೊಡಿ ಎಂದು ಭಾಷಣದಲ್ಲಿ ಸಿಎಂ ಬೊಮ್ಮಾಯಿ ಮನವಿ ಮಾಡಕೊಂಡರು.

Follow Us:
Download App:
  • android
  • ios