ಗೆಳೆಯನೆಂದು ಮನೆಯೊಳಗೆ ಬಿಟ್ಟುಕೊಂಡಿದ್ದೇ ತಪ್ಪಾಯ್ತು, ಪಾಲಿಕೆ ಸದಸ್ಯ ಮಾಡಿದ್ದೇನು ಗೊತ್ತಾ?
ಆತ್ಮೀಯ ಸ್ನೇಹಿತ ಅದರಲ್ಲೂ ಪಾಲಿಕೆ ಸದಸ್ಯನೆಂದು ಮನೆಯೊಳಗೆ ಬಿಟ್ಟುಕೊಂಡಿದ್ದೇ ತಪ್ಪಾಯ್ತು. ಸ್ನೇಹಿತನ ಪತ್ನಿಯ ಮೇಲೆ ಕಣ್ಣು ಹಾಕಿದ ಪಾಲಿಕೆ ಸದಸ್ಯ ದಾರಿ ತಪ್ಪಿದ್ದಾರೆ. ಪತ್ನಿಯ ಜೊತೆಗೆ ಇರೋ ಸಂಬಂಧ ದಿಂದ ಬೇಸತ್ತ ಸ್ನೇಹಿತ ಇದೀಗ ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ.
ವರದಿ ; ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ಆ.28): ಅವನು ಜನರಿಂದ ಆಯ್ಕೆಯಾದ ಜನಪ್ರತಿನಿಧಿ.ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯರಾದ ಬಳಿಕ ಜನರ ಕಷ್ಟ ಸುಖವನ್ನು ನೋಡಿಕೊಳ್ಳುವ ಮೂಲಕ ಇಡೀ ವಾರ್ಡಿನ ಮನೆ ಮಾತನಾಗಬೇಕಾದವನು. ಮತ್ತೊಬ್ಬರಿಗೆ ಮಾದರಿ ಯಾಗಬೇಕಾದವನು ಆದರೆ ಮಾಡಿದ್ದು ಘನಾಂದಾರಿ ಕೆಲಸ. ಸ್ನೇಹಿತನ ಪತ್ನಿಯ ಜೊತೆ ಅನೈತಿಕ ಸಂಬಂಧವನ್ನು ಇಟ್ಟುಕೊಳ್ಳುವ ಮೂಲಕ ಮತ್ತು ಗೆಳೆಯನನ್ನು ಬೆದರಿಸಿ ಅವನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾಗಿದ್ದಾನೆ. ಹೌದು, ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯ ಅಸೀಫ್ ಮಾಡಿರೋ ಈ ಕೆಲಸ ಇದೀಗ ಪಾಲಿಕೆಯ ಇತರೆ ಸದಸ್ಯರು ಕೂಡ ತಲೆತಗ್ಗಿಸುವಂತೆ ಮಾಡಿದೆ.
ಮಹಾಪಾಲಿಕೆ ಸದಸ್ಯ ಅಸೀಫನ ಅವಾಂತರ
ಇದು ಅಕ್ಷರಷಃ ಉಂಡ ಮನೆಗೆ ಕನ್ನ ಹಾಕೋ ಕೆಲಸ ಅಂದ್ರೂ ಕೂಡ ತಪ್ಪಾಗಲಿಕ್ಕಿಲ್ಲ ಯಾಕಂದ್ರೇ, ಆತ್ಮೀಯ ಸ್ನೇಹಿತ ಅದರಲ್ಲೂ ಪಾಲಿಕೆ ಸದಸ್ಯನೆಂದು ಮನೆಯೊಳಗೆ ಬಿಟ್ಟುಕೊಂಡಿದ್ದೇ ತಪ್ಪಾಯ್ತು. ಸ್ನೇಹಿತನ ಪತ್ನಿಯ ಮೇಲೆ ಕಣ್ಣು ಹಾಕಿದ ಪಾಲಿಕೆ ಸದಸ್ಯ ದಾರಿ ತಪ್ಪಿದ್ದಾರೆ. ಪತ್ನಿಯ ಜೊತೆಗೆ ಇರೋ ಸಂಬಂಧ ದಿಂದ ಬೇಸತ್ತ ಸ್ನೇಹಿತ ಇದೀಗ ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ. ಹೀಗಾಗಿ ಇದೀಗ ಬಳ್ಳಾರಿಯ 30ನೇ ವಾರ್ಡ್ ಕಾಂಗ್ರೆಸ್ ಸದಸ್ಯ ಎನ್.ಎಂ.ಡಿ ಆಸೀಫ್ ಭಾಷಾ ವಿರುದ್ದ ಎಫ್ಐಆರ್ ದಾಖಲಾಗಿದೆ.
Moral policing: ಬುರ್ಖಾ ತೆಗೆಯುವಂತೆ ಮಹಿಳೆ ಜೊತೆ ಅನುಚಿತ ವರ್ತನೆ ತೋರಿದ್ದವ ಅರೆಸ್ಟ್
ಇನ್ನೂ ಈ ಘಟನೆಯ ಒಂದಷ್ಟು ಹಿನ್ನೆಲೆ ನೋಡೋದಾದ್ರೇ, ಪಾಲಿಕೆ ಸದಸ್ಯ ಆಸೀಫ್ ಮತ್ತು ಅಹ್ಮದ್ ಹುಸೇನ್ ಇಬ್ಬರು ಆತ್ಮೀಯ ಗೆಳೆಯರು. ಆಸೀಫ್ ನ ಎಲ್ಲ ವ್ಯವಹಾರ ಅಹ್ಮದ್ ಹುಸೇನ್ ನೋಡಿಕೊಳ್ತಿದ್ರು. ಹೀಗಾಗಿ ಇಬ್ಬರ ಮಧ್ಯೆ ಇರೋ ಸಲುಗೆಯೂ ಹೆಚ್ಚಾಗಿತ್ತು. ಇದೇ ಕಾರಣಕ್ಕೆ ಆಹ್ಮದ್ ಹುಸೇನ್ ಮನೆಗೆ ನಿರಂತರವಾಗಿ ಪಾಲಿಕೆ ಸದಸ್ಯ ಅಸೀಫ್ ಬರುತ್ತಿದ್ರು. ಈ ವೇಳೆ ಆಹ್ಮದ್ ಹುಸೇನ್ ಪತ್ನಿ ನಸ್ರೀನಾಳ ಜೊತೆ ಸ್ನೇಹ, ಸಲುಗೆ, ಬೆಳೆದು ನಂತರ ಅದು ಅಕ್ರಮ ಸಂಬಂಧವರೆಗೂ ಹೋಗಿದೆ. ಈ ವಿಷಯ ಅಹ್ಮದ್ ಗೆ ಗೊತ್ತಾಗುತ್ತಲೇ ಆಸೀಫ್ ಗೆ ಅಹ್ಮದ್ ಮಧ್ಯೆ ವಾಗ್ವಾದ ನಡೆದಿದೆ
ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿರೋ ಆಹ್ಮದ್
ಇನ್ನೂ ವಿಷಯ ದೊಡ್ಡದಾಗುತ್ತಿದ್ದಂತೆ ಪಾಲಿಕೆ ಸದಸ್ಯ ಅಸೀಫ್ ತನ್ನ ರಾಜಕೀಯ ಪ್ರಭಾವದಿಂದಾಗಿ ಅಹ್ಮದ್ ಗೆ ಪ್ರಾಣ ಬೆದರಿಕೆ ಹಾಕಿದ್ದಾನೆ. ಇದರಿಂದ ಅಹ್ಮದ್ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಈ ಬಗ್ಗೆ ಕೌಲ್ ಬಜಾರ್ ಠಾಣೆಯಲ್ಲಿ ದೂರು ದಾಖಲಿಸಿರೋ ಆಹ್ಮದ್ ಮತ್ತು ಕುಟುಂಬದವರು ಆತ್ಮಹತ್ಯೆಗೆ ಕಾರಣ ಪತ್ನಿಯ ಜೊತೆ ಇರೋ ಅಕ್ರಮ ಸಂಬಂಧ ಹೊಂದಿರೋ ಬಗ್ಗೆ ಅಸೀಫ್ ಅವರನ್ನು ಪ್ರಶ್ನೆ ಮಾಡಿರೋದು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಇನ್ನೂ ಪಿನಾಯಿಲ್ ಕುಡಿದು ಆತ್ಮಹತ್ಯಗೆ ಯತ್ನಿಸಿರೋ ಅಹ್ಮದ್ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಬಳ್ಳಾರಿ ಪೊಲೀಸ್ ಎಸ್ಟಿ ರಂಜಿತ್ ಕುಮಾರ್ ಬಂಡಾರು ಸುವರ್ಣ ನ್ಯೂಸ್ ಗೆ ತಿಳಿಸಿದ್ದಾರೆ.
ಮುಸ್ಲಿಂ ವಿದ್ಯಾರ್ಥಿ ಅಪಹರಿಸಿ ಹಲ್ಲೆ: ಎಸ್‌ಡಿಪಿಐ ಮುಖಂಡನ ಪುತ್ರ ಸಹಿತ 7 ಜನರ ಬಂಧನ