Asianet Suvarna News Asianet Suvarna News

Moral policing: ಬುರ್ಖಾ ತೆಗೆಯುವಂತೆ ಮಹಿಳೆ ಜೊತೆ ಅನುಚಿತ ವರ್ತನೆ ತೋರಿದ್ದವ ಅರೆಸ್ಟ್

ಆತ ಎರಡು ಬಾರಿ ಪಿಯುಸಿ ಫೇಲ್ ಆಗಿ ನಂತರ ಕಷ್ಟಪಟ್ಟು ಪಾಸಾಗಿದ್ದ ಯುವಕ. ಬೇರೆ ದೇಶದಲ್ಲಿ ಎಂಬಿಬಿಎಸ್ ಓದೋಕೆ ಹೋಗಿ ಸೈಕಲ್‌ ಕೂಡ ಹೊಡೀತಿದ್ದವ. ವಿದೇಶದಲ್ಲೇ ಇದ್ಕೊಂಡು ಓದಿದ್ರೆ ಡಾಕ್ಟರ್ ಆಗ್ತಿದ್ನೇನೋ.ಆದ್ರೆ ರಜೆ ಟೈಮ್ ಅಂತಾ ಬೆಂಗಳೂರಿಗೆ ಬಂದು ನೈತಿಕ ಪೊಲೀಸ್ ಗಿರಿ ತೋರಿಸಿ ಕೈದಿಯಾಗಿದ್ದಾನೀಗ!

Moral policing case jakhir ahmed arrested by cyber police at bengaluru rav
Author
First Published Aug 28, 2023, 5:11 PM IST

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್.ಬೆಂಗಳೂರು

ಬೆಂಗಳೂರು(ಆ.28) : ಆತ ಎರಡು ಬಾರಿ ಪಿಯುಸಿ ಫೇಲ್ ಆಗಿ ನಂತರ ಕಷ್ಟಪಟ್ಟು ಪಾಸಾಗಿದ್ದ ಯುವಕ. ಬೇರೆ ದೇಶದಲ್ಲಿ ಎಂಬಿಬಿಎಸ್ ಓದೋಕೆ ಹೋಗಿ ಸೈಕಲ್‌ ಕೂಡ ಹೊಡೀತಿದ್ದವ. ವಿದೇಶದಲ್ಲೇ ಇದ್ಕೊಂಡು ಓದಿದ್ರೆ ಡಾಕ್ಟರ್ ಆಗ್ತಿದ್ನೇನೋ.ಆದ್ರೆ ರಜೆ ಟೈಮ್ ಅಂತಾ ಬೆಂಗಳೂರಿಗೆ ಬಂದು ನೈತಿಕ ಪೊಲೀಸ್ ಗಿರಿ ತೋರಿಸಿ ಕೈದಿಯಾಗಿದ್ದಾನೀಗ!

ಇನ್ನೂ25 ವಯಸ್ಸು. ವಿದೇಶದಲ್ಲಿ ಓದಿಕೊಂಡು ಚೆನ್ನಾಗಿ ಬದುಕಿ ಬಾಳಬೇಕಾದವನು ನೈತಿಕ ಪೊಲೀಸ್‌ಗಿರಿ ಮಾಡುವ ಮೂಲಕ ಕಂಬಿ ಎಣಿಸುವಂತಾಗಿದೆ. ನೈತಿಕ ಪೊಲೀಸ್ ಗಿರಿ ಮಾಡಿದ್ದಲ್ಲದೆ ವಿಡಿಯೋ ಮಾಡಿ ಲೈಕ್‌ ಕಾಮೆಂಟ್‌ಗಳಿಗೋಸ್ಕರ್ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿದ್ದ ಸಿಕ್ಕಿಬಿದ್ದು ಭವಿಷ್ಯ ಹಾಳುಮಾಡಿಕೊಂಡಿದ್ದಾನೆ. 

ಸೋಷಿಯಲ್ ಮೀಡಿಯಾ(Social media)ದಲ್ಲಿ ನಿನ್ನೆ ಎಲ್ಲೆಡೆ ಒಂದು‌‌‌ ವಿಡಿಯೋ ವೈರಲ್(Viral video) ಆಗಿದೆ. ಬುರ್ಕಾ ಹಾಕೊಂಡು ಸ್ನೇಹಿತನ ಜೊತೆ ಹೋಗ್ತಿದ್ದ ಯುವತಿಯೋರ್ವಳನ್ನ ತಡೆದಿದ್ದ ಇದೇ ಜಾಕೀರ್ ಅಹ್ಮದ್(Zakir Ahmed arrest) ಆಕೆಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ ಅನುಚಿತವಾಗಿ ವರ್ತಿಸಿದ್ದ. ಪರಿಚಯವೇ ಇಲ್ಲದ ಆಕೆಯನ್ನ ಅನ್ಯ ಕೋಮಿನ ಯುವಕನ ಜೊತೆ ಹೋಗ್ತಿದ್ಯಾ..? ಒಂದು ಮುಸ್ಲಿಂ ಯುವತಿಯಾಗಿ ಹಿಂಗೆ ಮಾಡ್ತ್ಯಾ ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಅದನ್ನ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿದ್ದ. ಇಷ್ಟೆಲ್ಲಾ ಘಟನೆ ನಡೆದಿದ್ದು ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ. ಹೀಗೆ ಅವಾಜ್ ಹಾಕಿದ್ದ ಜಾಕೀರ್ ಅಹ್ಮದನನ್ನು ಪೂರ್ವ ವಿಭಾಗದ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ..

ಮುಸ್ಲಿಂ ವಿದ್ಯಾರ್ಥಿ ಅಪಹರಿಸಿ ಹಲ್ಲೆ: ಎಸ್‌ಡಿಪಿಐ ಮುಖಂಡನ ಪುತ್ರ ಸಹಿತ 7 ಜನರ ಬಂಧನ

ಕೋಲಾರ ಮೂಲದವನಾಗಿರುವ ಯುವಕ. ವಿದೇಶದಲ್ಲಿ ಎಂಬಿಬಿಎಸ್ ಓದ್ಕೊಂಡಿದ್ದ ಆರೋಪಿ ಜಾಕೀರ್ ರಜೆ ಸಿಕ್ಕಿದ್ದಕ್ಕೆ ಗೋವಿಂದಪುರದ ಅಕ್ಕನ ಮನೆಗೆ ಬಂದಿದ್ದ. ಬೆಂಗಳೂರಿಗೆ ಬಂದವನೇ ಇಂಥ ಉಸಾಬರಿ ಮಾಡಿ ತಗಲಾಕೊಂಡು ಕಂಬಿ ಎಣಿಸ್ತಿದ್ದಾನೆ. 

ನಿನ್ನೆ ರಸ್ತೆಬದಿ ತನ್ನ ಪಾಡಿಗೆ ತಾನು ಸ್ನೇಹಿತನ ಜೊತೆ ಹೋಗ್ತಿದ್ದ ಯುವತಿಯನ್ನ ನಿಂದಿಸಿ ನೈತಿಕ ಪೊಲೀಸ್ ಗಿರಿ ಮೆರೆದಿದ್ದ. ವಿಡಿಯೋ ವೈರಲ್ ಆದ  ನಂತರ ಯುವತಿ ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ರು ಸದ್ಯ ಆರೋಪಿಯನ್ನ ಬಂಧಿಸಿರೋ ಪೊಲೀಸರು ಜೈಲಿಗಟ್ಟಿದ್ದಾರೆ.

 

Mangaluru: ನೈತಿಕ ಪೊಲೀಸ್‌ಗಿರಿ: ಗುಂಪಿನಿಂದ ಅಂಗಡಿ ಮಾಲೀಕನಿಗೆ ಹಲ್ಲೆ

Follow Us:
Download App:
  • android
  • ios