ಆಯುಷ್ ಗುಪ್ತಾ ಎಂದು ಗುರುತಿಸಲಾದ ವಿದ್ಯಾರ್ಥಿಯು ಮ್ಯಾನೇಜ್‌ಮೆಂಟ್ ಕೋರ್ಸ್‌ನಲ್ಲಿ ಸ್ನಾತಕೋತ್ತರ ಕಾರ್ಯಕ್ರಮದ ಎರಡನೇ ವರ್ಷದಲ್ಲಿದ್ದ ಹಾಗೂ ಫೇರಿಂಗ್ ಕ್ಯಾಪಿಟಲ್‌ನಲ್ಲಿ ಇಂಟರ್ನ್‌ ಆಗಿದ್ದ ಎಂದು ಮಾಹಿತಿ ನೀಡಲಾಗಿದೆ. 

ಬೆಂಗಳೂರು (ಜು.25): ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ನಲ್ಲಿ ಓದುತ್ತಿದ್ದ 27 ವರ್ಷದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಸಾವು ಕಂಡಿದ್ದಾರೆ. ಆಯುಷ್ ಗುಪ್ತಾ ಎಂದು ಗುರುತಿಸಲಾದ ವಿದ್ಯಾರ್ಥಿಯು ಮ್ಯಾನೇಜ್‌ಮೆಂಟ್ ಕೋರ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮದ ಎರಡನೇ ವರ್ಷದಲ್ಲಿದ್ದ, ಬೇಸಿಗೆಯ ರಜೆಯಲ್ಲಿ ಫೇರಿಂಗ್‌ ಕ್ಯಾಪಿಟಲ್‌ನಲ್ಲಿ ಇಂಟರ್ನ್‌ ಆಗಿದ್ದ ಎಂದು ತಿಳಿಸಲಾಗಿದೆ. ಐಐಎಂ ಬೆಂಗಳೂರು ಭಾನುವಾರ ಆಯುಷ್ ಗುಪ್ತಾ ಸಾವಿನ ಕುರಿತು ಟ್ವೀಟ್ ಮಾಡಿದ್ದು, ಸೋಮವಾರದ ಎಲ್ಲಾ ತರಗತಿಗಳನ್ನು ರದ್ದುಗೊಳಿಸಲಾಗಿತ್ತು ಎಂದು ತಿಳಿಸಿದೆ. ಇನ್ನು ತನ್ನ ಲಿಂಕ್ಡ್‌ಇನ್‌ ಪುಟದಲ್ಲಿಯೂ ಐಐಎಂ ಬೆಂಗಳೂರು ಈ ಸುದ್ದಿಯನ್ನು ಹಂಚಿಕೊಂಡಿದೆ. ಕೆಲವು ಲಿಂಕ್ಡ್‌ಇನ್‌ ಬಳಕೆದಾರರು, ಆಯುಷ್‌ ಗುಪ್ತಾ ಪರಿಚಯ ಹಾಗೂ ಅವರೊಂದಿಗೆ ಕಳೆದ ಕ್ಷಣಗಳನ್ನು ನೆಪಿಸಿಕೊಂಡಿದ್ದಾರೆ. 'ಆಯುಷ್‌ ನನ್ನ ಸಹಪಾಠಿ. ಚೈತನ್ಯ ಚಿಲುಮೆಯಾಗಿದ್ದ. ಪ್ರಶ್ನೆಗಳು ಹಾಗೂ ಕುತೂಹಲಗಳು ಆತನಲ್ಲಿ ಎಂದಿಗೂ ಇರುತ್ತಿದ್ದವು. ಹೇಳಿಕೊಟ್ಟಿದ್ದಕ್ಕಿಂತ ಹೆಚ್ಚಿನ ಓದುವ ಹಾಗೂ ಓಡುವ ಮನಸ್ಸು ಆತನಲ್ಲಿತ್ತು. ತರಗತಿಯಲ್ಲಿ ನಾನು ಹೇಳಿದ ಎಲ್ಲದರ ಹಿಂದೆ ಮೊದಲ ತತ್ವಗಳನ್ನು ಪಡೆಯುವ ಸಾಮರ್ಥ್ಯ ಅವನಲ್ಲಿತ್ತು. ಅವನ ಪ್ರಶ್ನೆಗಳು ಆಗಾಗ್ಗೆ ಆಳವಾಗಿದ್ದುದರಿಂದ ನಾನು ಅದರ ಬಗ್ಗೆ ಜಾಗರೂಕರಾಗಿರಬೇಕು ಎಂದು ಪ್ರತಿ ಬಾರಿ ಹೇಳುತ್ತಿದ್ದೆ ಎಂದು ಒಬ್ಬರು ಬರೆದುಕೊಂಡಿದ್ದಾರೆ.

ಈ ಚಿತ್ರದಲ್ಲಿ ನೋಡುತ್ತಿರುವಂತೆ ಆತನ ನಗು ಸದಾಕಾಲ ಹೀಗೇ ಇರುತ್ತಿತ್ತು. ಆಯುಷ್‌ ಅವರನ್ನು ಮರೆಯಲು ಕಷ್ಟವಾಗಬಹುದು. ಬ್ಯುಸಿನೆಸ್‌ ಜಗತ್ತಿನಲ್ಲಿ ಅವರು ತನ್ನದೇ ಆದ ಛಾಪು ಮೂಡಿಸಿದ್ದರು. ಈಗಲೂ ಕೂಡ ಅವರನ್ನು ಮರೆಯುವುದು ಬಹಳ ಕಷ್ಟ. ಅವರ ಪ್ರತಿಭಾನ್ವಿತ ಸ್ವಭಾವ ಸೇರಿದಂತೆ ಅವರ ಅನೇಕ ಅದ್ಭುತ ಗುಣಗಳನ್ನು ನಾನು ಮಿಸ್‌ ಮಾಡಿಕೊಳ್ಳುತ್ತೇನೆಸ ಎಂದು ಬರೆದಿದ್ದಾರೆ.

ಈ ಸುದ್ದಿಯನ್ನು ಅರಗಿಸಿಕೊಳ್ಳಲು ನನಗೆ ಸ್ವಲ್ಪ ಸಮಯ ಹಿಡಿಯುತ್ತದೆ. ಅವನಿಗೆ ಕಲಿಸಿದ ನನ್ನ ಇತರ ಅನೇಕ ಸಹೋದ್ಯೋಗಿಗಳೂ ಇದೇ ಅನುಭವ ಆಗಿರಬೇಕು" ಎಂದು ಇನ್ನೊಬ್ಬ ಪ್ರೊಫೆಸರ್‌ ಒಬ್ಬರು ಬರೆದಿದ್ದಾರೆ.

Scroll to load tweet…


ಬೆಸ್ಟ್ ಬಿ-ಸ್ಕೂಲ್ ಪಟ್ಟ ಉಳಿಸಿಕೊಂಡ ಐಐಎಂ-ಬೆಂಗಳೂರು

"ನಾನು 2013 ರಲ್ಲಿ ನನ್ನ 1 ನೇ ವರ್ಷದಲ್ಲಿ ಆಯುಷ್‌ನನ್ನು ಭೇಟಿಯಾದೆ. ನಾವು ಬ್ಯಾಚ್‌ಮೇಟ್‌ ಆಗಿದ್ದೆವು. ನಂತರ ಮುಂಬೈನಲ್ಲಿ ನಮ್ಮ ಮೊದಲ ಕೆಲಸದಲ್ಲಿ, ಆಯುಷ್ 2 ವರ್ಷಗಳ ಕಾಲ ನನ್ನ ಫ್ಲಾಟ್‌ಮೇಟ್ ಆಗಿದ್ದರು. ಬ್ಯಾಚ್‌ಮೇಟ್‌ಗಳು ಮತ್ತು ಫ್ಲಾಟ್‌ಮೇಟ್‌ಗಳಿಗಿಂತ ಹೆಚ್ಚಾಗಿ ಅವರು ನನ್ನ ಉತ್ತಮ ಸ್ನೇಹಿತರಾಗಿದ್ದರು, ಅದನ್ನು ನಾನೀಗ ಕಳೆದುಕೊಂಡಿದ್ದೇನೆ' ಎಂದು ಬರೆದಿದ್ದಾರೆ. "ಆಯುಷ್ ತುಂಬಾ ಬುದ್ಧಿವಂತ ಮತ್ತು ಕಠಿಣ ಕೆಲಸ ಮಾಡುವ ವ್ಯಕ್ತಿ. ಅವರಿಗಿಂತ ಹಣಕಾಸಿನ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರುವ ಯಾರನ್ನೂ ನಾನು ಭೇಟಿ ಮಾಡಿಲ್ಲ. ಅವರು ತುಂಬಾ ಮಹತ್ವಾಕಾಂಕ್ಷೆಯ ವ್ಯಕ್ತಿ. ಇದನ್ನು ಕೇಳಿ ನಾನು ತೀವ್ರ ಆಘಾತಕ್ಕೊಳಗಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರನ್ನು ಪ್ರಾರ್ಥಿಸುತ್ತೇನೆ" ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. "ನಾನು ಆಯುಷ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇನೆ ಮತ್ತು ಅವರು ಇನ್ನಿಲ್ಲ ಎಂದು ತಿಳಿದು ಬೇಸರವಾಗಿದೆ. ಅವರು ನನ್ನೊಂದಿಗೆ 2 ಗ್ರೂಪ್‌ ಪ್ರಾಜೆಕ್ಟ್‌ಗಳ ಭಾಗವಾಗಿದ್ದರು. ಬಹಳ ಬೇಗ ಹೋಗಿಬಿಟ್ಟರು' ಎಂದು ಬರೆದಿದ್ದಾರೆ.

ಬೈಜುಸ್‌ಗೆ ಮತ್ತೊಂದು ಹೊಡೆತ, ಬೆಂಗಳೂರು ಕಚೇರಿ ಖಾಲಿ ಮಾಡಿದ ಕಂಪನಿ!

2017ರಲ್ಲಿ ರಾಜಸ್ಥಾನದ ಪಿಲಾನಿಯಲ್ಲಿರುವ ಬಿರ್ಲಾ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಆಂಡ್‌ ಸೈನ್ಸ್‌ನಲ್ಲಿ ಪದವಿ ಪೂರ್ಣ ಮಾಡಿದ್ದ ಆಯುಷ್‌ ಗುಪ್ತಾ, ಐಐಎಂ ಬೆಂಗಳೂರಿನಲ್ಲಿ ಸ್ಟೂಡೆಂಟ್‌ ಅಲ್ಯುಮ್ನಿ ಸಮಿತಿಯ ಹಿರಿಯ ಸಂಯೋಜಕರಾಗಿದ್ದರು.