ಲೂಟಿ ಮಾಡಿದ ಹಣವಿದ್ದರೆ ತಂದು ‘ಗ್ಯಾರಂಟಿ’ಗೆ ಬಳಸಿ: ಸಂಸದ ಮುನಿಸ್ವಾಮಿ ತಿರುಗೇಟು
ಈ ಹಿಂದೆ ಕಾಂಗ್ರೆಸ್ ಅಧಿಕಾರ ನಡೆಸಿದ್ದ ಸಂದರ್ಭದಲ್ಲಿ ಲೂಟಿ ಮಾಡಿರುವ ಲಕ್ಷಾಂತರ ಕೋಟಿ ಹಣವಿದ್ದರೆ ಇಟಲಿ ಮೇಡಂ, ರಾಹುಲ್ ಬಳಿ ಹೋಗಿ ತಂದು ಜನರಿಗೆ ನೀಡಿ ಗ್ಯಾರಂಟಿ ಜಾರಿಗೆ ತರಲಿ. ಅದು ಬಿಟ್ಟು ಪ್ರಧಾನಿ ಮೋದಿ ಬಗ್ಗೆ ಏಕೆ ಆರೋಪ ಮಾಡುತ್ತೀರಿ. ಪ್ರಧಾನಿಯನ್ನು ಕೇಳಿ ಗ್ಯಾರಂಟಿ ಭರವಸೆ ಕೊಟ್ಟಿರಾ ಎಂದು ಕಾಂಗ್ರೆಸ್ ಮುಖಂಡರಿಗೆ ಸಂಸದ ಎಸ್.ಮುನಿಸ್ವಾಮಿ ತಿರುಗೇಟು ನೀಡಿದರು.
ಕೋಲಾರ (ಜೂ.27) ಈ ಹಿಂದೆ ಕಾಂಗ್ರೆಸ್ ಅಧಿಕಾರ ನಡೆಸಿದ್ದ ಸಂದರ್ಭದಲ್ಲಿ ಲೂಟಿ ಮಾಡಿರುವ ಲಕ್ಷಾಂತರ ಕೋಟಿ ಹಣವಿದ್ದರೆ ಇಟಲಿ ಮೇಡಂ, ರಾಹುಲ್ ಬಳಿ ಹೋಗಿ ತಂದು ಜನರಿಗೆ ನೀಡಿ ಗ್ಯಾರಂಟಿ ಜಾರಿಗೆ ತರಲಿ. ಅದು ಬಿಟ್ಟು ಪ್ರಧಾನಿ ಮೋದಿ ಬಗ್ಗೆ ಏಕೆ ಆರೋಪ ಮಾಡುತ್ತೀರಿ. ಪ್ರಧಾನಿಯನ್ನು ಕೇಳಿ ಗ್ಯಾರಂಟಿ ಭರವಸೆ ಕೊಟ್ಟಿರಾ ಎಂದು ಕಾಂಗ್ರೆಸ್ ಮುಖಂಡರಿಗೆ ಸಂಸದ ಎಸ್.ಮುನಿಸ್ವಾಮಿ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾರಂಟಿಗಳ ಜಾರಿಗೆ ಯೋಗ್ಯತೆ ಇಲ್ಲದ ಮೇಲೆ ಏಕೆ ಘೋಷಿಸಬೇಕಿತ್ತು ಎಂದು ಪ್ರಶ್ನಿಸಿದ ಅವರು, ಜನರಿಗೆ ವಂಚನೆಯಾಗುವುದನ್ನು ತಪ್ಪಿಸಿ ಪ್ರತಿ ನಾಗರೀಕರಿಗೂ ಗ್ಯಾರಂಟಿ ತಲುಪುವಂತೆ ಮಾಡಬೇಕು ಎಂದು ತಾಕೀತು ಮಾಡಿ, ಚುನಾವಣೆಗೆ ಇಲ್ಲದ ನಿಯಮ ಈಗ ಏಕೆ ಎಂದು ಪ್ರಶ್ನಿಸಿದರು.
ಕೆ.ಎಚ್.ಮುನಿಯಪ್ಪ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲ ಎಂದು ಟೀಕಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್‌ನಿಂದ 27 ವರ್ಷ ಸಂಸದರಾಗಿ ಇವರು ಕೋಲಾರಕ್ಕೆ ಏನು ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದರು.
ಪ್ರದೀಪ್ ಈಶ್ವರ್ ಹುಚ್ಚ ವೆಂಕಟ್ ಎಂದ ಮುನಿಸ್ವಾಮಿಗೆ,'ಮೆಂಟಲ್ ಮುನಿಸ್ವಾಮಿ' ಎಂದ ಚಿಕ್ಕಬಳ್ಳಾಪುರ ಶಾಸಕ!
ಕಾಂಗ್ರೆಸ್ ಅನೇಕ ಸುಳ್ಳು ಗ್ಯಾರಂಟಿ ನೀಡಿದೆ. ಮಗುವಿಗೆ, ಬದುಕಿನುದ್ದಕ್ಕೂ ಅಮೃತವಾದ ಹಾಲು ನೀಡುವ ಗೋಮಾತೆ ಇಂದು ನನ್ನ ಬದುಕಿಗೆ ಗ್ಯಾರಂಟಿ ಕೇಳುವಂತಾಗಿದೆ. ಗೋಹತ್ಯಾ, ಮತಾಂತರ ನಿಷೇಧ ವಾಪಸ್ ಮೂಲಕ ಜನರನ್ನು ದಿಕ್ಕುತಪ್ಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್‌ನ ಜನವಿರೋಧಿ ಚಟುವಟಿಕೆಗಳ ವಿರುದ್ಧ ಒಗ್ಗೂಡಿ ಹೋರಾಟ ನಡೆಸುವುದಾಗಿ ತಿಳಿಸಿದರು.
ಕಲ್ಲುಕುಟಿಗÜರ ಮೇಲೆ ದೌರ್ಜನ್ಯ
ಮಾಲೂರು ಶಾಸಕ ಕೆ.ವೈ.ನಂಜೇಗೌಡ ಕೇವಲ ಲೆಕ್ಕಾಚಾರದಲ್ಲಿ ಗೆದ್ದಿದ್ದಾರೆ. ಟೇಕಲ್ ಹೋಬಳಿ ಜನ ನನಗೆ ಮತ ನೀಡಿಲ್ಲ ಎಂದು ದೌರ್ಜನ್ಯಕ್ಕೆ ಮುಂದಾಗಿದ್ದು, ಕ್ರಷರ್‌ಗಳ ಬಳಿ ಹಣ ಲೂಟಿಗೆ ಇಳಿದಿದ್ದಾರೆ, ಗಣಿ ಅಧಿಕಾರಿಗಳನ್ನು ಕಳುಹಿಸಿ ದಾಳಿ ನಡೆಸಿ ಅಮಾಯಕರ ಮೇಲೆ ಕೇಸ್ ಹಾಕಿಸುತ್ತಿದ್ದಾರೆ. ಒಂದು ತಿಂಗಳ ಕಾಲ ಕ್ರಷರ್ ಸೀಸ್ ಮಾಡಿಸಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಜನರನ್ನು ಬೆದರಿಸಿ, ಬ್ಲಾಕ್‌ಮೆಲ್ ಮಾಡಿ ಧಮಕಿ ಹಾಕಿ ಮಂತ್ರಿ ಬರ್ತಾರೆ ಎಂದು ತಿಳಿಸಿ ಅವರೇ ಮಿಟಿಂಗ್ ಮಾಡುತ್ತಾರೆ, ಎಂಪಿ ಚುನಾವಣೆವರೆಗೂ ಇವರ ಆಟ ನಡೆಯಲಿ ಎಂದರು.
ಕಲ್ಲುಕುಟಿಗರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸರ್ಕಾರಕ್ಕೆ ರಾಯಲ್ಟಿಕಟ್ಟಿಕೊಂಡು ಬದುಕು ನಡೆಸುತ್ತಿದ್ದಾರೆ, ಅವರ ಬದುಕಿನ ಜತೆ ಚೆಲ್ಲಾಟ ಆಡದಿರಿ ಎಂದು ತಾಕೀತು ಮಾಡಿದರು.
ಪ್ರದೀಪ್ ಈಶ್ವರ್‌ಗೆ ತಿರುಗೇಟು
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಗೆ ತಿರುಗೇಟು ನೀಡಿದ ಸಂಸದ ಮುನಿಸ್ವಾಮಿ, ನಿಮ್ಮ ಡ್ರಾಮ ನಿಲ್ಲಿಸಿ, ನಿಮಗೆ ಸ್ವಾಭಿಮಾನ ಇದ್ದರೆ ಮೊದಲು ಚುನಾವಣೆಯಲ್ಲಿ ನೀಡಿರುವ ನಿಮ್ಮ ಗ್ಯಾರಂಟಿಗಳನ್ನು 24 ಗಂಟೆಯೊಳಗೆ ಪೂರೈಸಿ, ಆಗ ಪ್ರತಾಪ್ ಸಿಂಹ ಹಾಗೂ ನಾನು ಎಲ್ಲಿ ಬೇಕಾದರೂ ಚರ್ಚೆಗೆ ಬರುತ್ತೇವೆ ಎಂದು ವ್ಯಂಗ್ಯವಾಡಿದರು.
ಅಕ್ಕಿ ರಾಜಕೀಯ: ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಂಸದ ಮುನಿಸ್ವಾಮಿ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಹುದ್ದೆ ಖಾಲಿ ಇಲ್ಲ, ಸಮಯ ಬಂದಾಗ ಪಕ್ಷದ ಹೈಕಮಾಂಡ್ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತದೆ ಎಂದರು.