ಪ್ರದೀಪ್‌ ಈಶ್ವರ್‌ ಹುಚ್ಚ ವೆಂಕಟ್‌ ಎಂದ ಮುನಿಸ್ವಾಮಿಗೆ,'ಮೆಂಟಲ್‌ ಮುನಿಸ್ವಾಮಿ' ಎಂದ ಚಿಕ್ಕಬಳ್ಳಾಪುರ ಶಾಸಕ!

ರಾಜ್ಯದಲ್ಲಿ ಕೋಲಾರ ಸಂಸದ ಮುನಿಸ್ವಾಮಿ ಹಾಗೂ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ನಡುವೆ ಮಾತಿನ ಚಕಮಕಿ ಗಮನಸೆಳೆಯಿತು. ಮುನಿಸ್ವಾಮಿಯನ್ನು ಚೈಲ್ಡ್‌ ಆರ್ಟಿಸ್ಟ್‌ ಎಂದ ಪ್ರದೀಪ್‌ ಈಶ್ವರ್‌ಗೆ ಮುನಿಸ್ವಾಮಿ ಆತ 2ನೇ ಹುಚ್ಚ ವೆಂಕಟ್‌ ಎಂದು ಟಾಂಗ್‌ ನೀಡಿದ್ದಾರೆ.

Pradeep Eshwar Huchha Venkat 2 Says Kolar MP Muniswamy he is Mental Muniswamy san

ಬೆಂಗಳೂರು (ಜೂ.24): ಕೋಲಾರ ಸಂಸದ ಮುನಿಸ್ವಾಮಿ ಒಬ್ಬ ಚೈಲ್ಡ್‌ ಆರ್ಟಿಸ್ಟ್‌ ಎಂದಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ಗೆ, ಕೋಲಾರ ಸಂಸದ ಮುನಿಸ್ವಾಮಿ ತಿರುಗೇಟು ನೀಡಿ ಆತ ಹುಚ್ಚಾ ವೆಂಕಟ್‌ ಪಾರ್ಟ್‌-2 ಎಂದಿದ್ದರು. ಇದಕ್ಕೆ ಕೆಂಡಾಮಂಡಲಾಗಿರುವ ನೂತನ ಶಾಸಕ ಪ್ರದೀಪ್‌ ಈಶ್ವರ್‌, ಮುನಿಸ್ವಾಮಿ ವಿರುದ್ಧ ವಾಕ್‌ಪ್ರಹಾರ ನಡೆಸಿದ್ದಾರೆ. ನಾನು 2ನೇ ಹುಚ್ಚಾ ವೆಂಕಟ್‌ ಆದರೆ, ಆತ ಮೊದಲನೇ ಹುಚ್ಚಾ ವೆಂಕಟ್‌ ಆಗಿದ್ದಾರೆ. ಕೋಲಾರ ಎಂಪಿ ಆಗಿರುವ ಅವರ ಹೆಸರು ಏನು ಸರ್‌? 'ಮೆಂಟಲ್‌ ಮುನಿಸ್ವಾಮಿ' ಅಂತಾ ಅವರ ಹೆಸರು. ನಾನು ಹೇಳಿದೆ, ಅಂತಾ ಆ ರೀತಿಯಲ್ಲಿ ಯಾರೂ ಹೇಳಬಾರದು. ಅವರ ಮೇಲೆ ಕೇಸ್‌ಗಳು ಇದ್ದಾವೆ. ನಾನು ದಾಖಲೆ ಇಟ್ಟುಕೊಂಡು ಮಾತನಾಡುತ್ತೇನೆ. ಅವರೊಬ್ಬ ರೌಡಿ ಶೀಟರ್‌ ಆಗಿದ್ದಾರೆ ಎಂದು ಪ್ರದೀಪ್‌ ಈಶ್ವರ್‌ ಹೇಳಿದ್ದಾರೆ. ನಮ್ಮ ನಾಯಕರ ಬಗ್ಗೆ ಮುನಿಸ್ವಾಮಿ ಮಾತನಾಡುತ್ತಾರೆ. ನಿಮ್ಮ ರೌಡಿ ಶೀಟರ್‌ ಬಗ್ಗೆ ನೀವು ಮಾತನಾಡಿ. ವೈಟ್‌ಫೀಲ್ಡ್‌ನಲ್ಲಿ ಕಂಪೌಂಡ್‌ ಹಾಕಿದ್ದಾರೆ. ಅದಕ್ಕೆ ಕೇಸ್‌ ಆಗಿದೆ. ಅದರ ಬಗ್ಗೆ ಬಿಜೆಪಿ ಮಾತನಾಡಲಿ ಎಂದಿದ್ದಾರೆ.

ರಾಜ್ಯದ ಎಂಪಿಗಳು ಸರ್ಕಾರದ ಪರವಾಗಿ ಇರಬೇಕು. ಕೇಂದ್ರದ ಜೊತೆ ಮಾತನಾಡಿ ಅಕ್ಕಿ ಕೊಡಿಸಬೇಕು. ಅದುಬಿಟ್ಟು ರಾಜಕೀಯ ಮಾತನಾಡುತ್ತಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ರಾಜ್ಯದ ಎಂಪಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಬಡವರ ಹೊಟ್ಟೆ ಮೇಲೆ ಇವರೆಲ್ಲಾ ಸೇರಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ನಾನು ಯಾರನ್ನೂ ಪರ್ಸನಲ್‌ ಆಗಿ ಟಾರ್ಗೆಟ್‌ ಮಾಡೋದಿಲ್ಲ. ನೀವು ಮಾತನಾಡಿದ್ರೆ ನಾವು ಮಾತನಾಡುತ್ತೇವೆ. ಚೈಲ್ಟ್‌ ಆರ್ಟಿಸ್ಟ್‌ ಥರ ಎಂಪಿ ಆಡ್ತಾರೆ. ಎಂಪಿ ಅಂದರೆ, ಗಾಂಭಿರ್ಯ ಇರಬೇಕು. ನಾನು‌ ಮಾಡಿರುವ ಆರೋಪಕ್ಕೆ ಉತ್ತರ ನೀಡಿ. ನನ್ನ ಕರೆಯೋಕೆ ಹೇಳಿ‌ ನಾನು ರಾಜಕೀಯ ಪಾಠ ಮಾಡುತ್ತೇನೆ ಎಂದು ಪ್ರದೀಪ್‌ ಈಶ್ವರ್‌ ಹೇಳಿದ್ದಾರೆ.

'ನಾನು ಯಾರನ್ನೂ ‌ಸೋಲಿಸಿದ್ದು ಅನ್ನೋದು ಗೊತ್ತಲ್ವ? ಇಷ್ಟು ಬಿಜೆಪಿ ಸಂಸದರಿಗೆ ಸ್ವತಃ ಬಲದ ಮೇಲೆ ಗೆಲ್ಲುವ ಸಾಮರ್ಥ್ಯ ಇಲ್ಲ. ಮೋದಿ‌ ಹೆಸರು ಹೇಳಿಕೊಂಡು ಹೋಗ್ತಾರೆ. ಈ ಬಾರಿ ಸ್ವತಃ ಸಾಮರ್ಥ್ಯದ ಮೇಲೆ ಚುನಾವಣೆ ಮಾಡಲಿ ಎಂದು ಎಂಪಿಗಳಿಗೆ ಪ್ರದೀಪ್‌ ಈಶ್ವರ್‌ ಸವಾಲು ಹಾಕಿದ್ದಾರೆ. ಬಿಜೆಪಿ ಸಂಸದರು ಬಹಿರಂಗ ಚರ್ಚೆಗೆ ಬರಲಿ. ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಚರ್ಚೆಗೆ ಬರಲಿ. ಬಹಿರಂಗ ವೇದಿಕೆಯಲ್ಲಿ ಚರ್ಚೆ ಮಾಡೋಣ. ಕಾಂಗ್ರೆಸ್ ಸರ್ಕಾರ ಸಾಧನೆ, ಬಿಜೆಪಿ ಸರ್ಕಾರ ಸಾಧನೆ ಮಾತನಾಡೋಣ. ಜನರಿಗೆ ದಾರಿ ತಪ್ಪಿಸೋದು ಬೇಡ. ಜನರ ಮುಂದೆ ಚರ್ಚೆ ಮಾಡೋಣ ಎಂದು ಬಿಜೆಪಿ ಎಂಪಿಗಳಿಗೆ ಶಾಸಕ ಪ್ರದೀಪ್ ಈಶ್ವರ್ ಸವಾಲು ಎಸೆದಿದ್ದಾರೆ.

ಅನ್ನದಾತರಲ್ಲಿ ರಾಜಕೀಯ ಬೇಡ, ತಿಂಗಳಿಗೊಮ್ಮೆ ರೈತರ ಸಮಾವೇಶ: ಶಾಸಕ ಪ್ರದೀಪ್‌ ಈಶ್ವರ್‌

ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಮುನಿಸ್ವಾಮಿ, ಪ್ರದೀಪ್‌ ಈಶ್ವರ್‌ ಬಗ್ಗೆ ಮಾತನಾಡುತ್ತಾ ಮೊದಲ ಬಾರಿಗೆ ಶಾಸಕರಾಗಿರುವ ಆತ, 2ನೇ ಹುಚ್ಚ ವೆಂಕಟ್‌ ರೀತಿ ಆಡುತ್ತಿದ್ದಾರೆ. ಇಂಥಾ ಡ್ರಾಮಾ ಕಂಪನಿಗಳನ್ನು ತುಂಬಾ ನೋಡಿದ್ದೇನೆ. 2002ರಿಂದಲೂ ನಾನು ರಾಜಕೀಯದಲ್ಲಿದ್ದೇನೆ. ಪ್ರದೀಪ್‌ ಈಶ್ವರ್‌ಗೆ ಪ್ರಬುದ್ಧತೆ ಇಲ್ಲ. ಮಕ್ಕಳಿಗೆ ಪಾಠ ಮಾಡಿ ಬಾಯಿ ಬಡ್ಕೊಳ್ಳೋದಲ್ಲ. ನನ್ನ ಹತ್ರ ರಾಜಕೀಯದ ಟ್ಯೂಶನ್‌ಗೆ ಬರಲಿ ಎಂದು ಹೇಳಿದ್ದರು.

ಚುನಾವಣಾ ಭರವಸೆ ಈಡೇರಿಸಲು ಸರ್ಕಾರ ಬದ್ಧ: ಶಾಸಕ ಪ್ರದೀಪ್‌ ಈಶ್ವರ್‌

Latest Videos
Follow Us:
Download App:
  • android
  • ios