ಅಕ್ಕಿ ರಾಜಕೀಯ: ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಸಂಸದ ಮುನಿಸ್ವಾಮಿ

ಗೃಹಲಕ್ಷ್ಮೀ ಯೋಜನೆಯಲ್ಲಿ ಮನೆ ಯಾಜಮಾನಿಗೆ 2 ಸಾವಿರ ರು. ನೀಡುವುದಾಗಿ ಘೋಷಿಸಿದ್ದು, ಇದರಿಂದ 3-4 ಮಂದಿ ಮಹಿಳೆಯರು ಇರುವಂತ ಮನೆಗಳಲ್ಲಿ ಮನೆ ಯಾಜಮಾನಿ ನಾನು, ನೀನು ಎಂದು ಒಳ ಕಿತ್ತಾಟಗಳು ಆರಂಭವಾಗಿದೆ: ಎಸ್‌.ಮುನಿಸ್ವಾಮಿ 

BJP MP Muniswamy Slams Karnataka Congress Government grg

ಕೋಲಾರ(ಜೂ.22): ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತಾಡಿಕೊಂಡು ಅನ್ನಭಾಗ್ಯದ 10 ಕೆಜಿ ಅಕ್ಕಿ ಭರವಸೆ ನೀಡಿದ್ದಾರೆ. ಆದರೆ ಕೇಂದ್ರದ ಪ್ರಧಾನಿ ಆಗಲಿ, ಆಹಾರ ಸಚಿವರ ಬಳಿ ಮಾತಾಡಿಕೊಂಡು ಭರವಸೆ ಕೊಟ್ಟಿಲ್ಲ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸಂಸದ ಎಸ್‌.ಮುನಿಸ್ವಾಮಿ ಕಿಡಿಕಾರಿದ್ದಾರೆ.

ನಗರದ ಮಿನಿ ಕ್ರೀಡಾಂಗಣದಲ್ಲಿ 9ನೇ ಯೋಗದಿನಾಚರಣೆ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಅಕ್ಕಿಯಲ್ಲಿ ರಾಜಕೀಯ ಶುರು ಮಾಡಿರುವ ಕಾಂಗ್ರೆಸ್‌ ನಾಯಕರು ಮೊದಲು ಕೇಂದ್ರದ ಪಾಲು ಹೇಳುತ್ತಿರಲಿಲ್ಲ, ಈಗ 5 ಕೆ.ಜಿ ಅಕ್ಕಿ ಕೇಂದ್ರದ್ದು ಎಂದು ನಿಜ ಹೇಳುತ್ತಿದ್ದಾರೆ ಎಂದರು.

ಬಿಜೆಪಿ ಮುಖಂಡರಿಂದಲೇ ಪಕ್ಷಕ್ಕೆ ಸೋಲು: ಸಂಸದ ಮುನಿಸ್ವಾಮಿ ಬೇಸರ

ಜನರಿಗೆ ಮಾತು ಕೊಟ್ಟು ಈಗ ಕೇಂದ್ರದ ಮೇಲೆ ಗೂಬೆ ಕೂರಿಸುವ ಹುನ್ನಾರ ನಡೆಯುತ್ತಿದೆ. ಅವರಿಗೆ ನಾಚಿಕೆ ಆಗಬೇಕು, ಅವರ ಯೋಗ್ಯತೆ ಏನು ಎಂದು ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಗೃಹಜ್ಯೋತಿಗೂ ಸಹ ಹಲವು ಷರತ್ತುಗಳನ್ನ ಹಾಕಿ ಮೋಸ ಮಾಡುತ್ತಿದ್ದಾರೆ. ಅಕ್ಕಿ ಕಾಳ ಸಂತೆಯಲ್ಲಿ ಖರೀದಿ ಮಾಡಿ ಕೊಡುತ್ತೇವೆ ಎನ್ನುತ್ತಿದ್ದಾರೆ. ದಯವಿಟ್ಟು ನೀವು ಅಕ್ಕಿ ಕೊಡಿ, ಇಲ್ಲವಾದಲ್ಲಿ ಹಣದ ರೂಪದಲ್ಲಿ ಕೊಡಿ ಎಂದು ಒತ್ತಾಯ ಮಾಡಿದರು.

ಡಿಸಿಸಿ ಬ್ಯಾಂಕ್‌ನಲ್ಲಿ ಸಾವಿರಾರು ನಕಲಿ ಸಂಘಗಳ ಮೂಲಕ ಸಾಲ ನೀಡಿ ಸಾಲ ಮನ್ನಾ ಮಾಡುವಂತೆ ಕಾಂಗ್ರೆಸ್ಸಿನವರೇ ಕುತಂತ್ರ ಮಾಡಿಸುತ್ತಿದ್ದಾರೆ. ವೇಮಗಲ್‌ನಲ್ಲಿ ಸಿದ್ದರಾಮಯ್ಯ ಮೂಲಕ ಸಾಲಮನ್ನಾ ಮಾಡುವಂತೆ ಒತ್ತಡ ಹೇರಿಸಿ ಸಾಲಮನ್ನಾ ಮುಂದಿಟ್ಟುಕೊಂಡು ಕಾಂಗ್ರೆಸ್‌ ಪಕ್ಷ ಹಣ ಮಾಡಲು ಮುಂದಾಗಿದೆ, ಇದಕ್ಕೆ ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ ಕೈಜೋಡಿಸಿದೆ. ಮಹಿಳೆಯರು ಯಾವುದೇ ಕಾರಣಕ್ಕೂ ಸಾಲ ಕಟ್ಟಲು ಮುಂದಾಗಬೇಡಿ, ಕೊಟ್ಟಮಾತಂತೆ ಸಿದ್ದರಾಮಯ್ಯ ನಡೆದುಕೊಳ್ಳಲಿ ಎಂದು ಸಂಸದ ಮುನಿಸ್ವಾಮಿ ತಿಳಿಸಿದರು.

ಗೃಹಲಕ್ಷ್ಮೀ ಯೋಜನೆಯಲ್ಲಿ ಮನೆ ಯಾಜಮಾನಿಗೆ 2 ಸಾವಿರ ರು. ನೀಡುವುದಾಗಿ ಘೋಷಿಸಿದ್ದು, ಇದರಿಂದ 3-4 ಮಂದಿ ಮಹಿಳೆಯರು ಇರುವಂತ ಮನೆಗಳಲ್ಲಿ ಮನೆ ಯಾಜಮಾನಿ ನಾನು, ನೀನು ಎಂದು ಒಳ ಕಿತ್ತಾಟಗಳು  ಆರಂಭವಾಗಿದೆ, ಕಾಂಗ್ರೆಸ್‌ ಪಕ್ಷವು ಮೊದಲಿಂದಲೂ ಒಡೆದು ಆಳುವ ನೀತಿ ಆಳವಡಿಸಿಕೊಂಡಿದ್ದು, ಗ್ಯಾರಂಟಿ ಯೋಜನೆಗಳಲ್ಲೂ ಕುಟುಂಬದ ಒಗ್ಗಟ್ಟು ಒಡೆದು ಆಳುವ ನೀತಿ ಅಳವಡಿಸಿಕೊಂಡಿದೆ ಎಂದು ವ್ಯಂಗವಾಡಿದರು.

ಕೋಲಾರಕ್ಕೆ ಸಿಎಂ ನೀಡಿದ್ದ ಭರವಸೆ ಈಡೇರಿಸಲು ಶ್ರಮಿಸುವೆ: ಸಚಿವ ಬೈರತಿ ಸುರೇಶ್‌

ಇವಿಎಂ ಹ್ಯಾಕ್‌ಮಾಡಿ ಗೆದ್ರಾ?

ಸರ್ವರ್‌ ಹ್ಯಾಕ್‌ ಮಾಡಿದ್ದಾರೆ ಎನ್ನುವ ಸತೀಶ್‌ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಸತೀಶ್‌ ಜಾರಕಿಹೊಳಿಗೆ ಸರ್ವರ್‌ ಬಗ್ಗೆ ಗಂಧಗಾಳಿ ಗೊತ್ತಿಲ್ಲ, ಕಳೆದ ಬಾರಿ ಇವಿಎಂ ಮೆಷನ್‌ ಹ್ಯಾಕ್‌ ಮಾಡಿದ್ದಾರೆ ಅಂದಿದ್ದರು, ಈ ಭಾರಿ ಅವರು ಇವಿಎಂ ಹ್ಯಾಕ್‌ ಮಾಡಿ ಗೆದ್ರಾ. 135 ಶಾಸಕರು ಇವಿಎಂ ಹ್ಯಾಕ್‌ಮಾಡಿ ಗೆದ್ರಾ? ಕೋಟಿಗಟ್ಟಲೆ ಹಣ ಹೊಂದಿರುವವರು ಅವರು, 135 ಶಾಸಕರ ಗೆಲುವಿನ ಸಂಶಯ ಇದೆ ಇವಿಎಂ ಹ್ಯಾಕ್‌ ಮಾಡಿರುವ ರೀತಿಯೇ ವೆಬ್‌ಸೈಟ್‌ ಹ್ಯಾಕ್‌ ಮಾಡಿರುವ ಸಂಶಯವಿದೆ ಎಂದು ಟಾಂಗ್‌ ನೀಡಿದರು.

ಅನ್‌ ಎಜುಕೇಟೆಡ್‌ ಬಗ್ಗೆ ಹೆಚ್ವಿಗೆ ಮಾತನಾಡಲ್ಲ

ಇದೇ ವೇಳೆ ಮಾಲೂರು ಶಾಸಕ ನಂಜೇಗೌಡ ವಿರುದ್ದ ಹರಿಹಾಯ್ದ ಸಂಸದ ಮುನಿಸ್ವಾಮಿ, ಅನ್‌ ಎಜುಕೇಟೆಡ್‌ ಅವರ ಬಗ್ಗೆ ಹೆಚ್ವಿಗೆ ನಾನು ಮಾತನಾಡಲ್ಲ, ಅವರನ್ನ ಟೇಕಲ್‌ ಸುತ್ತಮುತ್ತ ಬೇರೆ ರೀತಿಯಲ್ಲೇ ಕರೆಯುತ್ತಾರೆ ಅಕ್ಕಿಕಳ್ಳ, ಹಾಲು ಕಳ್ಳ, ಮಣ್ಣು ಕಳ್ಳ, ಕಲ್ಲು ಕಳ್ಳ ಎನ್ನುತ್ತಾರೆ. ಅವರಿಗೆ ತಾಕತ್‌ ಇದ್ದರೆ ಅವರು ಏನ್‌ ಅಭಿವೃದ್ಧಿ ಮಾಡಿದ್ದಾರೆ ಹೇಳಲಿ, ಕೇಂದ್ರದ ಯೋಜನೆಗಳನ್ನ ಸಹ ನಮ್ಮದು ಎಂದು ಹೇಳಿಕೊಂಡು ಓಡಾಡುತ್ತಾರೆ. ನಾವು ಕೊಟ್ಟಿರುವ ಎಲ್ಲಾ ಯೋಜನೆಗಳ ಹಣವನ್ನ ವಾಪಸ್‌ ಪಡೆದಿದ್ದಾರೆ. ನಾನು ಚಾಲೆಂಜ್‌ ಮಾಡುತ್ತೇನೆ, ಕೋಲಾರಕ್ಕೆ ಏನೇನ್‌ ತಂದಿದ್ದಾರೆ ಎಂದು ತಾಕತ್‌ ಇದ್ರೆ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

Latest Videos
Follow Us:
Download App:
  • android
  • ios