Asianet Suvarna News Asianet Suvarna News

ಟಿಪ್ಪು ಪ್ರತಿಮೆ ನಿರ್ಮಿಸಿದರೆ ಜನರೇ ಮನೆಗೆ ಕಳಿಸ್ತಾರೆ- ಪ್ರಹ್ಲಾದ್‌ ಜೋಶಿ

ಮೈಸೂರಿನಲ್ಲಿ ಟಿಪ್ಪು ಸುಲ್ತಾನ್‌ ಪ್ರತಿಮೆ ನಿರ್ಮಾಣ ಮಾಡಿದರೆ ಮತ್ತು ಈ ಕಾರ್ಯಕ್ಕೆ ಬೆಂಬಲ ನೀಡಿದವರನ್ನು ಜನರೇ ಮನೆಗೆ ಕಳುಹಿಸುತ್ತಾರೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

If a statue of Tipu is built, people will spend it at home Prahlad Joshi SAT
Author
First Published Nov 12, 2022, 4:52 PM IST


ಹುಬ್ಬಳ್ಳಿ (ನ.12): ಮೈಸೂರಿನಲ್ಲಿ ಟಿಪ್ಪು ಸುಲ್ತಾನ್‌ ಪ್ರತಿಮೆ ನಿರ್ಮಾಣ ಮಾಡಿದರೆ ಮತ್ತು ಈ ಕಾರ್ಯಕ್ಕೆ ಬೆಂಬಲ ನೀಡಿದವರನ್ನು ಜನರೇ ಮನೆಗೆ ಕಳುಹಿಸುತ್ತಾರೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.  ಟಿಪ್ಪು ಒಬ್ಬ ಮತಾಂಧ, ದೇಶದ್ರೋಹಿ, ಟಿಪ್ಪು ಕನ್ನಡ ವಿರೋಧಿ ಇದು ನನ್ನ ವಯಕ್ತಿಕ ನಿಲುವು ಮತ್ತು ಪಕ್ಷದ ನಿಲವು ಆಗಿದೆ ಎಂದು ಹೇಳಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್‌ ಜೋಶಿ, ರಾಜ್ಯದಲ್ಲಿ ಟಿಪ್ಪು ಜಯಂತಿ (Tippu Jayanthi) ಆಚರಣೆಗೆ ನಮ್ಮ ವಿರೋಧವಿದೆ. ಜತೆಗೆ ಸರ್ಕಾರದಿಂದ ಟಿಪ್ಪು ಜಯಂತಿ ಮಾಡಬಾರದು ಎಂದು ಸೂಚನೆಯಿದೆ. ಈದ್ಗಾ ಮೈದಾನದಲ್ಲಿ (Idga Ground) ಟಿಪ್ಪು ಜಯಂತಿ ಮಾಡುವುದಕ್ಕೆ ನಮ್ಮ ಒಪ್ಪಿಗೆಯಿಲ್ಲ. ಅನೇಕರಿಗೆ ಟಿಪ್ಪು ಸುಲ್ತಾನ್‌ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ.  ಟಿಪ್ಪು ಒಬ್ಬ ಮತಾಂಧ (Fanatic), ದೇಶದ್ರೋಹಿ (Traitor), ಟಿಪ್ಪು ಕನ್ನಡ ವಿರೋಧಿ ಎಂಬ ನಿಲುಗಳಿವೆ. ಯಾವುದೇ ಮೂರ್ತಿ ನಿರ್ಮಾಣ ಮಾಡಬೇಕು ಎಂದರೂ ಅದಕ್ಕೆ ಸರ್ಕಾರದ ಅನುಮತಿ ಬೇಕು. ಅನುಮತಿ ಇಲ್ಲದೆ ನಿರ್ಮಾಣ ಮಾಡದರೆ ಜನರೇ ಇದಕ್ಕೆಲ್ಲ ಉತ್ತರ ಕೊಡುತ್ತಾರೆ. ಆದರೆ, ನಾವು ಯಾವ ಸಂದರ್ಭದಲ್ಲಿ ಇದಕ್ಕೆ ಉತ್ತರ ಕೊಡಬೇಕು ಅದನ್ನು ಕಾದು ನೋಡಿ ಉತ್ತರಿಸುತ್ತೇವೆ. ಈಗ ನಾವು ಬೇಜಾಬ್ದರಿಯಿಂದ (Careless) ಮಾತಾಡೋಕೆ ಆಗುವುದಿಲ್ಲ ಎಂದು ತನ್ವೀರ್ ಸೇಠ್‌ಗೆ (Tanveer Sait) ತಿರುಗೇಟು ನೀಡಿದ್ದಾರೆ. ಎಲ್ಲರ ವಿರೋಧದ ನಡುವೆಯೂ ಟಿಪ್ಪು ಪ್ರತಿಮೆ ನಿರ್ಮಿಸಿ ಊದಭತ್ತಿ ಬೆಳಗಿ, ಆರತಿ ಮಾಡುತ್ತಾರಾ ನೋಡೋಣ. ಇದು ತುಷ್ಟೀಕರಣ ರಾಜಕಾರಣಕ್ಕೆ ವೇದಿಕೆಯಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಮೈಸೂರಿನಲ್ಲಿ ಮತ್ತೆ ಹೊತ್ತಿಕೊಳ್ತಾ ಟಿಪ್ಪು ವಿವಾದದ ಕಿಡಿ

ದೇವೇಗೌಡರಿಗೆ ಸ್ವತಃ ಸಿಎಂ ಆಹ್ವಾನ:
ಕೆಂಪೇಗೌಡ ಪ್ರತಿಮೆಗೆ ದೇವೆಗೌಡ ಅಹ್ವಾನ ವಿಚಾರವಾಗಿ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai), ಸಚಿವರಾದ ಆರ್. ಅಶೋಕ್, ಅಶ್ವಥ್ ನಾರಾಯಣ ಅವರೊಂದಿಗೆ ಮಾತನಾಡಿದ್ದೇನೆ. ದೇವೆಗೌಡ ಅವರು ನಮ್ಮ ರಾಜ್ಯದ ಒಬ್ಬರೇ ಮಾಜಿ ಪ್ರಧಾನಿ ಆಗಿದ್ದಾರೆ. ಈಗ ಪ್ರತಿಮೆ ಉದ್ಘಾಟನೆಗೆ ಅವರನ್ನು ಕರೆದಿಲ್ಲ ಎನ್ನುವುದು ಸರಿಯಲ್ಲ. ಸ್ವತಃ ಮುಖ್ಯಮಂತ್ರಿ ಅವರು ದೇವೇಗೌಡರನ್ನು (Devegowda)ಆಹ್ವಾನಿಸಿದ್ದಾಗಿ ನನಗೆ ಹೇಳಿದ್ದಾರೆ.  ಜತೆಗೆ, ಕಾರ್ಯಕ್ರಮಕ್ಕೆ ದೇವೆಗೌಡರು ಯಾಕೆ ಬಂದಿಲ್ಲ ಎನ್ನುವುದನ್ನು ವಿಚಾರಿಸುದಾಗಿ ತಿಳಿಸಿದ್ದಾರೆ. ಇನ್ನು ಎಚ್.ಡಿ. ಕುಮಾರಸ್ವಾಮಿ ಅವರ ಕುಟುಂಬ ಹಲವು ವರ್ಷಗಳಿಂದ ಮುಖ್ಯಮಂತ್ರಿ ಹಾಗೂ ಸಚಿವರು (Minister) ಆಗಿದ್ದಾರೆ. ಆದರೂ, ಅವರು ಕೆಂಪೇಗೌಡರ ಪ್ರತಿಮೆಯನ್ನು(Statue) ಸ್ಥಾಪನೆ ಮಾಡುವುದಾಗಲೀ ಅಥವಾ ಹೆಸರು ಇಡುವ ಕಾರ್ಯ ಮಾಡಲಿಲ್ಲ.  ಅಧಿಕಾರದಲ್ಲಿ ಇರುವವರೆಗೂ ಅವರ ಕುಟುಂಬಕ್ಕೆ ಕೆಂಪೇಗೌಡರ ನೆನಪು ಕೂಡ ಆಗಲಿಲ್ಲ. ನಾವು ಮಾಡಲಾರದ್ದನ್ನು ಬಿಜೆಪಿ‌ ಮಾಡಿದೆ ಎಂದು ಕುಮಾರಸ್ವಾಮಿ, ಸಾರಾ ಮಹೇಶ್ ಹೊಟ್ಟೆ ಕಿಚ್ಚಿನಿಂದ (Stomach cramps) ಮಾತನಾಡುತ್ತಿದ್ದಾರೆ ಎಂದು ಪ್ರಹ್ಲಾದ್‌ ಜೋಶಿ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನಿಗೆ ಸಹವಾಸ ದೋಷ:
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (siddaramaiah) ಅವರು ರಾಹುಲ್‌ಗಾಂಧಿ (Rahul Gandhi) ನೆರಳಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ಬಾಯಿಗೆ ಬಂದಂತೆ ಏನೇನೋ ಮಾತಾಡುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ವಾರು ನಿನ್ನೆ ಮೂರ್ನಾಲ್ಕು ಅದ್ಭುತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದರಲ್ಲಿ ವಂದೇ ಭಾರತ ರೈಲು (Vande Bharath Train) ಭಾರತದಲ್ಲಿ ನಿರ್ಮಾಣವಾಗಿ, ಸಂಚಾರಕ್ಕೆ ಮುಕ್ತವಾಗಿರುವುದು ನಮಗೆಲ್ಲ ಸಂತೋಷ ತಂದಿದೆ. ಕಳೆದ 7 ವರ್ಷದಲ್ಲಿ ಕೇಂದ್ರ ಸರ್ಕಾರಿಂದ (Central Government) ರಾಜ್ಯಕ್ಕೆ ಅಭೂತ ಪೂರ್ವ ಬೆಂಬಲ ಸಿಕ್ಕಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ರೇಲ್ವೆ ಮಾರ್ಗದ (Railway Track) ವಿಸ್ತರಣೆ ಮತ್ತು ರೈಲುಗಳ ಸಂಚಾರದಲ್ಲಿ ಅಭೂತ ಪೂರ್ವ ಕೆಲಸ ಆಗಿದೆ. ಬರೋಬ್ಬರಿ 52 ಸಾವಿರ ಕಿಲೋ ಮೀಟರ್ ರೇಲ್ವೆ ವಿದ್ಯುತಿಕರಣ ಆಗಿದೆ. ಕಳೆದ ಏಳು ವರ್ಷದಲ್ಲಿ 30 ಸಾವಿರ ಕಿ.ಮೀ. ರೈಲು ಮಾರ್ಗ ನಿರ್ಮಿಸಲಾಗಿದೆ. ಕಾಂಗ್ರೆಸ್ ಸರ್ಕಾರ 50 ವರ್ಷದಲ್ಲಿ ಮಾಡಿದ ಸಾಧನೆಯನ್ನು ನಾವು ಕೇವಲ 7 ವರ್ಷದಲ್ಲಿ ಮಾಡಿದ್ದೇವೆ. ಆದರೆ, ಇತ್ತೀಚೆಗೆ ಜೋಡೋ (Jodo) ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಜತೆಯಲ್ಲಿ ನಡೆದಿರುವ ಸಿದ್ದರಾಮಯ್ಯ ಸಹವಾಸ ದೋಷದಿಂದ ರಾಹುಲ್ ಗಾಂಧಿ ತರಹ ಮಾತನಾಡುತ್ತಿದ್ದಾರೆ ಎಂದರು.

ಕರ್ನಾಟಕದಲ್ಲಿ 1000 ಯುವಕರಿಗೆ ಕೇಂದ್ರ ನೌಕರಿ: ಪ್ರಹ್ಲಾದ್‌ ಜೋಶಿ

ಎರಡು ವರ್ಷದಿಂದ ಅರ್ಹತೆ ಸಿಕ್ಕಿಲ್ಲ:
ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಯಾವುದೇ ಅಭಿವೃದ್ಧಿ (Devolopment) ಕಾರ್ಯಗಳನ್ನು ಮಾಡಿಲ್ಲ. ಅದಕ್ಕಾಗಿ ಎರಡು ಲೋಕಸಭೆ (Parliment)ಯಲ್ಲಿ ವಿರೋಧ ಪಕ್ಷದ ಅರ್ಹತೆಯೂ ಸಿಗಲಿಲ್ಲ.  ಈಗ ಕೇವಲ ಎರಡು ರಾಜ್ಯದಲ್ಲಿ ಕಾಂಗ್ರೆಸ್ (Congress)ಸರ್ಕಾರ ಅಧಿಕಾರದಲ್ಲಿದ್ದು, ಅದು ಕೂಡ ನಾಶವಾಗಲಿದೆ. ಇಷ್ಟಾದರೂ ಕಾಂಗ್ರೆಸ್‌ನ ದುರಹಂಕಾರ ಮಾತ್ರ ಕಡಿಮೆ ಆಗಿಲ್ಲ. ನಾವೇ ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಿಸಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ನೈಜವಾಗಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರೆಸ್ಯೂಲೇಶನ್ ಆಗಿತ್ತು. ಆದರೆ, ಕಾಂಗ್ರೆಸ್‌ನಿಂದ 2013 ಚುನಾವಣೆ (Election)ವೇಳೆ ಕೆಲಸ ಮಾಡಲಾಗಿತ್ತು. ಕಾಂಗ್ರೆಸ್‌ ಮುಖಂಡರಿಗೆ ಅಭಿವೃದ್ಧಿ ಹಾಗೂ ಜನರ ಕಲ್ಯಾಣ ಬೇಕಾಗಿಲ್ಲ. ಅವರಿಗೆ ಬೇಕಾಗಿರೋದು ರಾಜಕಾರಣ ಎಂದು ಕಿಡಿಕಾರಿದರು.

Follow Us:
Download App:
  • android
  • ios