Bengaluru crime: ವಾಟ್ಸಪ್‌ನಲ್ಲಿತ್ತು ಪತಿಯ ಸಲಿಂಗಕಾಮ ಪುರಾಣ: ಪತ್ನಿಯಿಂದ ಠಾಣೆಗೆ ದೂರು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಪತಿ ವಿರುದ್ಧ ಸಲಿಂಗ ಕಾಮದ ಆರೋಪ ಮಾಡಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಪತ್ನಿ ದೂರು ದಾಖಲಿಸಿದ್ದಾರೆ.
ಬೆಂಗಳೂರು (ಆ.17) : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಪತಿ ವಿರುದ್ಧ ಸಲಿಂಗ ಕಾಮದ ಆರೋಪ ಮಾಡಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಪತ್ನಿ ದೂರು ದಾಖಲಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ 29 ವರ್ಷದ ಮಹಿಳೆ ಆರೋಪ ಮಾಡಿದ್ದು, ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಮಲ್ಲತ್ತಹಳ್ಳಿಯಲ್ಲಿ ನೆಲೆಸಿರುವ ಆಕೆಯ ಪತಿ, ಅತ್ತೆ ಹಾಗೂ ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸೆಕ್ಷನ್ 377ಗೆ ಕೊಕ್ ನೀಡಿದ ಕೇಂದ್ರ, ಪುರುಷರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆಯೇ ಇಲ್ಲ!
3 ವರ್ಷವಾದರೂ ಮಿಲನಕ್ಕೆ ಒಪ್ಪದ ಪತಿ:
ಮೂರು ವರ್ಷಗಳ ಹಿಂದೆ ಸಾಫ್‌್ಟವೇರ್ ಎಂಜಿನಿಯರ್ ಜತೆ ಸಂತ್ರಸ್ತೆಗೆ ವಿವಾಹವಾಗಿದ್ದು, ಮದುವೆ ಬಳಿಕ ದಂಪತಿ ಮಲ್ಲತ್ತಹಳ್ಳಿಯಲ್ಲಿ ನೆಲೆಸಿದ್ದರು. ಸಂತ್ರಸ್ತೆ ಸಹ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಇನ್ನು ಮದುವೆ ವೇಳೆ ಆಕೆ ಪತಿಗೆ 160 ಗ್ರಾಂ ಚಿನ್ನಾಭರಣ ನೀಡಲಾಗಿತ್ತು. ಮದುವೆ ಬಳಿಕ ಕೆಲಸ ತೊರೆದ ಸಂತ್ರಸ್ತೆ ಮನೆಯಲ್ಲೇ ಇದ್ದರು. ಹೀಗಿರುವಾಗ ಕೌಟುಂಬಿಕ ಕಾರಣಗಳಿಗೆ ಸತಿ-ಪತಿ ಮಧ್ಯೆ ಮನಸ್ತಾಪವಾಗಿದೆ. ಮದುವೆಯಾಗಿ ಮೂರು ವರ್ಷಗಳ ಕಳೆದರೂ ತನ್ನೊಂದಿಗೆ ಪತಿಯ ಮಿಲನವಾಗಿರಲಿಲ್ಲ. ಇತ್ತ ಮಕ್ಕಳ ವಿಚಾರವಾಗಿ ಸಂಬಂಧಿಕರು ಪ್ರಶ್ನಿಸುತ್ತಿದ್ದರು. ಈ ಸಂಬಂಧ ವೈದ್ಯರ ಬಳಿ ತೆರಳಿ ಚಿಕಿತ್ಸೆಗೊಳಾಗದವು. ಆಗ ಸಂತಾನ ಪಡೆಯಲು ಸಮಸ್ಯೆ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದರು ಎಂದು ದೂರಿನಲ್ಲಿ ಹೇಳಿದ್ದಾರೆ.
ಸಲಿಂಗಿ ಎಂದು ಹೀಯಾಳಿಸ್ತಿದ್ದ ಸೀನಿಯರ್ಸ್: ಹಾಸ್ಟೆಲ್ ಬಾಲ್ಕನಿಯಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ
ಇದಾದ ಬಳಿಕವು ನನ್ನೊಂದಿಗೆ ದೈಹಿಕ ಸಂಪರ್ಕಕ್ಕೆ ಪತಿ ನಿರಾಕರಿಸುತ್ತಿದ್ದರು. ಕೊನೆಗೆ ಕೃತಕ ಗರ್ಭಧಾರಣೆ ಮಾಡಿಸಿಕೊಳ್ಳಲು ಇಚ್ಚಿಸಿ ವೈದ್ಯರನ್ನು ಸಂಪರ್ಕಿಸಿದಾಗ ವೈದ್ಯರು ತಿರಸ್ಕರಿಸಿದರು. ಈ ಬೆಳವಣಿಗೆಯ ಹಿನ್ನೆಲೆ ಪತಿ ನಡವಳಿಕೆ ಮೇಲೆ ಅನುಮಾನ ಮೂಡಿತು. ಆಗ ಅವರ ಮೊಬೈಲ್‌ನಲ್ಲಿ ವಾಟ್ಸಾಪ್ ಹಾಗೂ ಮೆಸೆಂಜರ್ ಪರಿಶೀಲಿಸಿದಾಗ ಪರ-ಪುರುಷನೊಂದಿಗೆ ದೈಹಿಕ ಸಂಪರ್ಕವಿರುವುದು ಗೊತ್ತಾಯಿತು. ಈ ಬಗ್ಗೆ ಪ್ರಶ್ನಿಸಿದಾಗ ನನ್ನ ಮೇಲೆ ಪತಿ ಗಲಾಟೆ ಶುರು ಮಾಡಿದ್ದರು. ನನ್ನ ಪತಿ ಸಲಿಂಗಕಾಮಿ ಆಗಿದ್ದು, ಈ ವಿಚಾರವನ್ನು ಗೌಪ್ಯವಾಗಿಟ್ಟು ಕಿರುಕುಳ ನೀಡುತ್ತಿದ್ದರು. ನನ್ನ ಮೇಲೆ ದೌರ್ಜನ್ಯಕ್ಕೆ ಅತ್ತೆ-ಮಾವ ಸಹ ನೆರವು ನೀಡಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.