ಸೆಕ್ಷನ್‌ 377ಗೆ ಕೊಕ್‌ ನೀಡಿದ ಕೇಂದ್ರ, ಪುರುಷರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆಯೇ ಇಲ್ಲ!

Section 377 dropped in bill: ಪ್ರಸ್ತಾವಿತ ಕಾನೂನು ಅತ್ಯಾಚಾರದಂತಹ ಲೈಂಗಿಕ ಅಪರಾಧಗಳನ್ನು ಮಹಿಳೆ ಅಥವಾ ಮಗುವಿನ ವಿರುದ್ಧ ಪುರುಷನ ಕೃತ್ಯ ಎಂದು ವ್ಯಾಖ್ಯಾನಿಸುತ್ತದೆ. ಪ್ರಸ್ತುತ, ಪುರುಷರ ಮೇಲಿನ ಲೈಂಗಿಕ ಅಪರಾಧಗಳು ಸೆಕ್ಷನ್ 377 ರ ಅಡಿಯಲ್ಲಿ ವ್ಯಾಪ್ತಿಗೆ ಬರುತ್ತವೆ.
 

Parliament IPC CRPC Bill Change Section 377 dropped no punishment for sex offences against men san

ನವದೆಹಲಿ (ಆ.11): ಭಾರತದಲ್ಲಿ ಅಪರಾಧಗಳಿಗೆ ಶಿಕ್ಷೆಯನ್ನು ವ್ಯಾಖ್ಯಾನಿಸುವ ಮತ್ತು ಸೂಚಿಸುವ ಕಾನೂನುಗಳ ನೀತಿ ನಿಯಮಾವಳಿಯಾದ ಭಾರತೀಯ ದಂಡ ಸಂಹಿತೆಯನ್ನು ಭಾರತೀಯ ನ್ಯಾಯ ಸಂಹಿತೆಯಾಗಿ ಪರಿಶೀಲನೆ ಮಾಡಲು ಸರ್ಕಾರ ಮುಂದಾಗಿದೆ. ಶುಕ್ರವಾರ ಸಂಸತ್ತಿನಲ್ಲಿ ಅಮಿತ್‌ ಶಾ ಈ ಮಸೂದೆಯನ್ನು ಮಂಡನೆ ಮಾಡಿದ್ದಾರೆ. ಆದರೆ, ಪ್ರಸ್ತುತ ಭಾರತೀಯ ದಂಡ ಸಂಹಿತೆಯಲ್ಲಿ ಇರುವ ಸೆಕ್ಷನ್ 377 ಅನ್ನು ಕೈಬಿಡುವುದು ಪ್ರಸ್ತಾಪಿಸಲಾದ ಬದಲಾವಣೆಗಳಲ್ಲಿ ಒಂದಾಗಿದೆ. ವಿಚಾರ ಏನೆಂದರೆ, ಹೊಸ ಕಾನೂನಿನ ಅಡಿಯಲ್ಲಿ ಪುರುಷರ ವಿರುದ್ಧ ಅಸ್ವಾಭಾವಿಕ ಲೈಂಗಿಕ ಅಪರಾಧಗಳಿಗೆ ಯಾವುದೇ ಶಿಕ್ಷೆಯನ್ನು ತಿಳಿಸಿಲ್ಲ. ಪ್ರಸ್ತಾವಿತ ಕಾನೂನಿನಲ್ಲಿ ಅತ್ಯಾಚಾರದಂತಹ ಲೈಂಗಿಕ ಅಪರಾಧಗಳನ್ನು ಮಹಿಳೆ ಅಥವಾ ಮಗುವಿನ ವಿರುದ್ಧ ಪುರುಷನ ಕೃತ್ಯ ಎಂದು ಮಾತ್ರವೇ ವ್ಯಾಖ್ಯಾನ ಮಾಡುತ್ತದೆ. ಈಗ ಇರುವ ಭಾರತೀಯ ನೀತಿ ಸಂಹಿತೆಯಲ್ಲಿ ಪುರುಷರ ಮೇಲಿನ ಲೈಂಗಿಕ ಅಪರಾಧಗಳು ಸೆಕ್ಷನ್ 377 ರ ಅಡಿಯಲ್ಲಿ ವ್ಯಾಪ್ತಿಗೆ ಬರುತ್ತವೆ.

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 377 ಪ್ರಕಾರ, 'ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಗಳೊಂದಿಗೆ ಪ್ರಕೃತಿಯ ಕ್ರಮಕ್ಕೆ ವಿರುದ್ಧವಾಗಿ ಅಂದರೆ ಅಸ್ವಾಭಾವಿಕವಾಗಿ, ಅವರ ಸ್ವಯಂಪ್ರೇರಣೆಯಿಂದ ದೈಹಿಕ ಸಂಭೋಗವನ್ನು ನಡೆಸಿದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗುತ್ತಾರೆ ಅಥವಾ ವಿಸ್ತರಿಸಬಹುದಾದ ಅವಧಿಗೆ 10 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಪಡೆಯುತ್ತಾರೆ ಮತ್ತು ದಂಡಕ್ಕೆ ಸಹ ಹೊಣೆಗಾರರಾಗಿರುತ್ತಾರೆ' ಎಂದು ಹೇಳುತ್ತದೆ.

ಇದಕ್ಕೂ ಮುನ್ನ ಅಂದರೆ, 2018ರಲ್ಲಿ ಸುಪ್ರೀಂ ಕೋರ್ಟ್‌ ಸೆಕ್ಷನ್‌ 377 ವಿಚಾರವನ್ನು ಕೋರ್ಟ್‌ನಲ್ಲಿ ತಿಳಿಸಿತ್ತು. ಇಬ್ಬರು ವಯಸ್ಕರ ನಡುವೆ ಸಮ್ಮತಿಯಾಗಿ ನಡೆಯುವ ಲೈಂಗಿಕ ಕ್ರಿಯೆಗಳು ಯಾವುದೇ ಕಾರಣಕ್ಕೂ ಕ್ರಿಮಿನಲ್‌ ಅಪರಾಧವಾಗುವುದಿಲ್ಲ. ಇದರಿಂದಾಗಿ ಸಲಿಂಗ ಕಾಮ ಎನ್ನುವುದು ಅಪರಾಧವಲ್ಲ ಎಂದು ತಿಳಿಸಿತ್ತು.

ಇನ್ಮುಂದೆ ದೇಶದ್ರೋಹ ಕಾನೂನು ರದ್ದು; ಬ್ರಿಟಿಷರ ಕಾಲದ ಐಪಿಸಿ, ಸಿಆರ್‌ಪಿಸಿ ಸೇರಿ 3 ಕಾಯ್ದೆ ಬದಲು: ಅಮಿತ್‌ ಶಾ ಮಹತ್ವದ ಘೋಷಣೆ

"ಸೆಕ್ಷನ್ 377 ಒಪ್ಪಿಗೆಯ ಅಸ್ವಾಭಾವಿಕ ಲೈಂಗಿಕತೆಯನ್ನು ಅಪರಾಧೀಕರಿಸುವುದು ಸಾಧ್ಯವಿಲ್ಲ. ಇದು ಅಸಮರ್ಥನೀಯ ಮತ್ತು ಸ್ಪಷ್ಟವಾಗಿ ನಿರಂಕುಶ ಎನ್ನವುದು ನಮ್ಮ ಅಭಿಪ್ರಾಯ. ಸಮಾನತೆಯ ಹಕ್ಕನ್ನು ಇದು ಭಾಗಶಃ ಉಲ್ಲಂಘಿಸುತ್ತದೆ' ಎಂದು ಐದು ನ್ಯಾಯಾಧೀಶರ ಪೀಠವು ಸೆಪ್ಟೆಂಬರ್ 6, 2018 ರಂದು ತೀರ್ಪು ನೀಡಿತ್ತು. ಆದರೆ, ಪ್ರಾಣಿಗಳು ಮತ್ತು ಮಕ್ಕಳೊಂದಿಗೆ ಅಸ್ವಾಭಾವಿಕ ಲೈಂಗಿಕತೆಗೆ ಸಂಬಂಧಿಸಿದ ಸೆಕ್ಷನ್ 377 ರ ಅಂಶಗಳು ಜಾರಿಯಲ್ಲಿರುತ್ತವೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಶವಗಳ ಅತ್ಯಾಚಾರ ಮಾಡುವ ಕಾಮುಕರಿಗೆ ಶಿಕ್ಷೆಯ ಚೌಕಟ್ಟು ರೂಪಿಸಿ: ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್‌ ಶಿಫಾರಸು
 

Latest Videos
Follow Us:
Download App:
  • android
  • ios