*ಡಾ. ಕೆ.ಸುಧಾಕರ್‌ ಭೇಟಿ ಮಾಡಿ ಒತ್ತಾಯ*ನಾಳೆ ಸಭೆಗೆ ಆಹ್ವಾನಿಸಿದ ಆರೋಗ್ಯ ಸಚಿವ*ಕರ್ಫ್ಯೂ ಹಿಂತೆಗೆತಕ್ಕೆ ಮದ್ಯ ವ್ಯಾಪಾರಿಗಳಿಂದ ಕೂಡ ಆಗ್ರಹ

ಬೆಂಗಳೂರು (ಜ. 18): ರಾಜ್ಯ ಸರ್ಕಾರ ವಾರಾಂತ್ಯದ ಕರ್ಫ್ಯೂ (Weekend Curfew) ಮುಂದುವರಿಸದೆ ಮಹಾರಾಷ್ಟ್ರ ಮಾದರಿಯಲ್ಲಿ ಕೊರೋನಾ ನಿಯಂತ್ರಣಕ್ಕೆ (Covid 19) ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಮಹಾನಗರ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್‌ ಮನವಿ ಮಾಡಿದ್ದಾರೆ.ಸೋಮವಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆ ಹಿನ್ನೆಲೆ ಆರೋಗ್ಯ ಸಚಿವರನ್ನು ಭೇಟಿ ಮಾಡಿದ ಅವರು, ಸೋಂಕು ಹೆಚ್ಚಿರುವ ಮಹಾರಾಷ್ಟ್ರದಲ್ಲೇ ವಾರಾಂತ್ಯ ಕಪ್ರ್ಯೂ ಹೇರಿಲ್ಲ. ರಾತ್ರಿ ಕಪ್ರ್ಯೂ ಹೇರಿ ಹೋಟೆಲ್‌ಗಳಲ್ಲಿ ಶೇ.50 ಪ್ರವೇಶಾತಿಗೆ ಅವಕಾಶ ನೀಡಲಾಗಿದೆ. ಅದೇ ಮಾದರಿಯನ್ನು ರಾಜ್ಯದಲ್ಲಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂಬಂಧ ಶುಕ್ರವಾರ ಸಭೆ ಇದ್ದು, ಬುಧವಾರ ಚರ್ಚೆಗೆ ಬರಲು ಸಚಿವರು ಆಹ್ವಾನಿಸಿದರು ಎಂದು ಹೇಳಿದರು.

ಹೋಟೆಲ್‌ ಮಾಲೀಕರ ಸಂಘ, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ವಾರಾಂತ್ಯ ಕಪ್ರ್ಯೂವಿನಿಂದ ತೊಂದರೆಗೆ ಒಳಗಾದ ವಿವಿಧ ವಲಯಗಳ ಸಂಘದ ಮುಖ್ಯಸ್ಥರು ಜತೆ ಸೇರಿ ಬುಧವಾರ ಆರೋಗ್ಯ ಸಚಿವರು, ಸಾಧ್ಯವಾದರೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Weekend Curfew: ಸಾಲ ಇದೆ, ಬಾಡಿಗೆ ಕಟ್ಬೇಕು, ನಮ್ಮ ಜೀವ ಉಳಿಸಿ; ಸಿಡಿದೆದ್ದ ಮಾಲಿಕರು

ಈಗಾಗಲೇ ಎರಡು ವಾರ ವಾರಾಂತ್ಯದ ಕಪ್ರ್ಯೂ ಜಾರಿ ಮಾಡಿದ್ದರಿಂದ ರೈತರು, ರಸ್ತೆ ಬದಿ ವ್ಯಾಪಾರಿಗಳು, ಹೋಟೆಲ್‌ ಸೇರಿದಂತೆ ವಿವಿಧ ವಲಯದ ಕಾರ್ಮಿಕರು, ಮಾಲೀಕರಿಗೆ ಸಾಕಷ್ಟು ತೊಂದರೆ ಆಗಿದೆ. ಆದರೂ ಕೋವಿಡ್‌ ನಿಯಂತ್ರಿಸಲು ಸರ್ಕಾರ ವಾರಾಂತ್ಯ ಕಪ್ರ್ಯೂ ಮುಂದುವರಿಸುವ ಚಿಂತನೆಯಲ್ಲಿದೆ ಇದೆ ಎನ್ನಲಾಗಿದೆ. ಆದರೆ ಇದರಿಂದ ಯಾವುದೇ ಲಾಭವಿಲ್ಲ. ಕೊರೋನಾ ಮೂರನೇ ಅಲೆ ಅಷ್ಟೊಂದು ಪ್ರಬಲವಾಗಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. 

ಕೇವಲ ಜ್ವರ, ಶೀತ, ಕೆಮ್ಮು ಇದ್ದು, ಪರೀಕ್ಷೆ ಸಹ ಅಗತ್ಯವಿಲ್ಲ. ಸೂಕ್ತ ಚಿಕಿತ್ಸೆ ಮತ್ತು ಮುಂಜಾಗ್ರತೆ ಅಗತ್ಯ ಎಂದು ತಜ್ಞರು ಈಗಾಗಲೇ ತಿಳಿಸಿದ್ದಾರೆ ಎಂದು ಪುನರುಚ್ಚರಿಸಿದರು.ಸರ್ಕಾರ ಇದೆಲ್ಲವನ್ನೂ ಮನಗಂಡು ಶುಕ್ರವಾರ ಸಭೆಯಲ್ಲಿ ಕಪ್ರ್ಯೂ ಮುಂದುವರಿಸದೇ ಇರುವ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದು ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಇದನ್ನೂ ಓದಿ:Weekend Curfew: ರಾಜ್ಯಾದ್ಯಂತ ಉತ್ತಮ ಬೆಂಬಲ: ವ್ಯಾಪಾರವಿಲ್ಲದೆ ಕಂಗಾಲಾದ ಹೋಟೆಲ್‌ ಮಾಲೀಕರು..!

ವಾರಾಂತ್ಯ ಕರ್ಫ್ಯೂ ಹಿಂತೆಗೆತಕ್ಕೆ ಮದ್ಯ ವ್ಯಾಪಾರಿಗಳಿಂದ ಆಗ್ರಹ: ರಾಜ್ಯದ ಮದ್ಯ ಮಾರಾಟಗಾರರಿಗೆ ಆಗುತ್ತಿರುವ ನಷ್ಟವನ್ನು ತಪ್ಪಿಸಲು ಕೂಡಲೇ ವಾರಾಂತ್ಯ ಕಫ್ರ್ಯೂವನ್ನು ಹಿಂತೆಗೆದುಕೊಳ್ಳಬೇಕು ಎಂದು ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌(ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ) ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್‌ ಹೆಗ್ಡೆ, ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯ ವೆæೕಳೆ ಮದ್ಯ ಮಾರಾಟಗಾರರು ಸಾವಿರಾರು ಕೋಟಿ ರು. ನಷ್ಟಅನುಭವಿಸಿದ್ದಾರೆ. ಈಗ ಮೂರನೇ ಅಲೆಯ ನಿಯಂತ್ರಣಕ್ಕೆ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕಫ್ರ್ಯೂ ಮತ್ತು ರಾತ್ರಿ ಕಪ್ರ್ಯೂ, ಶೇ.50ರ ಗ್ರಾಹಕರ ಸಾಮರ್ಥ್ಯದ ನಿಯಮಗಳಿಂದ ಮದ್ಯ ಮಾರಾಟಗಾರರು ಭಾರೀ ನಷ್ಟಅನುಭವಿಸುತ್ತಿದ್ದಾರೆ. 

ಇದನ್ನೂ ಓದಿ:Covid Curfew: ಸರ್ಕಾರದ ವಿರುದ್ಧ ದಂಗೆಯೇಳಲು ಸಜ್ಜಾಗಿದೆ ಉದ್ಯಮ ಜಗತ್ತು!

ಈಗಾಗಲೇ ಆಗಿರುವ ಮತ್ತು ಮುಂದೆ ಆಗುವ ನಷ್ಟದಿಂದ ಮದ್ಯ ಮಾರಾಟಗಾರರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯಂತಹ ಘಟನೆಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ. ಹಾಗಾಗಿ ಕೂಡಲೇ ವಾರಾಂತ್ಯ ಕಫ್ರ್ಯೂವನ್ನು ಹಿಂತೆಗೆದುಕೊಳ್ಳಬೇಕು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಕೋವಿಡ್‌ 2ನೇ ಅಲೆಯ ಅವಧಿಯಲ್ಲಿ ನೀಡಿದಂತೆ ಬೆಳಗ್ಗೆ 8ರಿಂದ ಮಧ್ಯಾಹ್ನ 2 ಗಂಟೆವರೆಗಾದರೂ ಮದ್ಯ ಪಾರ್ಸೆಲ್‌ ನೀಡಲು ಅವಕಾಶ ನೀಡಬೇಕು. ರಾತ್ರಿ ಕಫ್ರ್ಯೂ ಅವಧಿಯನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿದ್ದಾರೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಗಮನಿಸಬೇಕು. ಕೇವಲ ಮದ್ಯ ಮಾರಾಟದ ಅಂಕಿ-ಅಂಶಗಳಿಂದ ಎಲ್ಲ ವರ್ಗದ ಮದ್ಯ ಮಾರಾಟಗಾರರಿಗೂ ಲಾಭಾಂಶ ಸಿಗುವುದಿಲ್ಲ. ಹಾಗಾಗಿ ಸರ್ಕಾರ ನಮ್ಮ ಮನವಿಗೆ ಆದಷ್ಟುಬೇಗ ಸ್ಪಂದಿಸಬೇಕೆಂದು ಅವರು ಕೋರಿದ್ದಾರೆ.