ಆಜಾನ್ ಸದ್ದು ಕೇಳಿಸುತ್ತಿದ್ದಂತೆ ಅರ್ಧಕ್ಕೆ ಮಾತು ನಿಲ್ಲಿಸಿ ಮೌನವಾಗಿ ಕುಳಿತ ಗೃಹ ಸಚಿವ!

ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಪಕ್ಕದ ಮಸೀದಿಯಿಂದ ಆಜಾನ್ ಸದ್ದು ಕೇಳಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅರ್ಧಕ್ಕೆ ಮಾತು ನಿಲ್ಲಿಸಿ ಕೆಲಕಾಲ ಮೌನವಾಗಿ ಕುಳಿತ ಘಟನೆ ನಡೆಯಿತು. ಆಜಾನ್ ಮುಗಿಯುವವರೆಗೆ ಮೌನವಾಗಿ ಕುಳಿತು ಬಳಿಕ ಮಾತು ಮುಂದುವರಿಸಿದರು.

Home Minister Dr G Parameshwar was silent to hearing sound of Azan at tumakuru rav

ತುಮಕೂರು (ನ.25):ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಪಕ್ಕದ ಮಸೀದಿಯಿಂದ ಆಜಾನ್ ಸದ್ದು ಕೇಳಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅರ್ಧಕ್ಕೆ ಮಾತು ನಿಲ್ಲಿಸಿ ಕೆಲಕಾಲ ಮೌನವಾಗಿ ಕುಳಿತ ಘಟನೆ ನಡೆಯಿತು. ಕೆಲ ಕಾಲ ಮೌನವಾಗಿದ್ದು, ಆಜಾದ್ ಮುಗಿದ ಬಳಿಕ ಮಾತು ಮುಂದುವರಿಸಿದರು.

ತುಮಕೂರಿನ ಚಿಲುಮೆ ಸಮುದಾಯ ಭವನದಲ್ಲಿ ನಡೆಯುತ್ತಿರುವ ಸುದ್ದಿಗೋಷ್ಠಿ. ಸ್ವತ್ತು ಕಳವು ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ಸ್ವತ್ತುಗಳ ಪ್ರದರ್ಶನ ಮತ್ತು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮ ಇದಾಗಿತ್ತು. ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿ ನಡೆಸುತ್ತಿದ್ದ ಗೃಹ ಸಚಿವ ಪರಮೇಶ್ವರ್. ಈ ವೇಳೆ ಆಜಾನ್ ಸದ್ದು ಕೇಳುತ್ತಿದ್ದಂತೆ ಅರ್ಧಕ್ಕೆ ಮಾತು ನಿಲ್ಲಿಸಿ ಸೈಲೆಂಟ್ ಆಗಿ ಕುಳಿತ ಗೃಹ ಸಚಿವ. ಸುಮಾರು ಒಂದು ನಿಮಿಷ ಕಾಲ ತಲೆ ಬಾಗಿಸಿ ಸುಮ್ಮನೆ ಕುಳಿತರು ಅಜಾನ್ ಮುಗಿದ ಬಳಿಕ ಮಾತು ಪ್ರಾರಂಭಿಸಿದರು.

ಡಿಕೆಶಿ ಕೇಸ್‌ ಭವಿಷ್ಯ ಸಿಬಿಐ, ಕೋರ್ಟ್‌ಗೆ ಬಿಟ್ಟದ್ದು: ಸಚಿವ ಪರಮೇಶ್ವರ್‌

ಕಳೆದ ಜೂನ್ ತಿಂಗಳಲ್ಲಿ ನಡೆದ ಬಕ್ರಿದ್ ಹಬ್ಬದ ಆಚರಣೆ ಸಂದರ್ಭದಲ್ಲಿ ಹಬ್ಬದಲ್ಲಿ ಪಾಲ್ಗೊಂಡು ನಮ್ಮ ಸರ್ಕಾರ ಅಧಿಕಾರ ಬಂದಿರುವುದು ಅಲ್ಲಾಹ್ ಕೃಪೆಯಿಂದ. ಮೊದಲಿಗೆ ನಾವು ಅಲ್ಲಾಹ್‌ನಿಗೆ ನಮನ ಸಲ್ಲಿಸ್ತೇವೆ ಎಂದು ಹೇಳಿದ್ದ ಗೃಹ ಸಚಿವ ಪರಮೇಶ್ವರ್, ಅದರಂತೆ ಇದೀಗ ಮಸೀದಿಯಿಂದ ಆಜಾನ್ ಕೂಗುವುದು ಕೇಳುತ್ತಿದ್ದಂತೆ ಅರ್ಧಕ್ಕೆ ಮಾತು ನಿಲ್ಲಿಸಿದ ಮೌನವಾದ ಪರಮೇಶ್ವರ್. ಸುಮಾರು ಒಂದು ನಿಮಿಷಗಳ ಕಾಲ ಮಾತನಾಡದೆ ಮೌನವಾಗಿ ತಲೆಬಾಗಿಸಿ ಕುಳಿತರು ನಂತರ ಆಜಾನ್ ಮುಗಿದ ಬಳಿಕವೇ ಮಾತು ಮುಂದುವರಿಸಿದರು.

ಅನಾಥಾಶ್ರಮ ಹೆಸರಲ್ಲಿ ತಾಲಿಬಾನ್ ಮಾದರಿ ಶಿಕ್ಷಣ ನೀಡ್ತಿರೋ ಆರೋಪ ; ಆ ಬಗ್ಗೆ ನನಗೆ ಗೊತ್ತಿಲ್ಲ ಎಂದ ಗೃಹಸಚಿವ!

ಈ ಹಿಂದೆ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ರಾಹುಲ್ ಗಾಂಧಿ ತುಮಕೂರಿಗೆ ಭೇಟಿ ನೀಡಿದ್ದ ವೇಳೆಯೂ ಇಂಥದೇ ಪ್ರಸಂಗ ಎದುರಾಗಿತ್ತು. ಅಂದು ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಸಭೆಯನ್ನುದ್ದೇಶಿಸಿ ಮಾತಾಡುವ ವೇಳೆ ಆಜಾನ್ ಕೂಗು ಕೇಳಿ ರಾಹುಲ್ ಗಾಂಧಿ ಅರ್ಧಕ್ಕೆ ಮಾತು ಮೊಟಕುಗೊಳಿಸಿ ಸೈಲೆಂಟ್ ಆಗಿದ್ದರು. ಆಜಾನ್ ಮುಗಿದ ಬಳಿಕೆ ಮಾತು ಮುಂದುವರಿಸಿದ್ದರು. ಇದೀಗ ಮತ್ತೆ ಅಂತಹದೇ ಪ್ರಸಂಗ ನಡೆದಿದೆ.

Latest Videos
Follow Us:
Download App:
  • android
  • ios