Corona, Omicron Update: ರಾಜ್ಯದಲ್ಲಿ ಕೊರೋನಾ, ಒಮಿಕ್ರಾನ್ ಆತಂಕ, ಇಲ್ಲಿದೆ ಅಂಕಿ-ಸಂಖ್ಯೆ
* ರಾಜ್ಯದಲ್ಲಿ ಕೊರೋನಾ, ಒಮಿಕ್ರಾನ್ ಆತಂಕ
* ಒಮಿಕ್ರಾನ್ ಪಾಸಿಟಿವ್ ಪ್ರಕರಣಗಳ ಒಟ್ಟು ಸಂಖ್ಯೆ 8
* ಇಂದು(ಶುಕ್ರವಾರ) 238 ಕೊರೋನಾ ಪಾಸಿಟಿವ್ ಕೇಸ್
ಬೆಂಗಳೂರು, (ಡಿ.17): ರಾಜ್ಯದಲ್ಲಿ ಇಂದು(ಶುಕ್ರವಾರ) ಒಟ್ಟು 238 ಕೊರೋನಾ (Coronavirus) ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 3 ಮರಣ ಪ್ರಕರಣ ದಾಖಲಾಗಿದೆ. ಇನ್ನು ರಾಜ್ಯದಲ್ಲಿ ಕೊರೋನಾ ರೂಪಾಂತರಿ ತಳಿ ಒಮಿಕ್ರಾನ್(Omicron variant) ಪಾಸಿಟಿವ್ ಪ್ರಕರಣಗಳ ಒಟ್ಟು ಸಂಖ್ಯೆ 8ಕ್ಕೆ ಏರಿದೆ.
ಈ ಮೂಲಕ, ಕರ್ನಾಟಕದಲ್ಲಿ(Karnataka) ಕೊರೋನಾ ಸೋಂಕಿತರ ಸಂಖ್ಯೆ 30,01,792 ಕ್ಕೆ ಏರಿಕೆಯಾಗಿದ್ರೆ, ಈವರೆಗೆ ಕೊರೋನಾ ಸೋಂಕಿಗೆ 38,282 ಜನ ಸಾವನ್ನಪ್ಪಿದ್ದಾರೆ. ಸೋಂಕಿತರ ಪೈಕಿ 29,56,405 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ರಾಜ್ಯದಲ್ಲಿ 7,076 ಕೊರೋನಾ ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.
Covid In Karnataka: ಅರ್ಧ ಗಂಟೆಯಲ್ಲೆ ಕೊರೋನಾ ವರದಿ, ಬಂದಿದೆ ಹೊಸ ಟೆಸ್ಟ್!
ಬೆಂಗಳೂರಿನಲ್ಲಿ(Bengaluru) ಇಂದು(ಡಿ.17) ಒಂದೇ ದಿನ 153 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೋನಾ ಪೀಡಿತರ ಸಂಖ್ಯೆ 12,59,738 ಕ್ಕೆ ಏರಿಕೆಯಾಗಿದೆ. 12,59,738 ಸೋಂಕಿತರ ಪೈಕಿ 12,37,765 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೋನಾ ಸೋಂಕಿನಿಂದ 2 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ನಗರದಲ್ಲಿ ಸೋಂಕಿನಿಂದ ಈವರೆಗೆ 16,376 ಜನರು ಬಲಿಯಾಗಿದ್ದಾರೆ. ಇದರೊಂದಿಗೆ ಸದ್ಯ ಬೆಂಗಳೂರಲ್ಲಿ 5,596 ಕೊರೋನಾ ಸಕ್ರಿಯ ಪ್ರಕರಣಗಳಿವೆ.
ರಾಜ್ಯದಲ್ಲಿ ದಾಖಲಾದ ಮೂರು ಮರಣ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 2 ಮತ್ತು ಮೈಸೂರಿನಲ್ಲಿ 1 ಪ್ರಕರಣ ದಾಖಲಾಗಿದೆ. ಕೋವಿಡ್-19 ಮರಣ ಪ್ರಮಾಣ ಶೇ.1.26 ರಷ್ಟಿದ್ದರೇ, ಪಾಸಿಟಿವಿಟಿ ರೇಟ್ ಶೇ.0.20 ರಷ್ಟಿದೆ.
Covid 19 Variant Outbreak: ಡೆಲ್ಟಾಗಿಂತ 70 ಪಟ್ಟು ವೇಗವಾಗಿ ಹರಡುತ್ತೆ ಒಮಿಕ್ರೋನ್!
ರಾಜ್ಯದಲ್ಲಿ ಇಂದು ಒಟ್ಟು 3,44,980 ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದೆ. ಒಟ್ಟು 1,17,058 ಸ್ಯಾಂಪಲ್ (ಆರ್‌ಟಿಪಿಸಿಆರ್ 96,569 + 20,489 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಜಿಲ್ಲಾವಾರು ಕೇಸ್
ಬಾಗಲಕೋಟೆ 0, ಬಳ್ಳಾರಿ 0, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 0, ಬೆಂಗಳೂರು ನಗರ 153, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 2, ಚಿತ್ರದುರ್ಗ 0, ದಕ್ಷಿಣ ಕನ್ನಡ 19, ದಾವಣಗೆರೆ 1, ಧಾರವಾಡ 3, ಗದಗ 0, ಹಾಸನ 1, ಹಾವೇರಿ 0, ಕಲಬುರಗಿ 0, ಕೊಡಗು 13, ಕೋಲಾರ 2, ಕೊಪ್ಪಳ 1, ಮಂಡ್ಯ 3, ಮೈಸೂರು 15, ರಾಯಚೂರು 0, ರಾಮನಗರ 0, ಶಿವಮೊಗ್ಗ 4, ತುಮಕೂರು 6, ಉಡುಪಿ 5, ಉತ್ತರ ಕನ್ನಡ 4, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.
ದೇಶದಲ್ಲಿ ನೂರರ ಗಡಿ ದಾಟಿದ ಒಮಿಕ್ರಾನ್ ಪ್ರಕರಣಗಳು
ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ನೂರರ ಗಡಿ ದಾಟಿದೆ. ದೇಶದ 11 ರಾಜ್ಯಗಳಲ್ಲಿ 101 ಒಮಿಕ್ರಾನ್ ಕೇಸ್ಗಳು ಪತ್ತೆ ಆಗಿವೆ. ಮಹಾರಾಷ್ಟ್ರ 32, ದೆಹಲಿ 22, ರಾಜಸ್ಥಾನದಲ್ಲಿ 17 ಕೇಸ್ ಪತ್ತೆ ಆಗಿದೆ. ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 101ಕ್ಕೆ ಏರಿಕೆ ಆಗಿದ್ದು ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
ವೇಗ ಹೆಚ್ಚು, ತೀವ್ರತೆ ಕಡಿಮೆ:
ಒಮಿಕ್ರೋನ್ ತಳಿಯು ಒಬ್ಬರಿಂದ ಒಬ್ಬರಿಗೆ ಡೆಲ್ಟಾಗಿಂತ 70 ಪಟ್ಟು ಹೆಚ್ಚು ವೇಗದಲ್ಲಿ ಹರಡುತ್ತದೆ. ನಂತರ ಶ್ವಾಸನಾಳದಲ್ಲೂ ಬಹಳ ವೇಗವಾಗಿ ಸಂಚರಿಸುತ್ತದೆ. ಆದರೆ ಅದರಿಂದ ಕಂಡುಬರುವ ಕೊರೋನಾದ ಲಕ್ಷಣಗಳು ಬಹಳ ಸೌಮ್ಯವಾಗಿರುತ್ತವೆ. ಡೆಲ್ಟಾಗಿಂತ 10 ಪಟ್ಟು ತೀವ್ರತೆ ಕಡಿಮೆಯಿರಬಹುದು ಎಂದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.
ಸಂಶೋಧಕರು ಎಕ್ಸ್-ವಿವೋ ಕಲ್ಚರ್ ವಿಧಾನ ಬಳಸಿ ಒಮಿಕ್ರೋನ್ ಹೇಗೆ ಹರಡುತ್ತದೆ ಮತ್ತು ಶ್ವಾಸಕೋಶದಲ್ಲಿ ಹೇಗೆ ಹರಡುತ್ತದೆ ಎಂಬ ಬಗ್ಗೆ ಅಧ್ಯಯನ ನಡೆಸಿದ್ದಾರೆ. ನಂತರ ಕೋವಿಡ್‌ನ ಹಳೆಯ ತಳಿಗಳ ಜೊತೆಗೆ ಅದನ್ನು ಹೋಲಿಸಿ ನೋಡಿದ್ದಾರೆ. ಆಗ ಒಮಿಕ್ರೋನ್‌ನ ವೈರಾಣುಗಳು ಬೇರೆಲ್ಲ ತಳಿಗಳ ವೈರಾಣುವಿಗಿಂತ ಹೆಚ್ಚಿನ ವೇಗದಲ್ಲಿ ಮನುಷ್ಯನ ಶ್ವಾಸಕೋಶದಲ್ಲಿ ದ್ವಿಗುಣಗೊಳ್ಳುತ್ತವೆ ಎಂಬುದು ಪತ್ತೆಯಾಗಿದೆ. ಒಮಿಕ್ರೋನ್ ಸೋಂಕು ತಗಲಿದ 24 ಗಂಟೆಗಳಲ್ಲಿ ಈ ವೈರಾಣು ಡೆಲ್ಟಾಅಥವಾ ಮೂಲ ಸಾರ್ಸ್-ಕೋವ್-2 ವೈರಸ್‌ಗಿಂತ 70 ಪಟ್ಟು ವೇಗವಾಗಿ ದ್ವಿಗುಣಗೊಂಡಿರುವುದು ತಿಳಿದುಬಂದಿದೆ.