Asianet Suvarna News Asianet Suvarna News

ಸದಾ ಕೊಲ್ಲುವ, ಮುಗಿಸುವ ಮಾತಾಡೋ ಈಶ್ವರಪ್ಪ ಬಿಜೆಪಿ ಪಕ್ಷದ ನಾಯಕನೇ?: ದಿನೇಶ್ ಗುಂಡೂರಾವ್ ಗುಡುಗು

ಸದಾ ಕೊಲ್ಲುವ, ಮುಗಿಸುವ ಮಾತುಗಳನ್ನಾಡುವ ಈಶ್ವರಪ್ಪ ಬಿಜೆಪಿ ಪಕ್ಷದ ನಾಯಕನೇ? ಹೊಡಿ ಬಡಿ ಕಡಿ ಮಾತಾಡುವುದು ಬಿಜೆಪಿಯ ಪ್ರಮುಖ ನಾಯಕನಿಗೆ ಇದು ಶೋಭೆಯೇ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

Health minister Dinesh Gundurao outraged against KS Eshwarappa controversy statement at udupi rav
Author
First Published Feb 10, 2024, 5:41 PM IST

ಉಡುಪಿ (ಫೆ.10): ಸದಾ ಕೊಲ್ಲುವ, ಮುಗಿಸುವ ಮಾತುಗಳನ್ನಾಡುವ ಈಶ್ವರಪ್ಪ ಬಿಜೆಪಿ ಪಕ್ಷದ ನಾಯಕನೇ? ಹೊಡಿ ಬಡಿ ಕಡಿ ಮಾತಾಡುವುದು ಬಿಜೆಪಿಯ ಪ್ರಮುಖ ನಾಯಕನಿಗೆ ಇದು ಶೋಭೆಯೇ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಗುಂಡಿಟ್ಟು ಕೊಲ್ಲಿ ಎಂಬ ಈಶ್ವರಪ್ಪರ ಪ್ರಚೋದನಕಾರಿ ಹೇಳಿಕೆ ಸಂಬಂಧ ಇಂದು ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಸಚಿವರು, ಈಶ್ವರಪ್ಪ ಹೇಳಿಕೆಗಳು ಸಮಾಜದ ವ್ಯವಸ್ಥೆಗೆ ಧಕ್ಕೆ ತರುತ್ತಿವೆ. ಸದಾ ಕೊಲ್ಲುವ, ಕೊಚ್ಚುವ ಮುಗಿಸುವ ಮಾತುಗಳನ್ನಾಡುತ್ತಿದ್ದಾರೆ. ಸಮಾಜವನ್ನು ಸದಾ ಆತಂಕದಲ್ಲಿ ಇಡುವುದು ಈಶ್ವರಪ್ಪನ ಕೆಲಸವಾಗಿದೆ. ಅವರಿಗೆ  ಅದೇ ಲಾಭವಾಗಿದೆ. ಕೋಮು ಪ್ರಚೋದನೆ ಮಾಡಿ ಮತ ಗಳಿಸುವುದೇ ಇವರ ಕಾಯಕವಾಗಿದೆ. ಈಗಾಗಲೇ ಜಾತಿ ಧರ್ಮ ಭಾಷೆ ಆಧಾರದಲ್ಲಿ ಸಮಾಜವನ್ನು ಕೆಡಿಸಿಬಿಟ್ಟಿದ್ದಾರೆ ಎಂದು ಕಿಡಿಕಾರಿದರು.

ಡಿಕೆ ಸುರೇಶ್, ವಿನಯ್ ಕುಲಕರ್ಣಿ ಇಬ್ಬರೂ ದೇಶದ್ರೋಹಿಗಳು; ಖರ್ಗೆಗೆ ತಾಕತ್ತಿದ್ದರೆ ಪಕ್ಷದಿಂದ ಕಿತ್ತುಹಾಕಲಿ: ಈಶ್ವರಪ್ಪ ಸವಾಲು!

ಇಂದು ಅನೇಕ ಜನರು ಜೈಶ್ರೀರಾಮ ಹೇಳ್ತಿದ್ದಾರೆ. ಆದರೆ ಶ್ರೀರಾಮನ ಆದರ್ಶವನ್ನು ಎಷ್ಟರಮಟ್ಟಿಗೆ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಜೈಶ್ರೀರಾಮ ಹೇಳೋದು ಸುಲಭ ಎಷ್ಟರ ಮಟ್ಟಿಗೆ ನೈತಿಕ ಜೀವನ ನಡೆಸುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ ಎಂದು ತಿಳಿಸಿದರು.

'ನಿಮ್ಮ ಮುಂದೆ ನಾನೇ ಬರುತ್ತೇನೆ ಗುಂಡಿಕ್ಕಿ ಕೊಲ್ಲಿ': ಈಶ್ವರಪ್ಪ ಹೇಳಿಕೆಗೆ ಡಿಕೆ ಸುರೇಶ್ ತೀಕ್ಷ್ಣ ಪ್ರತಿಕ್ರಿಯೆ

ಇನ್ನು ಮಲ್ಲಿಕಾರ್ಜುನ ಖರ್ಗೆ ಹೊಟ್ಟೆಯಲ್ಲಿ ಹುಳು ಹುಟ್ಟಿದೆ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಈ ತರ ಹೇಳಿಕೆ ನೀಡುವ ಅನೇಕ ನಾಯಕರು ಬಿಜೆಪಿಯಲ್ಲಿದ್ದಾರೆ. ಸಿಟಿ ರವಿ, ಶೋಭಾ, ಸುನಿಲ್, ಸಿಂಹ, ಅನಂತಕುಮಾರ್ ಹೆಗ್ಡೆ.. ಹೀಗೆ ದೊಡ್ಡ ಪಟ್ಟಿಯೇ ಇದೆ. ಪ್ರಚೋದನಕಾರಿ ವೈಷಮ್ಯ ಸೃಷ್ಟಿ ಮಾಡುವುದೇ ಇವರ ಕೆಲಸ. ಜನರು, ಧರ್ಮ, ಭಾಷೆ ನಡುವೆ ಜಗಳ ತಂದು ಘರ್ಷಣೆ ಸೃಷ್ಟಿಸುವುದು ಅದರಿಂದ ರಾಜಕೀಯ ಲಾಭ ಪಡೆಯುವುದೇ ಇವರ ಉದ್ದೇಶವಾಗಿದೆ ಎಂದರು. 

Follow Us:
Download App:
  • android
  • ios