Asianet Suvarna News Asianet Suvarna News

ಶಕ್ತಿ ಯೋಜನೆ ಜಾರಿ ಬೆನ್ನಲ್ಲೇ ಬಸ್‌ ಫುಲ್‌ ರಶ್: ಬಾಗಿಲ ಬಳಿ ನಿಂತ ವಿದ್ಯಾರ್ಥಿನಿ ಆಯತಪ್ಪಿ ಬಿದ್ದು ಸಾವು

ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣಕ್ಕೆ ಶಕ್ತಿ ಯೋಜನೆ ಜಾರಿಗೊಳಿಸಿದ ಬೆನ್ನಲ್ಲೇ ಹಾವೇರಿಯಲ್ಲಿ ಬಸ್‌ಗಳು ಫುಲ್‌ ರಶ್‌ ಆಗಿದ್ದು, ಬಸ್‌ನ ಬಾಗಿಲ ಬಳಿ ನಿಂತಿದ್ದ ವಿದ್ಯಾರ್ಥಿನಿ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾಳೆ.

Haveri district girl student died after falling from a KSRTC bus sat
Author
First Published Jun 12, 2023, 3:58 PM IST

ಹಾವೇರಿ (ಜೂ.12): ರಾಜ್ಯದಲ್ಲಿ ಕಾಂಗ್ರೆಸ್‌ನ ಮೊದಲ ಗ್ಯಾರಂಟಿಯಾಗಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಉಚಿತವಾಗಿ ಪ್ರಯಾಣ ಮಾಡಲು ಶಕ್ತಿ ಯೋಜನೆ ಜಾರಿಗೆ ಬಂದ ಮಾರನೇ ದಿನವೇ ಬಸ್‌ ಫುಲ್‌ರಶ್‌ ಆಗಿ ಬಾಗಿಲ ಬಳಿ ನಿಂತಿದ್ದ ವಿದ್ಯಾರ್ಥಿನಿ ಬಿದದು ಸಾವನ್ನಪ್ಪಿದ ದುರ್ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಕುಸನೂರು ಗ್ರಾಮದ ಬಳಿ ಘಟನೆ ನಡೆದಿದೆ. ಮಧು ಕುಂಬಾರ (14 ವರ್ಷ) ಮೃತ ಶಾಲಾ ಬಾಲಕಿಯಾಗಿದ್ದಾಳೆ. ಬಸ್‌ನಿಂದ ಆಯತಪ್ಪಿ ಬಿದ್ದು‌ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಬಸ್‌ನಲ್ಲಿ ಜನ ತುಂಬಿದ್ದಾರೆಂದು ಬಸ್ ಬಾಗಿಲ ಬಳಿ ವಿದ್ಯಾರ್ಥಿನಿ ನಿಂತಿದ್ದಳು. ಈ ವೇಳೆ ಬಸ್ ಟರ್ನ್ ಆಗುವಾಗ ವಿದ್ಯಾರ್ಥಿನಿ ಮೇಲೆ ಹೆಚ್ಚಿನ ಜನರು ಭಾರ ಹಾಕಿದ್ದರಿಂದ ಬಾಲಕಿ ಆಯತಪ್ಪಿ ನೆಲಕ್ಕೆ ಬಿದ್ದು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಬಸ್‌ ಕೂಡ ಸ್ವಲ್ಪ ವೇಗವಾಗಿದ್ದರಿಂದ ನೆಲಕ್ಕೆ ಬಿದ್ದ ವಿದ್ಯಾರ್ಥಿನಿಗೆ ಗಂಭೀರ ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಶಾಲೆಗೆ ಹೊರಟಿದ್ದ ಬಾಲಕಿ ಸಾವನ್ನಪ್ಪಿದ್ದಾಳೆ.

ಕರುನಾಡಿಗೆ ಮೂರು ದಿನದಲ್ಲಿ ಮಳೆಯಾಗದಿದ್ದರೆ ಮೋಡ ಬಿತ್ತನೆ ಮಾಡಲು ನಿರ್ಧಾರ

ಬಾಲಕಿ ಹಾನಗಲ್ ತಾಲೂಕಿನ ವಾಸನ ಗ್ರಾಮದಿಂದ ಕುಸನೂರು ಗ್ರಾಮಕ್ಕೆ ಪ್ರೌಢಶಾಲೆಗೆ ಆಗಮಿಸುತ್ತಿದ್ದಳು. ಬಸ್ ತುಂಬಾ ರಶ್ ಇರೋ ಕಾರಣಕ್ಕಾಗಿ ಬಾಗಿಲ ಬಳಿಯೇ ನಿಂತುಕೊಂಡು ಚಾಲನೆ ಮಾಡುತ್ತಿದ್ದಳು. ಆದರೆ, ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾಳೆ. ಈ ಘಟನೆ ನಡೆಯುತ್ತಿದ್ದಂತೆಯೇ ವಿದ್ಯಾರ್ಥಿನಿಯಲ್ಲಿ ಅದೇ ಬಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಷ್ಟರಲ್ಲಿ ವಿದ್ಯಾರ್ಥಿನಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಘಟನೆ ಆಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳ ಬಸ್‌ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

ಶಕ್ತಿ ಯೋಜನೆಯಿಂದ ಬಹಳ ಅನುಕೂಲ: ಕಾಂಗ್ರೆಸ್‌ ಸರ್ಕಾರದ ಶಕ್ತಿ ಯೋಜನೆಯ ಬಗ್ಗೆ ಮಾತನಾಡಿದ ಹಾವೇರಿಯ ಮಹಿಳೆಯರು, ಬಡ ಹೆಣ್ಣು ಮಕ್ಕಳಿಗೆ ಉದ್ಯೋಗ, ಶಿಕ್ಷಣಕ್ಕಾಗಿ ಪ್ರಯಾಣಿಸಲು ಅನುಕೂಲವಾಗಿದೆ. ಈ ಯೋಜನೆಯಿಂದ ಬಹಳ ಖುಷಿ ‌ಆಗ್ತಾ ಇದೆ. ಕಾರ್ಯಕ್ರಮಗಳು, ಸಂಬಧಿಕರ ಮನೆಗಳಿಗೆ ಹೋಗಲು ಉಚಿತ ‌ಬಸ್ ಸೌಲಭ್ಯ ಸಿಗುತ್ತಿದೆ. ಸರ್ಕಾರದ ಶಕ್ತಿ ಯೋಜನೆಗೆ ಹಾವೇರಿ ಜಿಲ್ಲೆಯ ಹೆಣ್ಣು ಮಕ್ಕಳು ಫುಲ್ ಖುಷಿ ಆಗಿದ್ದೇವೆ. ಆದರೆ, ಸ್ತ್ರೀ - ಪುರುಷರಿಗೆ ಸಮಾನ ಅವಕಾಶ ನೀಡಬೇಕಿತ್ತು ಎಂದ ಮಹಿಳೆಯರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

'ಶಕ್ತಿ ಯೋಜನೆ ಸ್ಮಾರ್ಟ್‌ ಕಾರ್ಡ್‌' ಪಡೆದ ಮೊದಲ ಮಹಿಳೆ ಇವರೇ! ಉಚಿತ ಪ್ರಯಾಣವನ್ನೂ ಮಾಡಿದ್ರು

ಕೊಡಗಿನ ಮಹಿಳೆಯರು ಏನಂದ್ರು? 
ಕೊಡಗು : ಫ್ರೀ ಬಸ್ ಪ್ರಯಾಣಕ್ಕೆ ಮಹಿಳೆಯರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ನಮ್ಮಂಥ ಪಾಪದ ಜನರಿಗೆ ತುಂಬಾ ಅನುಕೂಲವಾಯಿತು. ಎಲ್ಲಾದರೂ ಹೋಗಬೇಕೆಂದರೆ ಕಷ್ಟವಾಗುತಿತ್ತು. ಕೈಯಲ್ಲಿ ಹಣ ಇರುತ್ತಿರಲಿಲ್ಲ. ಫ್ರೀ ಮಾಡಿದ್ದು ತುಂಬಾ ಒಳ್ಳೆಯದಾಯಿತು. ಬಸ್ಸಿಗೆ ಫ್ರೀ ಮಾಡಿ ಅಗತ್ಯ ವಸ್ತುಗಳ ಬೆಲೆ ಜಾಸ್ತಿ ಆದರೆ ಪ್ರಯೋಜನವಿಲ್ಲ. ಗ್ಯಾಸ್ ದಿನಸಿ ವಸ್ತುಗಳ ಬೆಲೆ ಜಾಸ್ತಿಯಾಗಿದೆ. ಎಲ್ಲರೂ ನಿತ್ಯ ಬಸ್ಸಿನಲ್ಲಿ ಓಡಾಡುವುದಿಲ್ಲ. ನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಜಾಸ್ತಿಯಾಗಿದೆ. ಅವುಗಳ ಬೆಲೆ ಕಡಿಮೆ ಮಾಡಿದರೆ ಎಲ್ಲಾ ವರ್ಗದ ಜನರಿಗೆ ಉಪಯೋಗವಾಗುತ್ತದೆ ಎಂದು ಫ್ರೀ ಬಸ್ ಪ್ರಯಾಣಕ್ಕೆ ಮಹಿಳೆಯರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios