'ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್' ಪಡೆದ ಮೊದಲ ಮಹಿಳೆ ಇವರೇ! ಉಚಿತ ಪ್ರಯಾಣವನ್ನೂ ಮಾಡಿದ್ರು
ರಾಜ್ಯಾದ್ಯಂತ ಏಕಕಾಲಕ್ಕೆ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿದೆ. ಶಕ್ತಿ ಯೋಜನೆಯ ಮೊದಲ ಸ್ಮಾರ್ಟ್ ಕಾರ್ಡ್ ಪಡದ ಮೊದಲ ಮಹಿಳೆ ಇಲ್ಲಿದ್ದಾರೆ ನೋಡಿ..
ಬೆಂಗಳೂರು (ಜೂ.11): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಭಾನುವಾರ ಜಾರಿಗೊಂಡ ಮೊದಲ ಗ್ಯಾರಂಟಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ "ಶಕ್ತಿ ಯೋಜನೆ" ಯ ಮೊದಲ ಸ್ಮಾರ್ಟ್ ಕಾರ್ಡನ್ನು ಪಡೆದ ಮಹಿಳೆ ಬೆಂಗಳೂರಿನ ನಿವಾಸಿ ಆಗಿದ್ದಾರೆ. ಅವರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಹೌದು, ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೊಟ್ಟ ಗ್ಯಾರಂಟಿಗಳನ್ನು ಸಂಪೂರ್ಣವಾಗಿ ಈಡೇರಿಸುವ ಭರವಸೆ ನೀಡಿದ್ದರು. ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಅನುಮೋದನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಮೊದಲ ಗ್ಯಾರಂಟಿಯಾಗಿ ಶಕ್ತಿ ಯೋಜನೆ (ಸಾರಿಗೆ ಇಲಾಖೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ)ಗೆ ಇಂದು ಭಾನುವಾರ ಚಾಲನೆ ನೀಡಲಾಯಿತು. ಈ ವೇಳೆ ಅಧಿಕೃತವಾಗಿ ಐವರು ಮಹಿಳೆಯರಿಗೆ ಉಚಿತ ಪ್ರಯಾಣದ ಸ್ಮಾರ್ಟ್ ಕಾರ್ಡ್ ನೀಡಲಾಯಿತು. ಅದರಲ್ಲಿ ಬೆಂಗಳೂರಿನ ನಿವಾಸಿ ಸುಮಿತ್ರಾ ಅವರು ಮೊದಲ ಸ್ಮಾರ್ಟ್‌ಕಾರ್ಡ್ ಪಡೆದ ಮಹಿಳೆ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.
ಕರ್ನಾಟಕದ 'ಶಕ್ತಿ ಯೋಜನೆ' ಅಧಿಕೃತ ಆರಂಭ: ಮಹಿಳೆಯರಿಗೆ ಬಸ್‌ನಲ್ಲಿ ಫ್ರೀ ಟಿಕೆಟ್ ಶುರು
ಮೊದಲ ಸ್ಮಾರ್ಟ್ ಕಾರ್ಡ್ ಪಡೆದ ಮಹಿಳೆ ಹೇಳಿದ್ದೇನು? : ರಾಜ್ಯದಲ್ಲಿ ಮೊದಲ ಉಚಿತ ಪ್ರಯಾಣದ ಸ್ಮಾರ್ಟ್ ಕಾರ್ಡ್ ಪಡೆದ ಮಹಿಳೆ ಸುಮಿತ್ರಾ ಮಾತನಾಡಿ, ನಾನು ಬೆಂಗಳೂರಿನ ನಿವಾಸಿ ಆಗಿದ್ದು, ಸ್ಮಾರ್ಟ್ ಕಾರ್ಡ್ ಪಡೆದ ಮೊದಲ ಮಹಿಳೆ ಎಂಬುದು ನನ್ನ ಸಂತಸವಾಗಿದೆ. ಕಾರ್ಡ್ ಪಡೆದುಕೊಂಡು ತುಂಬಾ ಖುಷಿಯಾಗಿದೆ. ಕಾರ್ಡ್ ಪಡೆದ ಮೊದಲನೇ ವ್ಯಕ್ತಿ ಅನ್ನೋದಕ್ಕೆ ಹೆಮ್ಮೆ ಆಗ್ತಿದೆ. ಸ್ಮಾರ್ಟ್ ಕಾರ್ಡ್ ಪಡೆಯಲು ಆಧಾರ್ ನೀಡಿದ್ದೆನು. ಮುಂದಿನ ದಿನಗಳಲ್ಲಿ ಎಲ್ಲರೂ ಒಳ್ಳೆಯ ರೀತಿಯಲ್ಲಿ ಯೋಜನೆಯ ಲಾಭ ಪಡೆಯಿರಿ ಎಂದು ಹೇಳಿದರು.
ಮುಂದಿನ 3 ತಿಂಗಳಲ್ಲಿ ಎಲ್ಲರಿಗೂ ಸ್ಮಾರ್ಟ್ ಕಾರ್ಡ್: ರಾಜ್ಯದಲ್ಲಿ ಎಲ್ಲ ಮಹಿಳೆಯರು ಎಲ್ಲ ವೇಗದೂತ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. ಮೂರು ತಿಂಗಳಲ್ಲಿ ಎಲ್ಲ ಅರ್ಹ ಫಲಾನುಭವಿ ಮಹಿಳೆಯರಿಗೆ ಮುಂದಿನ ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಲಾಗುದು. ಶಾಲಾ- ಕಾಲೇಜುಗಳಿಗೆ ಹೋಗವ ಹೆಣ್ಣು ಮಕ್ಕಳಿಗೂ ಕೂಡ ಉಚಿತ ಪ್ರಯಾಣವನ್ನು ನೀಡಲಾಗುವುದು. ಇದನ್ನು ಎಲ್ಲ ಹೆಣ್ಣುಮಕ್ಕಳು ಸದುಪಯೋಗ ಮಾಡಿಕೊಂಡು ಶಿಕ್ಷಣ ಪಡೆದುಕೊಳ್ಳಬೇಕು. ಈ ಯೋಜನೆಗಳಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲ. ಇನ್ನು ಕರ್ನಾಟಕದ ಒಳಗಡೆ ಮಾತ್ರ ಬಳಸಬಹುದು. ಹೊರ ರಾಜ್ಯಗಳಿಗೆ ಹೋಗುವುದಕ್ಕೆ ಬಳಸುವಂತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಡವರ ಜೇಬಿನಲ್ಲಿ ಹಣವಿಡುವುದೇ ಕಾಂಗ್ರೆಸ್ ಕೆಲಸ: ರೈತರ ಸಾಲವನ್ನು ಮನ್ನಾ ಮಾಡದೇ ದೊಡ್ಡ ದೊಡ್ಡ ಬಂಡವಾಳ ಶಾಹಿಗಳು ಈ ಯೋಜನೆ ಬಗ್ಗೆ ಟೀಕೆ ಮಾಡುತ್ತಾರೆ. ಶ್ರೀಮಂತರ ಜೇಬಿನಲ್ಲಿ ಹಣವಿದ್ದರೆ ಅದು ಹೆಚ್ಚು ಉಪಯೋಗ ಆಗುವುದಿಲ್ಲ. ಬಡವರ ಜೇಬಿನಲ್ಲಿ ಹಣವಿದ್ದರೆ ಅದು ಹೆಚ್ಚು ಉಪಯೋಗವಾಗುತ್ತದೆ. ಬಡವರ ಜೇಬಿನಲ್ಲಿ ಹಣವಿಡುವುದೇ ಕಾಂಗ್ರೆಸ್ ಸರ್ಕಾರದ ಕೆಲಸವಾಗಿದೆ. ಇದಕ್ಕಾಗಿ ಕಾಂಗ್ರೆಸ್ ಸರ್ಕಾರದಿಂದ 5 ಗ್ಯಾರಂಟಿಗಳನ್ನು ನಾವು ಮಾಡುತ್ತೇವೆ. ಈ ಐದು ಗ್ಯಾರಂಟಿಗಳನ್ನು ಜಾರಿಗೆ ತರುವುದು ಶೇಕಡಾ 100 ಗ್ಯಾರಂಟಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಸ್ಸಿನಲ್ಲಿ ಶೋಭಾ ಕರಂದ್ಲಾಜೆಗೂ ಫ್ರೀ ಎಂದ ಕಾಂಗ್ರೆಸ್‌ಗೆ ಕೇಂದ್ರ ಸಚಿವೆ ತರಾಟೆ
- ಉಚಿತ ಪ್ರಯಾಣಕ್ಕೆ ಏನು ಮಾಡಬೇಕು:
- ಉಚಿತವಾಗಿ ಬಸ್ ಪ್ರಯಾಣ ಮಾಡಲು ಯಾವುದಾದರೊಂದು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೋರಿಸಬೇಕು.
- ಮಹಿಳಾ ಪ್ರಯಾಣಿಕರ ಪೈಕಿ 6 ರಿಂದ 12 ವರ್ಷದವರೆಗಿನ ಬಾಲಕಿಯರು, ಲಿಂಗತ್ವ ಅಲ್ಪಅಸಂಖ್ಯಾತರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ.
- ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಸಾರಿಗೆಗಳಲ್ಲಿ ರಾಜ್ಯಾದ್ಯಂತ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ.
- ಸಾರಿಗೆ ಇಲಾಖೆಯ ಎಸಿ, ರಾಜಾಹಂಸ ಸೇರಿದಂತೆ ಐಷಾರಾಮಿ ಬಸ್ಸುಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ.
- ಸದ್ಯ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ದೂರದ ಯಾವುದೇ ಮಿತಿಯಿಲ್ಲ.