ಕರುನಾಡಿಗೆ ಮೂರು ದಿನದಲ್ಲಿ ಮಳೆಯಾಗದಿದ್ದರೆ ಮೋಡ ಬಿತ್ತನೆ ಮಾಡಲು ನಿರ್ಧಾರ
ರಾಜ್ಯದಲ್ಲಿ ಮುಂಗಾರು ಮಳೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದಿಂದ ಮೋಡ ಬಿತ್ತನೆ ಮಾಡಲು ಚಿಂತನೆ ಮಾಡಲಾಗಿದೆ.
ಧಾರವಾಡ (ಜೂ.12): ರಾಜ್ಯದಲ್ಲಿ ಮುಂಗಾರು ಮಳೆ ತೀವ್ರ ವಿಳಂಬವಾಗುತ್ತಿದೆ. ಕಳೆದ ನಾಲ್ಕೈದು ದಿನಗಳ ಹಿಂದೆಯೇ ರಾಜ್ಯಕ್ಕೆ ಮುಂಗಾರು ಮಾರುತಗಳು ಆಗಮಿಸಿದ್ದರೂ ಮಳೆ ಸುರಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಗಳಲ್ಲಿ ಮಳೆಯಾಗದಿದ್ದರೆ ಮೋಡ ಬಿತ್ತನೆ ಮಾಡಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬರಗಾಲ ಬರುತ್ತದೆ ಎಂಬ "ಕಾಂಗ್ರೆಸ್ ಬಂತು - ಬರಗಾಲ ತಂತು" ಎನ್ನುವ ಜನಸಾಮಾನ್ಯರ ಗಾದೆಯಂತೆ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಬರಗಾಲದ ಛಾಯೆ ಕಂಡುಬರುತ್ತಿದೆ. ಇನ್ನು ಅರಬ್ಬೀ ಸಮುದ್ರದಲ್ಲಿ ಉಂಟಾದ ಬಿಪೋರ್‌ಜಾಯ್ ಚಂಡಮಾರುತದ ಪರಿಣಾಮದಿಂದ ಮಳೆ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿತ್ತು. ಈಗ ಮುಂಗಾರು ಬರದೇ ರೈತರು ಬಿತ್ತನೆ ಕಾರ್ಯಗಳನ್ನು ಮಾಡದೇ ಮಳೆಗಾಗಿ ಎದುರು ನೋಡಿತ್ತಿದ್ದಾರೆ. ಮುಂಗಾರು ಮಳೆ ವಿಳಂಬ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದಿಂದ ಮೋಡ ಬಿತ್ತನೆಗೆ ಚಿಂತನೆ ಮಾಡಲಾಗಿದೆ.
ಬಿಪೊರ್‌ಜಾಯ್ ಚಂಡಮಾರುತದಿಂದ ಮುಂಗಾರು ಮಳೆ ವಿಳಂಬ
ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನಿಸಿ ಮೋಡ ಬಿತ್ತನೆ: ಈ ಬಗ್ಗೆ ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೃಷಿ ಸಚಿವರು, ಮುಂಗಾರು ಮಳೆ ತಡವಾಗಿದೆ. ಕಳೆದ ಸಲಕ್ಕಿಂತ ಈಗ ಶೇ. 30ರಷ್ಟು ಮಳೆ ಕಡಿಮೆ ಆಗಿದೆ. ಮಳೆಯ ನಿರೀಕ್ಷೆ ಮಾಡುತ್ತಿದ್ದೇವೆ. ಒಂದು ವಾರದಿಂದ ತಡವಾಗುತ್ತಲೇ ಇದೆ. ಮುಂದಿನ ಎರಡು ದಿನ ಕಾದು ನೋಡುತ್ತೇವೆ. ಬೀಜ ರಸಗೊಬ್ಬರ ಎಲ್ಲ ಸಂಗ್ರಹ ಮಾಡಿಟ್ಟುಕೊಂಡಿದ್ದೇವೆ. ಆದರೆ ಮುಂಗಾರು ವಿಳಂಬದಿಂದ ಬೇರೆ ಏನೂ ಮಾಡಲು ಆಗುತ್ತಿಲ್ಲ. ಮೂರು ದಿನದಲ್ಲಿ ಮಳೆಯಾಗದಿದ್ದರೆ ಮೋಡ ಬಿತ್ತನೆ ಚಿಂತನೆ ಮಾಡಲಾಗಿದೆ. ಮೂರು ದಿನ ಕಾದು ನೋಡುತ್ತೇವೆ. ಮಳೆ ಆಗದಿದ್ದರೆ ಮೋಡ ಬಿತ್ತನೆಗೆ ಚಿಂತನೆ ಮಾಡಲಾಗಿದೆ. ಗುರುವಾರ ಕ್ಯಾಬಿನೆಟ್ ಸಭೆ ಇದ್ದು. ಅಲ್ಲಿ ನಿರ್ಣಯ ಮಾಡುತ್ತೇವೆ ಎಂದು ಹೇಳದರು.
ಗೋ ಹತ್ಯೆ ಕಾಯಿದೆ ನಿಷೇಧ ವಿಚಾರ: ಈ ಹಿಂದೆ ಬಿಜೆಪಿ ಸರ್ಕಾರ ಗೋ ಹತ್ಯೆ ಕಾಯಿದೆ ಜಾರಿಗೊಳಿಸಿದ್ದು, ಅದನ್ನು ನಿಷೇಧ ಮಾಡುವ ಬ್ಗೆ ಆಯಾ ಇಲಾಖೆಯ ಸಚಿವರಷ್ಟೇ ಹೇಳಿದ್ದಾರೆ. ಅದರ ಹೊರತಾಗಿ ಬೇರೆ ಚರ್ಚೆಯಾಗಿಲ್ಲ. ಅದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಬಹುದು. ಚರ್ಚೆ ಮಾಡಿದಾಗ ಅದರ ಬಗ್ಗೆ ಹೇಳಬಹುದು. ಸದ್ಯ ಆ ಇಲಾಖೆ ಸಚಿವರು ತಮ್ಮ ಅಭಿಪ್ರಾಯವನ್ನಷ್ಟೇ ಹೇಳಿದ್ದಾರೆ ಎಂದು ಹೇಳಿದರು.
ಸಾವಿನ ಪರಿಹಾರದಲ್ಲಿ ತಾರತಮ್ಯ: ಡಿಸಿಎಂ ತವರಲ್ಲಿ 15 ಲಕ್ಷ, ಕೊಪ್ಪಳದಲ್ಲಿ 2 ಲಕ್ಷ ರೂ. ಪರಿಹಾರ
ಎಪಿಎಂಸಿ ಸೇರಿ 3 ಕೃಷಿ ಕಾಯ್ದೆ ರದ್ದತಿಗೆ ಚರ್ಚೆ: ಇನ್ನು ರಾಜ್ಯದಲ್ಲಿ 3 ಕೃಷಿ ಕಾಯಿದೆ ವಾಪಸ್ ಪಡೆಯುವ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಈಗಾಗಲೇ ಈ ಬಗ್ಗೆ ಚರ್ಚೆಯನ್ನು ಮಾಡಿ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಎಪಿಎಂಸಿ ಸೇರಿ ಉಳಿದ ರೈತರ 2ರಿಂದ 3ಕಾಯಿದೆ ಬಗ್ಗೆಯೂ ಹೇಳಿದ್ದೇವೆ. ಆಯಾ ಇಲಾಖೆ ಸಚಿವರು, ಉಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಜೊತೆಗೆ ಮತ್ತೊಂದು ಸುತ್ತಿನ ಚರ್ಚೆ ಮಾಡುತ್ತೇವೆ. ನಂತರ ಕಾಯ್ದೆ ವಾಪಸ್ ಪಡೆಯುವ ಬಗ್ಗೆ ಅಂತಿಮವಾಗಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾಹಿತಿ ನೀಡಿದರು.