ಮಾಜಿ ಸಂಸದ ಡಿಕೆ ಸುರೇಶ್ ವಿರುದ್ಧ ಮುನಿರತ್ನ ವಾಗ್ದಾಳಿ ನಡೆಸಿದ್ದು, ಏಕವಚನದಲ್ಲಿ ಪದ ಬಳಕೆ ಮಾಡದಂತೆ ಎಚ್ಚರಿಸಿದ್ದಾರೆ. ಮೇಕೆದಾಟು ಪಾದಯಾತ್ರೆಯಲ್ಲಿ ಕಲಾವಿದರು ಭಾಗವಹಿಸದ ವಿಚಾರವಾಗಿ ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರು (ಮಾ.2): ರೀ ಡಿಕೆ ಸುರೇಶ, ಮೊದಲು ಏಕವಚನದಲ್ಲಿ ಪದ ಬಳಕೆ ಮಾಡೋದು ಕಡಿಮೆ ಮಾಡಿ ಎಂದು ಮಾಜಿ ಸಂಸದ ಡಿಕೆ ಸುರೇಶ್ ವಿರುದ್ಧ ಮುನಿರತ್ನ ವಾಗ್ದಾಳಿ ನಡೆಸಿದರು.
ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುನಿರತ್ನ ಅವರು, ನಾನು ನಿಮ್ಮ ಅಣ್ಣ ಇಪ್ಪತ್ತು ವರ್ಷಗಳ ಸ್ನೇಹಿತರು. ನಾನು ವಿಧಾನಸೌಧ ಮೆಟ್ಟಿಲು ಹತ್ತಬಾರದು ಅಂದ್ರೆ ನಿಮ್ಮ ಅಣ್ಣನೂ ವಿಧಾನಸೌಧ ಮೆಟ್ಟಿಲು ತುಳಿಬಾರದು. ಯಾಕೆಂದರೆ ನಾನು ನಿಮ್ಮ ಅಣ್ಣಾ ಇಬ್ಬರೂ ಜೈಲಿಗೆ ಹೋದವ್ರೆ. ಆದ್ರೆ ನಾನು ನಿಮ್ಮ ದ್ವೇಷಕ್ಕೆ ನಿಮ್ಮಿಂದಾಗಿ ಬೆಂಗಳೂರು ಜೈಲು ನೋಡಬೇಕಾಯ್ತು. ಆ ದೇವರು ನಿಮಗೆ ತಿಹಾರ ಜೈಲು ತೋರಿಸಿದ್ದಾನೆ ಎಂದು ತಿರುಗೇಟು ನೀಡಿದರು.
ಮೇಕೆದಾಟು ಪಾದಯಾತ್ರೆ ಫೋಟೋ ರಿಲೀಸ್ ಮಾಡಿದ ಮುನಿರತ್ನ:
ಕನ್ನಡ ಚಿತ್ರರಂಗದ ಕಲಾವಿದರು ಮೇಕೆದಾಟು ಪಾದಯಾತ್ರೆ ವೇಳೆ ಭಾಗಿಯಾಗಿಲ್ಲ ಎಂಬ ಕಾರಣಕ್ಕೆ ನೆಟ್ಟು ಬೋಲ್ಟ್ ಸರಿ ಮಾಡ್ತೀವಿ ಅಂದಿರುವ ಡಿಕೆ ಶಿವಕುಮಾರ ವಿರುದ್ಧ ಕಿಡಿಕಾರಿದ ಮುನಿರತ್ನ. ಕನ್ನಡ ಚಿತ್ರರಂಗದ ಕಲಾವಿದರು ಬರಬೇಕಿತ್ತು ಎಂದು ನಿರೀಕ್ಷಿಸುವ ನೀವು ಕಾಂಗ್ರೆಸ್ ಪಕ್ಷದ ಚಿಹ್ನೆ, ಕಾಂಗ್ರೆಸ್ ಪಕ್ಷದ ನಾಯಕರ ಫೋಟೊ ಹಿಡಿದಿದ್ದು ಯಾಕೆ? ಕನ್ನಡ ಬಾವುಟ ಇರಲಿಲ್ಲವೇ? ಇಂಥ ರಾಜಕೀಯ ಪಾದಯಾತ್ರೆಯಲ್ಲಿ ಕನ್ನಡ ಚಿತ್ರರಂಗದ ಕಲಾವಿದರು ಭಾಗವಹಿಸಬೇಕಿತ್ತಾ? ಪಾದಯಾತ್ರೆ ವೇಳೆ ಎಲ್ಲಾದರೂ ಕನ್ನಡ ಬಾವುಟ ಕಾಣಿಸ್ತಿದೆಯಾ ನೋಡಿ ಎಂದು ಮೇಕೆದಾಟು ಪಾದಯಾತ್ರೆಯ ಫೋಟೋ ರಿಲೀಸ್ ಮಾಡಿ ತೋರಿಸಿದರು.
ಇದನ್ನೂ ಓದಿ: ರೀ ಡಿಕೆಶಿ ಅಂದು ದೇವೇಗೌಡ್ರು ನಟ್ಟು ಬೋಲ್ಟ್ ಟೈಟ್ ಮಾಡಿದ್ರೆ ನೀವು ಇಂದು ಬೆಳೆಯೋಕೆ ಸಾಧ್ಯ ಇರಲಿಲ್ಲ: ಮುನಿರತ್ನ ಕಿಡಿ!
ಕನ್ನಡಚಿತ್ರರಂಗ, ಕಲಾವಿದರರೇನು ಡಿಕೆಶಿ ಜೀತದಾಳಾ?
ಕನ್ನಡಚಿತ್ರರಂಗ, ಕಲಾವಿದರರೇನು ಡಿಕೆಶಿ ಜೀತದಾಳಾ? ಅಥವಾ ಯಾರನ್ನಾದ್ರೂ ಡಿಕೆಶಿ ಜೀತಕ್ಕಿಟ್ಕೊಂಡಿದ್ದಾರಾ ಮೇಕೆದಾಟು ಪಾದಯಾತ್ರೆ ವೇಳೆ ವಾಟಾಳ್, ಸಾರಾ ಗೋವಿಂದು, ಕರವೇ ನಾರಾಯಣ ಗೌಡ, ಪ್ರವೀಣ್ ಶೆಟ್ಟಿ ಕರೆದಿದ್ರಾ ನೀವು ಕರೆದವರೆಲ್ಲ ನಿಮ್ಮ ಪಕ್ಷದವರು, ಮಂತ್ರಿ ಆಗಲು ಅವರು ಬಂದಿದ್ದಾರೆ. ಮತ್ಯಾಕೆ ಚಿತ್ರರಂಗದವರ ಬಗ್ಗೆ ಮಾತಾಡ್ತೀರಿ? ನೀವೂ ಸಿನಿಮಾದವರೇ, ನಿಮ್ಮ ಟೆಂಟ್ ನಲ್ಲಿ ಸಿನಿಮಾ ಹಾಕ್ತಿದ್ದವರೇ ನೀವು. ಮಾತಿನ ಮೇಲೆ ಹಿಡಿತವರಿಲಿ ಎಂದು ಎಚ್ಚರಿಸಿದರು.
ಸಿದ್ದರಾಮಯ್ಯ ಒದೆಯೋ ಟಗರು, ಸುಮ್ಮನಿರೋ ಟಗರು ಅಲ್ಲ:
ಡಿಕೆ ಶಿವಕುಮಾರ ಅಧಿಕಾರ ಕಿತ್ತುಕೊಳ್ಳೋಕೆ ನೋಡಿದ್ರೆ ಟಗರು ಸುಮ್ನಿರೋಲ್ಲ. ಸಿದ್ದರಾಮಯ್ಯ ಒದೆಯೋ ಟಗರು, ಸುಮ್ಮನಿರೋ ಟಗರು ಅಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ ಮುನಿರತ್ನ.
ಡಿಕೆ ಶಿವಕುಮಾರ್ ಹಿಂದೂತ್ವ ಹೇಳಿಕೆ ವಿಚಾರ ಸಂಬಂಧ ಬಿಜೆಪಿಗೆ ಸೇರ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುನಿರತ್ನ. ನಾವು ಚುನಾವಣೆಗೆ ಬೇಕಾದ್ರೆ ಹೋಗ್ತೇವೆ ಆದ್ರೆ ಡಿಕೆ ಶಿವಕುಮಾರ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಡಿಕೆ ಶಿವಕುಮಾರನಿಂದ ನಮ್ಮ ಪಕ್ಷ ಬೆಳೆಸುವ ಅಗತ್ಯವಿಲ್ಲ. ನಮ್ಮ ಪಕ್ಷದಲ್ಲೇ ಬಹಳಷ್ಟು ನಾಯಕರಿದ್ದಾರೆ ಎಂದರು
ಇದನ್ನೂ ಓದಿ: ಇದನ್ನೂ ಓದಿ: BIFFES: ಉತ್ತಮ ಸಾಹಿತ್ಯ, ಸಂಗೀತ, ಸಿನಿಮಾ,ಸಂಸ್ಕೃತಿಯೇ ನಮ್ಮ ಆಸ್ತಿ: ಡಿಕೆ ಶಿವಕುಮಾರ ಮಾತು
ಸುರೇಶ್ ಮೊದಲು ನಿಮ್ಮ ಅಣ್ಣ ಹಿನ್ನೆಲೆ ತಿಳ್ಕೊ:
ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡುವ ಮುನ್ನ ನಿಮ್ಮ ಅಣ್ಣ ಡಿಕೆ ಶಿವಕುಮಾರ ಹಿನ್ನೆಲೆ ತಿಳ್ಕೊ. ಆಮೇಲೆ ನನ್ನ ಹಿನ್ನೆಲೆ ಹುಡುಕು. ನಿಮ್ಮಣ್ಣನಂಥ ನೂರು ಜನ ಹಾಕಿದರೂ ನನ್ನ ತಮ್ಮ ಆಗಲ್ಲ. ನಿಮ್ಮಣ್ಣನ ಬಳಿ ನಾಲ್ಕು ಸಾವಿರದ ಹಳೇ ಜಾವಾ ಇತ್ತು. ನಿಮ್ಮ ಅಣ್ಣನಿಗೆ ಎಲ್ಲರ ಜೊತೆ ಹೊಂದಿಕೊಂಡು ಎಲ್ಲರ ಜೊತೆಯಾಗಿ ಸ್ನೇಹಿಯಾಗಿ ಬದುಕುವಂತೆ ಬುದ್ಧಿ ಹೇಳಿ. ನನ್ನ ಮೇಲೆ ಸುಳ್ಳು ಆರೋಪದ ಮೇಲೆ ಕೇಸ್ ಹಾಕಿಸಿದ್ದೀರಿ. ಆ ದೇವರು ನಿಮ್ಮನ್ನು ಮೆಚ್ಚಲ್ಲ. ನೀವು ತಪ್ಪು ಮಾಡಿದ್ದೀರಿ ಏನಾಗುತ್ತೋ ನೋಡೋಣ.
ಮುನಿರತ್ನ
