ಮುಂಬರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಪ್ರತಿಪಕ್ಷ ಬಿಜೆಪಿ ಸಿದ್ಧತೆ ಆರಂಭಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಪ್ರಾಧಿಕಾರದ ಸಂಯೋಜಕರು, ಜಿಲ್ಲಾ ಸಂಯೋಜಕರು ಹಾಗೂ ಐದು ಪಾಲಿಕೆಗಳಿಗೆ ಪ್ರಮುಖರು ಮತ್ತು ಸಹಪ್ರಮುಖರನ್ನು ನಿಯೋಜಿಸಲಾಗಿದೆ.

ಬೆಂಗಳೂರು (ಅ.24): ಮುಂಬರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ನಡೆಯುವ ಚುನಾವಣೆ ಸಂಬಂಧಿತ ಚಟುವಟಿಕೆಗಳಿಗೆ ಪ್ರತಿಪಕ್ಷ ಬಿಜೆಪಿ ಸಿದ್ಧತೆ ಆರಂಭಿಸಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಪ್ರಾಧಿಕಾರದ ಸಂಯೋಜಿತರ ತಂಡ, ಸಂಘಟನಾತ್ಮಕ ಜಿಲ್ಲೆಯ ಸಂಯೋಜಕರು ಹಾಗೂ ಐದು ಪಾಲಿಕೆಗಳಿಗೆ ಪ್ರಮುಖರು ಹಾಗೂ ಸಹಪ್ರಮುಖರನ್ನು ನಿಯೋಜಿಸಲಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಂಯೋಜಕರು:

 ಬಿ.ವೈ.ವಿಜಯೇಂದ್ರ, ಆರ್.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಡಿ.ವಿ.ಸದಾನಂದಗೌಡ, ಎಸ್.ಸುರೇಶ್‌ಕುಮಾರ್‌, ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್‌, ಡಾ.ಸಿ.ಎನ್‌.ಮಂಜುನಾಥ್‌, ತೇಜಸ್ವಿ ಸೂರ್ಯ, ಡಾ.ಕೆ.ಸುಧಾಕರ್‌, ನಂದೀಶ್ ರೆಡ್ಡಿ.

ಸಂಘಟನಾತ್ಮಕ ಜಿಲ್ಲೆಯ ಪ್ರಮುಖರು: ಸಿ.ಕೆ.ರಾಮಮೂರ್ತಿ (ಬೆಂಗಳೂರು ದಕ್ಷಿಣ), ಎಸ್‌.ಹರೀಶ್‌ (ಬೆಂಗಳೂರು ಉತ್ತರ), ಸಪ್ತಗಿರಿಗೌಡ (ಬೆಂಗಳೂರು ಕೇಂದ್ರ).

ಇದನ್ನೂ ಓದಿ: ಕಲಬುರಗಿ: ಎಸ್ಐಟಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು! ಕಾಂಗ್ರೆಸ್ ಹುರಿಯಾಳು ಗೆದ್ದಿರೋ ಮತ್ತೆರಡು ಕ್ಷೇತ್ರದಲ್ಲೂ ಮತಗಳವು?

ಪಾಲಿಕೆಗಳ ಪ್ರಮುಖರು ಹಾಗೂ ಸಹ ಪ್ರಮುಖರು

: ಎಂ.ಟಿ.ಬಿ.ನಾಗರಾಜ್‌ ಮತ್ತು ಕೆ.ಎಸ್‌.ನವೀನ್ (ಬೆಂಗಳೂರು ಪೂರ್ವ), ಮುನಿರತ್ನ ಹಾಗೂ ಭಾರತಿ ಶೆಟ್ಟಿ (ಬೆಂಗಳೂರು ಉತ್ತರ), ಬೈರತಿ ಬಸವರಾಜ್ ಮತ್ತು ಎನ್‌.ರವಿಕುಮಾರ್‌ (ಬೆಂಗಳೂರು ದಕ್ಷಿಣ), ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹಾಗೂ ಡಿ.ಎಸ್‌.ಅರುಣ್‌ (ಬೆಂಗಳೂರು ಕೇಂದ್ರ), ಕೆ.ಗೋಪಾಲಯ್ಯ, ಎ.ನಾರಾಯಣಸ್ವಾಮಿ ಮತ್ತು ಅಶ್ವಥ್‌ನಾರಾಯಣ (ಬೆಂಗಳೂರು ಪಶ್ಚಿಮ).