ಮಾನ್ಸೂನ್‌ ಎಫೆಕ್ಟ್‌, ಕೊಂಕಣ್‌ ಲೈನ್‌ನಲ್ಲಿ ಪ್ರಯಾಣಿಸಲಿರುವ ರೈಲುಗಳ ವೇಳಾಪಟ್ಟಿ ಬದಲು!

Konkan Railway Trains Mansoon Time Table ಜೂನ್ 10 ಮತ್ತು ಅಕ್ಟೋಬರ್ 31 ರ ನಡುವೆ ಕೊಂಕಣ ರೈಲ್ವೇ ಮಾನ್ಸೂನ್ ವೇಳಾಪಟ್ಟಿಯನ್ನು ಜಾರಿಗೆ ತಂದಿರುವುದರಿಂದ ಮಂಗಳೂರು ರೈಲ್ವೆ ಪ್ರದೇಶದ ಮೇಲೆ ಹಲವಾರು ರೈಲುಗಳ ಕಾರ್ಯಾಚರಣೆಯ ಸಮಯ ಬದಲಾಗಲಿದೆ.

From June 10 These Trains on Konkan line to run on revised monsoon timetable san

ಬೆಂಗಳೂರು (ಜೂ.10): ಕೊಂಕಣ್‌ ರೈಲ್ವೆ ಜಾಲವು ಮಾನ್ಸೂನ್‌ ವೇಳಾಪಟ್ಟಿಯನ್ನು ಪ್ರಕಟ ಮಾಡಿದ್ದು, ಜೂನ್‌ 10 ರಿಂದ ಅಕ್ಟೋಬರ್‌ 31ರವರೆಗೆ ಕೊಂಕಣ್‌ ವಲಯದಲ್ಲಿ ಸಂಚಾರ ಮಾಡುವ ರೈಲುಗಳ ವೇಳಾಪಟ್ಟಿಯಲ್ಲಿ ಭಾರೀ ಬದಲಾವಣೆಯಾಗಿದೆ. ಮಂಗಳೂರು ರೈಲ್ವೇ ಪ್ರದೇಶದ ಹಲವಾರು ರೈಲುಗಳ ಕಾರ್ಯಾಚರಣೆಯ ಸಮಯ ಇದರಿಂದ ಬದಲಾಗಿದೆ.  ಭಾರೀ ಮಳೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು KRCL ನೆಟ್‌ವರ್ಕ್‌ನಲ್ಲಿ ಕಡಿಮೆ ವೇಗದಲ್ಲಿ ರೈಲುಗಳ ಸಂಚಾರ ನಡೆಸುತ್ತದೆ.  ಈ ವಲಯದ ಅತ್ಯಂತ ಪ್ರಖ್ಯಾತ ರೈಲಾಗಿರುವ ಮಂಗಳೂರು ಸೆಂಟರ್‌ ಹಾಗೂ ಮುಂಬೈ ಎಲ್‌ಟಿಟಿ ನಡುವೆ ಸಂಚಾರ ಮಾಡುವ ಮತ್ಸ್ಯಗಂಢ ಎಕ್ಸ್‌ಪ್ರೆಸ್‌ (Matsyagandha Express 12620) ಮಂಗಳೂರು ಸೆಂಟ್ರಲ್‌ನಿಂದ ಮಧ್ಯಾಹ್ನ 2.20ರ ಬದಲಾಗಿ 12.45ಕ್ಕೆ ಪ್ರಯಾಣ ಆರಂಭಿಸಲಿದೆ.  ಇದರ ಇನ್ನೊಂದು ಜೋಡಿ ರೈಲು Train No. 12619 ಮಂಗಳೂರು ಸೆಂಟ್ರಲ್‌ಗೆ ಬೆಳಗ್ಗೆ 7.40ರ ಬದಲಾಗಿ 10.10ಕ್ಕೆ ಆಗಮಿಸಲಿದೆ ಎಂದು ಸದರ್ನ್‌ ರೈಲ್ವೆಯ ಪಾಲಕ್ಕಾಡ್‌ ವಿಭಾಗ ಪ್ರಕಟಣೆಯ ಮೂಲಕ ತಿಳಿಸಿದೆ.

ಮತ್ತೊಂದು ಜನಪ್ರಿಯ ರೈಲಾಗಿರುವ, ರೈಲು ಸಂಖ್ಯೆ 12133 ಮುಂಬೈ CSMT-ಮಂಗಳೂರು ಜಂಕ್ಷನ್ ಸೂಪರ್‌ಫಾಸ್ಟ್ ಜಂಕ್ಷನ್‌ಗೆ ಮಧ್ಯಾಹ್ನ1.05ರ ಬದಲು  3.40 ಕ್ಕೆ ಆಗಮಿಸುತ್ತದೆ. ಇದರ ಮರಳುವ ರೈಲು Train No. 12134 ಮುಂಬೈ CSMT ಗೆ ಜಂಕ್ಷನ್‌ನಿಂದ 2 ಗಂಟೆಯ ಬದಲಾಗಿ ಸಂಜೆ 4.35ಕ್ಕೆ ಪ್ರಯಾಣ ಆರಂಭಿಸಲಿದೆ. ಇನ್ನು ಟ್ರೇನ್‌ ನಂಬರ್‌ 06602 ಮಂಗಳೂರು ಸೆಂಟ್ರಲ್‌-ಮಡ್‌ಗಾಂವ್‌ ಡೇಲಿ ಎಕ್ಸ್‌ಪ್ರೆಸ್‌ ಸ್ಪೆಷಲ್‌ (Mangaluru Central-Madgaon Daily Express Special) ಟ್ರೇನ್‌ ಎಂದಿನಂತೆ ಬೆಂಗ್ಗೆ 5.30ಕ್ಕೆ ಹೊರಡಲಿದ್ದು, ಮಡ್‌ಗಾಂವ್‌ಗೆ ಮಧ್ಯಾಹ್ನ 1.25ರ ಬದಲು 2.25ಕ್ಕೆ ತಲುಪಲಿದೆ. ಇನ್ನು ರಿಟರ್ನ್‌ ಟ್ರೇನ್‌ ಮಡ್‌ಗಾಂವ್‌ಅನ್ನು ಮಧ್ಯಾಹ್ನ 2.10ರ ಬದಲಾಗಿ 3 ಗಂಟೆಗೆ ಹೊರಡಲಿದೆ. ಮಂಗಳೂರಿಗೆ ರಾತ್ರಿ  9.05 ನಿಮಿಷದ ಬದಲು 11.55 ನಿಮಿಷಕ್ಕೆ ತಲುಪಲಿದೆ.

ಇನ್ನು ಟ್ರೇನ್‌ ನಂ. 10107 ಮಡ್‌ಗಾಂವ್‌-ಮಂಗಳೂರು ಸೆಂಟ್ರಲ್‌ ಮೆಮು (Madgaon-Mangaluru Central MEMU) ಬೆಳಗ್ಗೆ 4ರ ಬದಲು 4.40ಕ್ಕೆ ಮಡ್‌ಗಾಂವ್‌ಅನ್ನು ಬಿಡಲಿದ್ದರೆ,ಮಂಗಳೂರು ಸೆಂಟ್ರಲ್‌ಗೆ ಬೆಳಗ್ಗೆ 11.15ರ ಬದಲು ಮಧ್ಯಾಹ್ನ 12.30ಕ್ಕೆ ತಲುಪಲಿದೆ. ಇನ್ನು ರಿಟರ್ನ್‌ ಟ್ರೇನ್‌ ಆಗಿರುವ ಟ್ರೇನ್‌ ನಂಬರ್‌ 10108  ಮಡ್‌ಗಾಂವ್‌ಅನ್ನು ಮಧ್ಯಾಹ್ನ 3.30ಕ್ಕೆ ಬಿಡಲಿದ್ದು, ಮಂಗಳೂರು ಸೆಂಟ್ರಲ್‌ಗೆ ರಾತ್ರಿ 10.20ರ ಬದಲು 11 ಗಂಟೆಗೆ ತಲುಪಿದೆ.

12617 ಎರ್ನಾಕುಲಂ ಜಂಕ್ಷನ್-ಹಜರತ್ ನಿಜಾಮುದ್ದೀನ್ ಮಂಗಳಾ ಲಕ್ಷದ್ವೀಪ್ ಎಕ್ಸ್‌ಪ್ರೆಸ್(Ernakulam Junction-Hazrath Nizamuddin Mangala Lakshadweep Express ) ಮಂಗಳೂರು ಜಂಕ್ಷನ್‌ಗೆ ರಾತ್ರಿ 9.25 ರ ಬದಲಿಗೆ 6.55 ಕ್ಕೆ ತಲುಪಲಿದೆ.

 

ಪಂಚಗಂಗಾ ಎಕ್ಸ್‌ಪ್ರೆಸ್‌ಗೆ ಇನ್ನೂ 8 ಕೋಚ್‌ಗಳನ್ನು ಸೇರಿಸಿ: ಶಿವಮೊಗ್ಗ ಸಂಸದರ ಆಗ್ರಹ!

ಅದರೊಂದಿಗೆ ಟ್ರೇನ್‌ ನಂ. 16346 ತಿರುವನಂತಪುರಂ ಸೆಂಟ್ರಲ್‌-ಮುಂಬೈ ಎಲ್‌ಟಿಟಿ ನೇತ್ರಾವತಿ ಎಕ್ಸ್‌ಪ್ರೆಸ್‌ (Thiruvananthapuram Central-Mumbai LTT Netravathi Express) ಮಂಗಳೂರನನ್ನು ರಾತ್ರಿ 10.45ರ ಬದಲು 9.30ಕ್ಕೆ ತಲುಪಲಿದೆ. ಇನ್ನು ರಿಟರ್ನ್‌  ಟ್ರೇನ್‌ ನಂ.16345 ಮಂಗಳೂರಿಗೆ ಬೆಳಗ್ಗೆ 4.15ರ ಬದಲು 5.50ಕ್ಕೆ ಆಗಮಿಸಲಿದೆ.

ಬರೀ 20 ಕಿಮೀ ದೂರ ಪ್ರಯಾಣಕ್ಕೆ ಒಂದು ಟ್ರೇನ್‌ಗೆ 45 ನಿಮಿಷ, ಇನ್ನೊಂದು ರೈಲಿಗೆ 2 ಗಂಟೆ, ಏನು ಕಾರಣ?

ಅದೇ ರೀತಿ, ಕೆಆರ್‌ಸಿಎಲ್ ನೆಟ್‌ವರ್ಕ್‌ನಲ್ಲಿ ಮತ್ತು ಮಂಗಳೂರು ರೈಲ್ವೆ ಪ್ರದೇಶದ ಮೂಲಕ ಕಾರ್ಯನಿರ್ವಹಿಸುವ ಬಹುತೇಕ ಎಲ್ಲಾ ರೈಲುಗಳ ಸಮಯವು ಮಳೆಗಾಲದಲ್ಲಿ ಬದಲಾಗುತ್ತದೆ. ಜೂನ್ 10 ರಂದು ಮಾನ್ಸೂನ್ ವೇಳಾಪಟ್ಟಿ ಜಾರಿಗೆ ಬರುವ ಮೊದಲು ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ತಮ್ಮ ಪ್ರಯಾಣದ ಮೊದಲು ರೈಲು ಸಮಯವನ್ನು ಖಚಿತಪಡಿಸಿಕೊಳ್ಳಲು ರೈಲ್ವೆ ಕೇಳಿದೆ. ಇತ್ತೀಚಿನ ರೈಲು ಸಮಯಗಳಿಗಾಗಿ ಅವರು ರಾಷ್ಟ್ರೀಯ ರೈಲು ವಿಚಾರಣೆ ವ್ಯವಸ್ಥೆ (NTES) ಗೆ ಭೇಟಿ ನೀಡಬಹುದು.

Latest Videos
Follow Us:
Download App:
  • android
  • ios