Asianet Suvarna News Asianet Suvarna News

ಮೂಡ ಹಗರಣದಲ್ಲಿ ಮೊದಲ ವಿಕೆಟ್ ಪತನ, ಜಿಟಿ ದಿನೇಶ್ ಕುಮಾರ್ ಅಮಾನತು!

ಮೂಡ ಹಗರಣ ಸಿದ್ದರಾಮಯ್ಯ ಸರ್ಕಾರಕ್ಕೆ ತೀವ್ರ ತಲೆನೋವಾಗಿ ಪರಿಣಿಸಿದೆ. ಪ್ರಾಸಿಕ್ಯೂಷನ್ ಅನುಮತಿ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ಭಾರಿ ಬೆಳವಣಿಗೆ ನಡೆದಿದೆ. ಇದೀಗ ಮೊದಲ ವಿಕೆಟ್ ಪತನಗೊಂಡಿದೆ.

Former muda Commissioner GT dinesh kumar suspended by Karnataka govt due scam allegation ckm
Author
First Published Sep 2, 2024, 8:33 PM IST | Last Updated Sep 2, 2024, 9:02 PM IST

ಬೆಂಗಳೂರು(ಸೆ.02) ಮೂಡ ಹಗರಣ ಇದೀಗ ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.  ದಿನದಿಂದ ದಿನಕ್ಕೆ ಸಿದ್ದರಾಮಯ್ಯಗೆ ಸಂಕಷ್ಟಗಳು ಹೆಚ್ಚಾಗುತ್ತಿದೆ. ಇದರ ನಡುವೆ ಮೂಡ ಹಗರಣದಲ್ಲಿ ಇದೀಗ ಮೊದಲ ವಿಕೆಟ್ ಪತನಗೊಂಡಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತರಾಗಿರುವ ಜಿಟಿ ದಿನೇಶ್ ಕುಮಾರ್‌ ಅಮಾನತುಗೊಂಡಿದ್ದಾರೆ.

ದಿನೇಶ್ ಕುಮಾರ್ ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ದಿನೇಶ್ ಕುಮಾರ್ ಮೇಲೆ ಮೂಡ ಹಗರಣದ ಕುರಿತು ಗಂಭೀರ ಆರೋಪಗಳಿವೆ ಅನ್ನೋ ಕಾರಣಕ್ಕೆ ಅಮಾನತು ಮಾಡಲಾಗಿದೆ. ಇದೀಗ ದಿನೇಶ್ ಕುಮಾರ್‌ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ದಿನೇಶ್ ಕಮಾರ್ ಮುಡಾದಲ್ಲಿ ಆಯುಕ್ತರಾಗಿದ್ದ ವೇಳೆ ನಡೆದಿದೆ ಎನ್ನಲಾದ ಅಕ್ರಮಗಳ ಹಿನ್ನಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ದಿನೇಶ್ ಕುಮಾರ್ ಅಮಾನತು ಮಾಡಿ ತನಿಖೆಗೆ ಸರ್ಕಾರ ಆದೇಶಿಸಿದೆ.

ಮುಡಾ ಕಂಟಕದಿಂದ ಪಾರಾಗಲು ಸ್ವಾಮೀಜಿಗಳ ಮೊರೆ ಹೋದ ಸಿಎಂ ಸಿದ್ದರಾಮಯ್ಯ!

ಆಗಸ್ಟ್ 30 ರಂದು ಸರ್ಕಾರ ಜಿಟಿ ದಿನೇಶ್ ಕುಮಾರ್ ಅವರನ್ನು ಹಾವೇರಿ ವಿಶ್ವವಿದ್ಯಾಲಯದ ರಿಡಿಸ್ಟ್ರಾರ್ ಆಗಿ ನೇಮಕ ಮಾಡಿತ್ತು. ದಿನೇಶ್ ಕುಮಾರ್ ಮೇಲೆ ಭಾರಿ ಹಗರಣಗಳ ಆರೋಪದ ನಡುವೆ ಈ ನೇಮಕ ನಡೆದಿತ್ತು. ಇದು ಸರ್ಕಾರಕ್ಕೆ ತೀವ್ರ ಹಿನ್ನಡೆ ತಂದಿತ್ತು. ಇದೀಗ ದಿನೇಶ್ ಕುಮಾರ್ ಅವಧಿಯಲ್ಲಿ ನಡೆದಿದೆ ಎನ್ನಲಾದ ಬಾರಿ ಹಗರಣಗಳ ಗಂಭೀರ ಆರೋಪದ ಕಾರಣ ಸರ್ಕಾರ ದಿನೇಶ್ ಕುಮಾರ್ ಅಮಾನತು ಮಾಡಿ ಆದೇಶ ಹೊರಡಿಸಿದೆ.

ದಿನೇಶ್ ವಿರುದ್ದ ನಿಯಮಬಾಹಿರವಾಗಿ ಸೈಟು ಹಂಚಿಕೆ ಆರೋಪ ಇದೆ. 50:50 ಅನುಪಾತ ನಿಯಮ ತಂದು ಸೈಟು ಹಂಚಿಕೆ ಮಾಡಿದ ಗಂಭೀರ ಆರೋಪ ದಿನೇಶ್ ಕುಮಾರ್ ಮೇಲಿದೆ. ಮುಡಾ ಸಭೆಯ ಗಮನಕ್ಕೆ ತರದೆ ಅಕ್ರಮವಾಗಿ ಸೈಟು ಹಂಚಿಕೆ ಮಾಡಿದ್ದಾರೆ. ಅಮಾನತು ಆದೇಶದಲ್ಲಿ ದಿನೇಶ್ ಕುಮಾರ್ ಕೈಗೊಂಡ 50:50 ಅನುಪಾತ ನಿಯಮ ತಪ್ಪು ಎಂದು ಸರ್ಕಾರ ಹೇಳಿದೆ.  

ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ 14 ಸೈಟನ್ನು ಅಕ್ರಮವಾಗಿ ಪಡೆದಿದ್ದಾರೆ ಅನ್ನೋದು ಆರೋಪ. ಈ ಆರೋಪದ ಕುರಿತು ತನಿಖೆ ನಡೆಸಲು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದರ ವಿರುದ್ದ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 

ಮುಡಾ ಬಳಿಕ ಪ್ರಿಯಾಂಕ್ ಖರ್ಗೆ ಬುದ್ಧ ವಿಹಾರ ವಿಚಾರವೂ ಬಯಲಿಗೆ; ಹೆಚ್‌ಡಿಕೆ ಆರೋಪವೇನು?

Latest Videos
Follow Us:
Download App:
  • android
  • ios