Asianet Suvarna News Asianet Suvarna News

ಮುಡಾ ಬಳಿಕ ಪ್ರಿಯಾಂಕ್ ಖರ್ಗೆ ಬುದ್ಧ ವಿಹಾರ ವಿಚಾರವೂ ಬಯಲಿಗೆ; ಹೆಚ್‌ಡಿಕೆ ಆರೋಪವೇನು?

 ಮುಡಾ ರೀತಿ ಸಚಿವ ಪ್ರಿಯಾಂಕ ಖರ್ಗೆ ಅವರ ವಿಚಾರವೂ ಹೊರಗೆ ಬಂದಿದೆ. ಬುದ್ಧ ವಿಹಾರ ಕಟ್ಟಲು ಸಿದ್ಧಾರ್ಥ ವಿಹಾರ್ ಟ್ರಸ್ಟ್ ಸ್ಥಾಪಿಸಿದ್ದಾರೆ. ಅದೊಂದು ಧಾರ್ಮಿಕ ಸಂಸ್ಥೆ. ಆದರೆ, ಇದನ್ನು ಯಾವುದೋ ವ್ಯವಹಾರ ಮಾಡುವುದಕ್ಕೆ, ಕಾರ್ಖಾನೆ ಕಟ್ಟುವುದಕ್ಕೆ ಉಪಯೋಗಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

Union minister hd kummaraswamy demanded the resignation of Priyank Khar over the Buddha Vihara scam rav
Author
First Published Aug 27, 2024, 6:56 AM IST | Last Updated Aug 27, 2024, 7:10 AM IST

ಮಂಡ್ಯ (ಆ.27) :  ಮುಡಾ ರೀತಿ ಸಚಿವ ಪ್ರಿಯಾಂಕ ಖರ್ಗೆ ಅವರ ವಿಚಾರವೂ ಹೊರಗೆ ಬಂದಿದೆ. ಬುದ್ಧ ವಿಹಾರ ಕಟ್ಟಲು ಸಿದ್ಧಾರ್ಥ ವಿಹಾರ್ ಟ್ರಸ್ಟ್ ಸ್ಥಾಪಿಸಿದ್ದಾರೆ. ಅದೊಂದು ಧಾರ್ಮಿಕ ಸಂಸ್ಥೆ. ಆದರೆ, ಇದನ್ನು ಯಾವುದೋ ವ್ಯವಹಾರ ಮಾಡುವುದಕ್ಕೆ, ಕಾರ್ಖಾನೆ ಕಟ್ಟುವುದಕ್ಕೆ ಉಪಯೋಗಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರಸ್ಟ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಶ್ರೀಮತಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಖರ್ಗೆ, ರಾಧಾಕೃಷ್ಣ, ಪ್ರಿಯಾಂಕ್ ಖರ್ಗೆ ಸೇರಿ ಏಳು ಮಂದಿ ಇದ್ದು, ಕೋಟ್ಯಂತರ ರು. ಸರ್ಕಾರಿ ಜಮೀನನ್ನು ಟ್ರಸ್ಟ್‌ಗೆ ಸ್ವಾಧೀನ ಮಾಡಿಕೊಂಡಿದ್ದಾರೆ ಎಂದರು.

'ನೂರು ಜನ್ಮ ಎತ್ತಿ ಬಂದ್ರೂ ನನ್ನ ಏನೂ ಮಾಡಲು ಆಗಲ್ಲ; ನನ್ನ ವಿರುದ್ಧದ ಷಡ್ಯಂತ್ರಕ್ಕೆ ಭಗವಂತ ತೀರ್ಪು ಕೊಡ್ತಾನೆ: ಎಚ್‌ಡಿಕೆ

ಸಚಿವರು ಯಾವುದೇ ಕಾರಣಕ್ಕೂ ಅಧಿಕಾರ ದುರುಪಯೋಗ ಮಾಡುವಂತಿಲ್ಲ. ಈ ರೀತಿ ಪಡೆಯಬಾರದು. ರಾಧಾಕೃಷ್ಣ ಸಂಸದರಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭಾ ಸದಸ್ಯರಾಗಿದ್ದಾರೆ. ಇದು ಸ್ವಜನ ಪಕ್ಷಪಾತ. ಅಧಿಕಾರದ ದುರುಪಯೋಗವಲ್ಲವೇ ಎಂದು ಪ್ರಶ್ನಿಸಿದರು.

ಕೆಐಇಎಡಿಬಿಯಲ್ಲಿ ಒಂದು ಎಕರೆಗೆ ಐದು ಕೋಟಿ ಬೆಲೆ ಬಾಳುತ್ತದೆ. ಅಂತಹ ಕಡೆ ಐದು ಎಕರೆ ಜಾಗವನ್ನು ಟ್ರಸ್ಟ್‌ಗೆ ಪಡೆದುಕೊಂಡಿದ್ದಾರೆ ಎಂದು ದೂರಿದರು.

ಇದನ್ನು ಒಪ್ಪಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ತಕ್ಷಣ ಸಂಪುಟದಿಂದ ವಜಾ ಮಾಡಬೇಕು. ಜಮೀನು ವಾಪಸ್‌ ಪಡೆಯಬೇಕು. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದಿಶಾ ಸಭೆಯಲ್ಲಿ ಇಬ್ಬರು ಶಾಸಕರಷ್ಟೆ ಭಾಗಿ

 ಮಂಡ್ಯ :  ಕೇಂದ್ರ ಸಚಿವ, ಸಂಸದ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯಲ್ಲಿ ಇಬ್ಬರು ಶಾಸಕರನ್ನು ಹೊರತು ಪಡಿಸಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಹಲವರು ಗೈರಾಗಿದ್ದರು.

ಅರೆಸ್ಟ್ ಮಾಡೋಕೆ ಒಬ್ಬ ಪೊಲೀಸ್ ಸಾಕು; ನೂರು ಸಿದ್ದರಾಮಯ್ಯ ಬಂದ್ರೂ ಏನು ಮಾಡೋಕಾಗೊಲ್ಲ ಎಂದ ಹೆಚ್‌ಡಿಕೆಗೆ ಸಿಎಂ ಟಾಂಗ್!

ಸಂಸದರಾದ ನಂತರ ಎಚ್ಡಿಕೆ ಅವರು ನಡೆಸಿದ ಮೊದಲ ಸಭೆಯಲ್ಲಿ ಕೆ.ಆರ್ ಪೇಟೆ ಶಾಸಕ ಎಚ್.ಟಿ.ಮಂಜು, ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಹೊರತು ಪಡಿಸಿ ಕಾಂಗ್ರೆಸ್‌ನ ಬಹುತೇಕ ಶಾಸಕರು ಗೈರಾಗಿದ್ದರು. ಕಾರ್ಯನಿಮಿತ್ತ ಅಮೆರಿಕಾ ಪ್ರವಾಸದಲ್ಲಿರುವ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಪಾಲ್ಗೊಂಡಿರಲಿಲ್ಲ.

ಆದರೆ, ಮದ್ದೂರು ಶಾಸಕ ಕೆ.ಎಂ.ಉದಯ್, ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ ಬಂಡಿಸಿದ್ದೇಗೌಡ, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭಾಗವಹಿಸದಿರುವುದು ಕಂಡು ಬಂತು

Latest Videos
Follow Us:
Download App:
  • android
  • ios