ನಾಗಮಲೆಗೆ ಹೋಗುವ ಭಕ್ತರಿಗೆ ನಿರ್ಬಂಧ ವಿಧಿಸಿದ ಅರಣ್ಯ ಇಲಾಖೆ; ಉದ್ಯೋಗ ಕಿತ್ತುಕೊಳ್ತಿದೆ ಎಂದು ಸ್ಥಳೀಯರು ಆಕ್ರೋಶ

ನಾಗಮಲೆಗೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿದ್ದು ಭಕ್ತರು ಹಾಗೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಚಾರಣಿಗರ ಮೇಲೆ ನಿಗಾಯಿಡಲೂ ಒಂದು ಬುಕ್ಕಿಂಗ್ ಆ್ಯಪ್ ತರಲೂ ಅರಣ್ಯ ಇಲಾಖೆ ಪ್ಲ್ಯಾನ್ ಮಾಡಿದೆ. ಆದ್ರೆ ಸ್ಥಳೀಯ ಕುಟುಂಬಗಳ ಉದ್ಯೋಗಕ್ಕೆ ಕತ್ತರಿ ಹಾಕಿ ಬದುಕು ಮೂರಾಬಟ್ಟೆ ಮಾಡಲೂ ಹೊರಟಿದೆ.

Forest department has banned trekking to Nagamale Locals  outraged rav

ವರದಿ - ಪುಟ್ಟರಾಜು

ಚಾಮರಾಜನಗರ (ಫೆ.27): ಅದು ದಟ್ಟ ಕಾನನದ ನಡುವೆ ಇರುವ  ಆಧ್ಯಾತ್ಮಿಕ ಕ್ಷೇತ್ರ. ಭಕ್ತರು ತಮ್ಮ ಆರಾಧ್ಯ ದೇವರ ದರ್ಶನ ಮಾಡಲು ಕಾಲ್ನಡಿಗೆಯಲ್ಲಿ ಬೆಟ್ಟಗುಡ್ಡ ಹತ್ತಿಯೇ ಅಲ್ಲಿಗೆ ತಲಪಬೇಕು. ತಲೆ ತಲಾಂತರಗಳಿಂದ ಯಾವುದೇ ನಿರ್ಬಂಧ ಇಲ್ಲದೆ ದೇವರ ದರ್ಶನ ಪಡೆಯುತ್ತಿದ್ದ ಭಕ್ತರಿಗೆ ಇದೀಗ ಅರಣ್ಯ ಇಲಾಖೆ ಟ್ರೆಕ್ಕಿಂಗ್ ನಿಷೇಧ ಹೆಸರಿನಲ್ಲಿ ನಿರ್ಬಂಧ ಹೇರುವ ಮೂಲಕ ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪ ಕೇಳಿ ಬಂದಿದೆ.

ಹೌದು 77 ಮಲೆಗಳನ್ನು ಹೊಂದಿರುವ ಮಹದೇಶ್ವರ  ಬೆಟ್ಟದಲ್ಲಿ ನಾಗಮಲೆಯು ಒಂದು. ಮಹದೇಶ್ವರ  ಈಗಿರುವ  ನಡುಮಲೆಯಿಂದ ತೆರಳಿ ನಾಗಮಲೆಯಲ್ಲಿ ತಪಸ್ಸು ಮಾಡಿ ಇಲ್ಲಿಯೇ ನೆಲೆಸಿದ್ದಾನೆ ಎಂಬ ಪುರಾಣವಿದೆ.  ತಪಸ್ಸು ಮಾಡುವಾಗ ಹಾವು ತನ್ಮ ಹೆಡೆ ಬಿಚ್ಚಿ ನೆರಳು ನೀಡಿತ್ತೆಂದು ಭಕ್ತರ ನಂಬಿಕೆಯಾಗಿದ್ದು ಇದಕ್ಕೆ ಪೂರಕವಾಗಿ ಇಲ್ಲಿ ಹಾವಿನ ಹೆಡೆ ಆಕಾರದ ಬೃಹತ್ ಬಂಡೆ ಇದೆ. ಭಕ್ತರ ಪಾಲಿನ ಧಾರ್ಮಿಕ ಕ್ಷೇತ್ರವಾಗಿರುವ ನಾಗಮಲೆ, ಒಂದು ರೀತಿಯಲ್ಲಿ ಚಾರಣ ಪ್ರದೇಶವೂ ಹೌದು.

Forest department has banned trekking to Nagamale Locals  outraged rav

ಮಹದೇಶ್ವರ ಬೆಟ್ಟದಿಂದ 15 ಕಿಲೋಮೀಟರ್ ದೂರ ಇರುವ  ನಾಗಮಲೆಗೆ ಕಾಲ್ನಡಿಗೆಯಲ್ಲೇ ಬೆಟ್ಟ ಗುಡ್ಡ ಹತ್ತಿ ಇಳಿದು ಹೋಗಬೇಕು. ಮಹದೇಶ್ವರ ಬೆಟ್ಟಕ್ಕೆ ಬರುವ  ಭಕ್ತರು  ನಾಗಮಲೆಗು ಹೋಗುವುದು ವಾಡಿಕೆ. ದೇವರ ದರ್ಶನ ಪಡೆಯಲು ಭಕ್ತರು ನಾಗಮಲೆಗೆ ತೆರಳುತ್ತಾರೆಯೇ ಹೊರತು ಯಾರೂ ಸಹ ಟ್ರೆಕ್ಕಿಂಗ್ ಹೆಸರಿನಲ್ಲಿ ಹೋಗೋದಿಲ್ಲ. ಆದರೆ ಅರಣ್ಯ ಇಲಾಖೆ ಇಲ್ಲಿ ಚಾರಣ ನಿಷೇಧಿಸಿರುವುದರಿಂದ ನಾಗಮಲೆಯಲ್ಲಿ ನೆಲೆಸಿರುವ  ಮಹದೇಶ್ವರನ ದರ್ಶನಕ್ಕೆ ಬ್ರೇಕ್ ಬಿದ್ದಿದೆ.

Forest department has banned trekking to Nagamale Locals  outraged rav

ರಾಮನ ಹಾಡು ಹಾಡ್ತಿದ್ದ ವೇಳೆ ಅಸಮಾಧಾನದಿಂದ ಹೊರ ಹೋದ್ರಾ ಸಚಿವ ವೆಂಕಟೇಶ್? ವಿಡಿಯೋ ವೈರಲ್

ಇನ್ನೂ ಚಾರಣ ನಿಷೇಧದಿಂದ ತೊಳಸೀಕೆರೆ, ಪಡಿಸಲನತ್ತ, ಇಂಡಿಗನತ್ತ, ನಾಗಮಲೆ ಗ್ರಾಮಸ್ಥರ ಸಂಕಷ್ಟಕ್ಕೆ ಕಾರಣವಾಗಿದೆ. ನಾಗಮಲೆ ಹೋಗುವ ಭಕ್ತರನ್ನ ನಂಬಿ ಅಂಗಡಿ, ಮುಗ್ಗಟ್ಟು ಹಾಗೂ ಜೀಪ್ ಗಳನ್ನು ತಂದಿದ್ದಾರೆ. ಮಹದೇಶ್ವರ ಬೆಟ್ಟದಿಂದ ಜೀಪ್ ಗಳ ಮೂಲಕ ನಾಗಮಲೆಯತ್ತ ಜನರನ್ನು ಕರೆದುಕೊಂಡು ಹೋಗ್ತಿದ್ದರು. ಇದೀಗಾ ಅವರ ಉದ್ಯೋಗ ಕಿತ್ತುಕೊಳ್ಳುವ ಜೊತೆಗೆ ಜನರ ಬದುಕನ್ನು ಮೂರಾಬಟ್ಟೆ ಮಾಡುವ ಕೆಲಸಕ್ಕೆ ಅರಣ್ಯ ಇಲಾಖೆ ಕೈ ಹಾಕಿದೆ. ಬರುವ ಭಕ್ತಾಧಿಗಳನ್ನು ನಂಬಿ ಜೀವನ ಮಾಡ್ತಿದ್ವಿ ಇದೀಗಾ ಮುಂದೇನು ಅಂತಾ ದಿಕ್ಕೆ ತೋಚದಂತಾಗಿದೆ ಎಂದು ಆಕ್ರೋಶ ಹೊರ ಹಾಕ್ತಿದ್ದಾರೆ.

Forest department has banned trekking to Nagamale Locals  outraged rav

ಚಾಮರಾಜನಗರ: ಮಲೆಮಹದೇಶ್ವರ ಹುಂಡಿ ಎಣಕೆ, 2.16 ಕೋಟಿ ರೂಪಾಯಿ ಸಂಗ್ರಹ

ಸದ್ಯಕ್ಕೆ ನಾಗಮಲೆಗೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿದ್ದು ಭಕ್ತರು ಹಾಗೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಚಾರಣಿಗರ ಮೇಲೆ ನಿಗಾಯಿಡಲೂ ಒಂದು ಬುಕ್ಕಿಂಗ್ ಆ್ಯಪ್ ತರಲೂ ಅರಣ್ಯ ಇಲಾಖೆ ಪ್ಲ್ಯಾನ್ ಮಾಡಿದೆ. ಆದ್ರೆ ಸ್ಥಳೀಯ ಕುಟುಂಬಗಳ ಉದ್ಯೋಗಕ್ಕೆ ಕತ್ತರಿ ಹಾಕಿ ಬದುಕು ಮೂರಾಬಟ್ಟೆ ಮಾಡಲೂ ಹೊರಟಿದೆ. ಇನ್ನಾದ್ರೂ ಎಚ್ಚೆತ್ತು ಅರಣ್ಯ ಇಲಾಖೆ ಸ್ಥಳೀಯರ ಹಾಗೂ ಭಕ್ತರ ಪರ ನಿಲ್ಲುತ್ತಾ ಅನ್ನೋದ್ನ ಕಾದುನೋಡಬೇಕಾಗಿದೆ...

Latest Videos
Follow Us:
Download App:
  • android
  • ios