ಚಾಮರಾಜನಗರ: ಮಲೆಮಹದೇಶ್ವರ ಹುಂಡಿ ಎಣಕೆ, 2.16 ಕೋಟಿ ರೂಪಾಯಿ ಸಂಗ್ರಹ
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ನಿನ್ನೆ ಬೆಳಗ್ಗೆಯಿಂದಲೇ ರಾತ್ರಿವರೆಗೂ ನಡೆದ ಹುಂಡಿಗಳ ಎಣಿಕೆ ಕಾರ್ಯದಲ್ಲಿ 2.16 ಕೋಟಿ ರೂಪಾಯಿಗೂ ಹೆಚ್ಚು ನಗದು ಹಣ ಸಂಗ್ರಹವಾಗಿದೆ.
ಚಾಮರಾಜನಗರ (ಫೆ.3): ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ನಿನ್ನೆ ಬೆಳಗ್ಗೆಯಿಂದಲೇ ರಾತ್ರಿವರೆಗೂ ನಡೆದ ಹುಂಡಿಗಳ ಎಣಿಕೆ ಕಾರ್ಯದಲ್ಲಿ 2.16 ಕೋಟಿ ರೂಪಾಯಿಗೂ ಹೆಚ್ಚು ನಗದು ಹಣ ಸಂಗ್ರಹವಾಗಿದೆ.
ಭಕ್ತರು ನೀಡಿರುವ ಒಟ್ಟು ಕಾಣಿಕೆ 2,16,34,614 ರೂಪಾಯಿ ನಗದು ಆಗಿದೆ, ಇದರ ಜೊತೆಗೆ 78 ಗ್ರಾಂ ಚಿನ್ನ, 2 ಕೆಜಿ 350 ಗ್ರಾಂ ಬೆಳ್ಳಿ ಸಂಗ್ರಹವಾಗಿ ವಿಶೇಷ ಎಂದರೆ ಈ ಬಾರಿ ಮಾದಪ್ಪನ ಹುಂಡಿಯಲ್ಲಿ ವಿದೇಶಿ ನೋಟುಗಳು ಸಿಕ್ಕಿವೆ. ಯುಎಸ್‌ಎ, ಅಪಘಾನಿಸ್ತಾನ್, ನೇಪಾಳ ಹಾಗೂ ಮಲೇಶಿಯಾ ಸೇರಿದಂತೆ ವಿವಿಧ ದೇಶಗಳ ನೋಟುಗಳು ಹಾಕಿರುವ ಭಕ್ತರು.
ಚಾಮರಾಜನಗರ: ಮಲೆಮಹದೇಶ್ವರ ವನ್ಯಧಾಮದಲ್ಲಿ ಸಫಾರಿ ಆರಂಭ, ಪ್ರಾಣಿಗಳ ದರ್ಶನಕ್ಕೆ ಅವಕಾಶ
ಮಹದೇಶಶ್ವರ ಸ್ವಾಮಿಯ ಹಲವು ಭಕ್ತರು ವಿದೇಶಗಳಲ್ಲಿ ನೆಲೆಸಿದ್ದಾರೆ. ವರ್ಷಕ್ಕೊಮ್ಮೆ ಬಂದು ಮಾದಪ್ಪನ ದರ್ಶನ ಪಡೆದುಹೋಗುತ್ತಾರೆ ಹೀಗಾಗಿ ಹುಂಡಿಯಲ್ಲಿ ವಿದೇಶಿ ನೋಟುಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.
ಕಳೆದ ಜನೆವರಿ ತಿಂಗಳಲ್ಲಿ 2,99,00,732 ರೂಪಾಯಿ ಕಾಣಿಕೆ ಸಂಗ್ರಹವಾಗಿತ್ತು. ಆ ಪೈಕಿ 13ಲಕ್ಷ ರೂಪಾಯಿ ಗು ಹೆಚ್ಚು ಹಣ ನಾಣ್ಯಗಳ ರೂಪದಲ್ಲೇ ಕಾಣಿಕೆ ಬಂದಿತ್ತು. 102 ಗ್ರಾಂ ಚಿನ್ನ, 3 ಕೆಜಿ 155 ಗ್ರಾಂ ಬೆಳ್ಳಿ ಕಾಣಿಕೆ ಬಂದಿತ್ತು. 23 ಯುಎಸ್ಎ ಡಾಲರ್ ಕೆನಡಾದ 100 ಡಾಲರ್ ಓಮನ್ ದೇಶದ 4 ರಿಯಾಲ್ ನೋಟುಗಳು ಸಹ ಕಾಣಿಕೆ ಹುಂಡಿಯಲ್ಲಿ ಪತ್ತೆಯಾಗಿದ್ದವು.
ಮಲೆ ಮಹದೇಶ್ವರ ಬೆಟ್ಟದಲ್ಲೂ ಈಗ ವನ್ಯಜೀವಿ ಸಫಾರಿ ಆರಂಭ! ಬುಕಿಂಗ್ ಹೇಗೆ? ಫೀ ಎಷ್ಟು? ಇಲ್ಲಿದೆ ಮಾಹಿತಿ