ಪುನೀತ್‌ ಪ್ರತಿಮೆ ಬಳಿ ಹಾಕಿದ್ದ ರಾಜಕೀಯ, ಧಾರ್ಮಿಕ ಕಟೌಟ್‌ ತೆರವುಗೊಳಿಸಿದ ಅಭಿಮಾನಿಗಳು

ನಗರದ ಹೃದಯ ಭಾಗವಾದ ಎನ್‌.ಆರ್‌. ವೃತ್ತದ ಬಳಿ ಇರುವ ಪುನೀತ್‌ ರಾಜಕುಮಾರ್‌ ಪ್ರತಿಮೆ ಸುತ್ತ ಯಾರು ಕಟೌಟ್‌ ಇತರ ಜಾಹಿರಾತುಗಳು ಹಾಕಬೇಡಿ ಎಂದು ಮನವಿ ಮಾಡಲಾಗಿದ್ದರೂ ವಿವಿಧ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಪದೇ ಪದೇ ಕಟೌಟ್‌ ಹಾಕುತ್ತಿದ್ದು, ಹೀಗಾಗಿ ಡಾ.ಶಿವರಾಜಕುಮಾರ್‌ ಅಭಿಮಾನಿ ಸಂಘದಿಂದ ಶುಕ್ರವಾರ ಕಟೌಟ್‌ ತೆರವುಗೊಳಿಸಲಾಗಿದೆ.

fans cleared the political and religious cutouts placed  puneeth's statue at hassan rav

ಹಾಸನ (ಆ.5):  ನಗರದ ಹೃದಯ ಭಾಗವಾದ ಎನ್‌.ಆರ್‌. ವೃತ್ತದ ಬಳಿ ಇರುವ ಪುನೀತ್‌ ರಾಜಕುಮಾರ್‌ ಪ್ರತಿಮೆ ಸುತ್ತ ಯಾರು ಕಟೌಟ್‌ ಇತರ ಜಾಹಿರಾತುಗಳು ಹಾಕಬೇಡಿ ಎಂದು ಮನವಿ ಮಾಡಲಾಗಿದ್ದರೂ ವಿವಿಧ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಪದೇ ಪದೇ ಕಟೌಟ್‌ ಹಾಕುತ್ತಿದ್ದು, ಹೀಗಾಗಿ ಡಾ.ಶಿವರಾಜಕುಮಾರ್‌ ಅಭಿಮಾನಿ ಸಂಘದಿಂದ ಶುಕ್ರವಾರ ಕಟೌಟ್‌ ತೆರವುಗೊಳಿಸಲಾಗಿದೆ.

ಕೆಲ ತಿಂಗಳಷ್ಟೆಎನ್‌.ಆರ್‌.ವೃತ್ತದಲ್ಲಿ ಪುನೀತ್‌ ರಾಜಕುಮಾರ್‌ ಅವರ ಪ್ರತಿಮೆ ಅನಾವರಣ ಮಾಡಲಾಗಿದ್ದು, ಈ ವೇಳೆ ಈ ಭಾಗದಲ್ಲಿ ಯಾರು ಜಾಹಿರಾತು ಹಾಕಬಾರದೆಂದು ಜಿಲ್ಲಾಧಿಕಾರಿ ಹಾಗೂ ನಗರಸಭೆಗೆ ಮನವಿ ನೀಡಿದಾಗ ಸಹಕಾರ ನೀಡಿದ್ದರು. ಆದರೆ ಮತ್ತೆ ಮತ್ತೆ ಈ ಭಾಗದಲ್ಲಿ ದೊಡ್ಡ ದೊಡ್ಡ ಕಟೌಟ್‌ಗಳು ಹಾಕುತ್ತಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಹೀಗಾಗಿ ಇಲ್ಲಿ ಅಳವಡಿಸುವ ಕಟೌಟ್‌ಗಳನ್ನು ತೆರವು ಮಾಡುತ್ತಿದ್ದು, ಮುಂದೆ ಇದೇ ರೀತಿ ಮುಂದುವರಿದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೂಡ ನೀಡಿದ್ದಾರೆ.

ಅತ್ತೆ ಸ್ಟ್ರಿಕ್ಟ್‌ ಆಗಿದ್ದರು ಬಜೆಟ್‌ ಹಿಡಿತದಲ್ಲಿರುತ್ತಿತ್ತು, ನಾನು ಅಪ್ಪು ತರ ಫುಲ್ ಫ್ರೀ: ಅಶ್ವಿನಿ ಪುನೀತ್ ರಾಜ್‌ಕುಮಾರ್

ಡಾ.ಶಿವರಾಜಕುಮಾರ್‌ ಅಭಿಮಾನಿ ಸಂಘದ ಅಧ್ಯಕ್ಷ ರತೀಶ್‌ ಕುಮಾರ್‌ ಮಾಧ್ಯಮದೊಂದಿಗೆ ಮಾತನಾಡಿ, ಪುನೀತ್‌ ಪ್ರತಿಮೆ ಆವರಣದಲ್ಲಿ ಯಾರು ಬ್ಯಾನರ್‌ ಹಾಕಬಾರದೆಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದ್ದರೂ ಗಮನಹರಿಸದೇ ಆಗಾಗ್ಗೆ ಬ್ಯಾನರ್‌ ಕಟೌಟ್‌ ಹಾಕುತ್ತಿರುವುದು ಬೇಸರದ ಸಂಗತಿ. ಈ ವಿಚಾರವಾಗಿ ಜಿಲ್ಲಾಧಿಕಾರಿ ಮತ್ತು ನಗರಸಭೆಯಿಂದಲೂ ಸೂಚನೆ ಕೊಡಲಾಗಿದ್ದರೂ ಮತ್ತೆ ಮತ್ತೆ ಹಾಕಲಾಗುತ್ತಿದೆ ಎಂದು ದೂರಿದರು. ದಯಮಾಡಿ ಯಾರು ಪ್ಲೆಕ್ಸ್‌ ಹಾಕಬೇಡಿ. ಮುಂದೆ ಕಟೌಟ್‌ ಹಾಕಿದರೆ ಪುನೀತ್‌ ಅಭಿಮಾನಿಗಳ ಸಂಘದ ವತಿಯಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಈ ಸಂದರ್ಭ ಅಭಿಮಾನಿ ಸಂಘದ ಶಂಕರ್‌, ಹಿರೆಮಗಳೂರು ರವಿ ಜೀವನ್‌, ಕುಮಾರ್‌ ಇತರರು ಉಪಸ್ಥಿತರಿದ್ದರು.

 

Puneeth Rajkumarಗೆ ಕೆಫೆ ತೆರೆಯೋ ಕನಸಿತ್ತು! ಅಶ್ವಿನಿ ಬಿಚ್ಚಿಟ್ಟ ಹೊಸ ಸಂಗತಿ

Latest Videos
Follow Us:
Download App:
  • android
  • ios